ಕಥೆ - ಪೂರ್ಣಿಮಾ ಆನಂದ್‌ 

``ಈ ಸಂಬಂಧ ಎಲ್ಲ ರೀತಿಯಿಂದಲೂ ಸರಿಹೊಂದುತ್ತದೆ ಅಂತ ನನಗೆ ಅನಿಸುತ್ತಿದೆ. ತನು ಮನೆಗೆ ಬರಲಿ. ಇದನ್ನೇ ಫೈನಲ್ ಮಾಡೋಣ....'' ಗಿರೀಶ್‌ಪತ್ನಿ ಸುಧಾಳಿಗೆ ಹೇಳಿದರು.

``ಮೊದಲು ತನು ಹ್ಞೂಂ ಅನ್ನಲಿ. ಸಾಕು ಮಾಡ್ತಾ ಇದ್ದಾಳೆ. ಒಳ್ಳೊಳ್ಳೆ ಸಂಬಂಧಗಳಲ್ಲೂ ಏನಾದರೊಂದು ಕೊಂಕು ಹುಡುಕುತ್ತಾಳೆ... ಒಟ್ಟು ಕುಟುಂಬ ಅಂದರೆ ಸಿಡಿಮಿಡಿ ಮಾಡುತ್ತಾಳೆ. ಅವಳ ಷರತ್ತುಗಳ ಪ್ರಕಾರವೇ ಆಗಬೇಕು ಅಂದರೆ, ಅಂಥ ಸಂಬಂಧವನ್ನೇ ಹೇಗೆ ಎಲ್ಲಿಂದ ಹುಡುಕೋದಕ್ಕೆ ಆಗುತ್ತೆ? ಮೊದಲು ಇವಳು ಹೀಗಿರಲಿಲ್ಲ.... ಎಲ್ಲ ಅವಳ ಸ್ನೇಹಿತೆ ಆ ರಶ್ಮಿ ಇದ್ದಾಳಲ್ಲ ಅವಳಿಂದ ಇದನ್ನೆಲ್ಲಾ ಕಲೀತಾ ಇದ್ದಾಳೆ......'' ಸುಧಾ ಬೇಸರದಿಂದ ತಲೆಯ ಮೇಲೆ ಕೈ ಹೊತ್ತು ಕುಳಿತಳು.

``ನಿಜ ಸುಧಾ, ಆ ರಶ್ಮಿ ಹೇಳೋದನ್ನು ಕೇಳಿ ಕೇಳಿ ಹೀಗಾಗಿದ್ದಾಳೆ. ಈಗಿನ ಕಾಲದಲ್ಲಿ ಮಕ್ಕಳಿಗೆ ಸ್ನೇಹಿತರ ಪ್ರಭಾವ ಹೆಚ್ಚಾಗ್ತಾ ಇದೆ. ಸ್ನೇಹಿತರು ಸರಿ ಇಲ್ಲದಿದ್ದರೆ ಹೀಗೇ ಆಗೋದು....'' ಎಂದರು ಗಿರೀಶ್‌. ತಂದೆ ತಾಯಿ ಚಿಂತಿತರಾಗಿ ಗಂಭೀರ ಭಾವದಲ್ಲಿ ಮಾತನಾಡುತ್ತಿರುವಂತೆ, ತನುಜಾ ಆಫೀಸ್‌ನಿಂದ ಮನೆಗೆ ಬಂದಳು. ಖುಷಿಯಾಗಿ ಬಂದವಳಿಗೆ ಮನೆಯ ವಾತಾವರಣ ಕಂಡು ಬೆಚ್ಚುವಂತಾಯಿತು. ಕೊಂಚ ಸಾವರಿಸಿಕೊಂಡು ನಗುತ್ತಾ, ``ಮತ್ತೆ ಯಾವುದಾದರೂ ಸಂಬಂಧದ ಪ್ರಸ್ತಾಪ ಬಂದಿದೆಯಾ?'' ಕೇಳಿದಳು.

ಅವಳು ಮಾತನಾಡಿದ ರೀತಿ ಕಂಡು ಇಬ್ಬರಿಗೂ ನಗು ಬಂದಿತು. ಸುಧಾ ಒಳಗೆ ಹೋಗಿ ಕಾಫಿ ತಂದಳು. ಮೂವರು ಜೊತೆಯಾಗಿ ಕುಳಿತು ಕಾಫಿ ಕುಡಿದರು. ಕುಡಿದ ಲೋಟವನ್ನು ಕೆಳಗಿರಿಸುತ್ತಾ ಸುಧಾ ಮಗಳಿಗೆ, ``ನೋಡು ತನು, ಈ ಸಂಬಂಧ ಸರಿಯಾಗಿ ಹೊಂದುತ್ತಿದೆ. ಹುಡುಗನ ತಂದೆ ತಾಯಿ ತಮ್ಮ ದೊಡ್ಡ ಮಗ ಮತ್ತು ಸೊಸೆಯೊಂದಿಗೆ ದಾವಣಗೆರೆಯಲ್ಲಿದ್ದಾರೆ. ಚಿಕ್ಕ ಮಗ ಬೆಂಗಳೂರಿನಲ್ಲಿ ಒಂದು ಫಾರ್ಮಸಿ ಕಂಪನಿಯಲ್ಲಿ ಪ್ರಾಡಕ್ಟ್ ಮ್ಯಾನೇಜರ್‌ಆಗಿದ್ದಾರೆ. ನೋಡು ಈ ಸಂಬಂಧವನ್ನು ಒಪ್ಪಿಕೋ,'' ಎಂದರು. ತನುಜಾ ಒಂದು ನಿಮಿಷ ಯೋಚಿಸಿ ನಗುತ್ತಾ, ``ಸರಿ. ಅವರು ಅಲ್ಲಿ ಒಬ್ಬರೇ ಇರುತ್ತಾರೆ ತಾನೇ?'' ಕೇಳಿದಳು. ``ಹೌದು....''

``ಹಾಗಿದ್ದರೆ ಓ.ಕೆ. ಆದರೆ ಅವರ ಅಪ್ಪ, ಅಮ್ಮ ಮತ್ತೆ ಮತ್ತೆ ಬೆಂಗಳೂರಿಗೆ ಬರುತ್ತಾ ಇರಬಾರದು ಅಷ್ಟೇ....'' ಎಂದಳು.

``ಏನು ಮಾತು ಅಂತ ಆಡುತ್ತೀಯ ತನು... ಅವರ ಮನೆಗೆ ಅವರು ಬರಬಾರದು ಅಂದರೆ ಹೇಗೆ? ಏನಾಗಿದೆ ನಿನಗೆ? ಏನು ಬುದ್ಧಿ ಕಲಿತಿದ್ದೀಯ? ಮದುವೆ ಅಂದರೆ ಕೇವಲ ಗಂಡ ಹೆಂಡತಿಯ ಸಂಬಂಧವಷ್ಟೇ ಅಲ್ಲ. ಬಾಕಿ ಸಂಬಂಧಗಳೂ ಅದರ ಜೊತೆ ಇರುತ್ತದೆ. ಅವುಗಳಲ್ಲೂ ಒಂದು ತರಹದ ಹಿತ ಇರುತ್ತದೆ. ಈಗ ನಮ್ಮನ್ನೇ ನೋಡು.... ಈ ದೂರದ ಊರಿಗೆ ಬಂದು ನಮ್ಮ ಎಲ್ಲ ಸಂಬಂಧಗಳೂ ಬಿಟ್ಟುಹೋದವು. ಯಾರಾದರೂ ಹಿರಿಯರು ನಮ್ಮ ಜೊತೆ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಂತ ಈಗಲೂ ಅಂದುಕೊಳ್ಳುತ್ತೇವೆ....'' ಎಂದರು ಕೋಪದಿಂದ.

``ಇಲ್ಲ ಅಮ್ಮ.... ನನಗೆ ಭಯ ಆಗುತ್ತೆ. ರಶ್ಮಿ ಹೇಳುತ್ತಿದ್ದಳು.......''

ಸುಧಾ ಅವಳ ಮಾತನ್ನು ಅರ್ಧದಲ್ಲೇ ತಡೆದು ಕೋಪದಿಂದ ಎಂದು ನಿಂತು, ``ಆ ಹುಡುಗಿ ವಿಷಯ ನನಗೆ ಹೇಳಬೇಡ.... ನಮ್ಮ ಒಳ್ಳೆಯ ಮಗಳ ಬುದ್ಧಿಯನ್ನು ಕೆಡಿಸಿಬಿಟ್ಟಿದ್ದಾಳೆ ಅವಳು..... ಮೊದಲು ನೀನು ಜಾಯಿಂಟ್‌ ಫ್ಯಾಮಿಲಿ ಅಂದರೆ ಇಷ್ಟಪಡುತ್ತಿದ್ದೆ. ಆದರೆ ಆ ರಶ್ಮಿ ನೆಗೆಟಿವ್‌ ಪಾಯಿಂಟ್ಸ್ ಹೇಳಿ ಹೇಳಿ ನಿನ್ನ ತಲೆ ಕೆಡಿಸಿದ್ದಾಳೆ.......'' ಎಂದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ