ನೀತಾಳ ಫಿಸಿಕಲ್ ಪರ್ಫೆಕ್ಟ್ ಆಗಿತ್ತು, ಆದರೆ ಅವಳ ಚರ್ಮ ಅಷ್ಟು ಚಾರ್ಮಿಂಗ್ ಆಗಿರಲಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಪ್ರತಿ ದುಬಾರಿ ಕ್ರೀಮನ್ನೂ ಅವಳು ಚರ್ಮದ ಸೌಂದರ್ಯ ಹೆಚ್ಚಿಸಲು ಬಳಸುತ್ತಿದ್ದಳು. ಆದರೆ ಯಾವುದೇ ಲಾಭ ಆಗಿರಲಿಲ್ಲ. ಆಗ ಅವಳು ಈ ಬಗ್ಗೆ ತನ್ನ ಫ್ರೆಂಡ್ ಶೀಲಾಳನ್ನು ಕೇಳಿದಾಗ, ಕೇವಲ ದುಬಾರಿ ಕ್ರೀಂ ಬಳಸುವುದರಿಂದ ಚರ್ಮದ ಕಾಂತಿ ಹೆಚ್ಚದು. ಅದರ ಬದಲಿಗೆ ಚರ್ಮಕ್ಕೆ ಸೂಕ್ತ ದೈನಂದಿನ ಪೋಷಣೆ ಒದಗಿಸುವುದರಿಂದ ಗ್ಲೋ ಹೆಚ್ಚುತ್ತದೆ ಎಂದಳು. ನೀವು ಸೌಂದರ್ಯತಜ್ಞೆ ಶೀಲಾ ಮಾತನ್ನು ಒಪ್ಪುವುದಾದರೆ, ಈ ಕೆಳಗಿನ ಸಲಹೆಗಳನ್ನು ಅನುಸರಿಸಿ.
ಸ್ಕಿನ್ ಟೈಪ್ ಕ್ಲೆನ್ಸಿಂಗ್
ಟಿವಿ ಜಾಹೀರಾತುಗಳಿಗೆ ಮರುಳಾಗಿ ಹೆಂಗಸರು ಸ್ಕಿನ್ಕೇರ್ ಉತ್ಪನ್ನ ಖರೀದಿಸುವ ಕ್ರೇಜ್ ಬೆಳೆಸಿಕೊಂಡಿರುತ್ತಾರೆ. ಆದರೆ ಇಂಥವನ್ನು ಕೊಳ್ಳುವ ಮೊದಲು ನಮ್ಮ ಸ್ಕಿನ್ ಟೈಪ್ ಕಡೆ ಗಮನ ಕೊಡಬೇಕಾದುದು ಅತ್ಯಗತ್ಯ. ಏಕೆಂದರೆ ಇದನ್ನು ತಿಳಿಯದೆ ಪ್ರಾಡಕ್ಟ್ಸ್ ಬಳಸುವುದರಿಂದ ನಿರೀಕ್ಷಿತ ಪರಿಣಾಮ ಸಿಗುವುದಿಲ್ಲ. ಹೀಗಾಗಿ ಸ್ಕಿನ್ ಟೈಪ್ ತಿಳಿದುಕೊಳ್ಳಬೇಕಾದುದು ಅನಿವಾರ್ಯ.
ನಿಮ್ಮ ಚರ್ಮ ರಫ್ ಆಗಿದ್ದರೆ ಇದರರ್ಥ ನಿಮ್ಮದು ಡ್ರೈ ಸ್ಕಿನ್. ಇಂಥವರು ಸುವಾಸನೆಯುಳ್ಳ ಕ್ಲೆನ್ಸರ್ ಎಂದೂ ಬಳಸಬಾರದು, ಬದಲಿಗೆ ಸಾಫ್ಟ್ ಕ್ಲೆನ್ಸರ್ ಮಾತ್ರ ಬಳಸಬೇಕು. ನಿಮ್ಮ ಚರ್ಮದಲ್ಲಿ ದೊಡ್ಡ ದೊಡ್ಡ ರೋಮರಂಧ್ರಗಳ ಜೊತೆ ಜಿಡ್ಡುಜಿಡ್ಡಾಗಿ ಅಂಟುವಂತಿದ್ದರೆ, ಅದು ಆಯ್ಲಿ ಸ್ಕಿನ್. ಇಂಥವರು ಕೇವಲ ಆಯಿಲ್ಫ್ರೀ ಫೇಸ್ವಾಶ್ ಮಾತ್ರ ಬಳಸಬೇಕು.
ಯಾವುದೇ ಬ್ರಾಂಡ್ ವಸ್ತು ಉಪಯೋಗಿಸಿದರೂ ಉರಿ ಉರಿ ಅಥವಾ ರೆಡ್ನೆಸ್ ಕಾಣಿಸುತ್ತದೆ. ಅದುವೇ ಸೆನ್ಸಿಟಿವ್ ಸ್ಕಿನ್. ಇಂಥವರು ಸದಾ ಮೈಲ್ಡ್ ಕ್ಲೆನ್ಸರ್ ಮಾತ್ರ ಬಳಸಬೇಕು. ನಿಮ್ಮ ದೇಹದ ಚರ್ಮವನ್ನು ಟವೆಲ್ನಿಂದ ಒರಟಾಗಿ ಉಜ್ಜಬೇಡಿ. ಆಗ ಸ್ಕಿನ್ ರೆಡ್ ಆಗುತ್ತದೆ. ಇದಾವುದಕ್ಕೂ ಸೇರದ್ದೇ ನಾರ್ಮಲ್ ಸ್ಕಿನ್, ಅದು ಕ್ಲಿಯರ್ ಆಗಿರುತ್ತದೆ. ಇಂಥವರು ಯಾವುದೇ ಬಗೆಯ ಬ್ರಾಂಡ್ನ ಪ್ರಾಡಕ್ಟ್ಸ್ ಬಳಸಬಹುದು. ಅಂದರೆ ಕ್ವೆನ್ಲಿಂಗ್ ಬಳಸಿ ಬೆವರು, ಆಯಿಲ್, ಕೊಳೆ ಇತ್ಯಾದಿ ಎಲ್ಲವನ್ನೂ ತೆಗೆಯಬಹುದು.
ಟೋನಿಂಗ್
ಒಮ್ಮೊಮ್ಮೆ ಕ್ಲೆನ್ಸಿಂಗ್ ನಂತರ ಚರ್ಮದಲ್ಲಿ ತುಸು ಕೊಳೆ ಅಂಶ ಉಳಿದುಬಿಡುತ್ತದೆ. ಇದನ್ನು ಟೋನರ್ ನೆರವಿನಿಂದ ತೆಗೆಯಬೇಕು. ಇದಕ್ಕಾಗಿ ಹತ್ತಿಯನ್ನು ಟೋನರ್ನಲ್ಲಿ ಅದ್ದಿಕೊಂಡು ಮುಖ, ಕುತ್ತಿಗೆಯ ಭಾಗಕ್ಕೆ ಸವರಿಕೊಳ್ಳಿ. ಈ ತರಹದ ಎಕ್ಸ್ ಟ್ರಾ ಕ್ಲೆನ್ಸಿಂಗ್ ಎಫೆಕ್ಟ್ ನಿಮ್ಮ ಚರ್ಮದಲ್ಲಿ ಮಾಯಿಶ್ಚರ್ ಉಳಿಸುತ್ತದೆ. ಹೀಗಾಗಿ ಕ್ಲೆನ್ಸಿಂಗ್ ನಂತರ ಅಗತ್ಯ ಟೋನಿಂಗ್ ಮಾಡಿ.
ಎಕ್ಸ್ ಫಾಲಿಯೇಶನ್ನಿನ ಮಹತ್ವ
ಪ್ರತಿದಿನ ನಮ್ಮ ಚರ್ಮದಲ್ಲಿ ಲಕ್ಷಾಂತರ ಸ್ಕಿನ್ ಸೆಲ್ಸ್ ಮೂಡುತ್ತವೆ, ಒಮ್ಮೊಮ್ಮೆ ಈ ಸೆಲ್ಸ್ ಚರ್ಮದ ಪದರದ ಮೇಲೆಯೇ ಆಗಿರುತ್ತವೆ. ಆಗ ನಾವು ಇದನ್ನು ತೊಲಗಿಸಲೇಬೇಕು. ಎಕ್ಸ್ ಫಾಲಿಯೇಶನ್ ಪ್ರಕ್ರಿಯೆಯಿಂದ ಇಂಥ ಡೆಡ್ ಸ್ಕಿನ್ ಸೆಲ್ಸ್ ರಿಮೂವ್ ಮಾಡುವುದು ಸುಲಭ. ಇದರಿಂದ ಆ್ಯಕ್ನೆ, ಬ್ಲ್ಯಾಕ್ಹೆಡ್ಸ್ ನ ತೊಂದರೆಗಳಿಂದ ಮುಕ್ತಿ ಸಿಗುತ್ತದೆ. ಇದರ ಬೆಸ್ಟ್ ರಿಸಲ್ಟ್ ಗಾಗಿ ಇದನ್ನು ಟೋನಿಂಗ್ ನಂತರ, ಮಾಯಿಶ್ಚರೈಸಿಂಗ್ಗೆ ಮೊದಲೇ ಮಾಡಿ ಮುಗಿಸಬೇಕು.
ಪೌಷ್ಟಿಕ ಆಹಾರ ನಿದ್ದೆ
ನೀವು ನಿಮ್ಮ ದೈನಂದಿನ ಆಹಾರದಲ್ಲಿ ಬೇಳೆ, ಮೊಳಕೆ ಕಟ್ಟಿದ ಕಾಳು, ತಾಜಾ ತರಕಾರಿ, ಹಣ್ಣು ಹಂಪಲುಗಳನ್ನು ಧಾರಾಳವಾಗಿ ಸೇರಿಸಿಕೊಳ್ಳಿ. ಚಿಕನ್, ಮೊಟ್ಟೆ, ಮೀನು ಸಹ ಓ.ಕೆ, ಆದರೆ ಆದಷ್ಟೂ ರೆಡ್ಮೀಟ್ ಅವಾಯ್ಡ್ ಮಾಡಿ. 6 ಗಂಟೆಗಳ ಕಾಲ ಚೆನ್ನಾಗಿ ನಿದ್ದೆ ಮಾಡಿ. ಆಗ ಡಲ್ ಸ್ಕಿನ್, ಡಾರ್ಕ್ ಸರ್ಕಲ್ನಂಥ ತೊಂದರೆ ಮಾಯವಾಗುತ್ತವೆ. ಈ ರೀತಿ ಡೇಲಿ ನಿಮ್ಮ ಆಹಾರದತ್ತ ನಿಗಾವಹಿಸಿದರೆ, ಸ್ಕಿನ್ಕೇರ್ ಸಂಪನ್ನಗೊಂಡು ನೀವು ದಿನೇದಿನೇ ಬ್ಯೂಟಿಫುಲ್ ಆಗಿ ಕಾಣುವಿರಿ.
ಮಾಯಿಶ್ಚರೈಸಿಂಗ್
ಪ್ರತಿಯೊಂದು ಬಗೆಯ ಸ್ಕಿನ್ ಸ್ವಸ್ಥವಾಗಿರಲು ಆರ್ದ್ರತೆ ಬಲು ಅಗತ್ಯ. ಬದಲಾಗುತ್ತಿರುವ ಸೀಸನ್ಗೆ ತಕ್ಕಂತೆ ಚರ್ಮದ ಅಗತ್ಯಗಳೂ ಬದಲಾಗುತ್ತಿರುತ್ತವೆ. ಹೀಗಾಗಿ ಆರೋಗ್ಯಕರ ಚರ್ಮಕ್ಕಾಗಿ ಪ್ರತಿ ಸೀಸನ್ಗೂ ಅನ್ವಯವಾಗುವಂತೆ ಬೇರೆ ಬೇರೆ ಮಾಯಿಶ್ಚರೈಸರ್ ಬಳಸುತ್ತಿರಬೇಕು. ಏಕೆಂದರೆ ಡ್ರೈ ಸ್ಕಿನ್ ನವೆ, ಕೆರೆತಗಳಂಥ ಸಮಸ್ಯೆಗೆ ದಾರಿ ಆಗುತ್ತದೆ. ಅದೇ ನಿಮ್ಮದು ಆಯ್ಲಿ ಸ್ಕಿನ್ ಆಗಿದ್ದರೆ, ಆಯಿಲ್ ಫ್ರೀ ಮಾಯಿಶ್ಚರೈಸರ್ ಮಾತ್ರ ಬಳಸಬೇಕು ಎಂದು ನೆನಪಿಡಿ. ಇದರಿಂದಾಗಿ ರೋಮರಂಧ್ರಗಳು ಬ್ಲಾಕ್ ಆಗದ ಕಾರಣ ಆ್ಯಕ್ನೆ, ಮೊಡವೆಗಳಂಥ ಗೊಡವೆ ಇರುವುದಿಲ್ಲ.
ಸನ್ಸ್ಕ್ರೀನ್ನಿಂದ ಎಕ್ಸ್ ಟ್ರಾ ಕೇರ್
ಸೂರ್ಯನ UV ಕಿರಣಗಳು ನಮ್ಮ ಚರ್ಮವನ್ನು ಡ್ಯಾಮೇಜ್ ಮಾಡಬಹುದು. ಹೀಗಾಗಿ ಸನ್ಸ್ಕ್ರೀನ್ ಲೋಶನ್ ಬಳಸಿ ಚರ್ಮಕ್ಕೆ ರಕ್ಷಣೆ ಒದಗಿಸಿ. ಇದಕ್ಕಾಗಿ 25-30 SPH ಸನ್ಸ್ಕ್ರೀನ್ ಅಪ್ಲೈ ಮಾಡಿ. ಇದನ್ನು ಕೇವಲ ಬೇಸಿಗೆಯಲ್ಲಿ ಮಾತ್ರ ಬಳಸಬೇಕು ಎಂದು ಭಾವಿಸದಿರಿ. ಬದಲಿಗೆ ಇದನ್ನು ಎಲ್ಲಾ ಸೀಸನ್ನಲ್ಲೂ ಬಳಸಬೇಕು, ಆಗ ಉತ್ತಮ.
– ಪರಿಮಳಾ ಭಟ್
ಅನಗತ್ಯ ಕೂದಲ ನಿವಾರಣೆಯಿಂದ ಹೆಚ್ಚು ಕಾಂತಿ
ನೀವು ಸಂಜೆಯ ಪಾರ್ಟಿಗೆ ಅಥವಾ ಫ್ರೆಂಡ್ಸ್ ಜೊತೆ ಪ್ರವಾಸ ಹೊರಟಿದ್ದೀರಾ? ಇದಕ್ಕೆಲ್ಲ ನೀವು ಪರ್ಫೆಕ್ಟ್ ಡ್ರೆಸ್ಗೆ ಹೆಚ್ಚಿನ ಮಹತ್ವ ಕೊಡುವಿರಿ. ಆದರೆ ಎಷ್ಟೋ ಸಲ ಅನಗತ್ಯ ಕೂದಲಿನ ಕಾರಣ ನೀವು ನಿಮ್ಮ ಅಚ್ಚುಮೆಚ್ಚಿನ ಡ್ರೆಸ್ ಕುರಿತಾಗಿ ಕಾಂಪ್ರಮೈಸ್ ಆಗಬೇಕಾಗುತ್ತದೆ.
ತಯಾರಿಯ ಕೊನೆ ಹಂತದಲ್ಲಿ ನಿಮ್ಮ ಬಳಿ ಹೆಚ್ಚಿನ ಸಮಯ ಇರುವುದಿಲ್ಲ. ಹೀಗಾಗಿ ಬ್ಯೂಟಿ ಪಾರ್ಲರ್ಗೆ ಹೋಗಲಿಕ್ಕೂ ಆಗುವುದಿಲ್ಲ. ಜೊತೆಗೆ ನೀವು ಪಾರ್ಲರ್ಗೆ ಹೋದಾಗ ಅದು ಖಾಲಿ ಇದ್ದು ನಿಮ್ಮ ಕೆಲಸ ಬೇಗ ಆಗುತ್ತದೆ ಎಂಬ ಗ್ಯಾರಂಟಿ ಇಲ್ಲ.
ಈ ಟೆನ್ಶನ್ ತಪ್ಪಿಸಲು ಎಲ್ಲಕ್ಕೂ ಸುಲಭ ವಿಧಾನ ಎಂದರೆ, ಮನೆಯಲ್ಲೇ ವ್ಯಾಕ್ಸಿಂಗ್ ಮಾಡಿಕೊಳ್ಳುವುದು. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಇಂಥ ಹೇರ್ ರಿಮೂವಲ್ ಕ್ರೀಂ ಧಾರಾಳವಾಗಿ ದೊರಕುತ್ತದೆ. ಅದನ್ನು ಬಳಸಿಕೊಂಡು ನೀವು ಪ್ರೊಫೆಶನಲ್ ರಿಸಲ್ಟನ್ನೇ ಪಡೆಯಬಹುದು! ಇದನ್ನು ನೀವು ಅತಿ ಕಡಿಮೆ ವೆಚ್ಚ, ಸಮಯದಲ್ಲಿ ಪಡೆಯಬಹುದು. ಈ ಕ್ರೀಂ ಅನಗತ್ಯ ಕೂದಲಿನಿಂದ ಮುಕ್ತಿ ಕೊಡುವುದಲ್ಲದೆ, ಚರ್ಮದ ಆರ್ದ್ರತೆ ಕಾಪಾಡುತ್ತದೆ.