ಜೀನದಲ್ಲಿ ಒಮ್ಮೊಮ್ಮೆ ಹೇಗಾಗಿ ಬಿಡುತ್ತದೆಂದರೆ, ಯಾವ ವ್ಯಕ್ತಿಯನ್ನು ನೀವು ಅತಿ ಹೆಚ್ಚು ಪ್ರೀತಿಸುತ್ತೀರೊ, ಅದೇ ವ್ಯಕ್ತಿಯಿಂದ ನಿಮಗೆ ಸಾಕಷ್ಟು ದುಃಖ, ನೋವು ಅನುಭವಿಸಬೇಕಾಗಿ ಬರುತ್ತದೆ. ವಿಪರ್ಯಾಸದ ಸಂಗತಿಯೇನೆಂದರೆ, ನೀವು ಆ ವ್ಯಕ್ತಿಗೆ ಏನನ್ನೂ ಹೇಳಿಕೊಳ್ಳಲಾರಿರಿ, ಏಕೆಂದರೆ ಆ ವ್ಯಕ್ತಿಯ ಮುಂದೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಯಾವುದೇ ಹಕ್ಕು ಕೂಡ ಇಲ್ಲ. ಯಾವುದೇ ಒಂದು ಸಂಬಂಧಕ್ಕೆ ಹೆಸರೇ ಸೂಚಿಸದಿದ್ದರೆ, ಒಬ್ಬರು ಇನ್ನೊಬ್ಬರಿಗೆ ಏನು ತಾನೇ ಆಗಲು ಸಾಧ್ಯ? ಎಳೆಗಳಿಂದ ಕೂಡಿದ ಪ್ರೀತಿಯ ಮಹಲು ಒಂದೇ ಏಟಿಗೆ ಚೂರು ಚೂರಾಗಿ ಹೋಗುತ್ತದೆ.

`ಆ ಅಸ್ತವ್ಯಸ್ತಗೊಂಡ ಅನುಭವಗಳ ಸ್ಛೋಟದಿಂದ ಗಾಯಗೊಂಡ ಹೃದಯದ ಉದಾಸತನ ಇತಿಮಿತಿಯೊಳಗೆ ನಿಮ್ಮ ಮನಸ್ಸು ಚಂಚಲಗೊಳ್ಳುತ್ತಾ ಇರುತ್ತದೆ. ಭಾವನೆಗಳ ಆಗಮನ ನಿರ್ಗಮನ ನಡೆಯುತ್ತಲೇ ಇರುತ್ತದೆ. ಆದರೆ ಹೃದಯದ ಬಿಗುವು ಮಾತ್ರ ಕಡಿಮೆಯಾಗುವುದಿಲ್ಲ,' ಒಂದು ಕಡೆ ಓದಿದ ಈ ಸಾಲುಗಳು ಶೈಲಾಳ ಹೃದಯವನ್ನು ಬಹಳ ಆಳವಾಗಿ ತಟ್ಟಿದವು. ಸರಿಯಾಗಿ ಇಂಥದೇ ಪರಿಸ್ಥಿತಿಯನ್ನು ಅವಳೂ ಕೂಡ ಎದುರಿಸಿದ್ದಳು. ಯಾರನ್ನೋ ಮನಸಾರೆ ಇಷ್ಟಪಟ್ಟಳು, ಆದರೆ ಆ ವ್ಯಕ್ತಿಗೆ ಯಾವುದೇ ಪ್ರಶ್ನೆ ಮಾಡಲು ಆಗಲಿಲ್ಲ. ಆ ವ್ಯಕ್ತಿ ಇನ್ನೊಬ್ಬರ ನಿಕಟರಾಗುವುದನ್ನು ಕಂಡು ಸುಮ್ಮನಾಗಿಬಿಟ್ಟಳು.

``ಹಲೋ ಆಂಟಿ, ನೀವೆಲ್ಲಿ ಕಳೆದುಹೋಗಿಬಿಟ್ರಿ? ನೀವಿನ್ನೂ ಸಿದ್ಧರಾಗಿಲ್ಲವೇ? ನಾವೀಗಲೇ ಚಿತ್ರ ಕಲಾಪರಿಷತ್‌ಗೆ ಹೋಗಬೇಕು. ಪೇಂಟಿಂಗ್‌ ಪ್ರದರ್ಶನ ಮಾಡುತ್ತಿರುವ ಅಮ್ಮನಿಗೆ ಚಿಯರ್‌ ಅಪ್‌ ಮಾಡಲು,'' ಎಂದು ಸ್ನೇಹಾ ಹೇಳಿದಳು.

``ಹ್ಞಾಂ.... ಹ್ಞಾಂ..... ನಾನೀಗಲೇ ಸಿದ್ಧಳಾಗ್ತೀನಿ,'' ಎಂದು ಹೇಳುತ್ತಾ ಶೈಲಾ ಗಡಿಬಿಡಿಯಿಂದ ಮೇಲೆದ್ದಳು.ಇಂದು ಅವಳ ಪ್ರೀತಿಯ ಗೆಳತಿ ನಮ್ರತಾಳ ಜೀವನದ ಅತ್ಯಂತ ವಿಶೇಷ ದಿನವಾಗಿತ್ತು. ಇಂದು ಮೊದಲ ಬಾರಿ ಅವಳು ವಿಶ್ವಮಟ್ಟದ ಪೇಂಟಿಂಗ್‌ ಪ್ರದರ್ಶನವೊಂದನ್ನು ನೋಡಲು ಹೊರಟಿದ್ದಳು.

ತಿಳಿ ನೀಲಿ ಬಣ್ಣದ ಸೀರೆ ಧರಿಸಿ ಅವಳು ಹೋಗಲು ಸಿದ್ಧಳಾದಳು. ಸ್ನೇಹಾ ಸ್ಕೂಟಿ ಹೊರತೆಗೆದು ರೆಡಿಯಾಗಿ ನಿಂತಿದ್ದಳು, ``ಬನ್ನಿ ಆಂಟಿ, ಕುಳಿತುಕೊಳ್ಳಿ.''

ಅವಳು ಸ್ನೇಹಾಳ ಹಿಂದೆ ಕುಳಿತರು. ಅವಳು ಗಾಳಿಯೊಂದಿಗೆ ಮಾತುಕತೆ ನಡೆಸುತ್ತಾ ನಿಗದಿತ ಸ್ಥಳಕ್ಕೆ ತಲುಪಿದಳು.

ಶ್ವೇತಾ ಅತ್ಯಂತ ಪ್ರೀತಿಯಿಂದ ಸ್ನೇಹಾಳತ್ತ ನೋಡುತ್ತಿದ್ದಳು. ಸ್ಕೂಟಿಯನ್ನು ಒಂದು ಬದಿಗೆ ನಿಲ್ಲಿಸುತ್ತಾ ಸ್ನೇಹಾ, ಅವಳಿಗೆ ಬಹಳ ಸ್ಮಾರ್ಟ್‌ ಹಾಗೂ ಪ್ರೀತಿಪಾತ್ರ ಎನಿಸುತ್ತಿದ್ದಳು.

ಸ್ನೇಹಾ, ಅವಳ ಗೆಳತಿ ನಮ್ರತಾಳ ಪುಟ್ಟ ಹೃದಯದಲ್ಲಿ ನೋವು ಇಟ್ಟುಕೊಂಡು ಶೈಲಾಗೆ ತನ್ನ ಕುಟುಂಬವನ್ನು ಪುನರ್ ಸ್ಥಾಪಿಸಿಕೊಳ್ಳಲು ಆಗಲಿಲ್ಲ. ಹಾಗೆಂದೇ ಈವರೆಗೂ ಅವಳು ಒಂಟಿತನದ ಜೀವನ ನಡೆಸುತ್ತಿದ್ದಳು. ನಮ್ರತಾ ಮಾತ್ರ ಅವಳಿಗೆ ಬೆನ್ನೆಲುಬಾಗಿ ನಿಂತಿದ್ದಳು. ನಮ್ರತಾ ಕೂಡ ವಿಚ್ಛೇದಿತೆ. ಇಬ್ಬರೂ ಸ್ನೇಹಿತೆಯರು ಜೊತೆ ಜೊತೆಗೆ ವಾಸಿಸುತ್ತಿದ್ದರು. ನಮ್ರತಾಳ ಸಂಬಂಧ ಮದುವೆಯ ಬಳಿಕ ಅಂತ್ಯಗೊಂಡಿತ್ತು. ಆದರೆ ಶೈಲಾಳ ಸಂಬಂಧ ಇನ್ನೂ ಕುದುರುವ ಮೊದಲೇ ಮುರುಟಿತ್ತು.

ಪೇಂಟಿಂಗ್ಸ್ ನೋಡುತ್ತ ನೋಡುತ್ತಾ ಶೈಲಾ ನಮ್ರತಾಳ ಜೊತೆ ಬಹಳಷ್ಟು ದೂರ ಕ್ರಮಿಸಿದಳು. ನಮ್ರತಾಳ ಒಂದು ಪೇಂಟಿಂಗ್‌ 1 ಲಕ್ಷ 70 ಸಾವಿರ ರೂ.ಗೆ ಮಾರಾಟವಾದದ್ದನ್ನು ಕಂಡು ಶೈಲಾ ನಗುತ್ತಲೇ ಕೇಳಿಯೇಬಿಟ್ಟಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ