ಸಾವಿತ್ರಮ್ಮನ ಮನೆಯಂಗಳದಲ್ಲಿ ಮಂಗಳ ವಾದ್ಯದ ಸದ್ದು ಮಧುರವಾಗಿ ಕೇಳಿಬರತ್ತಿತ್ತು. ಮನೆ ತುಂಬಾ ಉಲ್ಲಾಸದ ವಾತಾವರಣ. ಮದುಮಗಳು ಶೃತಿ ಹಾಗೂ ಮದುಮಗ ಅರುಣ್‌ ಅನುರೂಪದ ಜೋಡಿಯಂತೆ ಕಂಗೊಳಿಸುತ್ತಿದ್ದರು.

ಅರುಣನ ಕೈ ಹಿಡಿದ ಶೃತಿಗೆ ತುಂಬಾ ಸಂತಸವಾಗಿತ್ತು. ಆದರೆ ದಿನ ಕಳೆದಂತೆಲ್ಲ ಶೃತಿ ಮತ್ತು ಅರುಣ್‌ ಮಧ್ಯೆ ಅದ್ಯಾವುದೋ ಒಂದು ಅಸಮಾನತೆಯ ಭಾವ ಗೋಚರಿಸತೊಡಗಿತ್ತು. ಶೃತಿ ಆಧುನಿಕ ಮನೆತನದಿಂದ ಬಂದ ಬುದ್ಧಿವಂತ ಹುಡುಗಿಯಾಗಿದ್ದರೆ, ಅರುಣ್‌ ಕುಟುಂಬ ಪಾರಂಪರಿಕ ಸಂಪ್ರದಾಯಸ್ಥ ಮನೆತನ. ಅರುಣ್‌ ವ್ಯಕ್ತಿಗತ ಒಬ್ಬ ಎಂಜಿನಿಯರ್‌ ಆಗಿದ್ದರೂ ಕೂಡ, ಆತನ ವ್ಯಕ್ತಿತ್ವದಲ್ಲಿ ಮೂಢತೆಯ ಪ್ರಭಾವಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ಶೃತಿಗೆ ಇನ್ನೂ ನೆನಪಿನಲ್ಲಿದೆ, ಅದೊಂದು ದಿನ ಮದುವೆಯಾದ ಹೊಸತರಲ್ಲಿ ಅರುಣನೊಂದಿಗೆ ಹೊರಗಡೆ ಸುತ್ತಾಡಲೂ ಹೊರಟಾಗ ಅವಳ ಓರಗಿತ್ತಿ ಅಡ್ಡಗಾಲು ಹಾಕಿದ್ದಳು, ``ಶೃತಿ, ಮನೆಗೆ ಹೊಸದಾಗಿ ಬಂದ ಸೊಸೆ ನೀನು. ಶಾಸ್ತ್ರಿಗಳು ಮುಹೂರ್ತ ಹೇಳುವವರೆಗೂ ಹೊರ ಹೊಗುವಂತಿಲ್ಲ! ಇದು ಈ ಮನೆಯ ಸಂಪ್ರದಾಯ,'' ಎನ್ನುತ್ತ ಶೃತಿ ಹಾಗೂ ಅರುಣರತ್ತ ಕೊಂಕು ದೃಷ್ಟಿ ಬೀರಿ ಕತ್ತು ಕುಣಿಸುತ್ತ ಒಳ ನಡೆದಿದ್ದಳು.

ಅವಳ ಮಾತಿಗೆ ಕಿವಿಗೊಟ್ಟ ಅರುಣ್‌ ತಾನೂ ಸುತ್ತಾಡಲು ಹೋಗುವ ಕಾರ್ಯಕ್ರಮನ್ನು ರದ್ದುಗೊಳಿಸಿದ್ದನ್ನು ಕಂಡು ಶೃತಿಗೆ ವೇದನೆಯಾಯಿತು.

ಪ್ರತಿದಿನ ಏನಾದರೊಂದು ಘಟನೆ ನಡೆಯುತ್ತಲೇ ಇತ್ತು. ಶೃತಿಯ ಮನಸ್ಸು ಇದೆಲ್ಲವನ್ನು ಪ್ರತಿಭಟಿಸುತ್ತಲಿತ್ತು. ಆದರೆ ತಾನು ಆ ಮನೆಗೆ ಹೊಸಬಳು ಎಂಬ ಕಾರಣಕ್ಕೆ ನಿಯಂತ್ರಿಸಿಕೊಂಡಿದ್ದಳು. ಪ್ರತಿಯೊಂದು ಚಟುವಟಿಕೆಗಳಿಗೂ ಸಾವಿತ್ರಮ್ಮ ಶಾಸ್ತ್ರಿಗಳಿಂದ ಘಳಿಗೆ, ಮುಹೂರ್ತ ವಿಚಾರಿಸದೇ ಇರುತ್ತಿರಲಿಲ್ಲ. ಕುಟುಂಬದ ಸದಸ್ಯರಂತೂ ಶಾಸ್ತ್ರಿಗಳು ಹೇಳುವ ಆಚರಣೆಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದರು. ಇದರಿಂದಾಗಿ ಆ ಶಾಸ್ತ್ರಿಗಳ ಮನೆಗೆ ಅದೆಷ್ಟು ಗುರುದಕ್ಷಿಣೆ, ಪೂಜಾಫಲಗಳು ತಲುಪಿವೆಯೋ ಲೆಕ್ಕವಿಲ್ಲ!

ಕ್ರಮೇಣ ದಿನಗಳು ಉರುಳತೊಡಗಿದವು. ಶೃತಿ ಅರುಣನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಳು. ಆದರೆ ಬಾಲ್ಯದಿಂದಲೇ ಆತ ಮನೆಯ ಸಾಂಪ್ರದಾಯಿಕ ಮೌಢ್ಯತೆಗೆ ಹೊಂದಿಕೊಂಡವನಾಗಿದ್ದ, ಆದ್ದರಿಂದ ಆತನು ಆ ಮೂಢ ಮನಸ್ಥಿತಿಯಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ಇದೇ ಸಂದರ್ಭದಲ್ಲಿ ಶೃತಿಯ ಕಾಲುಗಳು ಊದಿಕೊಂಡಿರುವ ಸುದ್ದಿ ಕೇಳಿ ಮನೆತುಂಬ ಹಬ್ಬದ ವಾತಾವರಣ ಕಳೆಗಟ್ಟಿತು. ತಕ್ಷಣ ಶೃತಿಯ ಅತ್ತೆ ಸಾವಿತ್ರಮ್ಮ ದೇವಸ್ಥಾನಕ್ಕೆ ತೆರಳಿ ದೀಪ ಹಚ್ಚಿಸಿ, ಅರ್ಚನೆ ಕೂಡ ಮಾಡಿಸಿ ಬಂದರು. ಈ ಸುದ್ದಿ ತಿಳಿಯುತ್ತಿದ್ದಂತೆ ರಾಮಾ ಜೋಯಿಸ ಶಾಸ್ತ್ರಿ ತನ್ನ ಪಂಚಾಂಗ ಪತ್ರಿಕೆಗಳೊಂದಿಗೆ ಹಾಜರಾಗಿಯೇಬಿಟ್ಟ.

ಹೊಟ್ಟೆ ತುಂಬಾ ತಿಂದೂ ಉಂಡೂ ಆದ್ಮೇಲೆ ತನ್ನ ಭಾರಿ ಗುಡಾಣದಂತಹ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ, ``ನೋಡು ಮಗಳೆ, ಇನ್ಮುಂದೆ ನೀನು ನಿನ್ನ ಸೊಸೆಯ ಬಗ್ಗೆ ತುಂಬಾ ಜಾಗೃತಳಾಗಿರಬೇಕು.

``ಮುಂದಿನ 9 ತಿಂಗಳಂತೂ ಅವಳನ್ನು ವಿಶೇಷ ಕಾಳಜಿಯಿಂದ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮುಹೂರ್ತ ನೋಡದೆ ಅವಳನ್ನು ಹೊರಗೆ ಕಳುಹಿಸಬಾರದು. ಇನ್ನೇನೂ ಹೆಚ್ಚುಕಡಿಮೆ ಆಗಬಾರದು ಅನ್ನುವ ಕಾರಣಕ್ಕೆ ಮಾತ್ರ ಒಂದು ಪೂಜೆ ಮಾಡಿಸಲೇಬೇಕು!'' ಎಂದ ಶಾಸ್ತ್ರಿ ``ಯಾವ ಪೂಜೆ ಹೇಳಿ ಶಾಸ್ತ್ರಿಗಳೇ? ಹುಟ್ಟಿ ಬರುವ ಹೊಸ ಜೀವಕ್ಕಾಗಿ ನಾನು ಏನು ಮಾಡಲೂ ತಯಾರಾಗಿದ್ದೇನೆ!'' ಎಂದು ಆತುರದಿಂದ ಸಾವಿತ್ರಮ್ಮ ರಾಮ ಜೋಯಿಸರ ಕಾಲು ಮುಟ್ಟಿ ನಮಸ್ಕರಿಸಿದರು. ರಾಮ ಜೋಯಿಸ ಶಾಸ್ತ್ರಿ ಮುಗುಳ್ನಗುತ್ತಾ, ಇನ್ನೇನು ಒಂದು ವರ್ಷಕ್ಕಾಗುವಷ್ಟು ಆದಾಯ ಒಂದೇ ಏಟಿಗೆ ಬಂದುಬಿಟ್ಟಿತು ಎಂದು ಒಳಗೊಳಗೆ ಖುಷಿಪಡುತ್ತಾ, ``ನೋಡಮ್ಮ, ಈಗಷ್ಟೇ ಸೊಸೆಯ ಕಾಲುಗಳು ಊದಿಕೊಂಡಿವೆ ಎಂದರೆ, ಮುಂದಿನ 9 ತಿಂಗಳಲ್ಲೂ ತೊಂದರೆಯಾಗದಂತೆ ಹೋಮ ಮಾಡಿದರೆ ಸಾಕು, ಎಲ್ಲಾ ಸರಿಹೋಗುತ್ತದೆ,'' ಎಂದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ