ಅತಿ ಭಾವುಕಳಾದ ಅಕ್ಷತಾ ಪ್ರೇಮಿಸಿ ಮದುವೆಯಾದ ಪತಿ ಚೇತನನನ್ನು ಬಹಳ ಹಚ್ಚಿಕೊಂಡಿದ್ದಳು. ಸಂಸಾರದ ಜವಾಬ್ದಾರಿಗಳ ಮಧ್ಯೆ ದಿಢೀರ್ಎಂದು ಆಕಸ್ಮಿಕ ಅಪಘಾತಕ್ಕೆ ಒಳಗಾದ ಚೇತನ್‌, ಇವಳನ್ನು ಒಬ್ಬಂಟಿ ಮಾಡಿ ಹೋಗಿಬಿಟ್ಟ. ಸದಾ ಅವನ ನೆನಪಲ್ಲೇ ಮುಳುಗಿದ್ದ ಅಕ್ಷತಾ, ಮುಂದೆ ತನ್ನ ಜೀವನ ನಡೆಸಲು ಹೊಸ ಸಂಗಾತಿಯನ್ನು ಆಯ್ದುಕೊಳ್ಳುವಲ್ಲಿ ಯಶಸ್ವಿಯಾದಳೇ.....?

ಡಾ. ಅಕ್ಷತಾಳ ಮನಸ್ಸು ಗೊಂದಲದಲ್ಲಿ ಬಿದ್ದಿತ್ತು. ಕನ್ನಡ ವಿಭಾಗದ ಮುಖ್ಯಸ್ಥಳಾಗಿ ಮೈಸೂರಿನ ಮಹಾರಾಣಿ ಕಾಲೇಜಿಗೆ ಹೋಗುವುದೋ ಅಥವಾ ಸಹಾಯಕ ಪ್ರಾಧ್ಯಾಪಕಿಯಾಗಿ ಇಲ್ಲೇ ಇದ್ದುಬಿಡುವುದೋ....? ಇನ್ನುಳಿದಿರುವುದೇ ನಾಲ್ಕು ವರ್ಷಗಳ ಸೇವಾ ಅವಧಿ. ಮೈಸೂರಿನದು ದೊಡ್ಡ ಮಹಿಳಾ ಕಾಲೇಜ್‌. ದೊಡ್ಡ ಕಾಲೇಜಿನಲ್ಲಿನ ಅನುಭವವೇ ಬೇರೆ ಅಲ್ಲವೇ? ಮೈಸೂರು ಸಂಪೂರ್ಣ ಹೊಸ ಪರಿಸರ. ಅಲ್ಲಿ ನನ್ನವರು ಎನ್ನುವವರು ಯಾರಿದ್ದಾರೆ? ಇಲ್ಲಿಯಾದರೂ ನನ್ನವರು ಎನ್ನುವವರು ಯಾರಿದ್ದಾರೆ? ನನ್ನವರು ಎನ್ನುವವರು ಯಾರೂ ಇಲ್ಲದಿದ್ದರೂ ಒಂದಿಷ್ಟು ಜನ ಸಂಬಂಧಿಕರು, ಸ್ನೇಹಿತರು, ಪರಿಚಯದರು ಇದ್ದಾರೆ.

ಒಂದು ಕಾಲಕ್ಕೆ ಇಲ್ಲಿ ನನ್ನವರು ಎನ್ನುವವರು ಬಹಳಷ್ಟು ಜನರಿದ್ದುದು ನಿಜವೇ. ಆದರೆ ಅವರೆಲ್ಲರ ಮನಸ್ಸುಗಳಲ್ಲಿ ನಮ್ಮ ಬಗ್ಗೆ ಲೆಕ್ಕವಿಲ್ಲದಷ್ಟು ನಿರೀಕ್ಷೆಗಳು ತುಂಬಿ ತುಳುಕಾಡುತ್ತಿದ್ದವು. ನಮ್ಮ ಕೈ ಕೊಡುಗೈ ಆಗಿದ್ದಾಗ ದೂರದವರೂ ಸಂಬಂಧ ಹುಟ್ಟಿಸಿಕೊಂಡು ಬಂದು ನಮ್ಮನ್ನು ಸುತ್ತುವರಿಯುತ್ತಿದ್ದುದು ನಿಜ.

ನಾನು, ಡಾ. ಚೇತನ್‌ ಇಬ್ಬರೂ ಯುಜಿಸಿ ಸ್ಕೇಲ್ ನಲ್ಲಿ ಸಂಬಳ ಪಡೆಯುತ್ತಿದ್ದುದರಿಂದ ನಮ್ಮ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಚೇತನನ ತಮ್ಮಂದಿರು, ಅಕ್ಕತಂಗಿಯರಿಗೆ ಅದೆಷ್ಟೋ ಸಹಾಯ ಮಾಡಿಲ್ಲವೇ....? ಇದ್ದೊಬ್ಬ ಅವರ ಅಣ್ಣ ಮದುವೆಯಾಗಿ ಎರಡು ಮಕ್ಕಳಾಗುತ್ತಲೇ ತಾನಾಯಿತು, ತನ್ನ ಸಂಸಾರವಾಯಿತು ಎಂಬಂತೆ ಬೇರೆಯಾಗಿಬಿಟ್ಟ. ಇಬ್ಬರು ತಮ್ಮಂದಿರು, ಇಬ್ಬರು ತಂಗಿಯರ ಜವಾಬ್ದಾರಿ ನಮ್ಮ ಹೆಗಲಿಗೆ ಬಿದ್ದಿತ್ತು.

ಒಬ್ಬ ತಮ್ಮ ಹೇಗೋ ಪದವಿ ಮುಗಿಸಿಕೊಂಡು ಶಿಕ್ಷಕನಾದ. ಇನ್ನೊಬ್ಬ ತಮ್ಮ ಎಸ್‌.ಎಸ್‌.ಎಲ್.ಸಿ ಮುಗಿಸಿಕೊಂಡು ಮನೆಯಲ್ಲೇ ಇದ್ದುಕೊಂಡು ಮನೆತನದ ಜಮೀನಿನ ಉಸ್ತುವಾರಿಗೆ ನಿಂತ. ಇಬ್ಬರು ತಮ್ಮಂದಿರು, ತಂಗಿಯರ ಮದುವೆ, ಅವರ ಬಸಿರು ಬಾಣಂತನದ ಖರ್ಚುಗಳೆಲ್ಲನ್ನೂ ನಾವೇ ನಿಭಾಯಿಸಿದೆವು. ಚೇತನನ ಒಬ್ಬ ಅಕ್ಕನ ಮಗನಿಗೆ ಬಿಇ ಓದಿಸುವ ಖರ್ಚನ್ನೂ ನಾವೇ ಹೊತ್ತುಕೊಂಡಿದ್ದೆವು. ನಮ್ಮಿಂದ ಧನ ಸಹಾಯ, ಇನ್ನಿತರ ಸಹಾಯ ಪಡೆದ ಅವರಿಂದ ಈಗ, `ನಮ್ಮ ತಮ್ಮ ನಮಗೇನು ಮಾಡಿದ್ದಾನೆ, ನಮ್ಮ ಅಣ್ಣ ನಮಗೇನು ಮಾಡಿದ್ದಾನೆ....?' ಎಂಬ ಒಡಕು ಮಾತುಗಳು ಕೇಳಿ ಬರುತ್ತಿವೆ.

pani-milta-rista-story2

ನಾವು ಅವರಿಗೆ ಇನ್ನೇನು ಮಾಡಬೇಕಿತ್ತೋ ಏನೋ....? ನಾವು ಇನ್ನೂ ಕೊಡುತ್ತಲೇ ಇರಬೇಕು ಎಂಬ ನಿಲ್ಲದ ನಿರೀಕ್ಷೆ ಅವರದು. ನಮ್ಮ ಸುಖಸಂತೋಷಗಳನ್ನು ಬದಿಗಿಟ್ಟು ನಾವು ತ್ಯಾಗಿಗಳಾಗಿದ್ದಕ್ಕೆ ಇಂತಹ ಬಿರುದು ನಮಗೆ! ನಮ್ಮ ನಿಸ್ವಾರ್ಥ ಸೇವೆಗೆ ಸಿಕ್ಕ ಪ್ರತಿಫಲ! ಆದರೂ ಅವರ ಕೊಂಕು ಮಾತುಗಳನ್ನೇನು ನಾವು ಮನಸ್ಸಿಗೆ ಹಚ್ಚಿಕೊಂಡಿಲ್ಲ. ಏಕೆಂದರೆ, `ಅದು ನಮ್ಮ ಕರ್ತವ್ಯವಾಗಿತ್ತು,' ಎಂದು ಭಾವಿಸಿಕೊಂಡಿದ್ದೇವೆ ಅಷ್ಟೇ. ಯಾರೇನೇ ಹೊಗಳಿದರೂ, ತೆಗಳಿದರೂ ನಮಗೇನೂ ನೋವಿಲ್ಲ. ಆದರೂ ಸಹಾಯ ಪಡೆದವರು ಮಾನವೀಯತೆ ಮರೆಯಬಾರದು ಅಲ್ಲವೇ....? ಅಪಾತ್ರರಿಗೆ ಸಹಾಯ ಮಾಡಬಾರದು ಎಂದು ದಾರ್ಶನಿಕರು ಹೇಳುವ ಮಾತು ನಮ್ಮ ಹೃನ್ಮನಗಳನ್ನು ತಟ್ಟುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ