ಮ್ಯಾಂಗೋ  ಪ್ಯಾಶನ್‌ ಫ್ರೂಟ್‌ ಮೂಸ್‌

ಸಾಮಗ್ರಿ : 1 ಮಾಗಿದ ಮಾವಿನಹಣ್ಣಿನ ತಿರುಳು, 50 ಗ್ರಾಂ ಕ್ರೀಂ, 10 ಗ್ರಾಂ ಪ್ಯಾಶನ್‌ ಫ್ರೂಟ್‌ ಕಂಪೋಟ್‌, ಗಾರ್ನಿಶ್‌ ಮಾಡಲು ತುಸು ಚಾಕಲೇಟ್‌, ಮ್ಯಾಂಗೋ ಜೆಲ್ಲಿ.

ವಿಧಾನ : ಮೊದಲು ಒಂದು ಬಟ್ಟಲಿಗೆ ಮಾವಿನ ತಿರುಳು, ಅರ್ಧ ಕ್ರೀಂ ಹಾಕಿ ಚೆನ್ನಾಗಿ ಗೊಟಾಯಿಸಿ ಒಂದು ಬದಿಗಿಡಿ. ನಂತರ ಉಳಿದ ಕ್ರೀಂ ಮತ್ತು ಪ್ಯಾಶನ್‌ ಫ್ರೂಟ್‌ ಕಂಪೋಟ್‌ನ್ನು ಇದೇ ರೀತಿ ಮಿಕ್ಸ್ ಮಾಡಿ. 1-2 ಗ್ಲಾಸ್‌ ತೆಗೆದುಕೊಂಡು ಮೊದಲು ಅವುಗಳಿಗೆ ಮ್ಯಾಂಗೋಕ್ರೀಂ ಪದರ ಹಾಕಿಡಿ. ಇದರ ಮೇಲೆ ಪ್ಯಾಶನ್‌ ಫ್ರೂಟ್‌ ಪದರ ಬರಲಿ. ಹೀಗೆ ಹಾಕುತ್ತಾ ಗ್ಲಾಸ್‌ ಭರ್ತಿ ಮಾಡಿ. ಚಿತ್ರದಲ್ಲಿರುವಂತೆ ಮ್ಯಾಂಗೋ ಜೆಲ್ಲಿ, ಚಾಕಲೇಟ್‌, ಕ್ರೀಂನಿಂದ ಗಾರ್ನಿಶ್‌ ಮಾಡಿ ಸವಿಯಲು ಕೊಡಿ.

ಪನೀರ್‌ ಭುರ್ಜಿ ಸ್ಯಾಂಡ್‌ವಿಚ್‌

ಸಾಮಗ್ರಿ : 200 ಗ್ರಾಂ ತುರಿದ ಪನೀರ್‌, ಹಸಿರು, ಕೆಂಪು, ಹಳದಿ ಕ್ಯಾಪ್ಸಿಕಂ ಹೋಳು (ತಲಾ ಅರ್ಧ ಕಪ್‌), 1-1 ಸಣ್ಣ ಚಮಚ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನ ಪೇಸ್ಟ್, ಅತಿ ಸಣ್ಣಗೆ ಹೆಚ್ಚಿದ 1 ದೊಡ್ಡ ಈರುಳ್ಳಿ, 2-3 ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಧನಿಯಾಪುಡಿ, ಗರಂಮಸಾಲ, 10-12 ಬ್ರೆಡ್‌ ಸ್ಲೈಸ್‌, 100 ಗ್ರಾಂ ಬೆಣ್ಣೆ.

ವಿಧಾನ : ಒಂದು ನಾನ್‌ಸ್ಟಿಕ್‌ ಪ್ಯಾನಿನಲ್ಲಿ ತುಸು ಎಣ್ಣೆ ಬಿಸಿ ಮಾಡಿ ಈರುಳ್ಳಿ ಹಾಕಿ ಬಾಡಿಸಿ. ಇದಕ್ಕೆ 3 ಬಗೆ ಕ್ಯಾಪ್ಸಿಕಂ, ಟೊಮೇಟೊ, 3 ಬಗೆ ಪೇಸ್ಟ್ ಹಾಕಿ ಬಾಡಿಸಿ. ನಂತರ ಪನೀರ್‌ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಮಸಾಲೆ ಸೇರಿಸಿ ಕೆದಕಬೇಕು. ಮಂದ ಉರಿಯಲ್ಲಿ 5 ನಿಮಿಷ ಕೈಯಾಡಿಸಿ, ಕೆಳಗಿಳಿಸಿ. ಆರಿದ ನಂತರ ಬೆಣ್ಣೆ ಸವರಿದ ಬ್ರೆಡ್‌ಗೆ ಪನೀರ್‌ ಮಿಶ್ರಣ ತುಂಬಿಸಿ. ಟೋಸ್ಟರ್‌ಗೆ ಹಾಕಿ (ಅಥವಾ ತವಾ ಮೇಲೆ ಬಿಸಿ ಮಾಡಿ) ಸ್ಯಾಂಡ್‌ವಿಚ್‌ ತಯಾರಿಸಿ. ಟೊಮೇಟೊ ಸಾಸ್‌ ಜೊತೆ ಸವಿಯಲು ಕೊಡಿ.

ಮ್ಯಾಂಗೋ ಆಲೂ ಕುರ್‌ಕುರೆ

ಸಾಮಗ್ರಿ : ಹುಳಿ ಮಾವಿನ ಸಣ್ಣ ಹೋಳು, ಬೆಂದ ಬೇಬಿ ಆಲೂ (ತಲಾ 200 ಗ್ರಾಂ), ಒಂದಿಷ್ಟು ಮಾಗಿದ ಮಾವಿನ ತಿರುಳು, ಶುಂಠಿ-ಬೆಳ್ಳುಳ್ಳಿ, ಹಸಿಮೆಣಸಿನ ಪೇಸ್ಟ್, ಬೆಲ್ಲ, ಸೀರಾಚಾ/ಹಾಟ್‌ ಚಿಲೀ ಸಾಸ್‌, ರುಚಿಗೆ ಉಪ್ಪು, ಮೆಣಸು, ಕರಿಯಲು ಎಣ್ಣೆ, ಅಲಂಕರಿಸಲು ಓಂಪುಡಿ, ಒಗ್ಗರಣೆಗೆ ಸಾಸುವೆ, ಜೀರಿಗೆ, ಸೋಂಪು.

ವಿಧಾನ : ಎಲ್ಲಕ್ಕೂ ಮೊದಲು, ಬೇಬಿ ಆಲೂಗಳ ಸಿಪ್ಪೆ ಹೆರೆದು, 70% ಬೇಯಿಸಿ. ಹೊರ ತೆಗೆದು ಆರಲು ಬಿಡಿ. ನಂತರ ಇವನ್ನು ತುಸು ಅದುಮಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿಕೊಂಡು ಮಂದ ಉರಿಯಲ್ಲಿ ಒಗ್ಗರಣೆ ಕೊಡಿ. ನಂತರ 3 ಬಗೆ ಪೇಸ್ಟ್ ಹಾಕಿ ಕೆದಕಬೇಕು. ನಂತರ ಇದಕ್ಕೆ ಮಾವಿನ ಹೋಳು, ತುರಿದ ಬೆಲ್ಲ, ಉಪ್ಪು, ಮಾವಿನ ತಿರುಳು, ಸಾಸ್‌ ಹಾಕಿ ಕೈಯಾಡಿಸಿ. ಈ ಮಿಶ್ರಣ ಬೆಂದಾಗ ಕರಿದ ಆಲೂ ಸೇರಿಸಿ. ನಂತರ ಪ್ಲೇಟ್‌ಗಳಲ್ಲಿ ಬಾಳೆಲೆ ಹರಡಿ, ಅದರ ಮೇಲೆ ಈ ಆಲೂ ಮಿಶ್ರಣ, ಹೆಚ್ಚಿದ ಕೊ.ಸೊಪ್ಪು, ಪುದೀನಾ, ಓಂಪುಡಿ ಉದುರಿಸಿ ಸವಿಯಲು ಕೊಡಿ.

ಬ್ಲ್ಯಾಕ್‌ ಗ್ರೇಪ್‌ ಗಜ್‌ಪಾಜೋ

ಸಾಮಗ್ರಿ : 100 ಗ್ರಾಂ ಸೀಡ್‌ಲೆಸ್‌ ಕಪ್ಪು ದ್ರಾಕ್ಷಿ, 5-6 ಕಾಳುಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ, ಸಕ್ಕರೆ, 2 ಕಪ್‌ ವೈಟ್‌ ಸೀಡ್‌ಲೆಸ್‌ ದ್ರಾಕ್ಷಿ ರಸ, ತುಸು ತುಂಡರಿಸಿದ ಬಾದಾಮಿ, ರೆಡ್‌ ವೈನ್‌, ಕೆಂಪು ಮೆಣಸಿನ ಚಟ್ನಿ.

ವಿಧಾನ : ಹಿಂದಿನ ರಾತ್ರಿ ನೆನೆಸಿದ ಬಾದಾಮಿಯನ್ನು ಮಾರನೇ ಬೆಳಗ್ಗೆ ಎರಡೂ ಬಗೆಯ ದ್ರಾಕ್ಷಿರಸ ಹಾಕಿ ಬ್ಲೆಂಡ್‌ ಮಾಡಿ. ನಂತರ ಇದಕ್ಕೆ ವೈನ್‌, ಸಕ್ಕರೆ, ಕಾಳುಮೆಣಸು ಹಾಕಿ ಮತ್ತೆ ಬ್ಲೆಂಡ್‌ ಮಾಡಿ ಸೋಸಿಕೊಳ್ಳಿ. ಇದನ್ನು ಮಂದ ಉರಿಯಲ್ಲಿ ಬಿಸಿ ಮಾಡಿ, ಸೂಪ್‌ ಗಟ್ಟಿಯಾಗುವಂತೆ ಕುದಿಸಿರಿ. ಇದಕ್ಕೆ ಉಪ್ಪು, ನಿಂಬೆರಸ, ಕೆಂಪು ಮೆಣಸಿನ ಚಟ್ನಿ, ಬೆರೆಸಿ ಕುದಿಸಿ ಕೆಳಗಿಳಿಸಿ. ತುಸು ಆರಿದಾಗ ಕ್ರೀಂ ಬೆರೆಸಿ ಬಿಸಿಯಾಗಿ ಸವಿಯಲು ಕೊಡಿ.

ಬಾಲಿನೆಸ್‌ ರಾ ಮ್ಯಾಂಗೋ ಪ್ರಾನ್ಸ್

ಸ್ಲಾಗಾಗಿ ಮೂಲ ಸಾಮಗ್ರಿ :  100 ಗ್ರಾಂ ಹುಳಿ ಮಾವಿನ ಹೋಳು, ಒಂದಿಷ್ಟು ತಾಜಾ ರೆಡ್‌ ಚಿಲೀ ಜೂಲಿಯೆನ್‌, ತುರಿದ ಕ್ಯಾರೆಟ್‌, ಕಾಫಿರ್‌ ಲೈಮ್ ಎಸಳು (ಗಜನಿಂಬೆ), ಹೆಚ್ಚಿದ ಕೊ.ಸೊಪ್ಪು, ಬೆಲ್ಲ, ಆ್ಯಪಲ್ ವಿನಿಗರ್‌.

ಫ್ರೈಗಾಗಿ ಸಾಮಗ್ರಿ : 250 ಗ್ರಾಂ ಪ್ರಾನ್ಸ್, ಉದ್ದುದ್ದಕ್ಕೆ ಹೆಚ್ಚಿದ ಒಂದಿಷ್ಟು ಈರುಳ್ಳಿ, ಶುಂಠಿ, ಕರಿಬೇವು, ಪುದೀನಾ, ಈರುಳ್ಳಿ ಹೂ, ನೆನೆದ ನೂಡಲ್ಸ್, ಮೊಳಕೆ ಕಾಳು, ಅರ್ಧ ಸೌಟು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಮದ್ರಾಸ್‌ ಕರೀ ಪೌಡರ್‌ (ರೆಡಿಮೇಡ್‌ ಲಭ್ಯ), ಫಿಶ್‌ ಸಾಸ್‌, ವೈಟ್‌ ಸೋಯಾ ಸಾಸ್‌, ಹುರಿದು ಪುಡಿ ಮಾಡಿದ ಕಡಲೆಬೀಜ.

ವಿಧಾನ :  ಮೇಲೆ ಹೇಳಿದಂತೆ ಸ್ಲಾಗಾಗಿ ಎಲ್ಲಾ ಸಾಮಗ್ರಿಗಳನ್ನೂ ಚೆನ್ನಾಗಿ ಬೆರೆಸಿಕೊಂಡು 2 ಗಂಟೆ ಕಾಲ ನೆನೆಯಲು ಬಿಡಿ. ನಂತರ ಒಂದು ಬಾಣಲೆಯಲ್ಲಿ  ತುಸು ಎಣ್ಣೆ ಬಿಸಿ ಮಾಡಿ ಹೆಚ್ಚಿದ ಕರಿಬೇವು, ಶುಂಠಿ, ಈರುಳ್ಳಿ ಹಾಕಿ ಬಾಡಿಸಿ. ನಂತರ ಇದಕ್ಕೆ ಶುಚಿಗೊಳಿಸಿದ ಪ್ರಾನ್ಸ್, ಮೊಳಕೆ ಕಾಳು ಹಾಕಿ ನೀರು ಚಿಮುಕಿಸಿ ಬೇಯಿಸಿ. ನಂತರ ಒಂದೊಂದಾಗಿ ಉಳಿದೆಲ್ಲ ಸಾಮಗ್ರಿ ಹಾಕಿ ಕೈಯಾಡಿಸಿ, 2 ನಿಮಿಷ ಬಿಟ್ಟು ಕೆಳಗಿಳಿಸಿ. ಇದಕ್ಕೆ ಮ್ಯಾಂಗೋ ಸ್ಲಾ ಬೆರೆಸಿ, ಮತ್ತೆ 1 ನಿಮಿಷ ಒಲೆ ಮೇಲಿರಿಸಿ ಕೆದಕಿ ಕೆಳಗಿಳಿಸಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

 

 

ಅಲ್ಫಾನ್ಸೊ ಕಾಫಿರ್‌ಲೈಮ್ ರಿಸೋಟೋ

ಮೂಲ ಸಾಮಗ್ರಿ : 150 ಗ್ರಾಂ ರಿಸೋಟೋ ಅಕ್ಕಿಯ ಅನ್ನ, ಅಗತ್ಯವಿದ್ದಷ್ಟು ಆಲಿವ್ ಆಯಿಲ್‌, ಹೆಚ್ಚಿದ ಈರುಳ್ಳಿ, ಶುಂಠಿ, ಪಾರ್ಸ್ಲೆ, ಹುಳಿಮಾವಿನ ತುರಿ, ಹೋಳು, ಕಾಫಿರ್‌ಲೈಮ್, ತುರಿದ ಪ್ಯಾರಮಾಸನ್‌ ಚೀಸ್‌, ಉಪ್ಪು, ಮೆಣಸು, ಓಮ.

ಗಾರ್ನಿಶಿಂಗ್‌ ಸಾಮಗ್ರಿ : ಒಂದಿಷ್ಟು ಫ್ರೈಡ್‌ ಗ್ಲಾಸ್‌ ನೂಡಲ್ಸ್, ತುರಿದ ಕ್ಯಾರೆಟ್‌, ತುರಿದ ಮಾವಿನ ಸಿಪ್ಪೆ, ಹೆಚ್ಚಿದ ಕೋಸು.

ವಿಧಾನ : ಬಾಣಲೆಯಲ್ಲಿ ಆಲಿವ್‌ ಎಣ್ಣೆ ಬಿಸಿ ಮಾಡಿ. ಹೆಚ್ಚಿದ ಈರುಳ್ಳಿ, ಶುಂಠಿ, ಓಮ ಹಾಕಿ ಕೆದಕಬೇಕು. ನಂತರ ಇದಕ್ಕೆ ತುರಿದ ಮಾವು, ಅದರ ಹೋಳು, ಪಾರ್ಸ್ಲೆ, ಕಾಫಿರ್‌ಲೈಮ್ ಹಾಕಿ ಕೈಯಾಡಿಸಿ. ನಂತರ ಇದಕ್ಕೆ ರಿಸೋಟೋ ಅನ್ನ, ಬಾಕಿ ಎಲ್ಲಾ ಸಾಮಗ್ರಿ ಹಾಕಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಕೊನೆಯಲ್ಲಿ ಉಪ್ಪು, ಮೆಣಸು, ಚೀಸ್‌ ಹಾಕಿ ಕ್ರೀಮೀ ಲುಕ್‌ ಬರುವಂತೆ ಕೆದಕಿ ಕೆಳಗಿಳಿಸಿ, ಆಮೇಲೆ ಇದಕ್ಕೆ ಗ್ಲಾಸ್‌ ನೂಡಲ್ಸ್ ಇತ್ಯಾದಿ ಗಾರ್ನಿಶಿಂಗ್‌ ಸಾಮಗ್ರಿ ಬೆರೆಸಿಕೊಳ್ಳಿ.

ತಾಟಿನಿಂಗು ಹಾಲು

ಸಾಮಗ್ರಿ :  ಅರ್ಧ ಲೀ. ಗಟ್ಟಿ ಹಾಲು, 8-10 ತುಂಡು ತಾಟಿನಿಂಗು (ಐಸ್‌ ಆ್ಯಪಲ್), ತುಸು ಹೆಚ್ಚಿದ ಬಾದಾಮಿ, ಏಲಕ್ಕಿ ಪುಡಿ, ಕೇಸರಿ, 50 ಗ್ರಾಂ ಸಕ್ಕರೆ.

ವಿಧಾನ : ಹಾಲು ಕಾಯಿಸಿ ಆರಲು ಬಿಡಿ. ನಂತರ 1-2 ಗಂಟೆ ಕಾಲ ಫ್ರಿಜ್‌ನಲ್ಲಿರಿಸಿ ಕೂಲ್‌ ಮಾಡಿ. ಇದಕ್ಕೆ ಕೇಸರಿ ಹಾಕಿ ನೆನೆಯಲು ಬಿಡಿ. ಐಸ್‌ ಆ್ಯಪಲ್‌ನ ಸಿಪ್ಪೆ ಸುಲಿದು ಪುಡಿ ಮಾಡಿ, ಸಕ್ಕರೆ ಸಮೇತ ಮಿಕ್ಸಿಗೆ ಹಾಕಿ, ಒಲೆ ಮೇಲೆ ಕೆದಕಿ ಕೆಳಗಿಳಿಸಿ. ತಣ್ಣಗಾದ ಹಾಲಿಗೆ ಇದನ್ನು ಬೆರೆಸಿ. ಕೊನೆಯಲ್ಲಿ ಬಾದಾಮಿ, ಏಲಕ್ಕಿ ಸೇರಿಸಿ ಸವಿಯಲು ಕೊಡಿ.

ಆಮೂರ್‌ ಜೆಲ್‌ಪೀನೋ ತಂದೂರಿ ಪ್ರಾನ್ಸ್

ಸಾಮಗ್ರಿ : 4-5 ಪ್ರಾನ್ಸ್, 50 ಗ್ರಾಂ ಹಂಗ್‌ ಕರ್ಡ್‌, 50 ಗ್ರಾಂ ಮ್ಯಾಂಗೋ ಪ್ಯೂರಿ, 25 ಗ್ರಾಂ ತಾಜಾ ಕ್ರೀಂ, ರುಚಿಗೆ ತಕ್ಕಷ್ಟು ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಮೆಣಸು, ಯೆಲ್ಲೋ ಚಿಲೀ ಪೌಡರ್‌, ಜೆಲ್‌ಪೀನೋ, ಗಾರ್ನಿಶಿಂಗ್‌ಗಾಗಿ ಚಿಲೀ ಆಯಿಲ್‌, ತುಸು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಪ್ರಾನ್ಸ್ ಗಳ ಮೇಲ್ಭಾಗ ತೆಗೆದುಬಿಡಿ. ಹಂಗ್‌ಕರ್ಡ್‌ಗೆ ಉಳಿದೆಲ್ಲ ಮಸಾಲೆ, ಉಪ್ಪು ಹಾಕಿ ಬೆರೆಸಿಡಿ. ಅದರಲ್ಲಿ ಈ ಪ್ರಾನ್ಸ್ ಹಾಕಿ 1 ಗಂಟೆ ಕಾಲ ಮ್ಯಾರಿನೇಟ್‌ ಮಾಡಿ. ನಂತರ ಚಿತ್ರದಲ್ಲಿರುವಂತೆ ಬೇಕಿಂಗ್‌ ಕಡ್ಡಿಗೆ ಸಿಗಿಸಿ, ಅದರ ಮೇಲೆ ಚಿಲೀ ಆಯಿಲ್‌ ಸವರಿ, ಗ್ರಿಲ್‌ ಮಾಡಿ. ಬಿಸಿಬಿಸಿಯಾಗಿ ಸಾಸ್‌ ಜೊತೆ ಸವಿಯಿರಿ.

ಟ್ಯಾಕೋ ಕುಲ್ಛಿ

ಸಾಮಗ್ರಿ : 150 ಗ್ರಾಂ ಕರಗಿದ ಬೆಣ್ಣೆ, 50 ಗ್ರಾಂ ಮೊಟ್ಟೆಯ ಬಿಳಿ ಭಾಗ, 175 ಗ್ರಾಂ ಐಸಿಂಗ್‌ ಶುಗರ್‌, 100 ಗ್ರಾಂ ಗೋಧಿಹಿಟ್ಟು, ಅರ್ಧ ಕಪ್‌ ಹಾಲು, ಒಂದಿಷ್ಟು ರೆಡಿಮೇಡ್‌ ಕೇಸರಿ ಕುಲ್ಛಿ.

ವಿಧಾನ : ಬೆಣ್ಣೆ, ಸಕ್ಕರೆ, ಮೊಟ್ಟೆ ಬಿಳಿ ಭಾಗ ಬೆರೆಸಿ ಇದಕ್ಕೆ ಗೋಧಿಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ತುಸು ಹಾಲು ಬೆರೆಸಿ ದೋಸೆ ಹಿಟ್ಟಿನಂತೆ ಮಾಡಿಕೊಳ್ಳಿ. ಇದನ್ನು ಅಚ್ಚುಗಳಿಗೆ ತುಂಬಿಸಿ 180 ಡಿಗ್ರಿ ಶಾಖದಲ್ಲಿ ಬೇಕ್‌ ಮಾಡಿ. ಹೊರತೆಗೆದು ಆರಿದ ನಂತರ ಚಿತ್ರದಲ್ಲಿರುವಂತೆ ಕತ್ತರಿಸಿ, ಟ್ಯಾಕೋ ಶೆಲ್‌ನಿಂದ ಅಲಂಕರಿಸಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ