``ರೀ, ಈ ಸಾರಿ ದಸರಾಗೆ 4-5 ದಿನಗಳು ರಜ ಇದೆ,'' ಉಮಾ ಕಾಫಿ ಲೋಟ ಕೈಗಿಡುತ್ತಾ ಗಂಡನಿಗೆ ಹೇಳಿದಳು.

``ರಜಾ ಇದ್ರೇನು?'' ರಾಜೀವ್ ‌ನಿರಾಸಕ್ತಿಯಿಂದ ಕೇಳಿದ.

``ನಾನು ಅಮ್ಮನ ಮನೆಗೆ ಹೋಗಬೇಕು,'' ಉಮಾ ಹೇಳಿದಳು.

``ಅಮ್ಮನನ್ನು ಒಂದು ಮಾತು ಕೇಳು,'' ರಾಜೀವ್ ‌ಹೇಳಿದ.

``ನೀವೇ ಕೇಳ್ರಿ. ನನಗೆ ಏನೇನೋ ನೆಪಗಳು ಹೇಳಕ್ಕಾಗಲ್ಲ,'' ಉಮಾ ಸಿಡುಕುತ್ತಾ ಹೇಳಿದಳು.

ಅತ್ತೆ ಸೊಸೆಗೆ ಸರಿಹೋಗಲ್ಲ. ಒಬ್ಬರ ವಿಚಾರಗಳು ಇನ್ನೊಬ್ಬರಿಗೆ ಒಪ್ಪಿಗೆಯಾಗಲ್ಲ ಎಂದು ರಾಜೀವ್ ‌ಗೆ ಗೊತ್ತಿತ್ತು. ಉಮಾ ತೀಕ್ಷ್ಣ    ಸ್ವಭಾವದವಳಾಗಿದ್ದಳು. ಅವಳು ತನ್ನ ಕೆಲಸದಲ್ಲಿ ಯಾರ ಹಸ್ತಕ್ಷೇಪವನ್ನೂ ಸಹಿಸುತ್ತಿರಲಿಲ್ಲ. ಸಣ್ಣ ವಿಷಯಕ್ಕೆ ಯಾರಾದರೂ ಏನಾದರೂ ಅಂದರೆ ದೊಡ್ಡವರು ಚಿಕ್ಕವರೆನ್ನದೆ ಮುಖದ ನೀರು ಇಳಿಸಿಬಿಡುತ್ತಿದ್ದಳು. ಅವರಿಗೆ ಮುಂದೆ ಮಾತಾಡಲು ಧೈರ್ಯವೇ ಇರುತ್ತಿರಲಿಲ್ಲ. ಅತ್ತೆಮನೆಯಲ್ಲಿ ಎಲ್ಲರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದು ಅವಳ ಮನಸ್ಸಿನಲ್ಲಿ  ಚೆನ್ನಾಗಿ ಕುಳಿತಿತ್ತು. ಅತ್ತೆ ಮಾವನನ್ನು ಅವಳು ಲೆಕ್ಕಕ್ಕೇ ಇಟ್ಟಿರಲಿಲ್ಲ. ಸಾಧಾರಣ ವಿಷಯಕ್ಕೂ ಒರಟಾಗಿ ಉತ್ತರಿಸುತ್ತಿದ್ದಳು. ಹೀಗಾಗಿ ಎಲ್ಲರೂ ಅವಳಿಂದ ಕೊಂಚ ದೂರವಿರುತ್ತಿದ್ದರು. ಮನೆಯಲ್ಲಿ ಯಾವುದೇ ಶಿಸ್ತು, ಹಿರಿಯರಿಗೆ ಗೌರವ ಇಲ್ಲದೆ ವಾತಾವರಣ ಬಿಗಿಯಾಗಿರುತ್ತಿತ್ತು.

``ಆಯ್ತು, ನಾನೇ ಕೇಳ್ತೀನಿ,'' ರಾಜೀವ್ ‌ಹೇಳಿದ ನಂತರ, `` ಈ ಬಾರಿ ರಜಾ ನಾನೂ ಅಲ್ಲೇ ಕಳೀತೀನಿ,'' ಎಂದ.

ಉಮಾಗೆ ಆಶ್ಚರ್ಯವಾಯಿತು, ``ಏನು ಸಮಾಚಾರ? ಪ್ರತಿ ಸಾರಿ ನನ್ನನ್ನು ಅಲ್ಲಿ ಬಿಟ್ಟು ವಾಪಸ್‌ ಬಂದುಬಿಡ್ತಿದ್ರಿ.''

`` ಇಲ್ಲ, ಈ ಸಾರಿ ಬರೋಣ ಅನ್ನಿಸ್ತು. ನಾನೂ ಅಲ್ಲಿಗೆ ಬರ್ತಿದ್ದೀನಿ ಅಂತ ನಿಮ್ಮ ಅಮ್ಮನಿಗೆ ಫೋನ್‌ ಮಾಡು.''

``ಬೇಡ... ಬೇಡ. ನೀವು ನನ್ನನ್ನು ಅಲ್ಲಿ ಬಿಟ್ಟು ವಾಪಸ್‌ ಬಂದ್ಬಿಡಿ, ಇಲ್ದಿದ್ರೆ ನಿಮ್ಮಮ್ಮ ಏನಾದ್ರೂ ಹೇಳ್ತಾರೆ.''

`` ಪರವಾಗಿಲ್ಲ, ನಾನು ಅಲ್ಲಿಗೆ ಬರ್ತೀನಿ,'' ರಾಜೀವ್ ‌ಗಂಭೀರ ಸ್ವರದಲ್ಲಿ ಹೇಳಿದ.

ಅಂದುಕೊಂಡಿದ್ದಂತೆ ರಾಜೀವ್ ‌ಅತ್ತೆಮನೆಯಲ್ಲಿ ರಜೆ ಆಚರಿಸುವುದನ್ನು ಕೇಳಿ ಅಮ್ಮನಿಗೆ ಖುಷಿಯಾಗಲಿಲ್ಲ. ಕಾರಣವಿಲ್ಲದೆ ಅತ್ತೆ ಮನೆಯಲ್ಲಿರುವುದು ಅವರಿಗೆ ಇಷ್ಟವಿರಲಿಲ್ಲ. ಅವರು ಅವನಿಗೆ ಎಷ್ಟೇ ಹೇಳಿದರೂ ರಾಜೀವ್ ‌ನಿರ್ಧಾರ ಮಾಡಿದನಂತೆ, `` ಅಮ್ಮಾ ನೀವೇನೂ ಯೋಚಿಸಬೇಡಿ. ಎಲ್ಲಾ ಸರಿಯಾಗಿರುತ್ತೆ,'' ಎಂದ.

ಉಮಾ ತೌರಿನಿಂದ ಹಿಂತಿರುಗಿದಾಗೆಲ್ಲಾ ತಕರಾರು ಮಾಡುವ ಹೊಸ ವಿಧಾನಗಳನ್ನು ಕಲಿತು ಬರುತ್ತಿದ್ದಳು. ಇದು ಅಮ್ಮ ಹಾಗೂ ರಾಜೀವ್ ಇಬ್ಬರಿಗೂ ಗೊತ್ತಿತ್ತು. ಆದ್ದರಿಂದ ಉಮಾ ತೌರಿಗೆ ಹೋಗುವ ಬಗ್ಗೆ ಅಮ್ಮ ಸದಾ ಅಪ್ರಸನ್ನತೆಯಿಂದಿರುತ್ತಿದ್ದರು. ರಾಜೀವ್ ಬರುವ ಸುದ್ದಿ ತಿಳಿದ ಕೂಡಲೇ ಅತ್ತೆ ಮನೆಯಲ್ಲಿ ಸ್ವಾಗತ ಸತ್ಕಾರಕ್ಕೆ ಎಲ್ಲರೂ ಅಣಿಯಾದರು. ಮನೆಯ ಮುಂದೆ ಟ್ಯಾಕ್ಸಿ ನಿಂತಾಗ ಉಮಾಳ ತಮ್ಮ ನರಹರಿ ಕ್ರಿಕೆಟ್‌ ಆಡಲು ಹೊರಟಿದ್ದವನು ಎಗರುತ್ತಾ ಬಂದ. ಅಕ್ಕ ಭಾವನನ್ನು ಸ್ವಾಗತಿಸಿ ಅವರ ಲಗ್ಗೇಜ್‌ ಒಳಗೆ ತೆಗೆದುಕೊಂಡು ಹೋದ. ಅಡುಗೆ ಮನೆಯಲ್ಲಿ ಅತ್ತೆ ಅಡುಗೆ ಮಾಡುತ್ತಿದ್ದರು. ಮಾವ ಕುರ್ಚಿಯಲ್ಲಿ ಕುಳಿತು ಪೇಪರ್‌ ಓದುತ್ತಿದ್ದರು. ಮಾವನಿಗೆ ನಮಸ್ತೆ ಹೇಳಿದ ರಾಜೀವ್ ‌ಅಡುಗೆಮನೆಗೆ ಹೋಗಿ ಅತ್ತೆಗೆ ನಮಸ್ಕರಿಸಿ, ``ಏನು ಮಾಡ್ತಿದ್ದೀರಿ? ಘಮ್ ಅಂತ ವಾಸನೆ ಬರ್ತಿದೆ. ನೀವು ಮಾಡೋ ಅಡುಗೆ, ತಿಂಡಿ ನೆನೆಸಿಕೊಂಡ್ರೆ ಬಾಯಲ್ಲಿ ನೀರು ಸುರಿಯುತ್ತೆ,'' ಎಂದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ