ಕಥೆ  -  ವಾರಿಜಾ ವಿನೋದ್

ಡ್ರಾಯಿಂಗ್‌ ರೂಮಿನಲ್ಲಿ ಕುಳಿತಿದ್ದ ನವವಿವಾಹಿತೆ ಶೀಲಾ ತನ್ನ ಪತಿ ರಾಜೇಶನ ನೆನಪಿನಲ್ಲಿ ಮುಳುಗಿದ್ದಳು. ಅವಳು ನಸುಕಿನಲ್ಲಿಯೇ ಎದ್ದು ಸ್ನಾನ ಮಾಡಿ ಸಿದ್ಧಳಾಗಿ ಕುಳಿತಿದ್ದಳು. ಉದಯಿಸುವ ಸೂರ್ಯನಂತೆ ಅವಳ ರೂಪ ಮನೋಹರವಾಗಿ ಕಂಗೊಳಿಸುತ್ತಿತ್ತು. ಜರಿ ಅಂಚುಳ್ಳ ರೇಷ್ಮೆ ಸೀರೆ, ಕೈ ತುಂಬ ಕೆಂಪು ಬಳೆಗಳು ಮತ್ತು ಬಂಗಾರದ ಬಳೆಗಳು, ಹಣೆಯಲ್ಲಿ ಕೆಂಪು ಬೊಟ್ಟು ಇವೆಲ್ಲ ಅವಳ ಸೌಂದರ್ಯಕ್ಕೆ ಮೆರುಗು ನೀಡಿದ್ದವು. ಮನೆಯಲ್ಲಿ ಎಲ್ಲರೂ ಇನ್ನೂ ನಿದ್ದೆ ಮಾಡುತ್ತಿದ್ದರು. ಆದರೆ ಶೀಲಾಳಿಗೆ ರಾತ್ರಿಯೆಲ್ಲ ಸರಿಯಾಗಿ ನಿದ್ದೆ ಬಂದಿರಲಿಲ್ಲ. ಮದುವೆಯಾದ ಮೇಲೆ ಮೊದಲ ಸಲ ತವರಿಗೆ ಬಂದಿದ್ದಳು. ಈ ದಿನ ರಾಜೇಶ್‌ಅವಳನ್ನು ಕರೆದೊಯ್ಯಲು ಬರುವವನಿದ್ದ. ಅವಳು ಬಹಳ ಸಂತೋಷದಿಂದಿದ್ದಳು.

ಶೀಲಾ ಒಮ್ಮೆ ಡ್ರಾಯಿಂಗ್‌ ರೂಮಿನ ಉದ್ದಕ್ಕೂ ಕಣ್ಣು ಹಾಯಿಸಿದಳು. ಅವಳಿಗೆ ಬಹಳ ಹಿಂದಿನ ದಿನಗಳು ನೆನಪಾದವು. ಆಗಿನ್ನೂ ಅವಳು ಪುಟ್ಟ ಹುಡುಗಿ, ತನ್ನ ತಾಯಿಯ ಸೆರಗನ್ನು ಹಿಡಿದು ಮರೆಯಲ್ಲಿ ನಿಂತಿದ್ದಳು. ಅವಳ ಅಜ್ಜ ಆರಾಮ ಕುರ್ಚಿಯ ಮೇಲೆ ಕುಳಿತು ತಮ್ಮ ಗಂಡು ಮಕ್ಕಳು ಮತ್ತು ಸೊಸೆಯಂದಿರಿಗೆ ಜೋರು ಧ್ವನಿಯಲ್ಲಿ ಆದೇಶ ನೀಡುತ್ತಿದ್ದರು, ``ಇನ್ನು ಮಾಲತಿ ಮತ್ತು ಅವಳ ಪುಟ್ಟ ಮಗಳು ನಮ್ಮ ಜೊತೆ ಇಲ್ಲೇ ಇರುತ್ತಾರೆ. ಈ ಮನೆ ನಿಮಗೆ ಸೇರಿರುವ ಹಾಗೆ ಅವಳಿಗೂ ಸೇರಿದೆ. ಇದ್ದಕ್ಕಿದ್ದಂತೆ ಗಂಡನನ್ನು ಕಳೆದುಕೊಂಡು ಅವಳೀಗ ನೆಲೆ ಇಲ್ಲದವಳಾಗಿದ್ದಾಳೆ. ಅವಳ ಅತ್ತೆ ಮನೆಯವರು ಅವಳಿಗೆ ಅನ್ಯಾಯ ಮಾಡಿಬಿಟ್ಟಿದ್ದಾರೆ.

``ಅವಳ ಗಂಡನ ಇನ್ಶೂರೆನ್ಸ್ ಹಣವನ್ನೆಲ್ಲ ಅವರೇ ಲಪಟಾಯಿಸಿಬಿಟ್ಟರು. ನನ್ನ ಮಗಳನ್ನು ಕೆಲಸದವಳ ಹಾಗೆ ನೋಡಿ ಹಗಲೂ ರಾತ್ರಿ ಅವಳಿಂದ ಚಾಕರಿ ಮಾಡಿಸಿದರು. ಪ್ರಪಂಚದಲ್ಲಿ ಜನರು ಇಷ್ಟು ಸ್ವಾರ್ಥಿಗಳಾಗಿ ಇರುತ್ತಾರೆ ಅಂತ ನಾನು ತಿಳಿದಿರಲಿಲ್ಲ. ತಮ್ಮ ಮಗನ ಕೊನೆಯ ಗುರುತನ್ನೂ ನಿರ್ಲಕ್ಷಿಸಿ ಮುಖ ತಿರುಗಿಸುವುದನ್ನು ನನಗೆ ನೋಡುವುದಕ್ಕೆ ಆಗುವುದಿಲ್ಲ. ಈ ಬಗ್ಗೆ ನಾನು ಗುರೂಜೀ ಜೊತೆಯಲ್ಲೂ ಮಾತನಾಡಿದೆ. ಅವರೂ ಸಹ ಮಾಲತಿಯನ್ನು ಆ ದುರಾಸೆಯ ಜನರ ಹಿಡಿತದಿಂದ ಬಿಡಿಸಿ ಕರೆದುಕೊಂಡು ಬರಬೇಕು ಅಂತಲೇ ಅಭಿಪ್ರಾಯಪಟ್ಟರು.''

ಅವರು ಸ್ವಲ್ಪ ಹೊತ್ತು  ಮಾತು ನಿಲ್ಲಿಸಿ ತಮ್ಮ ಗಂಡು ಮಕ್ಕಳತ್ತ ನೋಡಿ, ಮತ್ತೆ ಮುಂದುವರಿಸಿದರು, ``ನನ್ನ ಮಗಳು ಮತ್ತು ಅವಳ ಈ ಮುದ್ದು ಮಗುವನ್ನು ಸಾಕುವ ಸಾಮರ್ಥ್ಯ ನನಗಿದೆ.... ನೀವಿಬ್ಬರೂ ಕೂಡ ಅಣ್ಣಂದಿರಾಗಿರುವ ಕರ್ತವ್ಯವನ್ನು ನೆರವೇರಿಸುತ್ತೀರಿ ಅಂತ ಆಶಿಸುತ್ತೇನೆ,'' ಎಂದು ಹೇಳಿ ಅಜ್ಜ ಮಗುವನ್ನು ಎತ್ತಿ ತೊಡೆಯ ಮೇಲೆ ಕುಳ್ಳಿರಿಸಿಕೊಂಡರು. ಆಗ ಶೀಲಾಳಿಗೆ ತಾನೊಬ್ಬ ರಾಜಕುಮಾರಿ ಎಂಬಂತೆ ಹೆಮ್ಮೆಯಾಗಿತ್ತು.

ಅಜ್ಜನ ಮಾತಿಗೆ ಎಲ್ಲರೂ ತಲೆಬಾಗಿದರು. ಅವಳ ತಾಯಿಯೂ ತನ್ನ ದುಃಖವನ್ನೂ ಅದುಮಿಟ್ಟು ಎಲ್ಲರೊಡನೆ ಸಹಜವಾಗಿರಲು ಪ್ರಯತ್ನಿಸಿದಳು. ತಾಯಿ ಶಾಲೆಯೊಂದರಲ್ಲಿ ಟೀಚರ್‌ ಕೆಲಸಕ್ಕೆ ಸೇರಿದಳು. ಹೀಗೆ ತಾವು ಯಾರಿಗೂ ಹೊರೆಯಾಗದಂತೆ ಏರ್ಪಾಟು ಮಾಡಿಕೊಂಡಳು.

ಅಜ್ಜ ಮತ್ತು ಅಜ್ಜಿಯ ಕುಟುಂಬದವರಿಗೆಲ್ಲ ತಮ್ಮ ಗುರೂಜೀಯ ಬಗ್ಗೆ ಅಪಾರ ಗೌರವವಿತ್ತು. ಎಲ್ಲರ ಕೊರಳಿನಲ್ಲಿಯೂ ಗುರೂಜೀಯ ಚಿತ್ರವಿರುವ ಲಾಕೆಟ್‌ ತೂಗುತ್ತಿತ್ತು. ಯಾವುದೇ ಮುಖ್ಯ ವಿಚಾರದ ಬಗ್ಗೆ ನಿರ್ಧಾರ ಮಾಡುವ ಮೊದಲು ಗುರೂಜೀಯ ಅಪ್ಪಣೆ ಪಡೆಯುವುದು ಸಂಪ್ರದಾಯವಾಗಿತ್ತು. ಶೀಲಾ ಬಾಲ್ಯದಿಂದಲೂ ಇದನ್ನು ಕಂಡಿದ್ದಳು. ಹೀಗಾಗಿ ಅವಳೂ ಗುರೂಜೀಯನ್ನು ಗೌರವಿಸುತ್ತಿದ್ದಳು. ಬಿಡುವಿಲ್ಲದ ಕೆಲಸದ ನಡುವೆಯೂ ಅವಳ ತಾಯಿ ಸಮಯ ಮಾಡಿಕೊಂಡು ಗುರೂಜೀ ಫೋಟೋ ಮುಂದೆ ಕುಳಿತು ಧ್ಯಾನ ಮಾಡುತ್ತಿದ್ದಳು. ಶೀಲಾ ಸಹ ಕೆಲವೊಮ್ಮೆ ತಾಯಿಯ ಜೊತೆ ಕಣ್ಣುಮುಚ್ಚಿ ಕುಳಿತುಕೊಳ್ಳುತ್ತಿದ್ದಳು. ಅವಳು ಪ್ರಾರ್ಥಿಸುತ್ತಿದ್ದುದು ಒಂದೇ, ``ಗುರೂಜೀ ದೊಡ್ಡ ಆಫೀಸರ್‌ ಆಗುವ ಹಾಗೆ ಮಾಡಿ. ಆಗ ನಾನು ನನ್ನ ತಾಯಿಗೆ ಎಲ್ಲ ಸುಖ, ನೆಮ್ಮದಿ ಸಿಗುವಂತೆ ಮಾಡುತ್ತೇನೆ,'' ಎಂದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ