ಸುಖೀ ಸಂಸಾರದ ಗೃಹಿಣಿಯಾಗಿದ್ದ ಮೌನಾ, ಮುಂದೆ ಮಗು ಆಗಲಿಲ್ಲವೆಂಬ ಕೊರಗಿಗೆ ತುತ್ತಾಗಿ ಖಿನ್ನತೆಗೊಳಗಾದಳು. ಅವಳು ತನ್ನ ಮೌನ ಮುರಿದದ್ದು ಹೇಗೆ....?

ರಾಹುಲ್ ಆಫೀಸ್‌ ಮುಗಿಸಿ ಮನೆಗೆ ಬಂದಾಗ ಮನೆ ಎಂದಿನಂತೆ ನಿಶ್ಶಬ್ದವಾಗಿತ್ತು. ಮೌನಾ ಕಿಟಕಿಯಿಂದ ಪಕ್ಕದ ಗ್ರೌಂಡ್‌ ನಲ್ಲಿ ಆಟವಾಡುತ್ತಿದ್ದ ಮಕ್ಕಳನ್ನೇ ನೋಡುತ್ತಾ ಮೈ ಮರೆತಿದ್ದಳು.

``ಮೌನಾ ಕಾಫಿ ಕೊಡು....'' ಎಂದ ರಾಹುಲ್.

‌ಎಚ್ಚೆತ್ತ ಅವಳು, ``ತಂದೇ,'' ಎನ್ನುತ್ತಾ ಅಡುಗೆ ಮನೆಗೆ ಓಡಿದಳೇ ಒಂದು ತಟ್ಟೆಯಲ್ಲಿ ಸ್ನಾಕ್ಸ್ ತಂದು, ``ತಿನ್ನುತ್ತಾ ಇರಿ. ಕಾಫಿ ತರುವೆ,'' ಎಂದು ತಿರುಗಿ ಒಳಗೆ ಹೋದಳು.

ಮೊದಲಿನಂತೆ ಮಾತು ನಗು ಇಲ್ಲದೆ ಮನೆಗೆ ಬಂದಾಗ ರಾಹುಲ್ ‌ಗೆ ಮೈ ಪರಚಿಕೊಳ್ಳುವಂತೆ ಆಗುತ್ತಿತ್ತು. ಅಂತೂ ನಾಳೆ ಇದಕ್ಕೊಂದು ಪರಿಹಾರ ಸಿಗುವ ಸೂಚನೆ ಗೆಳೆಯ ಸಮೀರನಿಂದ ಸಿಕ್ಕಿತ್ತು. ಕಾಫಿ ಕೊಟ್ಟ ಮೌನಾ ಹಾಗೇ ಮೌನವಾಗಿ ಕುಳಿತಳು.

``ಮೌನಾ,,, ನಾಳೆ ಮೈಸೂರಿಗೆ ಹೋಗಬೇಕು. ಸಮೀರ್‌ ಬರಬೇಕೆಂದು ಫೋನ್‌ ಮಾಡಿದ್ದಾನೆ. ಎರಡು ಮೂರು ದಿನ ಅಲ್ಲೇ ಇರಬೇಕಾಗಬಹುದು.... ಬಟ್ಟೆ ಜೋಡಿಸಿಕೋ,'' ಎಂದ.

ಸಮೀರ್‌ ರಾಹುಲ್ ‌ನ ಗೆಳೆಯ. ಅವನು ಮೈಸೂರಿನ ಆಸ್ಪತ್ರೆಯಲ್ಲಿ ಡಾಕ್ಟರ್‌ ಆಗಿದ್ದ. ಎರಡೂ ಕುಟುಂಬದವರೂ ಒಬ್ಬರ ಮನೆಗೊಬ್ಬರು ಪರಸ್ಪರ ಹೋಗಿ ಬಂದು ಮಾಡುತ್ತಿದ್ದರು. ಸಮೀರ್‌ ನ ಹೆಂಡತಿ ಸುಮಾ ಹಾಗೂ ಮೌನಾ ಇಬ್ಬರಲ್ಲೂ ಆತ್ಮೀಯಾದ ಸ್ನೇಹವಿತ್ತು.

``ನನಗೆ ಎಲ್ಲೂ ಬರುವ ಮನಸ್ಸಿಲ್ಲ. ನಾನು ಬರೋದಿಲ್ಲ.....''

``ಏಯ್‌.... ನಿನ್ನನ್ನು ಕರೆದುಕೊಂಡು ಬರಲು ಹೇಳಿದ್ದಾನೆ. ನಾನೇನಾದರೂ ಒಬ್ಬನೇ ಹೋದರೆ ಗಂಡ ಹೆಂಡತಿ ಅಷ್ಟೇ.... ನನ್ನನ್ನು ಹಿಂದೆ ಅಟ್ಟುತ್ತಾರೆ ಅಷ್ಟೇ,'' ಎಂದು ಹೆದರಿದವನಂತೆ ನಟಿಸಿದ.

ರಾಹುಲ್ ‌ಹೇಳಿದ್ದನ್ನು ಕೇಳಿ ಜೋರಾಗಿ ನಕ್ಕಳು ಮೌನಾ.

``ದಟ್ಸ್ ಗುಡ್‌ ಗರ್ಲ್ ಹೀಗೆ ಇರಬೇಕು ನೀನು. ಈ ಮೌನ ನಿನಗೆ ಸರಿಯಲ್ಲ.....'' ಎಂದು ಅವಳ ಕೆನ್ನೆಯನ್ನು ಮೃದುವಾಗಿ ಹಿಂಡಿದ ರಾಹುಲ್‌.

``ಸೋನುಗೆ ಏನಾದರೂ ಗಿಫ್ಟ್ ತೆಗೆದುಕೊಂಡು ಹೋಗಬೇಕು''

``ಕಳೆದ ವಾರ ತಂದ ಟಾಯ್ಸ್ ಇದೆಯಲ್ಲಾ ಅದನ್ನೇ ಕೊಡೋಣ ಸಾಕು. ಬೆಳಗ್ಗೆ ಬೇಗ ಹೊರಡಬೇಕು,'' ಎಂದ ರಾಹುಲ್.

``ಸಮೀರ್‌ ಹಾಗೂ ಸುಮಾರಿಗೆ ನಾನು ಮಾಡುವ ಚಟ್ನಿ ಪುಡಿ, ಉಪ್ಪಿನಕಾಯಿ ಇಷ್ಟ. ಅದನ್ನೂ ಪ್ಯಾಕ್‌ ಮಾಡಿಕೊಳ್ಳುವೆ,'' ಎಂದು ಅಡುಗೆಮನೆಗೆ ಹೋದಳು.

ಮರುದಿನ ಹೊರಡಲು ರೆಡಿ ಮಾಡಿಕೊಂಡು ಊಟ ಮಾಡಿ ಮಲಗಿದರು.

`ನಾಳೆ ಸಮೀರ್‌ ಮಗು ಜೊತೆ ಸಮಯ ಕಳೆಯಬಹುದು, ಆಟ ಆಡಬಹುದು,' ಎನ್ನುವ ಉತ್ಸಾಹದಲ್ಲಿ ಬೇಗ ನಿದ್ದೆಗೆ ಜಾರಿದಳು.

ರಾಹುಲ್ ‌ಗೆ ಏನು ಮಾಡಿದರೂ ಕಣ್ಣು ಮುಚ್ಚಲಿಲ್ಲ, ಹಳೆಯದೆಲ್ಲಾ ನೆನಪಾಯಿತು.

ರಾಹುಲ್ ‌ಗೆ ಮೌನಾ ಏನೂ ಹೊಸಬಳಲ್ಲ.... ಅತ್ತೆಯ ಮಗಳೇ ಆಗಿದ್ದಳು. ಚಿಕ್ಕಂದಿನಿಂದಲೂ ಪರಿಚಯ. ಅವಳ ಹೆಸರು ಮಾತ್ರ ಮೌನಾ. ಆದರೆ ಅವಳು ಒಂದು ನಿಮಿಷ ಮೌನವಾಗಿ ಇರುತ್ತಿರಲಿಲ್ಲ. ಚಿಕ್ಕ ವಯಸ್ಸಿನಿಂದಲೂ ಅಷ್ಟೇ. ತುಂಬಾ ಮಾತು ಮಾತು.... ಎಲ್ಲರ ಜೊತೆ ಖುಷಿ ಖುಷಿಯಾಗಿ ಓಡಾಡಿಕೊಂಡು ಇರುತ್ತಿದ್ದಳು.

``ನಿನಗ್ಯಾಕೆ ಮೌನಾ ಅಂತ ಹೆಸರಿಟ್ಟರೋ..... ಛೇ....! ವಾಚಾಳಿ ಅಂತ ಇಡಬೇಕಿತ್ತು. ಅರೆ..... ಒಂದು ನಿಮಿಷಾನೂ ಬಾಯಿ ಮುಚ್ಚೋದಿಲ್ವಲ್ಲಾ.....'' ಎಂದು ರಾಹುಲ್ ‌ಅವಳನ್ನು ಯಾವಾಗಲೂ ರೇಗಿಸುತ್ತಿದ್ದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ