``ಸ್ನೇಹ ಎಂತಹದೊಂದು ಕಟ್ಟಡವೆಂದರೆ, ಅದು ವಿಶ್ವಾಸವೆಂಬ ಅಡಿಪಾಯದ ಮೇಲೆ ನಿಂತಿರುತ್ತದೆ. ಅದು ನದಿಯ ದಡಗಳನ್ನು ಜೋಡಿಸುವ ಸೇತುವೆಯಂತಿದ್ದು, ಆ ದಡ ಸ್ತ್ರೀಯೋ, ಪುರುಷನೊ ಎಂಬ ಮಾನದಂಡ ಹೊಂದಿರುವುದಿಲ್ಲ,'' ವಾಟ್ಸ್ ಆ್ಯಪ್‌ ನಲ್ಲಿ ಬಂದ ಸಂದೇಶವೊಂದನ್ನು ಪ್ರೇರಣಾ ತನ್ನ ಗಂಡನಿಗೆ ಎತ್ತರದ ಧ್ವನಿಯಲ್ಲಿ ಓದಿ ಹೇಳಿದಳು.

``ಒಬ್ಬ ಸ್ತ್ರೀ ಹಾಗೂ ಪುರುಷ ಎಂದಿಗೂ ಪರಸ್ಪರ ಸ್ನೇಹಿತರಾಗುವುದಿಲ್ಲ..... ಅದು ಕೇವಲ ತನ್ನ ಕಾಮನೆಯನ್ನು ಸಜ್ಜನಿಕೆಯ ಮುಖವಾಡವನ್ನು ಹಾಕಿಸುವ ಕೆಟ್ಟ ಮಾನಸಿಕತೆಯ ಹೊರತು ಬೇರೇನೂ ಅಲ್ಲ,'' ಎಂದು ಸೋಮಶೇಖರ್‌ ಎಂದಿನಂತೆ ಹೇಳುತ್ತಾ ತನ್ನ ಸಿಡಿಮಿಡಿತನ ಹೊರಹಾಕಿದ.

ಪ್ರೇರಣಾಳ ಮುಖ ಇಳಿದುಹೋಯಿತು. ಅವಳು ಫೋನ್‌ ಚಾರ್ಜಿಗೆ ಹಾಕಿ, ಬಾಥ್‌ ರೂಮಿನತ್ತ ಹೆಜ್ಜೆ ಹಾಕಿದಳು.

ಪ್ರೇರಣಾ ಹಾಗೂ ಸೋಮಶೇಖರನ ಮದುವೆಯಾಗಿ 5 ವರ್ಷಗಳೇ ಆಗಿದ್ದವು. ಅವರ ನಡುವೆ ದೈಹಿಕ ಅಂತರ ಮೊದಲ ರಾತ್ರಿಯೇ ಕೊನೆಗೊಂಡಿತ್ತು. ಆದರೆ ಹೃದಯದ ನಡುವಿನ ಅಂತರ ಈವರೆಗೂ ಸ್ಪಷ್ಟವಾಗಿ ನಿರ್ಧಾರವಾಗಿರಲಿಲ್ಲ. ಅಂದಹಾಗೆ ಇಬ್ಬರ ನಡುವೆ ಅಷ್ಟೇನೂ ಮತಭೇದ ಇರಲಿಲ್ಲ. ಆದರೆ ಸ್ತ್ರೀ-ಪುರುಷರ ನಡುವಿನ ಸಂಬಂಧದ ಕುರಿತಂತೆ ಸೋಮಶೇಖರನ ವಿಚಾರಗಳು ಈಗಲೂ ಪುರಾತನ ಯುಗದ್ದಾಗಿದ್ದವು. ಪ್ರೇರಣಾ ಸ್ತ್ರೀ-ಪುರುಷರ ಬಗೆಗೆ ಏನಾದರೂ ಹೇಳಲು ಹೋದರೆ, ಸೋಮಶೇಖರ್‌ ಅದೇ ರೀತಿಯಲ್ಲಿ ಕೆಂಡಾಮಂಡಲನಾಗುತ್ತಿದ್ದ.

ಇಬ್ಬರೂ ಬೇರೆ ಬೇರೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಬೆಳಗ್ಗೆ ಹೊತ್ತು ಇಬ್ಬರಿಗೂ ಧಾವಂತದ ಸಮಯಾಗಿರುತ್ತಿತ್ತು. ಮನೆಗೆ ಮರಳುವ ಹೊತ್ತಿಗೆ ಇಬ್ಬರಿಗೂ ರಾತ್ರಿಯಾಗಿರುತ್ತಿತ್ತು. ವಾರಾಂತ್ಯದಲ್ಲಿ ಇಬ್ಬರಿಗೂ ರಜೆಯೇನೋ ದೊರಕುತ್ತಿತ್ತು. ಆದರೆ ವಾರವಿಡೀ ಉಳಿದ ಕೆಲಸಗಳಿಗಾಗಿ ಆ ಎರಡೂ ದಿನಗಳು ಕಳೆದು ಹೋಗುತ್ತಿದ್ದವು. ಸೋಮಶೇಖರನಿಗೆ ಅಷ್ಟೇನೂ ಕಷ್ಟಕರ ಎನಿಸುತ್ತಿರಲಿಲ್ಲ. ಏಕೆಂದೆರ ಅವನು ಮೊದಲಿನಿಂದಲೇ ಅಂತರ್ಮುಖಿ ಸ್ವಭಾವದವನಾಗಿದ್ದ. ಆದರೆ ಮಾತುಗಳ ಅಭಾವದಿಂದ ಪ್ರೇರಣಾ ತನ್ನ ಮನದ ಸಿಕ್ಕುಗಳನ್ನು ಬಿಡಿಸಿಕೊಳ್ಳಲು ಚಡಪಡಿಸುತ್ತಿದ್ದಳು.

ಪ್ರೇರಣಾ ತನ್ನ ಹೃದಯಕ್ಕೆ ಹತ್ತಿರವಾಗುವಂತಹ ಸ್ನೇಹಿತನ ಅಗತ್ಯವಿತ್ತು. ಅಂತಹ ಸ್ನೇಹಿತನ ಎದುರು ಅವಳು ತನ್ನ ಪ್ರತಿಯೊಂದು ರಹಸ್ಯವನ್ನು ಹಂಚಿಕೊಳ್ಳಬೇಕೆಂದು ಅಪೇಕ್ಷಿಸುತ್ತಿದ್ದಳು. ಪ್ರತಿಯೊಂದು ಕಷ್ಟದ ಸಂದರ್ಭದಲ್ಲೂ ಆ ವ್ಯಕ್ತಿಯಿಂದ ಸಲಹೆ ಪಡೆಯಬಹುದು. ಖುಷಿಯ ಕ್ಷಣಗಳಲ್ಲಿ ಅವನೊಂದಿಗೆ ನಗುನಗುತ್ತಾ ಕಾಲ ಕಳೆಯಬಹುದು. ದುಃಖದ ಸಂದರ್ಭದಲ್ಲಿ ಅವನ ಹೆಗಲಿಗೊರಗಿ ದುಃಖ ಮರೆಯಬೇಕು ಎನ್ನುವುದು ಅವಳ ಮನದಿಚ್ಛೆಯಾಗಿತ್ತು.

ಅಂತಹ ಸ್ನೇಹಿತನೊಬ್ಬನ ಕಲ್ಪನೆಯನ್ನು ಪ್ರೇರಣಾ ಸೋಮಶೇಖರ್‌ ಜೊತೆಗೆ ಹಂಚಿಕೊಂಡಾಗ ಅವನು ಕೆಂಡಾಮಂಡಲನಾಗುತ್ತಿದ್ದ.

``ಗಂಡ ಇದ್ದಾನಲ್ಲ. ಸುಖದುಃಖದಲ್ಲಿ ಜೊತೆ ನಿಭಾಯಿಸಲು, ಅದಕ್ಕಾಗಿ ಪ್ರತ್ಯೇಕ ಪುರುಷನ ಅಗತ್ಯವೇನಿದೆ? ಸ್ನೇಹಿತ ಅಂದರೆ ಪುರುಷನೇ ಏಕಾಗಿರಬೇಕು, ಮಹಿಳೆ ಏಕಾಗಿರಬಾರದು? ಅಮ್ಮ ಅಥವಾ ಅಕ್ಕ ತಂಗಿಗಿಂತ ಒಳ್ಳೆಯ ಸ್ನೇಹಿತೆ ಬೇರಾರೂ ಇರಲು ಸಾಧ್ಯ,'' ಎಂದು ಹೇಳುತ್ತಾ ಅವಳನ್ನು ಸುಮ್ಮನಾಗಿಸಿಬಿಡುತ್ತಿದ್ದ.

``ಗಂಡ ಎಂದೂ ಸ್ನೇಹಿತನಾಗುವುದಿಲ್ಲ. ಏಕೆಂದರೆ ಅವನ ಪ್ರೀತಿಯಲ್ಲಿ ಹಕ್ಕಿನ ಭಾವನೆ ಇರುತ್ತದೆ. ಹೆಂಡತಿಯ ಕುರಿತಂತೆ ಅಧಿಪತ್ಯದ ಭಾವನೆ ಇರುತ್ತದೆ. ಮಹಿಳೆಯರಲ್ಲಿ ಸ್ವಾಭಾವಿಕವಾಗಿಯೇ ಅಸೂಯೆಯ ಭಾವನೆ ಇದ್ದೇ ಇರುತ್ತದೆ. ಅಮ್ಮ ಸೋದರಿಯೇ ಆಗಿದ್ದರೂ ಸರಿ. ಇನ್ನು ಅಮ್ಮನ ಬಗ್ಗೆ ಹೇಳಬೇಕೆಂದರೆ, ಅವರ ಮಾತುಗಳು ಯಾವಾಗಲೂ ನೈತಿಕತೆಯ ಹೂಡಿಕೆಯಿಂದ ಆವೃತ್ತವಾಗಿರುತ್ತದೆ. ಅವರು ಹೃದಯದ್ದಲ್ಲ, ಮನಸ್ಸಿನ ಮಾತುಗಳನ್ನಷ್ಟೇ ಆಡುತ್ತಾರೆ. ನನಗೆಂಥ ಸ್ನೇಹಿತ ಬೇಕೆಂದರೆ ಅವನ ಬಂಧನದಲ್ಲೂ ಸ್ವಾತಂತ್ರ್ಯದ ಅನುಭವ ಉಂಟಾಗಬೇಕು......''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ