ಅವಳು ತನ್ನ ಕೋಣೆಯಲ್ಲಿ ಕುಳಿತು ನೀರಾಗಿ ರೋದಿಸುತ್ತಿದ್ದಳು. ಅವಳ ಕಣ್ಣೀರನ್ನು ಒರೆಸುವವರು ಯಾರೂ ಇರಲಿಲ್ಲ. ತನ್ನ ನೋವನ್ನು ಹಂಚಿಕೊಳ್ಳಲು ಅನಳಿಗೆ ಯಾರ ಜೊತೆಯೂ ಇರಲಿಲ್ಲ. ಒಂಟಿತನ ಮಾತ್ರ ಅನಳಿಗೆ ಜೊತೆಯಾಗಿತ್ತು. ಅನಳು ತನ್ನ ನೋವನ್ನು ಹಂಚಿಕೊಳ್ಳುವುದಾದರೂ ಹೇಗೆ? ಅವಳು ಅನುಭವಿಸುತ್ತಿದ್ದ ನೋವಿಗೆ ಸ್ವತಃ ಅವಳೇ ಹೊಣೆಯಾಗಿದ್ದಳು. ಕಗ್ಗತ್ತಲು ಅವಳನ್ನು ನುಂಗಲೆಂದು ಬಾಯ್ತೆರೆದು ಮುನ್ನುಗ್ಗಿ ಬರುತ್ತಿತ್ತು. ಆ ಕಗ್ಗತ್ತಲನ್ನೂ ಸ್ವಯಂ ಅವಳೇ ಆಹ್ವಾನಿಸಿದ್ದಳು. ತಾನು ನಡೆಯುತ್ತಿರುವ ಹಾದಿಯ ಕೊನೆಯಲ್ಲಿ ಆಳವಾದ ನೋವಿನ ಕಂದರವಿದೆ. ತನ್ನನ್ನು ಆವರಿಸಿರುವ ಕಗ್ಗತ್ತಲೆಯಿಂದ ಪಾರಾಗಲು ಯಾವುದೇ ಉಪಾಯ ಇಲ್ಲ ಎಂದು ಅವಳಿಗೆ ಚೆನ್ನಾಗಿ ಗೊತ್ತಿತ್ತು.

ಬಿರುಗಾಳಿ ಎದ್ದಾಗ ದಂಡೆಯಲ್ಲಿರುವುದನ್ನು ಬಿಟ್ಟು ನಾವೆಯೊಡನೆ ಸಾಗರಕ್ಕೆ ಇಳಿಯುವ ಮತಿಗೇಡಿಯನ್ನು ಮುಳುಗಿ ಸಾಯುವುದರಿಂದ ಕಾಪಾಡಲು ಯಾರಿಗೆ ಸಾಧ್ಯ? ಉರಿಯುವ ಕೆಂಡವನ್ನು ಅಂಗೈಯಲ್ಲಿ ಎತ್ತಿಕೊಂಡರೆ ಅಂಗೈ ಸುಟ್ಟೇ ಸುಡುವುದು. ಬೆಳಕು ಪಡೆಯುವ ಆಸೆಯಿಂದ ತನ್ನ ಮನೆಗೆ ಬೆಂಕಿ ಹಚ್ಚುವಂತ ಮೂರ್ಖನೇ ಸರಿ. ಉಪ್ಪು ತಿಂದವನು ನೀರನ್ನು ಕುಡಿಯಲೇ ಬೇಕು. ಮುಕುಂದ ಅವಳಿಗೆ ಎಂಥ ಕಠೋರ ಮಾತುಗಳನ್ನಾಡಿದ್ದ. ಅವನು ಅವಳ ಸ್ವಂತ ಮಗನೇ ಆಗಿದ್ದರೆ, ಈ ರೀತಿ ಕಠೋರವಾಗಿ ಮಾತನಾಡುತ್ತಿದ್ದನೇ? ಈ ಮನೆಯ ಪ್ರತಿಯೊಬ್ಬ ಸದಸ್ಯನೂ ಈಗ ಅವಳಿಗೆ ಏನು ಬೇಕಾದರೂ ಹೇಳಬಹುದಾಗಿತ್ತು. ಅವಳು ಅದನ್ನೆಲ್ಲ ಕೇಳಲೇ ಬೇಕಿತ್ತು. ಆ ಮನೆಯೊಡನೆ ಮತ್ತು ಆ ಮನೆಯ ಸದಸ್ಯರೊಡನೆ ಅವಳಿಗೆ ಯಾವ ಸಂಬಂಧವಿತ್ತು? ಅವಳಿಗೆ ಯಾರೊಡನೆ ಸಂಬಂಧವಿತ್ತೊ, ಆತ ಇದ್ದಕ್ಕಿದ್ದಂತೆ ಅವಳನ್ನು ತೊರೆದಿದ್ದ. ಸಾವಿನ ಕರಾಳ ಮುಷ್ಟಿಗೆ ಸಿಲುಕಿ, ಅವಳನ್ನು ಒಬ್ಬಂಟಿಯಾಗಿ ಅಳುವಂತೆ ಮಾಡಿ ಹೊರಟುಹೋಗಿದ್ದ. ಆರೇಳು ದಿನಗಳ ಮುಂಚೆಯಷ್ಟೇ ಈ ಘಟನೆ ನಡೆದಿತ್ತು.

anhoni-part-1

ಈ ಆಘಾತದಿಂದ ಅವಳಿನ್ನೂ ಚೇತರಿಸಿಕೊಂಡಿರಲಿಲ್ಲ. ಅಷ್ಟರಲ್ಲೇ ಮುಕುಂದ ಅವಳ ಕೋಣೆಗೆ ನುಗ್ಗಿ ಬಂದು ಕಹಿಯಾಗಿ ಹೇಳಿದ್ದ.

``ಒಂದೆರಡು ದಿನಗಳಲ್ಲೇ ನೀವು ಈ ಮನೆ ಬಿಟ್ಟು ಹೊರಟುಹೋಗಿ. ನಾವು ಕೇವಲ ನಮ್ಮ ಅಪ್ಪಾಜಿಗಾಗಿ ನಿಮ್ಮನ್ನು ಇಲ್ಲಿ ಹೇಗೋ ಸಹಿಸಿಕೊಂಡಿದ್ದೆ,'' ಮುಕುಂದನ ಸ್ವರದಲ್ಲಿ ಅಸಹ್ಯ ಮತ್ತು ರೋಷ ತುಂಬಿತ್ತು.

``ಮುಕುಂದ, ಮಗೂ ನನ್ನ ಮಾತು ಕೇಳಪ್ಪಾ.... ಮುಕುಂದ..... ಮುಕುಂದ....'' ಅವಳು ಕೂಗುತ್ತಲೇ ಇದ್ದಳು. ಆದರೆ ಮುಕುಂದ ಅವಳ ಕಡೆ ತಿರುಗಿಯೂ ನೋಡದೆ ಹೊರಟುಹೋಗಿದ್ದ.

ಗೋಡೆಗೆ ತಲೆ ಚಚ್ಚಿಕೊಂಡು ಪ್ರಾಣ ಬಿಡಬೇಕೆನ್ನಿಸಿತವಳಿಗೆ. ಆದರೆ ಅವಳ ಪ್ರಾಣ ಇಷ್ಟು ಸುಲಭವಾಗಿ ಹೋಗುವುದೇ? ಜೀವನದಲ್ಲಿ ಇನ್ನೂ ಬಹಳಷ್ಟು ಲೆಕ್ಕ ಒಪ್ಪಿಸಬೇಕಾಗಿದೆಯಲ್ಲ.....

``ಸುಧಾ, ಏನು ಯೋಚಿಸ್ತಾ ಇದೀಯ? ನಿನಗೆ ಇದ್ದಕ್ಕಿದ್ದಂತೆ ಏನು ಆಗಿಬಿಡುತ್ತೆ...? ನಿನಗೆ ಇಲ್ಲಿ ಯಾವುದಕ್ಕೆ ಕೊರತೆ ಇದೆ ಹೇಳು ನೋಡೋಣ....'' ರಾಜೀವನ ಸ್ವರ ಅವಳ ಕಿವಿಯಲ್ಲಿ ಮೊಳಗಿದಂತಾಯಿತು.

``ಇಲ್ಲವಲ್ಲ.... ನೀವಿರುವಾಗ ನನಗೆ ಯಾವುದರ ಕೊರತೆಯೂ ಇಲ್ಲ,'' ಅವಳು ಹೇಳಿದಳು.

``ನಾನಿರುವಾಗ ಅಂದರೆ ಏನರ್ಥ? ನಾನು ಸತ್ತ ನಂತರ ನಿನಗೆ ಇಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ. ಮುಕುಂದ, ಮಂಜುಳಾ ಇಬ್ಬರೂ ನಿನ್ನ ಮಕ್ಕಳೇ ತಾನೇ,'' ರಾಜೀವ ಅವಳನ್ನು ಆಲಿಂಗಿಸಿಕೊಂಡಿದ್ದ. ಸುಧಾ ಏನನ್ನೂ ಹೇಳಿರಲಿಲ್ಲ. ಅವನ ಪ್ರೇಮದ ಎದುರು ಅವಳು ಮೊದಲಿನಿಂದಲೂ ತಲೆ ಬಾಗಿಸಿಬಿಡುತ್ತಿದ್ದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ