ನೀಳ್ಗಥೆ - ರಾಧಿಕಾ ಮನೋಹರ್‌ 

ಭಾಗ  ಒಂದು 

10 ವರ್ಷ ಎನ್ನುವುದು ಯಾರನ್ನಾದರೂ ಮರೆಯಲು ಬೇಕಾಗುವ ಅವಧಿಗೆ ಕಡಿಮೆಯದೇನಲ್ಲ. ಆದರೆ ನೆನಪಿನಾಳದಲ್ಲಿ ವಿಷ ತುಂಬಿರುವಾಗ ಮರೆಯುವುದು ಸುಲಭದ ಮಾತಲ್ಲ.

ಡಾ. ಅಶ್ವಿನ್‌ 10 ವರ್ಷಗಳ ಕಾಲ ಈ ಕಹಿ ವಿಷವನ್ನು ನಿಧಾನವಾಗಿ ನುಂಗಿದ್ದರು. ಈಗ ಅದರ ಕಹಿ ಕೊಂಚ ಕಡಿಮೆಯಾಗುತ್ತಿರುವಾಗ ಇದ್ದಕ್ಕಿದ್ದಂತೆ ಅದರ  ಪ್ರಮಾಣ ಇಮ್ಮಡಿಯಾಗಿಬಿಟ್ಟಿತು. ಅವರು ಸ್ವತಃ ವೈದ್ಯರಾದರೂ ಈ ವಿಷಕ್ಕೆ ಅವರ ಬಳಿ ಔಷಧವಿರಲಿಲ್ಲ.

ಮಧ್ಯಾಹ್ನ ಒಂದೂವರೆ ಗಂಟೆಯಾಗಿತ್ತು. ಅದು ಕ್ಲಿನಿಕ್‌ ಮುಚ್ಚುವ ಸಮಯ. ಇನ್ನೊಂದು ಪೇಶೆಂಟ್‌ನ್ನು ನೋಡುವುದು ಬಾಕಿ ಇತ್ತು. ಡಾ. ಅಶ್ವಿನ್‌ ತಮ್ಮ ಅಟೆಂಡರ್‌ಗೆ ರೋಗಿಯನ್ನು ಒಳಗೆ ಕಳುಹಿಸಲು ಹೇಳಿ ಮೇಜಿನ ಮೇಲಿದ್ದ ಫೈಲ್ ನೋಡುವುದರಲ್ಲಿ ಮಗ್ನರಾಗಿದ್ದರು. ಬಂದವರು ಎದುರಿನ ಸ್ಟೂಲ್ ಮೇಲೆ ಕುಳಿತಾಗ ಅಶ್ವಿನ್‌ ಕತ್ತೆತ್ತಿ ಅವರತ್ತ ನೋಡಿದರು.

ನೋಡುತ್ತಲೇ ಅಶ್ವಿನ್‌ಗೆ ಮೈಯಲ್ಲಿ ಬಿಸಿಯೇರಿ ನಡುಗಿದಂತಾಯಿತು. ಕಣ್ಣು ಕತ್ತಲಾಗಿ ಭಾವಶೂನ್ಯವಾಗಿ ಕುಳಿತುಬಿಟ್ಟರು. ಒಂದೆರಡು ನಿಮಿಷಗಳ ನಂತರ ಕೊಂಚ ಸಾವರಿಸಿಕೊಂಡು.....

``ನೀನು...... ಅಲ್ಲ ನೀವು.....? ’’

``ಹೌದು ನಾನೇ.....'' ಎದುರಿಗೆ ಕುಳಿತಿದ್ದ ಮಹಿಳೆ ದೃಢವಾದ ಸ್ವರದಲ್ಲಿ ಹೇಳಿ ಡಾಕ್ಟರ್‌ಮುಖವನ್ನು ನೋಡಿದರು. ಅಶ್ವಿನ್‌ ಸಹ ಅವಳ ಮುಖವನ್ನು ದಿಟ್ಟಿಸಿದರು. ಇವಳೇ ಅಲ್ಲವೇ 10 ವರ್ಷಗಳ ಕಾಲ ತಮ್ಮ ಜೀವನದ ಪಾತ್ರೆಯಲ್ಲಿ ವಿಷವನ್ನು ತುಂಬಿಸಿದವಳು ಮತ್ತು ತಾವು ಆ ವಿಷವನ್ನು ನಿಧಾನವಾಗಿ ಗುಟುಕರಿಸುತ್ತಾ ಬಂದಿದ್ದರು.......

ಅಶ್ವಿನ್‌ಗೆ ಮುಂದೇನು ಮಾತನಾಡಬೇಕೆಂದು ತಿಳಿಯಲಿಲ್ಲ. ಅನಪೇಕ್ಷಿತ ವಿಚಾರಗಳನ್ನು ಮನಸ್ಸಿನಿಂದ ಹೊರಹಾಕಿ ಒಬ್ಬ ಪ್ರೊಫೆಶನ್‌ ಡಾಕ್ಟರ್‌ತರಹ, ``ಹೇಳಿ.... ನಿಮ್ಮ ತೊಂದರೆ ಏನು?'' ಕೇಳಿದರು.

ಡಾಕ್ಟರ್‌ ಮಾತಿನಿಂದ ಸಂಕೋಚಗೊಂಡು ಆ ಮಹಿಳೆ, ``ನನಗೇನೂ ಕಾಯಿಲೆ ಇಲ್ಲ. ನಿಮ್ಮ ಜೊತೆ ಮಾತನಾಡುವುದಕ್ಕೋಸ್ಕರ ಬಂದಿದ್ದೇನೆ. ನೇರವಾಗಿ ಬಂದರೆ ನೀವು ಭೇಟಿಗೆ ಒಪ್ಪುವಿರೋ ಇಲ್ಲವೋ ಎಂದುಕೊಂಡು ಪೇಶೆಂಟ್ ರೀತಿಯಲ್ಲಿ ಬಂದೆ. ನನ್ನ ಮಾತನ್ನು ಕೇಳುವುದಕ್ಕೆ ನಿಮಗೆ ಸಮಯ ಇದೆ ಅಲ್ಲವೇ?'' ಎಂದು ಮೆಲ್ಲನೆ ಹೇಳಿದಳು.

ಡಾಕ್ಟರ್‌ ಅಶ್ವಿನ್‌ ಮೃದು ಸ್ವಭಾವದ ವ್ಯಕ್ತಿ. ಕೋಪ ಬಹಳ ಕಡಿಮೆ, ತಪ್ಪು ಕಂಡಾಗ ಸಿಟ್ಟು ಬಂದರೂ ಅದನ್ನು ಹಾಗೆ ನುಂಗಿಕೊಳ್ಳುವಂಥವರು. ಇಂದು ಆ ಮಹಿಳೆಯನ್ನು ಕಂಡಾಗ ವಿಚಲಿತರಾಗಿದ್ದರು. ಹಳೆಯ ನೆನಪುಗಳು ಮನಸ್ಸನ್ನು ಮುತ್ತಿದವು. ಆದರೂ ಆ ಮಹಿಳೆಯ ಮೇಲೆ ಅವರಿಗೆ ಕೋಪ ಬರಲಿಲ್ಲ.

ಈಗ ಅವಳು ಇದ್ದಕ್ಕಿದ್ದಂತೆ ತಮ್ಮ ಮುಂದೆ ಬಂದು ಕುಳಿತಿದ್ದಾಳೆ. ಅವಳ ಉದ್ದೇಶ ಏನಿರಬಹುದು, ತಮ್ಮ ಜೀವನವನ್ನು ಮತ್ತೊಮ್ಮೆ ಅಲ್ಲೋಲ ಕಲ್ಲೋಲಗೊಳಿಸಲೆಂದೇ? ಈಗ ತಮಗೂ ಅವಳಿಗೂ ಯಾವುದೇ ಸಂಬಂಧ ಉಳಿದಿಲ್ಲದಿರುವಾಗ ಅವಳು ಹಿಂದಿರುಗಿ ಬಂದಿರುವುದೇತಕ್ಕೆ? ಅಶ್ವಿನ್‌ಗೆ ಅವಳನ್ನು ಹೊರಗೆ ಕಳುಹಿಸಿಬಿಡುವ ಮನಸ್ಸಾಯಿತು. ಆದರೆ ಮಾತನಾಡದಿದ್ದರೆ ಅವಳ ಉದ್ದೇಶವನ್ನು ತಿಳಿಯುವುದಾದರೂ ಹೇಗೆ....? ಎಂದು ಯೋಚಿಸಿದರು.

ಅಶ್ವಿನ್‌ ತಮ್ಮ ಮನಸ್ಸನ್ನು ಶಾಂತಗೊಳಿಸಿಕೊಂಡು, ``ಈಗ ನಾನು ಮನೆಗೆ ಹೋಗುವ ಸಮಯವಾಗಿದೆ. ನೀವು ಸಾಯಂಕಾಲ ಬರುತ್ತೀರಾ?'' ಕೇಳಿದರು.

ಮಹಿಳೆ ಉತ್ಸಾಹದಿಂದ, ``ಎಷ್ಟು ಗಂಟೆಗೆ ಬರಲಿ.....?'' ಎಂದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ