ಗಾಯತ್ರಿ ತನ್ನ ಕೋಣೆಯಲ್ಲಿ ಒಬ್ಬಳೇ ಯಾರೊಂದಿಗೋ ಫೋನ್‌ನಲ್ಲಿ ನಗುನಗುತ್ತಾ ಮಾತಾಡುತ್ತಿರುವುದನ್ನು ಕಂಡು ಯಶೋದಾ ಬೆಚ್ಚಿದಳು. ಮದುವೆ ಮನೆಯಲ್ಲಿ ಬಂಧುಗಳು, ಸ್ನೇಹಿತರು ಸೇರಿರುವಾಗ ಇವಳೊಬ್ಬಳೇ ಯಾರೊಂದಿಗೆ ಮಾತಾಡುತ್ತಿದ್ದಾಳೆ? ಸ್ವಲ್ಪ ಹೊತ್ತು ಯಶೋದಾ ಅವಳ ಮಾತುಗಳನ್ನು ಕೇಳಿಸಿಕೊಳ್ಳಲು ಪ್ರಯತ್ನಿಸಿದಳು. ಆದರೆ ಗಾಯತ್ರಿಯ ನಗು ಬಿಟ್ಟು ಬೇರೇನೂ ಕೇಳಿಸಲಿಲ್ಲ. ಯಶೋದಾಗೆ ಬೇಸರವಾಯಿತು. ಗಾಯತ್ರಿಯ ವರ್ತನೆ ಅವಳಿಗಿ ಸರಿ ಕಾಣಲಿಲ್ಲ.

``ಗಾಯತ್ರಿ,'' ಯಶೋದಾ ಸೌಮ್ಯತೆಯಿಂದ ಕೂಗಿದಳು.

ಗಾಯತ್ರಿ ಗಾಬರಿಯಿಂದ ತಿರುಗುವಾಗ ಗಡಿಬಿಡಿಯಲ್ಲಿ ರಿಸೀವರ್‌ ಕೆಳಗೆ ಬಿತ್ತು.

``ಇಲ್ಲಿ ಒಬ್ಬಳೇ ಯಾರ ಜೊತೆ ಮಾತಾಡ್ತಿದ್ದೀಯಾ? ಮನೆಯವರೆಲ್ಲಾ ಚಪ್ಪರದಲ್ಲಿ ಕೂತಿದ್ದಾರೆ,'' ಯಶೋದಾ ಕೇಳಿದಳು.

``ಅ...... ಅನಿರುದ್ಧನೊಂದಿಗೆ ಮಾತಾಡ್ತಿದ್ದೆ. ನನ್ನ ಚೂಡಿದಾರ್‌ ಮರೆತುಬಿಟ್ಟಿದ್ದೆ. ತಗೊಂಡು ಬಾ ಅಂತ ಹೇಳ್ತಿದ್ದೆ.''

``ಗಾಯತ್ರಿ, ನಿನಗೆ ಸರಿಯಾಗಿ ಸುಳ್ಳು ಹೇಳಲೂ ಬರೋದಿಲ್ಲ. ಅನಿರುದ್ಧ ಬಂದು ಬಹಳ ಹೊತ್ತಾಯ್ತು. ಮಂಟಪದಲ್ಲಿ ಕೂತಿದ್ದಾನೆ. 2-3 ಸಾರಿ ನಿನ್ನ ಬಗ್ಗೆ ಕೇಳಿದ,'' ಯಶೋದಾ ಹೇಳಿದಳು.

``ಅಜಯ್‌ ಮಲಗಿಬಿಟ್ಟಿದ್ದ. ಅದಕ್ಕೇ ನಿನ್ನ ರೂಮಿಗೆ ಕರೆದುಕೊಂಡು ಬಂದೆ. ಇಲ್ಲಿ ಗಲಾಟೆ ಇರಲ್ಲ. ಚೆನ್ನಾಗಿ ನಿದ್ದೆ ಮಾಡ್ತಾನೆ.''

``ಅಜಯ್‌ನ ಇಲ್ಲಿ ಮಲಗಿಸೋದು ಸರಿ. ಆದರೆ ನೀನು ಅಲ್ಲಿಗೆ ಬಾ. ಎಲ್ಲರೂ ನಿನ್ನನ್ನು ಕೇಳ್ತಿದ್ದಾರೆ.''

``ಇವನನ್ನು ಒಂಟಿಯಾಗಿ ಬಿಟ್ಟು ಹೇಗೆ ಬರ್ಲಿ ಅತ್ತಿಗೆ?'' ಗಾಯತ್ರಿ ನಗುತ್ತಾ ಸಂದೇಹದ ವಾತಾವರಣವನ್ನು ತಿಳಿಗೊಳಿಸಲು ಪ್ರಯತ್ನಿಸಿದಳು.

``ಆಯ್ತು. ನಾನು ಅನಿರುದ್ಧನನ್ನು ಇಲ್ಲಿಗೇ ಕಳಿಸ್ತೀನಿ. ಈಗ್ಲಾದ್ರೂ ಹೇಳು ಇಷ್ಟು ಹೊತ್ತೂ ಫೋನ್‌ನಲ್ಲಿ ಯಾರ ಜೊತೆ ಅಷ್ಟು ತನ್ಮಯತೆಯಿಂದ ಮಾತಾಡ್ತಿದ್ದೇಂತ?'' ಯಶೋದಾ ತನ್ನ ಗಂಭೀರ ಪ್ರಶ್ನೆಯನ್ನು ಮುಗುಳ್ನಗೆಯಿಂದ ಸಹಜವಾಗಿಸುತ್ತಾ ಕೇಳಿದಳು.

``ಕೆಲವು ವಿಷಯಗಳನ್ನು ಹೇಳದಿರೋದೇ ಒಳ್ಳೇದು ಯಶೋದಾ ಅತ್ತಿಗೆ,'' ಗಾಯತ್ರಿ ಹೇಳಿದಾಗ ಯಶೋದಾ ಸುಮ್ಮನಾದಳು. ಅವಳ ಮನದಲ್ಲಿದ್ದ ಅನುಮಾನ ಶಾಂತವಾಗಿರಲಿಲ್ಲ.

ಮನೆ ನೆಂಟರು ಹಾಗೂ ಗೆಳೆಯರಿಂದ ತುಂಬಿತ್ತು. ಗಾಯತ್ರಿಯ ತಂಗಿ ಜ್ಯೋತಿಯ ಮದುವೆ ಸಮಾರಂಭವಾಗಿತ್ತು. ಯಶೋದಾ ಮನೆ ಸೊಸೆಯಾಗಿದ್ದು ಅವಳಿಗೆ ಉಸಿರಾಡಲೂ ಪುರಸತ್ತಿರಲಿಲ್ಲ. ಗಾಯತ್ರಿ ಏನೋ ಭಾನಗಡಿ ನಡೆಸುತ್ತಿದ್ದಾಳೆಂದು ಅವಳಿಗೆ ತಿಳಿದಿತ್ತು.

ಗಾಯತ್ರಿ ಹಾಗೂ ಯಶೋದಾರಲ್ಲಿ ಬರೀ ಅತ್ತಿಗೆ ನಾದಿನಿಯರ ಸಂಬಂಧ ಮಾತ್ರವೇ ಇರಲಿಲ್ಲ. ಇಬ್ಬರೂ ಕಾಲೇಜಿನಲ್ಲಿ ಒಟ್ಟಿಗೇ ಓದುತ್ತಿದ್ದು ಒಳ್ಳೆಯ ಗೆಳತಿಯರೂ ಆಗಿದ್ದರು. ಗಾಯತ್ರಿ ತನ್ನ ಅಣ್ಣ ಪರಮೇಶ್‌ನೊಂದಿಗೆ ಯಶೋದಾಳ ಮದುವೆ ಮಾಡಿಸುವಲ್ಲಿ ಮಹತ್ವ ಪಾತ್ರ ವಹಿಸಿದ್ದಳು. ಅವಳ ತಂದೆ ತಾಯಿ ಈ ಮದುವೆಗೆ ವಿರುದ್ಧವಾಗಿದ್ದರು. ಆದರೆ ಗಾಯತ್ರಿ ಅವರಿಬ್ಬರನ್ನೂ ಒಪ್ಪಿಸಿದ್ದಳು.

ಯಶೋದಾ ತನ್ನ ಒಳ್ಳೆಯ ಸ್ವಭಾವದಿಂದ ಎಲ್ಲರ ಹೃದಯ ಗೆದ್ದಿದ್ದಳು. ಗಾಯತ್ರಿಯ ತಾಯಿ ಜಾನಕಮ್ಮ ಈ ಮದುವೆಗೆ ಎಲ್ಲರಿಗಿಂತ ಹೆಚ್ಚು ವಿರೋಧ ವ್ಯಕ್ತಪಡಿಸಿದ್ದರು. ಈಗಂತೂ ಅವರು ಯಶೋದಾಳನ್ನು ಬಾಯಿ ತುಂಬಾ ಹೊಗಳುತ್ತಿದ್ದರು. ಆದರೆ ಮದುವೆಯ ನಂತರ ಯಶೋದಾ ಮತ್ತು ಗಾಯತ್ರಿಯ ನಡುವೆ ಹಿಂದಿನಷ್ಟು ಆತ್ಮೀಯತೆ ಇರಲಿಲ್ಲ. ಗಾಯತ್ರಿ ಯಶೋದಾಳ ಪ್ರತಿ ಕೆಲಸದಲ್ಲೂ ಆಕ್ಷೇಪ ಎತ್ತುತ್ತಿದ್ದಳು. ಯಶೋದಾ ನಕ್ಕು ಸುಮ್ಮನಾಗುತ್ತಿದ್ದಳು. ಆದರೆ ಅವಳು ಗಾಯತ್ರಿಯ ಪ್ರತಿಯೊಂದು ಚಲನವಲನಗಳ ಮೇಲೆ ಕಣ್ಣಿಡುವಾಗ ಗಾಯತ್ರಿ ಸಿಟ್ಟಿಗೇಳುತ್ತಿದ್ದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ