ತನ್ನ ಭಾವಿ ಪತಿ ರವಿಯ ಸ್ನೇಹಿತ ಮಹೇಶನ ನಿಶ್ಚಿತಾರ್ಥದ ಸಂದರ್ಭದಲ್ಲಿ ಸೌಮ್ಯಾ ಮೊದಲ ಬಾರಿ ಶಿಲ್ಪಾಗೆ ಮುಖಾಮುಖಿಯಾಗಿದ್ದಳು. ಸ್ವಲ್ಪ ಹೊತ್ತಿನಲ್ಲಿಯೇ ಸೌಮ್ಯಾಳ ಬಾಯಿಂದ ಅವಳು ಎಂತೆಂತಹ ಮಾತುಗಳನ್ನು ಕೇಳಿಸಿಕೊಳ್ಳಬೇಕಾಯಿತೆಂದರೆ,  ಅದರಿಂದ ಅವಳಿಗೆ ತನ್ನನ್ನು ಕಂಡು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂಬುದು ಸ್ಪಷ್ಟವಾಯಿತು.

ಶಿಲ್ಪಾಗೆ ತಾನು ಒಳ್ಳೆಯ ಡ್ಯಾನ್ಸರ್‌ ಅಲ್ಲ ಎನ್ನುವುದು ಗೊತ್ತಿತ್ತು. ಆದರೆ ಅವಳಿಗೆ ಡ್ಯಾನ್ಸ್ ಮಾಡಲು ಬಹಳ ಇಷ್ಟವಾಗುತ್ತಿತ್ತು. ರವಿಯ ಜೊತೆ ಅವಳು ಸ್ವಲ್ಪ ಹೊತ್ತು ಡ್ಯಾನ್ಸ್ ಮಾಡಿದ ಬಳಿಕ ತನ್ನ ಪರಿಚಯದ ಮಹಿಳೆಯರೊಂದಿಗೆ ಹರಟೆ ಹೊಡೆಯಲು ಅವಳು ಕೆಳಗಿಳಿದು ಬಂದಳು. ಆಗ ಸೌಮ್ಯಾ ಮುಖ ಸಿಂಡರಿಸುತ್ತಾ ಕಮೆಂಟ್‌ ಮಾಡಿದಳು, ``ಡ್ಯಾನ್ಸ್ ನಲ್ಲಿ ಉತ್ಸಾಹದ ಜೊತೆದೆ ಗ್ರೇಸ್‌ ಕೂಡ ಕಂಡುಬರಬೇಕು. ಇಲ್ಲದಿದ್ದರೆ ವ್ಯಕ್ತಿ ಕಾಡಿನವರ ಹಾಗೆ ಕಾಣುತ್ತಾನೆ.''

ಸ್ವಲ್ಪ ಹೊತ್ತಿನ ಬಳಿಕ ಶಿಲ್ಪಾಳ ಫಿಗರ್‌ ಬಗ್ಗೆ ಗಮನಸೆಳೆಯುತ್ತಾ, ``ಶಿಲ್ಪಾ, ನೀನು ನನ್ನ ಮಾತಿನ ಬಗ್ಗೆ ಕೆಟ್ಟದಾಗಿ ಭಾವಿಸಬೇಡ. ಆದರೆ ಇತ್ತೀಚೆಗೆ ಝೀರೋ ಸೈಜ್‌ ನ ಫ್ಯಾಷನ್‌ ಚಾಲ್ತಿಯಲ್ಲಿದೆ. ಅದು ನನ್ನ ತಿಳಿವಳಿಕೆಗೆ ಹೊರತಾದದ್ದು, ಫ್ಯಾಷನ್‌ ಫ್ಯಾಷನ್ನೇ. ಆದರೆ ಪ್ರಿಯಕರ ಅಥವಾ ಗಂಡನ ಪ್ರೀತಿಯಲ್ಲಿ ಕೇವಲ ಮೂಳೆಗಳ ಪಂಜರ ಮಾತ್ರ ಇದ್ದರೆ, ಅದು ಅವನ ದೃಷ್ಟಿಯಲ್ಲಿ ಅನ್ಯಾಯವೇ ಅಲ್ವೇ?''

ಸೌಮ್ಯಾಳ ಆ ಮಾತುಗಳನ್ನು ಕೇಳಿಸಿಕೊಂಡು ಇತರೆ ಮಹಿಳೆಯರು ಜೋರಾಗಿ ನಕ್ಕರು. ಅದಕ್ಕೆ ಪ್ರತಿಯಾಗಿ ಶಿಲ್ಪಾ ಖಾರವಾಗಿ ಉತ್ತರಿಸಬೇಕೆಂದುಕೊಂಡಳು ತನ್ನನ್ನು ತಾನು ತಡೆದಳು. ತನ್ನ ಮನಸ್ಸಿಗೆ ಎಷ್ಟು ಹೆಚ್ಚು ಒತ್ತುಕೊಟ್ಟರೂ, ಸೌಮ್ಯಾ ತನ್ನೊಂದಿಗೆ ಅಷ್ಟೊಂದು ಕಠೋರವಾಗಿ ಏಕೆ ನಡೆದುಕೊಳ್ಳುತ್ತಿದ್ದಾಳೆಂದು ಅವಳ ಅರಿವಿಗೆ ಬರಲಿಲ್ಲ.

ಶಿಲ್ಪಾ ಏಕಾಂತದಲ್ಲಿ ರವಿಯನ್ನು ಈ ಬಗ್ಗೆ ಕೇಳಿಯೇ ಬಿಟ್ಟಳು, ``ನಿಮಗೂ ಸೌಮ್ಯಾಗೂ ಈ ಹಿಂದೆ ಪರಿಚಯ, ಸ್ನೇಹ ಇತ್ತಾ?''

``ಸರಿ, ಸರಿ..... ನೀನು ಈ ಪ್ರಶ್ನೆಯನ್ನು ಏಕೆ ಕೇಳುತ್ತಿರುವೆ?'' ಅವನು ಶಿಲ್ಪಾಳ ಮುಖದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸುತ್ತಿದ್ದ.

``ಏಕೆಂದರೆ ಸೌಮ್ಯಾ ನನ್ನೊಂದಿಗೆ ಉದ್ದೇಶಪೂರ್ವಕವಾಗಿಯೇ ಈ ರೀತಿ ವರ್ತಿಸುತ್ತಿದ್ದಾಳೆ ಅನಿಸುತ್ತಿದೆ. ಏಕೆಂದರೆ ಇವತ್ತು ನಾವು ಮೊದಲ ಬಾರಿ ಭೇಟಿಯಾಗಿದ್ದೇವೆ. ಹೀಗಾಗಿ ನನ್ನ ಯಾವುದಾದರೂ ತಪ್ಪಿಗೆ ಅವಳು ಬೇಸರಗೊಂಡು ಹೀಗೆ ವರ್ತಿಸುತ್ತಾಳೆಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅವಳು ನಿಮ್ಮ ಜೊತೆಗಿನ ಯಾವುದಾದರೂ ಹಳೆಯ ಜಗಳಕ್ಕೆ ಬೇಸರಗೊಂಡು ಹೀಗೆ ವರ್ತಿಸುತ್ತಿರಬಹುದೆ?'' ಕೇಳಿದಳು ಶಿಲ್ಪಾ

``ಇಲ್ಲ... ಇಲ್ಲ.... ನನ್ನೊಂದಿಗೆ ಅವಳು ಎಂದೂ ಜಗಳವಾಡಿಲ್ಲ.''

``ಹಾಗಿದ್ದರೆ ಮತ್ತೇನೂ ಕಾರಣವಿರಬಹುದು. ನನ್ನ ವಿರುದ್ಧ ಇಷ್ಟೊಂದು ಹಲ್ಲು ಮಸೆಯಲು?''

``ವ್ಯಕ್ತಿಯೊಬ್ಬನ ಮೂಡ್‌ ಯಾವ ಕಾರಣಗಳಿಂದ ಹದಗೆಡಬಹುದು? ನೀನು ವ್ಯರ್ಥವಾಗಿ ಟೆನ್ಶನ್‌ ಮಾಡಿಕೊಳ್ತಿರುವೆ. ಬಾ ನಿನಗೆ ಗೋಬಿ ಮಂಚೂರಿ ತಿನ್ನಿಸ್ತೀನಿ.''

``ಅವಳು ನನ್ನೆಲ್ಲ ಪಾರ್ಟಿಯ ಮಜಾವನ್ನು ಹಾಳುಗೆಡಹಿಬಿಟ್ಟಳು.''

``ಹಾಗಾದರೆ ಅವಳೊಂದಿಗೆ ಜಗಳ ಮಾಡೋಣ ಬಾ,'' ರವಿ ಸ್ವಲ್ಪ ಸಿಡಿಮಿಡಿಗೊಂಡು ಹೇಳಿದ.

``ನೀವು ಬೇಜಾರಾಗಬೇಡಿ. ನಾನು ಅವಳ ಮಾತುಗಳ ಬಗ್ಗೆ ಗಮನ ಕೊಡುವುದನ್ನು ನಿಲ್ಲಿಸ್ತೀನಿ,'' ಎಂದು ಹೇಳುತ್ತಾ ಅವನ ಮೂಡ್‌ ಸರಿಪಡಿಸಲು ಶಿಲ್ಪಾ ತಕ್ಷಣ ನಕ್ಕುಬಿಟ್ಟಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ