ಕಥೆ - ಪ್ರತಿಭಾ ಸುಹಾಸ್‌

``ಮಾಯಾ, ನೀನು ಮೊದಲು ಹತ್ತು, ನಾನು ಮಕ್ಕಳನ್ನು ಮೆಲ್ಲಗೆ ಹತ್ತಿಸುತ್ತೇನೆ......''

ರೈಲು ಹೊರಡಲು 5 ನಿಮಿಷ ಉಳಿದಿತ್ತು. ಸೀಮಾ ತನ್ನ ಸೀಟ್‌ನಲ್ಲಿ ಕುಳಿತು ಸಾಮಾನುಗಳನ್ನು ಸರಿಪಡಿಸಿಕೊಳ್ಳುತ್ತಿರುವಾಗ ಬಾಗಿಲ ಕಡೆಯಿಂದ ಕೇಳಿ ಬಂದ ಧ್ವನಿ ಅವಳನ್ನು ಪುಳಕಿತಗೊಳಿಸಿತು.

ಈ ಧ್ವನಿ ಸೀಮಾಳಿಗೆ ಬಹಳ ಮೆಚ್ಚುಗೆಯಾಗಿತ್ತು. ಈ ಧ್ವನಿಯಲ್ಲಿ ಗಾಂಭೀರ್ಯ ಇತ್ತು. ಹೃದಯಕ್ಕೆ ಮುಟ್ಟುವಂತೆಯೂ ಇತ್ತು. ಕಾಲ ಮುಂದೋಡಿದರೂ ಈ ಧ್ವನಿಯ ಆಕರ್ಷಣೆಯಿಂದ ಸೀಮಾ ಹೊರಬರಲು ಆಗಿರಲಿಲ್ಲ. ಮತ್ತೊಮ್ಮೆ ಆ ಧ್ವನಿಯನ್ನು ಕೇಳುವ ತವಕ ಅವಳಲ್ಲಿ ಸದಾ ಮನೆ ಮಾಡಿತ್ತು.

ಇಂದು ಅನೇಕ ವರ್ಷಗಳ ನಂತರ ಅದೇ ಧ್ವನಿ ಕೇಳಿ ಬಂದಿದೆ. ಆದರೆ ಸೀಮಾಳಿಗೆ ಆ ಧ್ವನಿಯಲ್ಲಿ ಹಿಂದಿನ ಮಾಧುರ್ಯವಿಲ್ಲದೆ, ಗಡಸುತನವಿರುವಂತೆ ಭಾಸವಾಯಿತು. ಜೀವನದ ಹಾದಿಯಲ್ಲಿ ಬೀಳುವ ಪೆಟ್ಟುಗಳಿಂದ ಸ್ವರದ ಕೋಮಲತೆ ಕುಂದಿರುವುದೇ ಅಥವಾ ತಾವಿಬ್ಬರೂ ದೂರ ದೂರವಾಗಿರುವ ನೋವಿನ ಅನುಭವ ಆತನಿಗೂ ಆಗಿದೆಯೇನೊ ಎಂದು ಅವಳು ಯೋಚಿಸಿದಳು.

ಕೆಲವು ಸಲ ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧ ಅವ್ಯಕ್ತವಾಗಿ ಉಳಿದುಬಿಡುತ್ತದೆ. ಅಂತರ ಕಡಿಮೆಯಾಗದೆ ಮನಸ್ಸಿನ ನೋವು ಮನಸ್ಸಿನಲ್ಲೇ ಮನೆ ಮಾಡಿಕೊಳ್ಳುತ್ತದೆ. ಸೀಮಾ ಮತ್ತು ಆ ಧ್ವನಿಯ ಯಜಮಾನ ಅಂದರೆ ವಿನಯ್‌ಗೆ ಇದ್ದದ್ದು ಇಂತಹದೇ ಸಂಬಂಧ.

ಸೀಮಾ ಅವನನ್ನು ನೋಡಲು ಕಾತರಳಾದಳು. 10 ವರ್ಷಗಳು ಕಳೆದುಹೋಗಿದ್ದವು. ಅವಳು ಸೀಟ್‌ನಿಂದ ಎದ್ದು ಸ್ವಲ್ಪ ಮುಂದೆ ಬಂದು, ಧ್ವನಿ ಬಂದ ದಿಕ್ಕಿನತ್ತ ನೋಡಿದಳು. ಒಬ್ಬ ವ್ಯಕ್ತಿ ತನ್ನ ಹೆಂಡತಿ ಮಕ್ಕಳೊಂದಿಗೆ ಬರುತ್ತಿದ್ದುದು ಕಾಣಿಸಿತು.

ಸೀಮಾ ಅವನನ್ನೇ ಗಮನಿಸಿ ನೋಡಿದಳು. ಕೇವಲ ಕಣ್ಣುಗಳು ಮಾತ್ರ 10 ವರ್ಷಗಳ ಹಿಂದಿನ ವಿನಯ್‌ನನ್ನು ನೆನಪಿಸಿದವು. ಉಳಿದಂತೆ ಅವನು ಹೆಚ್ಚು ವಯಸ್ಸಾದವನಂತೆ ಕಂಡ. ಮುಂದಿನ ಕೂದಲು ಮಾಯವಾಗಿತ್ತು. ಮುಖದಲ್ಲಿ ಹಿಂದಿನ ಮುಗ್ಧತೆಯ ಬದಲು ಹೆಮ್ಮೆ ಮತ್ತು ಚಾತುರ್ಯ ತೋರಿಬರುತ್ತಿತ್ತು. ದೇಹ ಸ್ಥೂಲವಾಗಿ ಬೊಜ್ಜು ಬೆಳೆದಿತ್ತು. ಕಾಲೇಜು ದಿನಗಳ ಸ್ಮಾರ್ಟ್‌ಹ್ಯಾಂಡ್‌ಸಮ್ ವಿನಯ್‌ ಅವನಾಗಿರಲಿಲ್ಲ.

ವಿನಯ್‌ ಸಹ ಸೀಮಾಳನ್ನು ನೋಡಿದ. ಆದರೆ ಅವನ ದೃಷ್ಟಿಯಲ್ಲಿ ಪರಿಚಯದ ಭಾವವಿರಲಿಲ್ಲ. ಬದಲಾಗಿ ಒಬ್ಬ ಸುಂದರ ಯುವತಿಯನ್ನು ಕಂಡಾಗ ಕೆಲವು ಕಾಮುಕ ಪುರುಷರು ನೋಡುವಂತೆ ನೋಡಿದ. ಅದರಿಂದ ಸೀಮಾಳಿಗೆ ಅಸಹನೆ ಉಂಟಾಯಿತು. ಅವಳು ಸುಮ್ಮನೆ ತನ್ನ ಸೀಟ್‌ನಲ್ಲಿ  ಕುಳಿತು ಹಿಂದಿನ ವಿಷಯದ ಬಗ್ಗೆ ಯೋಚಿಸತೊಡಗಿದಳು....

ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ವಿನಯ್‌ ಒಬ್ಬ ಸುಂದರ, ಆಕರ್ಷಕ ಯುವಕನಾಗಿದ್ದ. ಬೇರೆ ಗಂಡು ಹುಡುಗರೊಡನೆ ಎಂದೂ ಮಾತನಾಡದಿದ್ದ ಸೀಮಾ ವಿನಯ್‌ನೊಡನೆ ಮಾತ್ರ ಯಾವುದಾದರೂ ನೆಪದಿಂದ ಮಾತನಾಡುತ್ತಿದ್ದಳು. ಆದರೆ ಅವನ ಬಗ್ಗೆ ತನ್ನ ಮನಸ್ಸಿನಲ್ಲಿ ಹುದುಗಿದ್ದ ಭಾವನೆಯನ್ನು ಎಂದೂ ವ್ಯಕ್ತಪಡಿಸಲಿಲ್ಲ. ವಿನಯ್‌ ಸಹ ಅವಳೊಡನೆ ಒಬ್ಬ ಸಹಪಾಠಿಯಂತೆ ವ್ಯವಹರಿಸುತ್ತಿದ್ದ.

ಕಾಲೇಜು ವಿದ್ಯಾಭ್ಯಾಸ ಮುಗಿದ ಮೇಲೆ ಸೀಮಾ ಎಂದೂ ವಿನಯ್‌ನ ಬಗ್ಗೆ ಯೋಚಿಸಲೇ ಇಲ್ಲ. ಫೇಸ್‌ಬುಕ್‌ನಲ್ಲಿ 1-2 ಸಲ ಅವನ ವಿಷಯ ನೋಡಿ ಅವನ ಪ್ರಸಕ್ತ ಜೀವನದ ಬಗ್ಗೆ ತಿಳಿದುಕೊಂಡಿದ್ದಳು. ಅವನ ಫೋನ್‌ ನಂಬರ್‌ನ್ನೂ ನೋಟ್‌ ಮಾಡಿಕೊಂಡಿದ್ದಳು. ಆದರೆ ಎಂದೂ ಫ್ರೆಂಡ್‌ ರಿಕ್ವೆಸ್ಟ್ ಕಳುಹಿಸಲಿಲ್ಲ ಮತ್ತು ಫೋನ್‌ ಸಹ ಮಾಡಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ