ಮ್ಯಾಂಗೋ  ಪ್ಯಾಶನ್‌ ಫ್ರೂಟ್‌ ಮೂಸ್‌

ಸಾಮಗ್ರಿ : 1 ಮಾಗಿದ ಮಾವಿನಹಣ್ಣಿನ ತಿರುಳು, 50 ಗ್ರಾಂ ಕ್ರೀಂ, 10 ಗ್ರಾಂ ಪ್ಯಾಶನ್‌ ಫ್ರೂಟ್‌ ಕಂಪೋಟ್‌, ಗಾರ್ನಿಶ್‌ ಮಾಡಲು ತುಸು ಚಾಕಲೇಟ್‌, ಮ್ಯಾಂಗೋ ಜೆಲ್ಲಿ.

ವಿಧಾನ : ಮೊದಲು ಒಂದು ಬಟ್ಟಲಿಗೆ ಮಾವಿನ ತಿರುಳು, ಅರ್ಧ ಕ್ರೀಂ ಹಾಕಿ ಚೆನ್ನಾಗಿ ಗೊಟಾಯಿಸಿ ಒಂದು ಬದಿಗಿಡಿ. ನಂತರ ಉಳಿದ ಕ್ರೀಂ ಮತ್ತು ಪ್ಯಾಶನ್‌ ಫ್ರೂಟ್‌ ಕಂಪೋಟ್‌ನ್ನು ಇದೇ ರೀತಿ ಮಿಕ್ಸ್ ಮಾಡಿ. 1-2 ಗ್ಲಾಸ್‌ ತೆಗೆದುಕೊಂಡು ಮೊದಲು ಅವುಗಳಿಗೆ ಮ್ಯಾಂಗೋಕ್ರೀಂ ಪದರ ಹಾಕಿಡಿ. ಇದರ ಮೇಲೆ ಪ್ಯಾಶನ್‌ ಫ್ರೂಟ್‌ ಪದರ ಬರಲಿ. ಹೀಗೆ ಹಾಕುತ್ತಾ ಗ್ಲಾಸ್‌ ಭರ್ತಿ ಮಾಡಿ. ಚಿತ್ರದಲ್ಲಿರುವಂತೆ ಮ್ಯಾಂಗೋ ಜೆಲ್ಲಿ, ಚಾಕಲೇಟ್‌, ಕ್ರೀಂನಿಂದ ಗಾರ್ನಿಶ್‌ ಮಾಡಿ ಸವಿಯಲು ಕೊಡಿ.

ಪನೀರ್‌ ಭುರ್ಜಿ ಸ್ಯಾಂಡ್‌ವಿಚ್‌

ಸಾಮಗ್ರಿ : 200 ಗ್ರಾಂ ತುರಿದ ಪನೀರ್‌, ಹಸಿರು, ಕೆಂಪು, ಹಳದಿ ಕ್ಯಾಪ್ಸಿಕಂ ಹೋಳು (ತಲಾ ಅರ್ಧ ಕಪ್‌), 1-1 ಸಣ್ಣ ಚಮಚ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನ ಪೇಸ್ಟ್, ಅತಿ ಸಣ್ಣಗೆ ಹೆಚ್ಚಿದ 1 ದೊಡ್ಡ ಈರುಳ್ಳಿ, 2-3 ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಧನಿಯಾಪುಡಿ, ಗರಂಮಸಾಲ, 10-12 ಬ್ರೆಡ್‌ ಸ್ಲೈಸ್‌, 100 ಗ್ರಾಂ ಬೆಣ್ಣೆ.

ವಿಧಾನ : ಒಂದು ನಾನ್‌ಸ್ಟಿಕ್‌ ಪ್ಯಾನಿನಲ್ಲಿ ತುಸು ಎಣ್ಣೆ ಬಿಸಿ ಮಾಡಿ ಈರುಳ್ಳಿ ಹಾಕಿ ಬಾಡಿಸಿ. ಇದಕ್ಕೆ 3 ಬಗೆ ಕ್ಯಾಪ್ಸಿಕಂ, ಟೊಮೇಟೊ, 3 ಬಗೆ ಪೇಸ್ಟ್ ಹಾಕಿ ಬಾಡಿಸಿ. ನಂತರ ಪನೀರ್‌ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಮಸಾಲೆ ಸೇರಿಸಿ ಕೆದಕಬೇಕು. ಮಂದ ಉರಿಯಲ್ಲಿ 5 ನಿಮಿಷ ಕೈಯಾಡಿಸಿ, ಕೆಳಗಿಳಿಸಿ. ಆರಿದ ನಂತರ ಬೆಣ್ಣೆ ಸವರಿದ ಬ್ರೆಡ್‌ಗೆ ಪನೀರ್‌ ಮಿಶ್ರಣ ತುಂಬಿಸಿ. ಟೋಸ್ಟರ್‌ಗೆ ಹಾಕಿ (ಅಥವಾ ತವಾ ಮೇಲೆ ಬಿಸಿ ಮಾಡಿ) ಸ್ಯಾಂಡ್‌ವಿಚ್‌ ತಯಾರಿಸಿ. ಟೊಮೇಟೊ ಸಾಸ್‌ ಜೊತೆ ಸವಿಯಲು ಕೊಡಿ.

ಮ್ಯಾಂಗೋ ಆಲೂ ಕುರ್‌ಕುರೆ

ಸಾಮಗ್ರಿ : ಹುಳಿ ಮಾವಿನ ಸಣ್ಣ ಹೋಳು, ಬೆಂದ ಬೇಬಿ ಆಲೂ (ತಲಾ 200 ಗ್ರಾಂ), ಒಂದಿಷ್ಟು ಮಾಗಿದ ಮಾವಿನ ತಿರುಳು, ಶುಂಠಿ-ಬೆಳ್ಳುಳ್ಳಿ, ಹಸಿಮೆಣಸಿನ ಪೇಸ್ಟ್, ಬೆಲ್ಲ, ಸೀರಾಚಾ/ಹಾಟ್‌ ಚಿಲೀ ಸಾಸ್‌, ರುಚಿಗೆ ಉಪ್ಪು, ಮೆಣಸು, ಕರಿಯಲು ಎಣ್ಣೆ, ಅಲಂಕರಿಸಲು ಓಂಪುಡಿ, ಒಗ್ಗರಣೆಗೆ ಸಾಸುವೆ, ಜೀರಿಗೆ, ಸೋಂಪು.

ವಿಧಾನ : ಎಲ್ಲಕ್ಕೂ ಮೊದಲು, ಬೇಬಿ ಆಲೂಗಳ ಸಿಪ್ಪೆ ಹೆರೆದು, 70% ಬೇಯಿಸಿ. ಹೊರ ತೆಗೆದು ಆರಲು ಬಿಡಿ. ನಂತರ ಇವನ್ನು ತುಸು ಅದುಮಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿಕೊಂಡು ಮಂದ ಉರಿಯಲ್ಲಿ ಒಗ್ಗರಣೆ ಕೊಡಿ. ನಂತರ 3 ಬಗೆ ಪೇಸ್ಟ್ ಹಾಕಿ ಕೆದಕಬೇಕು. ನಂತರ ಇದಕ್ಕೆ ಮಾವಿನ ಹೋಳು, ತುರಿದ ಬೆಲ್ಲ, ಉಪ್ಪು, ಮಾವಿನ ತಿರುಳು, ಸಾಸ್‌ ಹಾಕಿ ಕೈಯಾಡಿಸಿ. ಈ ಮಿಶ್ರಣ ಬೆಂದಾಗ ಕರಿದ ಆಲೂ ಸೇರಿಸಿ. ನಂತರ ಪ್ಲೇಟ್‌ಗಳಲ್ಲಿ ಬಾಳೆಲೆ ಹರಡಿ, ಅದರ ಮೇಲೆ ಈ ಆಲೂ ಮಿಶ್ರಣ, ಹೆಚ್ಚಿದ ಕೊ.ಸೊಪ್ಪು, ಪುದೀನಾ, ಓಂಪುಡಿ ಉದುರಿಸಿ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ