ಕಥೆ - ಕೌಸಲ್ಯಾ ಎಸ್‌. ರಾವ್

ರಾಧಿಕಾ ಆಫೀಸಿನಿಂದ ಹಿಂದಿರುಗುತ್ತಿದ್ದಳು. ಬಸ್ಸಿನ ವೇಗದೊಂದಿಗೆ ಅವಳ ಆಲೋಚನೆಗಳೂ ಅನಿಯಂತ್ರಿತ ವೇಗದಲ್ಲಿ ಓಡುತ್ತಿದ್ದವು. ಅಂದು ಅವಳಿಗೆ ಪ್ರಮೋಶನ್‌ ಲೆಟರ್‌ ಸಿಕ್ಕಿತ್ತು. ನಾಲ್ವರನ್ನು ಸೂಪರ್‌ಸೀಡ್‌ ಮಾಡಿ ಅವಳಿಗೆ ಬ್ರಾಂಚ್ ಮ್ಯಾನೇಜರ್‌ ಎಂದು ಪ್ರಮೋಶನ್‌ ಸಿಕ್ಕಿತ್ತು.  ಅವಳಿಗೆ ಯಶಸ್ಸು ಸಿಗುವ ಭರವಸೆ ಇತ್ತು. ಆದರೆ ಕೊಂಚ  ಅನುಮಾನವಿತ್ತು. ಏಕೆಂದರೆ ಅವಳಿಗಿಂತ ಸೀನಿಯರ್‌ ಆಗಿದ್ದ ನಾಲ್ವರು ಆ ಪದವಿಯ ಆಕಾಂಕ್ಷಿಗಳಾಗಿದ್ದರು. ಅವರೆಲ್ಲರನ್ನೂ ಸೂಪರ್‌ಸೀಡ್‌ ಮಾಡಿ ಈ ಪೋಸ್ಟ್ ಪಡೆಯುವುದು ದೊಡ್ಡ ಸ್ಥಾನ ಪಡೆದಂತಾಗಿತ್ತು. ಅವಳ ಸಹೋದ್ಯೋಗಿಗಳು ಅಭಿನಂದನೆ ಸಲ್ಲಿಸಿ ಸ್ವೀಟ್‌ ಕೇಳಿದ್ದರು. ಅವಳು ಅಟೆಂಡರ್‌ನ್ನು ಕರೆದು ಸ್ವೀಟ್‌ ತರಿಸಿ  ಎಲ್ಲರ ಬಾಯಿ ಸಿಹಿ ಮಾಡಿಸಿದ್ದಳು. ಈ ಸಿಹಿಸುದ್ದಿಯನ್ನು ಎಲ್ಲರಿಗಿಂತ ಮುಂಚೆ ರಾಘವನಿಗೆ ಹೇಳಲು ಇಚ್ಛಿಸಿದ್ದಳು. ಫೋನ್‌ ಮಾಡಿ ತಿಳಿಸಿದರೆ ಅವರ ಪ್ರತಿಕ್ರಿಯೆ ನೋಡಿದಂತಾಗುವುದಿಲ್ಲ. ಅವಳು ಬಹಳ ಶ್ರಮವಹಿಸಿ ದುಡಿಯುತ್ತಿದ್ದಳು. ಮನೆಯಲ್ಲಿ ಆಫೀಸಿನಲ್ಲಿ ಯಾವಾಗಲೂ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಳು. ಒಬ್ಬನೇ ಮಗನ ಹೆಂಡತಿಯಾದುದರಿಂದ ಅತ್ತೆಮಾವನಿಗೆ ಅಚ್ಚುಮೆಚ್ಚಾಗಿದ್ದರೂ ಕರ್ತವ್ಯಗಳ ಅನೇಕಾನೇಕ ಎಳೆಗಳು ಅವಳನ್ನು ಸುತ್ತಿಕೊಳ್ಳಲು ಕಾತರದಿಂದಿದ್ದವು. ಮದುವೆಗೆ ಮುಂಚೆ ಅತ್ತೆ ಅವಳನ್ನು ಕೇಳಿದ್ದರು. ``ಒಂದುವೇಳೆ ನಿನಗೆ ಉದ್ಯೋಗ ಅಥವಾ ಫ್ಯಾಮಿಲಿ ಎರಡರಲ್ಲಿ ಒಂದನ್ನು ಆರಿಸಿಕೊಳ್ಳಲು ಬಿಟ್ಟರೆ ಯಾವುದಕ್ಕೆ ಮಹತ್ವ ಕೊಡುತ್ತೀಯಾ?''

``ಫ್ಯಾಮಿಲಿಗೆ,'' ಅಮ್ಮ ಹೇಳಿಕೊಟ್ಟಿದ್ದ ಉತ್ತರ ಥಟ್ಟನೆ ಅವಳ ಬಾಯಿಂದ ಬಂದಿತ್ತು. ಅವಳು ಏನಾದರೂ ಪೆದ್ದು ಪೆದ್ದಾಗಿ ಮಾತಾಡಿ ಅಷ್ಟು ಒಳ್ಳೆಯ ಸಂಬಂಧ ಕೈ ಜಾರಿ ಹೋಗಬಾರದೆಂದು ಅಮ್ಮ ಎಚ್ಚರಿಸಿದ್ದರು.

ರಾಧಾಳ ಅಪ್ಪ ಅಮ್ಮನಿಗೂ ರಾಘವ್ ಬಹಳ ಇಷ್ಟವಾಗಿದ್ದರು. ಅವರ ಸ್ವಭಾವ, ನಡೆನುಡಿ, ಶಿಕ್ಷಣ, ಉನ್ನತ ಹುದ್ದೆ, ಒಳ್ಳೆಯ ವ್ಯಕ್ತಿತ್ವ ಎಲ್ಲರಿಗೂ ಹಿಡಿಸಿತ್ತು. ರಾಘವ್ ಒಂದು ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್‌ ಆಗಿದ್ದರು. ಅವಳು ಬ್ಯಾಂಕ್‌ನಲ್ಲಿ ಪ್ರೊಬೇಶನಲ್ ಆಫೀಸರ್‌ ಆಗಿದ್ದಳು. ಅವಳು ಎಂಥದೇ ಪರಿಸ್ಥಿತಿಯಲ್ಲೂ ಕೆಲಸ ಬಿಡಲು ಸಿದ್ಧಳಿರಲಿಲ್ಲ. ಆದರೆ ಅತ್ತೆಯಂತೂ ಅತ್ತೆಯೇ, ಒಬ್ಬ ಹುಡುಗಿಗೆ ಅವಳ ಮಹತ್ವಾಕಾಂಕ್ಷೆಗಿಂತಾ ಹೆಚ್ಚಾಗಿ ಅವಳ ಮನೆ, ಕುಟುಂಬ ಮುಖ್ಯ. ನಾವೆಷ್ಟು ಆಧುನಿಕರಾಗಿದ್ದರೂ ಮಾನಸಿಕತೆ ಬದಲಾಗುವುದಿಲ್ಲ. ಮಹಿಳೆ ಪುರುಷನಿಗಿಂತ ಹೆಚ್ಚು ಸಂಪಾದಿಸುತ್ತಿದ್ದರೂ ಅವಳ ಕೈ ಮತ್ತು ತಲೆ ಸದಾ ಕೆಳಗೇ ಇರಬೇಕು. ಈ ವಿಶೇಷತೆ ಮತ್ತು ನಮ್ರತೆಯ ಬಲದಿಂದಲೇ ಒಬ್ಬ ಸ್ತ್ರೀ ಎಲ್ಲರ ಹೃದಯಗಳನ್ನು ಆಳುವಲ್ಲಿ ಸಮರ್ಥಳಾಗುತ್ತಾಳೆ. ಇದೇ ಮಾನಸಿಕತೆ ಆಧಾರದಲ್ಲಿ ಚೆನ್ನಾಗಿ ಆಲೋಚಿಸಿ ಉತ್ತರಿಸಲು ರಾಧಿಕಾಳ ಅಮ್ಮ ತಿಳಿಸಿ ಹೇಳಿದ್ದರು. ರಾಧಿಕಾ ಹಾಗೇ ಉತ್ತರಿಸಿದ್ದಳು.

ಅತ್ತೆಗೆ ರಾಧಿಕಾಳ ಉತ್ತರದಿಂದ ಬಹಳ ಸಂತೋಷವಾಗಿತ್ತು.  ಅವರು ಅವಳನ್ನು ಸೊಸೆ ಮಾಡಿಕೊಳ್ಳಲು ತೀರ್ಮಾನಿಸಿದರು. ಮದುವೆಯ ನಂತರ ನಿಧಾನವಾಗಿ ಅವಳಿಗೂ ತನ್ನ ಕೆರಿಯರ್‌ಗಿಂತ ಮನೆ ಹಾಗೂ ಕುಟುಂಬವೇ ಮುಖ್ಯವಾಯಿತು. ಏಕೆಂದರೆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇದ್ದರೆ ಆಫೀಸಿನಲ್ಲಿ ಹೆಚ್ಚು ಉತ್ಸಾಹದಿಂದ ಕೆಲಸ ಮಾಡಬಹುದೆಂದು ಅವಳು ತಿಳಿದಿದ್ದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ