ವಿಮಾನದಿಂದ ಕೆಳಗಿಳಿದ ನಂತರ ಡಾ. ಸತೀಶ್‌ಗೆ ತಾನಿನ್ನೂ ಗಾಳಿಯಲ್ಲೇ ಹಾರುತ್ತಿರುವಂತೆ ಅನಿಸುತ್ತಿತ್ತು. ಅನಿಸದೇ ಏನು? ಮೂರು ತಿಂಗಳ ನಂತರ ಮನೆಗೆ ಹಿಂತಿರುಗುತ್ತಿರುವ ಸಂತಸ, ಈ ಸಂದರ್ಭದಲ್ಲಿ ವಿದೇಶದಲ್ಲಿ ಸಿಕ್ಕ ಗೌರವ ಹಾಗೂ ವಿಶ್ವವಿಖ್ಯಾತ ಲಂಡನ್‌ನ ಕಿಂಗ್ಸ್ ಮೆಡಿಕಲ್ ಕಾಲೇಜಿನಲ್ಲಿ ಪ್ರತಿವರ್ಷ ಕೆಲವು ತಿಂಗಳುಗಳ ಕಾಲ ವಿಸಿಟಿಂಗ್‌ ಪ್ರೊಫೆಸರ್‌ ಆಗಿ ಬರಬೇಕೆಂಬ ಆಹ್ವಾನ. ಈ ಸುದ್ದಿ ಕೇಳಿ ಲತಾಗೆ ಖುಷಿಯಾಗುತ್ತದೆ. ಶಶಿಯಂತೂ ಖುಷಿಯಿಂದ ಕುಣಿಯುತ್ತಾಳೆ. ಆದರೆ ಹೊರಗೆ ನಿಂತಿದ್ದ ಜನರಲ್ಲಿ ಲತಾ ಮಾತ್ರ ಕಂಡುಬಂದಳು. ಅವನು ಅಸಹನೆಯಿಂದ ನಾಲ್ಕೂ ಕಡೆ ನೋಡಿದ.

``ಶಶೀನ ತಾನೆ ಹುಡುಕುತ್ತಿರೋದು? ನಾನು ಬೇಕೂಂತ ಅವಳನ್ನು ಕರೆದುಕೊಂಡು ಬರಲಿಲ್ಲ. ಏಕೆಂದರೆ ನಾನು ನಿಮಗೆ ಏಕಾಂತದಲ್ಲಿ ಒಂದು ಖುಷಿ ಸಮಾಚಾರವನ್ನು ಹೇಳಬೇಕಿತ್ತು,'' ಲತಾ ನಾಚಿಕೊಂಡಳು.

``ನಾನೂ ಶಶಿಗೆ ಖುಷಿ ಸಮಾಚಾರ ಹೇಳೋಕೆ ಕಾಯ್ತಿದ್ದೀನಿ. ಇರಲಿ ಇಷ್ಟು ಹೊತ್ತು ಕಾದಿದ್ದಾಯ್ತು. ಇನ್ನು ಸ್ವಲ್ಪ ಹೊತ್ತು ಕಾದ್ರೆ ಏನು? ನಿನ್ನ ಸಮಾಚಾರ ಹೇಳು.''

``ಕಾರಿನಲ್ಲಿ ಕುಳಿತ ಮೇಲೆ.''

``ಅಲ್ಲಿ ಡ್ರೈವರ್‌ ಎದುರಿಗೆ ಏಕಾಂತ ಎಲ್ಲಿ ಬಂತು?'' ಸತೀಶ್‌ ತುಂಟತನದಿಂದ ಕೇಳಿದ.

``ನಾನು ಡ್ರೈವರ್‌ನನ್ನು ಕರೆದುಕೊಂಡು ಬಂದಿಲ್ಲ,'' ಲತಾ ಟ್ರ್ಯಾಲಿಯನ್ನು ಪಾರ್ಕಿಂಗ್‌ನತ್ತ ತಿರುಗಿಸುತ್ತಾ ಹೇಳಿದಳು.

``ನೀನು ಗುಟ್ಟಾಗಿಟ್ರೂ ಆ ಖುಷಿ ಸಮಾಚಾರ ಏನೂಂತ ನನಗೆ ಗೊತ್ತು,'' ಸತೀಶ್‌ ಕಾರಿನಲ್ಲಿ ಕುಳಿತು ಅವಳನ್ನು ತನ್ನೆಡೆಗೆ ಎಳೆದುಕೊಳ್ಳುತ್ತಾ ಹೇಳಿದ, ``ನೀನು ತಾಯಿಯಾಗ್ತಿದ್ದೀಯ. ಹೌದು ತಾನೆ?''

``ಮನೆ ತಲುಪುವವರೆಗೆ ತಾಳ್ಮೆ ಇರಲಿ.... ಅಂದಹಾಗೆ ನಿಮ್ಮ ಊಹೆ ಸರಿಯಾಗಿದೆ. ನಾನು ಮತ್ತೆ ತಾಯಿಯಾಗುತ್ತಿದ್ದೇನೆ. ಈ ತಾಯೀನ ಅತ್ತೆ ಎಂದೂ ಕರೆಯುತ್ತಾರೆ.''

``ಅಂದರೆ ನೀನು, ನಾನು ಇಲ್ಲದಿರುವ ಅವಕಾಶ ಬಳಸಿಕೊಂಡು ನನ್ನ ಹಾರ್ಡ್‌ಕೋರ್‌ ಪ್ರೊಫೆಶನಲ್ ಮಗಳಿಗೆ ಮದುವೆ ಆಗೂಂತ ಬ್ರೇನ್‌ ವಾಶ್‌ ಮಾಡಿಬಿಟ್ಯಾ?''

``ನಾನು ಅವಳಿಗೆ ಹೇಳಿದ್ದೇನೆಂದರೆ, ಅವಳು ಇಚ್ಛಿಸಿದವನನ್ನು ನೀವು ತಲೆಯ ಮೇಲೆ ಕೂಡಿಸಿಕೊಂಡು ಮೆರೆಸ್ತೀರಿ ಅಂತ. ಏಕೆಂದರೆ ಪೃಥ್ವಿ ನಿಮ್ಮ ಆತ್ಮೀಯ ಗೆಳೆಯ ಸುಧೀರ್‌ರ ಮಗ.''

``ಸುಧೀರ್‌ನ ಮಗ? ನಾನು ಒಪ್ಪೋದಿಲ್ಲ,'' ಸತೀಶ್‌ ಆತ್ಮವಿಶ್ವಾಸದಿಂದ ಹೇಳಿದ.

``ನೋಡಿದ್ರೆ ಖಂಡಿತಾ ನಂಬ್ತೀರಿ. ಮೋಜಿನ ವಿಷಯವೆಂದರೆ ಮಗು ಗರ್ಭದಿಂದ ಹೊರಗೆ ಬಂದಕೂಡಲೇ ಅದನ್ನು ಅಮೆರಿಕಾದ ಪ್ರಜೆಯನ್ನಾಗಿ ಮಾಡಲು ಹರಿಣಿ ಮತ್ತು ಸುಧೀರ್‌ ಅಮೆರಿಕಾಗೆ ಹೊರಟುಹೋಗಿದ್ದರು. ಅದೇ ಪೃಥ್ವಿಗೆ ಭಾರತ ಎಷ್ಟು ಇಷ್ಟವಾಯಿತೆಂದರೆ ಅವನು ಇಲ್ಲಿಂದ ವಾಪಸ್‌ ಹೋಗಲು ಇಷ್ಟಪಡಲಿಲ್ಲ. ಅವನು ಇಲ್ಲೇ ಅಮೆರಿಕನ್‌ ಕಂಪ್ಯೂಟರ್‌ ಕಂಪನಿಯೊಂದರ ಏಜೆನ್ಸಿ ತೆಗೆದುಕೊಂಡಿದ್ದಾನೆ. ಈಗ ಹರಿಣಿ ಮತ್ತು ಸುಧೀರ್‌ ಕೂಡ ಪರ್ಮನೆಂಟಾಗಿ ಭಾರತಕ್ಕೆ ಹಿಂತಿರುಗಿದ್ದಾರೆ.''

``ಪೃಥ್ವಿ ವಯಸ್ಸೆಷ್ಟು?''

``ಅವನು ನಮ್ಮ ಶಶಿಗಿಂತ ಸ್ವಲ್ಪ ದೊಡ್ಡವನು. ಏಕೆಂದರೆ ನೀವು ವಿದೇಶದಿಂದ ಬಂದ ಮೇಲೆ ಅವಳು ಹುಟ್ಟಿದ್ದು. ನೀವು ವಿದೇಶಕ್ಕೆ ಹೋದ ಕೂಡಲೇ ಹರಿಣಿ ಮತ್ತು ಸುಧೀರ್‌ ಹೊರಟುಬಿಟ್ಟಿದ್ರು. ಹರಿಣಿ ಆಗ ಗರ್ಭಿಣಿ ಆಗಿದ್ದಳು.''

``ಹರಿಣಿ ಆಗ ಗರ್ಭಿಣಿ ಆಗಿದ್ಲೂಂತ ನಿನಗೆ ಹೇಗೆ ಗೊತ್ತು? ಆಗ ನೀನಿನ್ನೂ ಹೊಸ ವಧು. ಹರಿಣಿ ಇದರ ಬಗ್ಗೆ ನಿನಗೆ ಹೇಳಿದ್ದಾಳೆ ಅನ್ನೋಕೆ ನಿಮ್ಮಿಬ್ಬರಲ್ಲಿ ಅಷ್ಟೇನೂ ಸ್ನೇಹವಿರಲಿಲ್ಲ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ