ಕಥೆ - ವೈ.ಕೆ. ಸಂಧ್ಯಾ ಶರ್ಮ

ಕಾಲನ್ನು ನೆಲಕ್ಕೆ ಅಪ್ಪಳಿಸುತ್ತಾ ಬಾಯಲ್ಲಿ ಏನೋ ವಟಗುಟ್ಟಿಕೊಂಡು ಹೊರಟುಹೋದ. ನೆಲದ ಮೇಲೆ ಕೈಯೂರಿ ಬೋರಲು ಬಿದ್ದಿದ್ದಳು ಗಂಗಾ. ಅವಳ ಕಣ್ಣಿನಿಂದ ನೀರು ಸೆಗಣಿ ನೆಲದ ಮೇಲೆ ತೊಟ್ಟಿಕ್ಕಿ ಇಂಗಿಹೋಯಿತು. ಅವನು ಹೊರಗೆ ಕಾಲು ಹಾಕಿದೊಡನೆ ಗಂಗಾ ಬಿಕ್ಕಳಿಸಿ ಅಳಲು ಪ್ರಾರಂಭಿಸಿದಳು. ಒಂಡು ಕಡೆ ನೋವು, ಇನ್ನೊಂದೆಡೆ ಅಪಮಾನ. ಕೋಪದ ಆವೇಶದಲ್ಲಿ ಅವನು ಕೈಗೆ ಸಿಕ್ಕಿದ ಚೂಪು ಕಂಠದ ತಂಬಿಗೆಯನ್ನು ಇವಳತ್ತ ರಭಸದಿಂದ ಬೀಸಿದ್ದ. ಗಂಗಾ ತಪ್ಪಿಸಿಕೊಳ್ಳಲು ಯತ್ನಿಸಿದ್ದರೂ ಅದು ನೇರವಾಗಿ ಅವಳ ಮುಖಕ್ಕೆ ಬಡಿದು ಮೂಗಿನ ಏಣಿಗೆ ತಗುಲಿ ರಕ್ತ ಸುರಿಯುತ್ತಿತ್ತು. ಹಣೆ, ಕೆನ್ನೆ ಬುರಬುರನೆ ಊದಿ ಬೋರು ಬಂದಿತ್ತು. ಇನ್ನು ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಅವಳ ಕಣ್ಣೇ ಹೋಗಬೇಕಿತ್ತು. ಮಕ್ಕಳು ಅವರಿಬ್ಬರ ಗದ್ದಲಕ್ಕೆ ಎದ್ದು, ಇಷ್ಟು ಹೊತ್ತು ನಡೆದುದನ್ನು ಪೆಚ್ಚಾಗಿ ನೋಡುತ್ತಾ ಅವನು ತೊಲಗಿ ಹೋದ ಮೇಲೆ ಮೆಲ್ಲನೆ ಅವಳ ಬಳಿ ಸರಿದಿದ್ದ. ನೋವಿನಿಂದ ಮುಲುಗುಟ್ಟುತ್ತಿದ್ದಳು ಗಂಗಾ. ಇದಕ್ಕೆ ಕಾರಣವಾದ ಅವನನ್ನು ಲಟಿಕೆ ತೆಗೆದು ಶಪಿಸಿದಳು.

``ಆಳಾಗೋಗು.... ಇವತ್‌ ನೀನು ಮನೆಗೆ ಬರಬೇಕಲ್ಲ ಆಗೈತೆ.....'' ಎಂದು ಅವನನ್ನು ಮನಸ್ಸಿನಲ್ಲೇ ಬಯ್ದು ತೃಪ್ತಿಪಟ್ಟುಕೊಂಡಳು.

ಅವ್ಯಾಹತವಾಗಿ ಮೂಗಿನಿಂದ ಹರಿಯುತ್ತಿದ್ದ ರಕ್ತವನ್ನು ನಿಲ್ಲಿಸಲು ಸ್ವಲ್ಪ ಅರಿಶಿನ ಹಾಕಿ ಬಟ್ಟೆ ಬಿಗಿದಳು. ಕೊರೆಯುತ್ತಿದ್ದ ಚಳಿ, ಮುಖದ ಮೇಲೆ ಬೀಸಿದಾಗ ಹಾಯ್‌ ಎಂದು ನೋವಿನಿಂದ ಕಿರುಚಿದಳು. ಅವಳ ಸ್ಥಿತಿಯನ್ನು ಕಂಡು ಮರುಗುವವರಾರೂ ಅಲ್ಲಿರಲಿಲ್ಲ. ಎಳೆ ಕಂದಮ್ಮಗಳು ಮಾತ್ರ ಮೂಕವಾಗಿ ದಿಟ್ಟಿಸುತ್ತಿದ್ದ ಅಷ್ಟೇ.

ಅಕ್ಕಪಕ್ಕದ ಗುಡಿಸಲಿನ ಹೆಂಗಸರೆಲ್ಲ ಆಗಲೇ ತಂತಮ್ಮ ಕೆಲಸದ ಮನೆಗಳಿಗೆ ತೆರಳಿದ್ದರು. ಇಷ್ಟು ಹೊತ್ತಿಗೆ ಗಂಗಾಳೂ ಅಮ್ಮಾವರ ಮನೆಯ ಪಾತ್ರೆಯಲ್ಲಿ ಕೈಯಾಡುತ್ತಿರಬೇಕಿತ್ತು. ಆದರೆ ಎದ್ದ ತಕ್ಷಣ ಅವನು ಜಗಳ ತೆಗೆದು ಅವಳನ್ನು ಗಾಯಗೊಳಿಸಿ ಮನೆಯಿಂದ ಕಾಲು ಕಿತ್ತಿದ್ದ. ಅವನು ಜಗಳ ತೆಗೆಯಲು ಸರಿಯಾದ ಕಾರಣವೇ ಇರಬೇಕು ಎಂದಿರಲಿಲ್ಲ. ವಿನಾಕಾರಣವಾಗಿ ಸಣ್ಣದ್ದನ್ನೇ ದೊಡ್ಡದು ಮಾಡಿ ಆರ್ಭಟಿಸಿ ಗಿಡುಗನಂತೆ ಅವಳ ಮೇಲೆ ಎರಗುವನು. ಗಂಗಾ ಪ್ರಾಣ ಭಯದಿಂದ ಗುಬ್ಬಚ್ಚಿಯಾಗಿ ಅವನ ಹಿಡಿತಕ್ಕೆ ಸಿಗದೇ ಹೊರಗೆ ಓಡುವಳು, ಬೊಬ್ಬೆ ಹಾಕುವಳು, ಅಕ್ಕಪಕ್ಕದವರನ್ನು ಸಹಾಯಕ್ಕೆ ಕರೆಯುವಳು. ಆಗ ಸುತ್ತಮುತ್ತಲ ಹಟ್ಟಿಯಿಂದ ಜನ ಓಡಿ ಬಂದು ಅವಳನ್ನು ಅವನ ಕಪಿಮುಷ್ಟಿಯಿಂದ ಬಿಡಿಸುವರು. ಗಂಗಾ `ಸದ್ಯ ಬದುಕಿದೆ,' ಎಂದು ನಿಟ್ಟುಸಿರು ಕಕ್ಕುವಳು. ಅವನು ಸೋಲಿಗಾಗಿ ಹಲ್ಲು ಕಡಿಯುವನು. ಬೇರೇನೂ ಮಾಡಲಾಗದೆ ಗಂಗಾಳನ್ನು ಕೆಂಗಣ್ಣುಗಳಿಂದ ಕ್ರೂರವಾಗಿ ದಿಟ್ಟಿಸಿ ಉರಿ ಕಾರುವನು. ಆಗ ಪಕ್ಕದ ಗುಡಿಸಲಿನ ಬಸ್ಯಾ, ``ಯಾಕಲ ಎಂಡ್ರನಾ ಇಂಗ್‌ ಬಡಿದ್‌ ಸಾಯಿಸ್ತೀ..... ಅವಳೂ ಮನಿಷಿ ಅಲ್ವಾ....? ಯಾರೂ ತಪ್ಪೇ ಮಾಡಕಿಲ್ಲ ಅಂತ ಏಳಕಾಯ್ತದಾ.... ಒಸಿ ಏನೋ ತೆಪ್ಪು ಮಾಡಿದ್ರೆ ಕ್ಷಮಿಸ್ ಬಿಡಬೇಕ್ಲಾ..... ಇಂಗೆ ಒಡ್ದು ಬಡ್ದು ಸಾಯ್ಸಾಕಿ ಬುಟ್ರೇ ನಾಳೆ ನಿಂರ್ಗ್ಯಾಲಾ ಗಂಜಿ ಕಾಯ್ಸಿ ಆಕೋರು,'' ಎಂಬ ಉಪದೇಶಕ್ಕೆ ತೊಡಗುವನು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ