ನೀಳ್ಗಥೆ - ಚಂದ್ರಿಕಾ ಸುಧೀಂದ್ರ 

ವಿಶಾಲವಾದ ಆವರಣದಲ್ಲಿ ಸುಂದರವಾದ ಅಮೃತಶಿಲೆಯ ಪ್ರತಿಮೆ ಅನಾವರಣಗೊಂಡಿತು. ಅದು ದಿವಂಗತ ನಂದಿತಾಳ ಪ್ರತಿಮೆ. ನಂದಿತಾ ರಾಜಕಾರಣಿಯೋ, ಹೋರಾಟಗಾರ್ತಿಯೋ ಅಥವಾ ಕ್ರೀಡಾಪಟುವೋ ಅಲ್ಲ. ಅವಳನ್ನು ಸಾಧಕಿಯ ಸ್ಥಾನದಲ್ಲಿ ಎಲ್ಲರೂ ನೋಡುತ್ತಿದ್ದರು. ಕಾರಣ ಅವಳ ತ್ಯಾಗ ಮನೋಭಾವ, ಇತರರ ನೋವಿಗೆ ಸ್ಪಂದಿಸುವ ಗುಣ, ಪರೋಪಕಾರದ ಸ್ವಭಾವ ಮೆಚ್ಚಿ ಅವಳ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಬಂಧು ಬಳಗದವರಲ್ಲದೆ, ನೂರಾರು ಜನರು, ಅನಾಥಾಶ್ರಮದ ಅಂಧ ಮಕ್ಕಳು ಎಲ್ಲರೂ ನೆರೆದಿದ್ದರು. ಎಲ್ಲರ ಮುಖದಲ್ಲಿ ನೋವಿನ ಗೆರೆಗಳು ಕಾಣುತ್ತಿತ್ತು.

ನಂದಿತಾಳ ಪತಿ ವಿನಯ್‌ ದುಃಖತಪ್ತನಾಗಿ ಪ್ರೀತಿಯ ಪತ್ನಿಯ ಪ್ರತಿಮೆಗೆ ಮಾಲಾರ್ಪಣೆ ಮಾಡುವಾಗ ಕಣ್ಣೀರು ಕಡಲಾಗಿತ್ತು. ಅವಳ ತಂಗಿ ಪಲ್ಲವಿಗಂತೂ ಅಕ್ಕನ ಪ್ರತಿಮೆಗೆ ಮಾಲಾರ್ಪಣೆ ಮಾಡುವಾಗ ದುಃಖ ತಡೆಯಲಾಗದೆ ಹೊರಗೋಡಿ ಬಂದು ಅಲ್ಲಿದ್ದ ಕಲ್ಲು ಬೆಂಚಿನ ಮೇಲೆ ಸಂಕಟದಿಂದ ಯೋಚಿಸುತ್ತಾ ಕುಳಿತಳು.

ತ್ಯಾಗಮಯಿ, ಕರುಣಾಸಿಂಧುವಾಗಿದ್ದ ತನ್ನಕ್ಕನಿಗೆ ತಾನು ಪ್ರತ್ಯುಪಕಾರವಾಗಿ ಮಾಡಿದ್ದಾದರೂ ಏನು? ಬೇರೆಯವರಿಗೆ ಕೇಡು ಬಯಸಬಾರದೆಂದು ಕನಿಷ್ಠ ಮನೋಭಾವವಿಲ್ಲದ ತಾನು ಕೃತಘ್ನಳಾಗಿ ಅವಳಿಗೆ ಮಾಡಬಾರದ್ದನ್ನೆಲ್ನ ಮಾಡಿದೆನಲ್ಲಾ ಎಂದು ನೊಂದುಕೊಂಡ ಪಲ್ಲವಿ ಕಣ್ಣೀರಿನ ಜೊತೆಗೆ ತನ್ನ ನೆನಪಿನಂಗಳಕ್ಕೆ ಜಾರಿದಳು.

ಜಗದೀಶ್‌ ಮತ್ತು ಸುವರ್ಣಾ ದಂಪತಿಗಳಿಗೆ ನಂದಿತಾ, ಪಲ್ಲವಿ ಇಬ್ಬರೇ ಮಕ್ಕಳು. ಹಿರಿಯಳಾದ ನಂದಿತಾ ತಾಯಿಯಂತೆ ಬೆಳ್ಳಗೆ ಮುದ್ದಾಗಿ ದಂತದ ಬೊಂಬೆಯಂತೆ ಆಕರ್ಷಕ ನೀಳಕಾಯದವಳಾಗಿದ್ದಳು. ಎರಡನೇ ಮಗಳಾದ ಪಲ್ಲವಿ ನಂದಿತಾಳಷ್ಟು ಲಕ್ಷಣವಾಗಿರಲಿಲ್ಲ. ಜೊತೆಗೆ ಕಪ್ಪಗಿದ್ದಳು. ಅವರಿಬ್ಬರ ಸ್ವಭಾವದಲ್ಲೂ ಅಜಗಜಾಂತರ ವ್ಯತ್ಯಾಸವಿತ್ತು. ನಂದಿತಾ ಯಾವ ವಿಚಾರವನ್ನಾದರೂ ಯೋಚಿಸಿ, ಯಾರ ಮನಸ್ಸಿಗೂ ನೋವಾಗದಂತೆ ಸಹನೆಯಿಂದ ನಡೆದುಕೊಳ್ಳುತ್ತಿದ್ದಳು. ಆದರೆ ಪಲ್ಲವಿ ಅದಕ್ಕೆ ತದ್ವಿರುದ್ಧವಾಗಿ ಬಹಳ ದುಡುಕು ಹಾಗೂ ಕೋಪಿಷ್ಠೆಯಾಗಿದ್ದಳು. ಹಿಂದು ಮುಂದು ಯೋಚಿಸದೆ ಮುಖಕ್ಕೆ ಹೊಡೆದಂತೆ ಮಾತನಾಡಿ ನೋಯಿಸಿ ಏನೂ ಆಗದವಳಂತೆ ಇರುತ್ತಿದ್ದಳು.

ಅಕ್ಕ ಉತ್ತರ ಧ್ರುವವಾದರೆ ತಂಗಿ ದಕ್ಷಿಣ ಧ್ರುವ. ಇಬ್ಬರಲ್ಲೂ ಅಷ್ಟೇನೂ ಹೊಂದಾಣಿಕೆ ಇರಲಿಲ್ಲ. ನಂದಿತಾ ಎಷ್ಟೇ ಸಮಾಧಾನವಾಗಿ ತಂಗಿಯ ಬಳಿ ಮಾತನಾಡಿದರೂ ಅವಳು ಅದರಲ್ಲಿ ತಪ್ಪು ಹುಡುಕಿ ಮಾತು ಬಿಡುತ್ತಿದ್ದಳು. ಸಾಲದ್ದಕ್ಕೆ ಮನೆಗೆ ಬಂದುಹೋಗುತ್ತಿದ್ದ ನೆಂಟರಿಷ್ಟರು ನಂದಿತಾಳ ರೂಪ ಮತ್ತು ಗುಣವನ್ನು ಹೊಗಳಿ, `ನಂದಿತಾಗೆ ಒಳ್ಳೇ ಕಡೆ ಸಂಬಂಧ ಸಿಗುವುದರಲ್ಲಿ ಸಂಶಯವಿಲ್ಲ, ಆದರೆ ಪಲ್ಲವಿಗೆ ಗಂಡು ಹುಡುಕಲು ನೀವು ಹರಸಾಹಸ ಮಾಡಬೇಕಾಗುತ್ತದೆ,' ಎಂದು ಹೇಳುತ್ತಿದ್ದರು.

ಇದರಿಂದ ಪಲ್ಲವಿಗೆ ಅಕ್ಕನ ಹೊಗಳಿಕೆ ಸಹಿಸಲಾಗದೆ ಅವಳ ಬಗ್ಗೆ ದ್ವೇಷ, ಮತ್ಸರ ಬೆಳೆಸಿಕೊಂಡಳು. ಅವಳ ಮನಸ್ಸಿನಲ್ಲಿ ಅಕ್ಕನ ಬಗ್ಗೆ ಯಾವಾಗಲೂ ದ್ವೇಷ ಹೊಗೆಯಾಡುತ್ತಿತ್ತು. ಆಗಾಗ್ಗೆ ಪಲ್ಲವಿ ವಿನಾಕಾರಣ ಕಾಲು ಕೆರೆದು ನಂದಿತಾಳೊಂದಿಗೆ ಜಗಳವಾಡುವುದು ಸರ್ವೇಸಾಮಾನ್ಯವಾಯಿತು.

ತಾಯಿಗೆ ಮಕ್ಕಳ ಸ್ವಭಾವ ಗೊತ್ತಿದ್ದರಿಂದ ನಂದಿತಾಳ ಪರ ವಹಿಸಿ ಪಲ್ಲವಿಗೆ ಬೈದು ಬುದ್ಧಿ ಹೇಳುತ್ತಿದ್ದರು. ಆಗೆಲ್ಲಾ ಅವಳು ತಾಯಿಗೆ. `ನೀನು ಯಾವಾಗಲೂ ಅವಳ ಪರವೇ ಎಂದು ನನಗೆ ಗೊತ್ತು. ನಿನಗೆ ನನ್ನ ಕಂಡರೆ ಆಗುವುದಿಲ್ಲ,' ಎಂದು ಅಸಹನೆ ತೋರಿಸುತ್ತಿದ್ದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ