ತಮ್ಮ ಮೊಂಡು ವಾದದಿಂದ ಮಗನಿಗೆ ಅನುಕೂಲಸ್ಥರ ಮನೆಯ ಹುಡುಗಿಯನ್ನೇ ತಂದು ಸೊಸೆಯಾಗಿಸಿಕೊಳ್ಳಬೇಕು, ಎಂದು ತಾಯಿ ತಂದೆ ಪಟ್ಟುಹಿಡಿದಿದ್ದಾಗ, ದಿವಾಕರ ತಾನು ಮೆಚ್ಚಿದ ಹುಡುಗಿಯನ್ನು ತನ್ನ ಆದರ್ಶದಂತೆ ಮದುವೆಯಾಗಲು ಹೂಡಿದ ಉಪಾಯವೇನು.....?

``ಹುಡುಗೀನ ಈಗಲೇ ಸರಿಯಾಗಿ ನೋಡಿಬಿಡಪ್ಪ ದಿವಾಕರ..... ಆಮೇಲೆ ಸರಿಯಾಗಿ ನೋಡಲಿಲ್ಲ ಇನ್ನೊಂದು ಸಲ ಕರೆಸಿ ಅನ್ನಬೇಡಪ್ಪ.... ಹ್ಞೂಂ ನೋಡು, ನೋಡು..... ನಿಸ್ಸಂಕೋಚವಾಗಿ ನೋಡು. ಏನಾದರೂ ಪ್ರಶ್ನೆ ಕೇಳೋದಿದ್ರೂ ಕೇಳು......'' ಎಂದು ಮದುವೆ ಬ್ರೋಕರ್‌ ರಾಮನಾಥಯ್ಯ ತಮ್ಮ ಉಬ್ಬು ಹಲ್ಲಿನ ಜೊತೆ ವಸಡೂ ಕಾಣುವಷ್ಟು ದೊಡ್ಡದಾಗಿ ಬಾಯಿಬಿಟ್ಟು ನಕ್ಕರು.

ಎದುರಿಗೆ ಸ್ವಲ್ಪ ದೂರದಲ್ಲಿ ತಲೆಬಾಗಿಸಿ ಕುಳಿತಿದ್ದ ಹುಡುಗಿಯತ್ತ ದಿವಾಕರ ಕಂಡೂ ಕಾಣದ ಹಾಗೆ ತನ್ನ ನೋಟವನ್ನು ಹಾಯಿಸಿದ.

 

ಮೊದಲ ನೋಟಕ್ಕೆ ಸುಂದರಿ ಎನಿಸಬಹುದಾದಂತಹ ಚೆಲುವಾದ ಮೊಗ ನಾಚಿಕೆಯಿಂದ ಕೆಂಪಾಗಿತ್ತು. ತೆಳ್ಳಗೆ, ಎತ್ತರವಾದ ನಿಲುವು. ಒಂದು ಕ್ಷಣ ಅವನ ಕಂಗಳಲ್ಲಿ ಮಿಂಚು ಸುಳಿದರೂ ಅವನ ಮುಖ ಬಾಡಿ, ತಾಯಿಯ ದೃಷ್ಟಿಯೊಡನೆ ದೃಷ್ಟಿ ಬೆರೆತು ಪೆಚ್ಚು ನಗೆ ಬೀರಿದ. ಬಂದವರು ಮೇಲೆದ್ದರು.

``ವಾರದಲ್ಲಿ  ಬೇಗ ತಿಳಿಸಿಬಿಡಿ..... ಬರ್ತೀವಿ......'' ಎಂದು ಹುಡುಗಿಯ ತಂದೆ ಹೇಳಿದಾಗ, ಸರಬರ ಸೀರೆಯ ಸದ್ದು, ಗಾಜಿನ ಬಳೆ ಕಿಣಿಕಿಣಿ.... ಸ್ಯಾಂಡಲ್ ಚಪ್ಪಲಿಗಳ ಚರಕ್‌.... ಚರಕ್‌.... ಕ್ಷಣಾರ್ಧದಲ್ಲಿ ಎಲ್ಲವೂ ನಿಶ್ಶಬ್ದ.

``ಹುಡುಗಿ ಹೇಗಿದ್ದಾಳೆ ಅಂತ ಅನ್ನಿಸುತ್ತಿದೆ...... ಅದ್ರೂ ಏನೋ ಶುದ್ಧ ಬಡವರ ಕಳೆ ಹೊಳೆಯುತ್ತಿಲ್ವೇನೇ ಶ್ಯಾಮ್ಲೂ.... ಆ ಹುಡುಗೀ ಅತ್ತಿಗೆಯ ಮುಖದ ಮೇಲೆ...... ಅಲ್ಲಾ, ಹುಡುಗಿಯ ಮೈಮೇಲೆ ಒಂದು ಗುಲಗಂಜಿ ತೂಕದ ಬಂಗಾರಾನೂ ಬೇಡ್ವೇನೇ......?''

ರಮಾಬಾಯಿಯ ಏರುಕಂಠ ಕೇಳಿ, ಶ್ಯಾಮಲಾ ತತ್‌ಕ್ಷಣ ಗಾಬರಿಯಿಂದ ಚಿಮ್ಮಿ,  ``ಅಮ್ಮಾ.....'' ಎಂದು ಪಿಸುಗುಟ್ಟಿ ತಾಯಿಯ ಬಾಯಿಯ ಮೇಲೆ ಕೈಯಿಟ್ಟಳು.

``ಸ್ವಲ್ಪ ಮೆತ್ತಗೆ ಮಾತಾಡಮ್ಮ.... ಇನ್ನೂ ಬಂದವರು ಗೇಟೂ ದಾಟಿಲ್ಲ..... ಆಗ್ಲೇ ನಿನ್ನ ಕಾಮೆಂಟ್ಸ್ ಶುರು ಮಾಡಿಬಿಟ್ಯಾ?'' ಎಂದು ಮಗಳು ಹುಬ್ಬು ಗಂಟಿಕ್ಕಿ ತಾಯಿಯತ್ತ ಆಕ್ಷೇಪದ ನೋಟ ಬೀರಿದಳು.

ರಮಾಬಾಯಿಯ ಮುಖಭಾವ, ಆ ದಿನ ಬಂದಿದ್ದ ಹುಡುಗಿ ತಮಗೆ ಒಪ್ಪಿಗೆಯಾಗಿಲ್ಲವೆಂಬ ಅತೃಪ್ತಭಾವವನ್ನು ಗಾಢವಾಗಿ  ಹೊರಚೆಲ್ಲುತ್ತಿತ್ತು. ಅನಿಸಿದ್ದನ್ನು ಬಾಯಲ್ಲಿ ಧಾರಾಳವಾಗಿ ಆಡಿಬಿಡುವ ಸ್ವಭಾವ ಅವರದು.

``ಲಕ್ಷಣವಾಗಿ ಕುತ್ತಿಗೇಲಿ ಒಂದೆರಡೆಳೆ ಚಿನ್ನದ ಸರ, ಬಳೆ, ಉಂಗರು, ಓಲೆ, ಜುಮುಕಿ ಒಂದೂ ಕೇಳಬೇಡ..... ಅದೇನು ವಾಕಿಂಗೋ, ಮಾರ್ಕೆಟಿಂಗೋ ಬಂದ ಹಾಗೆ ಕಿವೀಲಿ ಒಂದು ರಿಂಗ್‌ ತೂಗಿ ಹಾಕಿಕೊಂಡು ಬಂದಿದ್ದಾಳಲ್ಲ.....! ಹ್ಞೂಂ..... ಅದೂ ಚಿನ್ನದ್ದೋ ಹಿತ್ತಾಳೇಯದೋ....?''

ಶ್ರೀಕಂಠಯ್ಯನವರಿಗೆ ಹೆಂಡತಿಯ ಚಿನ್ನದ ವ್ಯಾಮೋಹ, ಆಸ್ತಿ ಐಶ್ವರ್ಯದ ಹುಚ್ಚು ತಿಳಿಯದ್ದೇನಲ್ಲ. ಕಳೆದ ಆರು ತಿಂಗಳುಗಳಿಂದ ಗಂಡಹೆಂಡತಿಗೆ ಇದೇ ತಿಕ್ಕಾಟ. ಮನೆಯ ಆಡಳಿತದಲ್ಲಿ ಆಕೆಯದೇ ಮೇಲುಗೈಯಾದ್ದರಿಂದ ಆತ ಆ ಬಗ್ಗೆ ಚಕಾರವೆತ್ತುತ್ತಿರಲಿಲ್ಲ. ತಿಂಗಳ ಮೊದಲಲ್ಲೇ ಹೆಂಡತಿಯ ಕೈಗೆ ಗಂಡನ ಸಂಬಳ ರವಾನೆಯಾಗುತ್ತಿತ್ತು. ರಮಾಬಾಯಿ ಅಚ್ಚುಕಟ್ಟಾಗಿ ಸಂಸಾರ ನಿಭಾಯಿಸಿಕೊಂಡು ಹೋಗುತ್ತ ಅದರಲ್ಲಿ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನೂ ತೂಗಿಸಿ, ಮಿತವ್ಯಯ ಮಾಡಿ ಆಗೀಗ ಅಷ್ಟಿಷ್ಟು ಒಡವೆಗಳನ್ನೂ ಮಾಡಿಸಿಕೊಂಡಿದ್ದರು. ಮಗಳಿಗೂ ಒಂದು ಸೆಟ್‌ ಆಭರಣ ಮಾಡಿಸಿದ್ದರು. ಮಗಳ ಓದು ಮುಗಿದಿತ್ತು. ಮಗನೂ ಎಂಜಿನಿಯರಿಂಗ್‌ ಮುಗಿಸಿ ಒಂದು ಕೆಲಸ ಹಿಡಿದ ನಂತರ ಮತ್ತೆ ಅವರು ಹೊಸ ಮಾದರಿಯ ಒಡವೆಗಳನ್ನು ಮಾಡಲು ಹಾಕಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ