ಮಾನ್‌ಸೂನ್ ಪ್ರಾರಂಭವಾಗುವ ಮೊದಲೇ ಮಹಿಳೆಯರಿಗೆ ಮಳೆಗಾಲದಲ್ಲಿ ಏನನ್ನು ತೊಡಬೇಕು, ಏನನ್ನು ಬಿಡಬೇಕು ಎಂಬ ಚಿಂತೆ ಕಾಡತೊಡಗುತ್ತದೆ. ನಾವು ನಿಮಗೆ ಈ ಕಾಲದಲ್ಲಿ ಯಾವ ಉಡುಪು ಧರಿಸಬೇಕು, ಯಾವುದನ್ನು ದೂರವಿರಿಸಬೇಕು ಎಂದು ತಿಳಿಸಿಕೊಡುತ್ತೇವೆ :
– ಮಳೆಯಲ್ಲಿ ನೆನೆದರೆ ಬೇಗನೆ ಒಣಗುವಂತಹ ಬಟ್ಟೆಯನ್ನೇ ಧರಿಸಿ.
– ಮಳೆಗಾಲದಲ್ಲಿ ಕಾಟನ್ ಮತ್ತು ಲಿನೆನ್ ಬಟ್ಟೆ ಧರಿಸಬೇಡಿ. ಅವು ಬೇಗನೆ ಒಣಗುವುದಿಲ್ಲ.
– ಪಾಲಿಯೆಸ್ಟರ್, ನೈಲಾನ್, ಕ್ರೇಪ್ ಬಟ್ಟೆಗಳು ಒದ್ದೆಯಾದರೆ ಬೇಗನೆ ಒಣಗುತ್ತವೆ. ಆದ್ದರಿಂದ ಅವುಗಳನ್ನು ಬಳಸಿ.
– ಜಾರ್ಜೆಟ್, ಶಿಫಾನ್‌ನಂತಹ ಪಾರರ್ದಶಕ ಬಟ್ಟೆಗಳು ನೆನೆದಾಗ ಅಂಗಪ್ರದರ್ಶನವಾಗಬಹುದು. ಆದ್ದರಿಂದ ಅವುಗಳನ್ನು ಧರಿಸಬೇಡಿ.
– ನಿಮ್ಮ ಬಟ್ಟೆಗಳು ಮಳೆಯಲ್ಲಿ ನೆನೆದಾಗ ಇನ್ನರ್ ವೇರ್ ಕಾಣಿಸುತ್ತವೆಂದು ನಿಮಗೆ ಅನ್ನಿಸಿದರೆ ದಪ್ಪನಾದ ಸ್ಲಿಪ್ಸ್ ಮತ್ತು ಸ್ಲಾಕ್ಸ್ ಧರಿಸಿ. ಇದರಿಂದ ನಿಮ್ಮ ಇನ್ನರ್ ವೇರ್ ಕಾಣಿಸುವುದಿಲ್ಲ.
– ಅತಿ ಬಿಗಿಯಾದ ಉಡುಪು ಧರಿಸಬೇಡಿ. ಏಕೆಂದರೆ ಅವು ನೆನೆದಾಗ ನಿಮ್ಮ ಪೂರ್ತಿ ಶರೀರ ಕಾಣಿಸುತ್ತದೆ.
– ಮಳೆಗಾಲದಲ್ಲಿ ನೈಲಾನ್, ಪಾಲಿಕಾಟನ್ ಟೀಶರ್ಟ್ ಮತ್ತು ಥ್ರೀ ಫೋರ್ತ್ ಪ್ಯಾಂಟ್ ಧರಿಸುವುದು ಆರಾಮದಾಯಕವಾಗಿರುತ್ತದೆ.
– ಮಳೆಗಾಲದಲ್ಲಿ ಸಡಿಲವಾದ ಬಟ್ಟೆ ಧರಿಸಿ.
– ಪೀರಿಯಡ್ಸ್ ಸಮಯವಾದರೆ ತಪ್ಪದೆ ರೇನ್‌ಕೋಟ್ ಧರಿಸಿ. ಇದರಿಂದ ಉಡುಪು ಒದ್ದೆಯಾಗುವುದಿಲ್ಲ ಮತ್ತು ನಿಮಗೆ ಆರಾಮವಾಗಿರುತ್ತದೆ.
– ಸುಜಯಾ