ವಾತ್ಸಲ್ಯ ಪ್ರೇಮವೆಂಬ ಮಾನವರ ಮಹಾನ್ಭಾವನೆಗೆ ಇಂಥದ್ದೇ ವ್ಯಾಖ್ಯಾನ ಎಂದು ಹೇಳಲು ಸಾಧ್ಯವಿಲ್ಲ. ಹಿಂದಿನ ಕಾಲದಿಂದಲೂ ಕವಿಗಳು ಬಗ್ಗೆ ವರ್ಣಿಸಿದ್ದೂ ವರ್ಣಿಸಿದ್ದೇ. ನಮ್ಮ ಆಧುನಿಕ ಪ್ರೇಮಿಗಳ ಪೀಕಾಟ ಯಾವ ನಿಟ್ಟಿನಲ್ಲಿದೆ ಎಂದು ಅರ್ಥ ಮಾಡಿಕೊಳ್ಳಲು ಯತ್ನಿಸೋಣವೇ.....?

``ಪ್ರೇಮದ ಬಣ್ಣ ನೂರಾರು.... ಅಲ್ಲಲ್ಲ.... ಸಾವಿರಾರು,  ಬಹುಶಃ ಕೋಟಿ ಇದ್ದರೂ ಇರಬಹುದು. ಅದಕ್ಕೇ ಇರಬೇಕು, ಅವಳು ಅಂದು ನನ್ನೆದೆಯ ಅಂಗಳದಲ್ಲಿ ಚೆಲ್ಲಿ ಹೋದ ಒಲವಿನ ಬಣ್ಣ ಯಾವುದೆಂದು ಗುರುತು ಹಿಡಿಯಲು ಸಾಧ್ಯವೇ ಆಗುತ್ತಿಲ್ಲ.....'' ಫೈನಲ್ ಎಗ್ಸಾಮ್ ಗೆ ಓದುವುದನ್ನು ಬಿಟ್ಟು ಹೀಗೆ ಕಳೆದ ಮೂರ್ನಾಲ್ಕು ದಿನಗಳಿಂದ ಹುಚ್ಚು ಹುಚ್ಚಾಗಿ ಮಾತಾಡುತ್ತಿದ್ದ ನನ್ನ ಸ್ನೇಹಿತನೊಬ್ಬನ ತಲೆ ಬುಡವಿಲ್ಲದ ಮಾತುಗಳನ್ನು ಕೇಳಿ ಕೇಳಿ ನನಗೆ ಸಾಕಾಗಿ ಹೋಗಿತ್ತು. ಪ್ರೇಮ ಸಾಗರದಲ್ಲಿ ಮುಳುಗಿದ್ದ ಅವನು ಏನೇ ಕೇಳಿದರೂ ಎಲ್ಲದಕ್ಕೂ ಪೆದ್ದು ಪೆದ್ದಾಗಿ ಉತ್ತರ ಕೊಡುತ್ತಿದ್ದ. ಅವನ ಈ ಆಳವಾದ ಕಲ್ಪನೆಯ ಮಾತುಗಳಿಗೆ ಒಂದು ಕಡೆ ಸೋತು, ಮತ್ತೊಂದು ಕಡೆ ರೋಸಿ ಹೋಗಿ, ``ಅಯ್ಯಾ ಪುಣ್ಯಾತ್ಮ.... ನೀನು ಮಾತಾಡುವ ಈ ಒಲವಿನ ಭಾಷೆ ನಮ್ಮಂಥ ಮೂರ್ಖರಿಗೆ ಅರ್ಥವಾಗದು. ನೀನು ಮೊದಲಿನ ಥರಾ ಆದರೆ ನಿನ್ನ ಕಿತ್ತು ಹೋದ ಈ ಕವಿತೆಗಳ ಚೀಟಿಯನ್ನು ಆಂಜನೇಯನ ಹುಂಡಿಯಲ್ಲಿ ಹಾಕಿ ಬರ್ತೀನಿ,'' ಎಂದು ಅವನ ಕಾಲಿಗೆ ಬಿದ್ದಿದ್ದೆ.

ನನ್ನ ಮಾತಿಗೆ ಅವನು, ``ಗುಜರಿ ಬಸ್ಸಿಗೇನು ಗೊತ್ತು ಮೆಟ್ರೋ ಸಾರಿಯ ಮೋಜು.... ಅಷ್ಟಕ್ಕೂ ಪ್ರೀತಿ ಎಂದರೇನು ಎಂದು ನಿನಗೆ ಗೊತ್ತೇನು...? ಪ್ರೇಮವೆಂದರೆ ಶರತ್ಕಾಲದಲ್ಲಿ ಭೂಮಿಯೆಡೆಗೆ ಜಾರುವ ಹೂಗಳು.... ಪ್ರೇಮ ನನ್ನ ಕಲ್ಪನಾ ಲೋಕದ ಬೆನ್ನೇರಿ ಬಂದ ಭೃಂಗದ ಸಂಗದಂತೆ.....'' ಎಂದು ಇನ್ನೂ ಏನೋ ಹೇಳಲು ಹೊರಟಿದ್ದ. ಯಾವುದೋ ಯುರೋಪಿಯನ್‌ ಕವಿಯ ಪ್ರಭಾವಕ್ಕೆ ಸಿಲುಕಿದ ಅವನ ಈ ಕವಿತೆಯ ಗುಚ್ಛವನ್ನು ಅರ್ಧಕ್ಕೇ ತಡೆದು ನಾನು ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದಿದ್ದೆ.

ಅಂದಹಾಗೆ, ಪ್ರೇಮ ಪಾಶದಲ್ಲಿ ಸಿಲುಕುವ ಎಲ್ಲ ಪ್ರೇಮಿಗಳು ಹೀಗೇಕೆ ಬಲೆಗೆ ಸಿಕ್ಕ ಮೀನಿನಂತೆ ಒದ್ದಾಡುತ್ತಾರೆ ಎನ್ನುವುದು ಸೋಜಿಗದ ವಿಷಯ. ಮೊದ ಮೊದಲು ಈ ಪ್ರೇಮವೆಂಬ ಮೈದಾನದಲ್ಲಿ ಅಂಬೆಗಾಲು ಇಡುತ್ತಿರುವಾಗ, ತಮ್ಮ ಪ್ರಿಯಕರ/ ಪ್ರಿಯತಮೆಯರು ಎದುರಿಗೆ ಸಿಕ್ಕಾಗ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಕ್ಕೂ ಹೆದರಿ ಸಾಯುತ್ತಾರೆ. ಆದರೆ ನಂತರ ಅವರೇನಾದರೂ ಕಣ್ಣಿಗೆ ಕಾಣದಿದ್ದರೆ, ``ಅಯ್ಯೋ ಇವತ್ತು ಯಾಕೆ ನನ್ನ ಕಣ್ಣಿಗೆ ಬಿದ್ದೇ ಇಲ್ಲವಲ್ಲ .... ಏನು ಮಾಡಲಿ ಈಗ?'' ಎಂದು ಸೂರ್ಯ ಕಾಣದ ಸೂರ್ಯಕಾಂತಿಯಂತೆ ಚಡಪಡಿಸುತ್ತಾರೆ. ಇಂತಹ ಪೀಕಲಾಟವಾಡಿಸುವ ಈ ಪ್ರೇಮ ನಿಜಕ್ಕೂ ಕತ್ತಿಗಿಂತಲೂ ತೀಕ್ಷ್ಣ. ಈ ಪ್ರೇಮದ ಜಾಡು ಹಿಡಿದು ಹೋದರೆ ಅದರ ಮೂಲ ಸಿಗುವುದು ಸ್ವಲ್ಪ ಕಷ್ಟವೇ. ಈ ಒಲವು ಏಕೆ, ಎಲ್ಲಿ, ಹೇಗೆ ಮೂಡಿತು ಎಂಬ ಪ್ರಶ್ನೆಯನ್ನು ಪ್ರೇಮಿಗಳ ಮುಂದಿಟ್ಟರೆ ಮಹಾ ಸಂಶೋಧನೆಯನ್ನೇ ಮಂಡಿಸಿದರಂತೆ ವಿವರಿಸಲು ತೊಡಗುತ್ತಾರೆ. ಆದರೆ ಇದರ ಮೂಲ ವ್ಯಾಖ್ಯಾನ ಮಾಡಿ ಎಂದಾಗ ಪದಗಳೇ ಸಿಗದೇ ಮೌನಕ್ಕೆ ಜಾರುತ್ತಾರೆ. ಈ ಪ್ರೇಮವೆಂಬುದು ಒಂದು ಮಹಾನ್‌ ಕಲೆ, ಇದು ಎಲ್ಲರಿಗೂ ಒಲಿಯುವುದಿಲ್ಲ ಎಂದು ಕಲಾ ವಿಭಾಗ ಹೇಳಿದರೆ, ಈ ಪ್ರೀತಿ ಎಂದರೆ ಬೇರೆ ಏನೂ ಅಲ್ಲ, ಹಾರ್ಮೋನ್ಸ್ ಬದಲಾವಣೆಯಿಂದ. ಮೆದುಳಿನಲ್ಲಿ ಆಕ್ಸಿಟಾನ್‌ ಎಂಬ ರಾಸಾಯನಿಕ ಕ್ರಿಯೆ ಬಿಡುಗಡೆಯಾಗಿ ವಿರುದ್ಧ ಲಿಂಗಿಗಳು ಆಕರ್ಷಕ್ಕೆ ಒಳಗಾಗುತ್ತಾರೆ. ಅದೇ ಪ್ರೀತಿ ಎಂದು ವಿಜ್ಞಾನ ವಿಭಾಗ ತರ್ಕಬದ್ಧವಾಗಿ ಹೇಳುತ್ತದೆ. ಆಧ್ಯಾತ್ಮದಲ್ಲಿ ಪ್ರೇಮವೆಂದರೆ ಪರಬ್ರಹ್ಮ ಎಂದು ಉಲ್ಲೇಖಿಸಲಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ