ಗಂಟೆಯ ಶಬ್ದ ಕೇಳಿಸಿದಾಗ ಕಾಲಿಂಗ್‌ ಬೆಲ್ ಇರಬಹುದೆಂದು ಭಾವಿಸಿದೆ. ಆದರೆ ಅದು ಫೋನ್‌ ಕರೆಯೆಂದು ಅನಂತರ ಅರಿವಾಯಿತು. ಒಡನೆಯೇ ಓಡಿಹೋಗಿ ರಿಸೀವರ್‌ ತೆಗೆದುಕೊಂಡು ``ಹಲೋ...'' ಎಂದೆ. ಪ್ರಾಣೇಶ್‌ ಮಾತನಾಡತೊಡಗಿದರು.

``ಹಲೋ ಮಧು, ಈ ದಿನ ನಾನು ಸ್ವಲ್ಪ ಬೇಗನೆ ಬರುತ್ತೇನೆ. ಬಿಸಿಬಿಸಿಯಾಗಿ ಏನಾದರೂ ತಿಂಡಿ ಮಾಡಿಡು. ಕುಂದಾಪುರದ ನಮ್ಮ ದೊಡ್ಡಪ್ಪನ ಮಗ ಬಂದಿದ್ದಾನೆ. ದೊಡ್ಡಪ್ಪ, ದೊಡ್ಡಮ್ಮ ಅಕಸ್ಮಾತ್‌ ನಮ್ಮ ಮದುವೆಗೆ ಬರಲಾಗಲಿಲ್ಲ. ಅವನನ್ನೂ ಸಾಯಂಕಾಲ ಮನೆಗೆ ಕರೆದುಕೊಂಡು ಬರುತ್ತೇನೆ. ತಿಳಿಯಿತೇ...?''

ನನ್ನ ಮದುವೆಯಾಗಿ ಸುಮಾರು ಒಂದೂವರೆ ವರ್ಷವಾಗುತ್ತ ಬಂದರೂ, ಇನ್ನೂ ನನಗೆ ಇವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಾಗಲಿಲ್ಲ. ಒಂದೊಂದು ಸಲ ಬಹಳ ಸಂತೋಷದಿಂದಿರುವಾಗ, ನನ್ನನ್ನು ಎತ್ತಿಕೊಂಡು ಸುತ್ತಾಡಿಸಿಬಿಡುತ್ತಿದ್ದರು. ಒಂದೊಂದು ಸಲ ನಾನು ಮನೆಯಲ್ಲಿ ಉಸಿರಾಡುತ್ತಿದ್ದೇನೆ ಎಂಬುದನ್ನೂ ಮರೆಯುತ್ತಿದ್ದರು. ಒಮ್ಮೊಮ್ಮೆ ನನ್ನ ಸೌಂದರ್ಯವನ್ನು ವರ್ಣಿಸುತ್ತ ಕವಿಯಾಗಿಬಿಡುತ್ತಿದ್ದರು. ಮಗದೊಮ್ಮೆ ವಾರಗಳೇ ಕಳೆದರೂ ಹ್ಞೂಂ…. ಇಲ್ಲ, ಹ್ಞಾಂ…. ಇಲ್ಲ.ಮದುವೆಯಾದ ಹೊಸದರಲ್ಲಿ ಒಂದು ವಾರ ಮಾತ್ರವೇ ನಾನು ಅತ್ತೆಮನೆಯಲ್ಲಿ ಉಳಿದದ್ದು. ಮತ್ತೆ ಮತ್ತೆ ರಜೆ ಸಿಗುವುದಿಲ್ಲ ಎಂದು ಇವರು ನನ್ನನ್ನು ಕನ್ಯಾಕುಮಾರಿಗೆ ಕರೆತಂದುಬಿಟ್ಟರು. ನಾವು ಮಧುಚಂದ್ರಕ್ಕೂ ಹೋಗಲಿಲ್ಲ. ಬೆಂಗಳೂರಿನಿಂದ ಕನ್ಯಾಕುಮಾರಿಗೆ ಹೊಸ ಜಾಗ, ಹೊಸ ಪರಿಸರಕ್ಕೆ ಬಂದುದೇ ದೊಡ್ಡ ಹನಿಮೂನಾಗಿತ್ತು.

ಪ್ರಾಣೇಶ್‌ ಬರುವುದಕ್ಕೆ ಮುನ್ನವೇ ನಾನು ತಿಂಡಿ ತಯಾರಿಸಿ, ಮುಗಿಸಿದ್ದೆ. ಬಿಸಿಬಿಸಿ ಸಜ್ಜಿಗೆ, ಬೊಂಬಾಯಿ ಬೋಂಡ ರೆಡಿಯಾಗಿತ್ತು. ಪ್ರಾಣೇಶ್‌ ತಮ್ಮ ದೊಡ್ಡಪ್ಪನ ಮಗ ಕುಮಾರ್‌ನೊಂದಿಗೆ ಬಂದಿಳಿದರು. ಕುಮಾರ್‌ನನ್ನು ನೋಡಿ ನಾನು ಮೂರ್ಛೆ ಹೋಗದಿದ್ದುದೊಂದು ಬಾಕಿ! ಇಷ್ಟೊಂದು ಸಾಮ್ಯತೆ ಇರಲು ಸಾಧ್ಯವೇ, ಹೀಗೂ ಉಂಟೆ? ಒಬ್ಬರ ರೂಪ ಇನ್ನೊಬ್ಬ ವ್ಯಕ್ತಿಯೊಂದಿಗೆ ಇಷ್ಟೊಂದು ಹೋಲುತ್ತದೇನು? ಅದೂ ಮೂಗು, ಕಣ್ಣು, ಕಿವಿ ತಿದ್ದಿ ತೀಡಿದ ಹಾಗೆ, ಥೇಟ್‌ ಶಂಕರನ ಹಾಗೇ ಇದೆ! ಕುಮಾರನಂತೂ ತನ್ನ ರೂಪಲಾವಣ್ಯ, ಹಾವಭಾವಗಳಿಂದ ಶಂಕರನ ಯಥಾವತ್ ರೂಪದಿಂದ ಕಂಗೊಳಿಸುತ್ತಿದ್ದ. ನನಗಂತೂ ಶಂಕರ್‌ ಬದುಕಿ ಬಂದನೇನೋ ಎನ್ನುವಷ್ಟು ಆಶ್ಚರ್ಯ!

``ಯಾವ ಲೋಕದಲ್ಲಿದ್ದೀಯಾ ಅತ್ತಿಗೆ? ಅಣ್ಣನನ್ನು ನೋಡುತ್ತಿದ್ದಂತೆಯೇ ಯಾವ ಲೋಕವನ್ನು ಸೇರಿದೆ?'' ಕುಮಾರನ ಮಾತುಗಳನ್ನು ಕೇಳುತ್ತ ಧ್ವನಿಯಲ್ಲೂ ಸಾಮ್ಯವಿರುವುದನ್ನು ಕೇಳಿ ಮೂಕವಿಸ್ಮಿತಳಾದೆ.

ತಡಬಡಿಸುತ್ತ, ``ಬಾ ಕುಮಾರ್‌, ನಿನ್ನನ್ನು ಮೊದಲನೇ ಸಲ ನೋಡುತ್ತಿದ್ದೇನಲ್ಲವೇ? ನೀವು ಇವನನ್ನು ಮೊದಲು ಎಂದೂ ಕರೆತರಲಿಲ್ಲವಲ್ಲ?'' ಎಂದು ಇವರನ್ನು ದೂರುತ್ತ ಹೇಳಿದೆ.

``ಈಗಲೂ ಅಣ್ಣನೇನೂ ನನ್ನನ್ನು ಕರೆಯಲಿಲ್ಲ. ನನ್ನನ್ನು ಅಲ್ಲಿಂದಲೇ ಹಾಗೇ ಸಾಗಹಾಕಲು ನೋಡುತ್ತಿದ್ದ,'' ಪ್ರಾಣೇಶನೆಡೆ ಕಣ್ಣು ಮಿಟುಕಿಸುತ್ತ  ಕುಮಾರ್‌, ``ನಾನೇ ಹೇಳಿದೆ, ಅಷ್ಟು ದೂರದಿಂದ ಬಂದಿದ್ದೇನೆ, ಅತ್ತಿಗೆಯ ಕೈ ರುಚಿ ನೋಡಿಕೊಂಡೇ ಹೋಗುತ್ತೇನೆ ಅಂತ....''  ಎಂದು ಹೇಳಿದ.

ಪ್ರಶಂಸಿಸುತ್ತಿದ್ದ ಕುಮಾರನನ್ನೇ ನಾನು ದೃಷ್ಟಿಸುತ್ತಿದ್ದರೆ, ಅವನ ಮಾತಿಗೆ ಪ್ರಾಣೇಶ್‌ ನಸುನಗುತ್ತಿದ್ದರು.

ನಾನು ಅಡುಗೆಮನೆಗೆ ಬಂದೆ. ನನಗೆ ಕುಮಾರನೆದುರು ನಿಂತು ತಡಬಡಿಸದೆ ಮಾತನಾಡಲು ಆಗುವುದಿಲ್ಲವೇನೋ ಎಂದು ಶಂಕೆಯಾಯಿತು. ನಾನಿನ್ನೂ ಆ ಶಾಕ್‌ನಿಂದ ಚೇತರಿಸಿಕೊಂಡಿರಲಿಲ್ಲ. ಕಾಫಿ ಹಿಡಿದು ನಾನು ಹಾಲ್‌ಗ ಬರುವಷ್ಟರಲ್ಲಿ, ಕುಮಾರ್‌ಕೈಕಾಲು ಮುಖ ತೊಳೆದು ಕುಳಿತಿದ್ದ. ಪ್ರಾಣೇಶ್‌ ಇನ್ನೂ ಉಡುಪು ಬದಲಿಸಿರಲಿಲ್ಲ. ಕುಮಾರ್‌ ಶುಭ್ರವಾದ ಪೈಜಾಮದ ಮೇಲೆ ಬಿಳಿ ಜುಬ್ಬ ಧರಿಸಿ ಆರಾಮವಾಗಿ ಕುಳಿತ್ತಿದ್ದ. ಇದೇ ಶಂಕರನ ಇಷ್ಟವಾದ ಡ್ರೆಸ್‌ ಆಗಿತ್ತು. ಪ್ರಾಣೇಶರಿಗಿಂತ ಒಂದೇ ವರ್ಷ ಚಿಕ್ಕವನಾದ ಕುಮಾರನನ್ನೇ ದೃಷ್ಟಿಸುತ್ತ ನಾನು ಕಾಫಿ ಕೊಟ್ಟೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ