ಆ ದಿನ ಜುಲೈ 29, ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಇತ್ತು. ಅಂದು ಕಿಟ್ಟಿ ಮತ್ತು ಗುಂಡ ಒಂದು ಸಿನಿಮಾ ನೋಡಲು ಹೋದರು. ಚಿತ್ರದಲ್ಲಿ ಒಂದು ಗಂಭೀರ ದೃಶ್ಯ. ಅಭಯಾರಣ್ಯದಲ್ಲಿ ಓಡುತ್ತಿದ್ದ ನಾಯಕಿ ಪ್ರಜ್ಞೆತಪ್ಪಿ ಬಿದ್ದೇಬಿಟ್ಟಳು. ಅವಳನ್ನು ಅರಸುತ್ತಾ ಬಂದ ನಾಯಕ ಎದುರಿಗೆ ಬರುತ್ತಿದ್ದ ಒಂದು ಹುಲಿಯನ್ನು ಕಂಡು ಶಾಕ್ ಆಗಿ ನಿಂತ. ಇದನ್ನು ನೋಡಿ ಗೆಳೆಯರು ಬೆಚ್ಚಿದರು.
ಕಿಟ್ಟಿ : ನೀನು ಹೇಳೋ ಗುಂಡ, ಈಗ ಹೀರೋ ಅವಳನ್ನು ಬಚಾವ್ ಮಾಡುತ್ತಾನಾ ಇಲ್ವಾ? ಒಂದು ಪಕ್ಷ ನೀನೇ ಅವನ ಸ್ಥಾನದಲ್ಲಿ ಇದ್ದಿದ್ದರೆ ಆಗ ಏನು ಮಾಡುತ್ತಿದ್ದೆ. ಹುಲಿ ಜೊತೆ ಹೋರಾಡಿ ಅವಳನ್ನು ಕಾಪಾಡುತ್ತಿದ್ದೆಯಾ?
ಗುಂಡ : ಖಂಡಿತಾ ಇಲ್ಲ! ನಾನಂತೂ ಹುಲಿಯನ್ನೇ ಕಾಪಾಡುತ್ತಿದ್ದೆ. ಬೆಳಗ್ಗಿನಿಂದ `ಹುಲಿ ರಕ್ಷಿಸಿ,’ `ಹುಲಿಯನ್ನು ಕಾಪಾಡಿ,’ ಅಂತ ವಾಟ್ಸ್ಅ್ಯಪ್, ಫೇಸ್‌ಬುಕ್‌ಗಳಲ್ಲಿ ಮೆಸೇಜ್ ಓದಿ ಓದಿ ಅಷ್ಟೂ ಮಾಡದಿದ್ದರೆ ಹೇಗೆ?
ಕಿಟ್ಟಿ ಅಂದು ಮನೆಯಲ್ಲಿ ಒಬ್ಬನೇ ಇದ್ದ. ತಕ್ಷಣ ತನ್ನ ಗರ್ಲ್ ಫ್ರೆಂಡ್‌ಗೆ ಫೋನ್ ಮಾಡಿ ಮನೆಗೆ ಕರೆಸಿಕೊಂಡ. “ಬೇಬಿ, ಬೇಗ ಬಾ….. ಈಗ ಮನೆಯಲ್ಲಿ ಯಾರೂ ಇಲ್ಲ. ಮಮ್ಮಿ ಡ್ಯಾಡಿ ಯಾರದೋ ಮದುವೆಗೆ ಹೋಗಿದ್ದಾರೆ, ಬರಲು ತಡವಾಗುತ್ತೆ.”
ಸ್ಮಿತಾ ಸ್ಟೈಲಾಗಿ ಮೇಕಪ್ ಮಾಡಿಕೊಂಡು ಫ್ರೆಶ್ ಮೂಡ್‌ನಲ್ಲಿ ಬಾಯ್‌ಫ್ರೆಂಡ್ ಮನೆಗೆ ಬಂದಳು. ಬಂದವಳೇ ಕಿಟ್ಟಿಯನ್ನು ಗಟ್ಟಿಯಾಗಿ ತಬ್ಬಿಕೊಂಡಳು. ಅವನ ಕೆನ್ನೆಗೆ ಒಮ್ಮೆ ಚುಂಬಿಸಿದಳು.
ಕಿಟ್ಟಿ ಸ್ಮಿತಾಳನ್ನು ತನ್ನ ಕೋಣೆಗೆ ಕರೆದೊಯ್ದ. ಅವಳನ್ನು ಮಂಚದ ಮೇಲೆ ಕೂರಿಸಿ, ಕೋಣೆಯ ಎಲ್ಲಾ ಕಿಟಕಿ, ಬಾಗಿಲು ಭದ್ರಪಡಿಸಿದ. ರೂಮ್ ಫ್ರೆಶ್‌ನರ್‌ನಿಂದ ಕೋಣೆಗೆ ಪರಿಮಳ ತುಂಬಿಸಿದ. ಕೊನೆಯಲ್ಲಿ ಕೋಣೆಯ ಲೈಟ್ಸ್ ಸಹ ಆಫ್ ಮಾಡಿದ. ಸ್ಮಿತಾ ಹತ್ತಿರ ಹೋಗಿ ಮೆಲ್ಲಗೆ ಅವಳ ಕಿವಿಯಲ್ಲಿ, “ಬೇಬಿ, ನನ್ನ ಈ ಹೊಸ ವಾಚ್ ನೋಡು, ಕತ್ತಲೆಯಲ್ಲಿ ಇದರ ರೇಡಿಯಂ ಮುಳ್ಳುಗಳು ಎಷ್ಟು ಫಳಫಳ ಹೊಳೆಯುತ್ತೆ ಗೊತ್ತಾ…..?” ಎನ್ನುವುದೇ?
ರತ್ನಾಳಿಗೆ ಮಹಾ ಮರೆವಿನ ಸ್ವಭಾವ. ಒಮ್ಮೆ ಶಾಪಿಂಗ್‌ಗೆಂದು ದೂರದ ಮಾಲ್‌ಗೆ ಹೊರಟಳು. ಬೇಕಾದಷ್ಟು ಖರೀದಿ ಮಾಡಿದ್ದು ಆಯಿತು. ಖುಷಿಯಾಗಿ ಹಾಡು ಹೇಳುತ್ತಾ, ಪಾರ್ಕಿಂಗ್ ಸ್ಲಾಟ್‌ಗೆ ಬಂದು ನೋಡುತ್ತಾಳೆ… ತಾನು ಪಾರ್ಕ್ ಮಾಡಿದ್ದ ಹೊಸ ಕಾರೇ ಇಲ್ಲ! ಓಹೋ, ಯಾರೋ ತನ್ನ ಕಾರು ಕದ್ದುಬಿಟ್ಟಿದ್ದಾರೆ ಎನಿಸಿತು. ತಕ್ಷಣ ಅವಳು ಪೊಲೀಸರಿಗೆ ಫೋನ್ ಮಾಡಿ ತನ್ನ ಕಾರಿನ ನಂಬರ್ ಇತ್ಯಾದಿ ಸಮಸ್ತ ವಿವರ ತಿಳಿಸಿದಳು. ತನ್ನ ಲೊಕೇಶನ್ ಹಾಗೂ ಪಾರ್ಕಿಂಗ್ ಜಾಗದ ವಿವರ ಸಹ ನೀಡಿದಳು.
ಅದಾಗಿ ಅರ್ಧ ಗಂಟೆ ಕಳೆದ ಮೇಲೆ ತನ್ನ ಗಂಡನಿಗೂ ಫೋನ್ ಮಾಡಿದಳು. ಬಲು ನಿಧಾನವಾಗಿ ತಡವರಿಸುತ್ತಾ, “ಡಾರ್ಲಿಂಗ್, ಐಯಾಮ್ ವೆರಿ ಸಾರಿ…. ಅದೇನಾಯ್ತೋ ಗೊತ್ತಿಲ್ಲ…. ಇಲ್ಲ ಇಲ್ಲ…. ಇದರಲ್ಲಿ ನನ್ನ ತಪ್ಪೇನೂ ಇಲ್ಲ. ಶಾಪಿಂಗ್ ಮುಗಿಸಿ ವಾಪಸ್ಸು ಬಂದು ನೋಡ್ತೀನಿ…. ಯಾರೋ ಪಾಪಿಗಳು ನಮ್ಮ ಕಾರು ಕದ್ದುಬಿಟ್ಟಿದ್ದಾರೆ. ಏನ್ರಿ, ಬೇಗ ಇಲ್ಲಿಗೆ ಬರ್ತೀರಾ…..”
ರತ್ನಾಳಿಗೆ ಗಂಡ ಖಂಡಿತಾ ತನ್ನನ್ನು ಬೇಕಾದಷ್ಟು ಬೈದು ರೇಗಾಡುತ್ತಾನೆ ಎನಿಸಿತು. ಆದರೆ ಆ ಕಡೆಯಿಂದ ಶಾಂತ ದನಿಯಲ್ಲಿ ಆತ, “ನೀನಂತೂ ಮರೆಗುಳಿ ಮಹಾದೇವಿ! ನಾನೇ ಅಲ್ಲವೇ ಮನೆಯಿಂದ ಬಂದು ನಿನ್ನನ್ನು ಮಾಲ್‌ನಲ್ಲಿ ಡ್ರಾಪ್ ಮಾಡಿ ಕಾರು ತೆಗೆದುಕೊಂಡು ಆಫೀಸಿಗೆ ಹೊರಟಿದ್ದು…..”
ಸಧ್ಯ! ರತ್ನಾಳಿಗೆ ಜೀವದಲ್ಲಿ ಜೀವ ಬಂತು. ಕಾರು ಉಳಿಯಿತಲ್ಲಾ ಅಷ್ಟೇ ಸಾಕು ಎನಿಸಿತು. ಈಗ ಎಂದಿನಂತೆ ರೋಫ್ ಹಾಕುತ್ತಾ, “ಓಕೆ ಓಕೆ….. ನಾನು ಏನೋ ಜೋಕ್‌ಗೋಸ್ಕರ ಹೇಳಿದೆ ಅಷ್ಟೆ, ಅದಿರಲಿ ಬೇಗ ಬಂದು ನನ್ನನ್ನು ಪಿಕ್‌ಅಪ್ ಮಾಡಿ ಲೇಡೀಸ್ ಕ್ಲಬ್ಬಿಗೆ ಡ್ರಾಪ್ ಮಾಡಿ. ಈಗ ತಾನೇ ನಾನಿಲ್ಲಿ ಶಾಪಿಂಗ್ ಮಾಡಿದ್ದನ್ನೆಲ್ಲ ಅವರಿಗೆ ತೋರಿಸಬೇಕಿದೆ…..”
ಅದಕ್ಕೆ ಆತ ಸೀರಿಯಸ್ ಆಗಿ ರೇಗಾಡುತ್ತಾ , “ಬರಬೇಕು ಅಂದ್ರೆ ಎಲ್ಲಿಂದ ಬರಲಿ…. ನೀನು ಪೊಲೀಸರಿಗೆ ಕಾರಿನ ವಿವರ ನೀಡಿ ಕಂಪ್ಲೇಂಟ್ ಕೊಟ್ಟಿದ್ದೀಯಾ…. ಅದನ್ನು ನೋಡಿ ಹುಡುಕುತ್ತಾ ಬಂದು ನನ್ನನ್ನು ಅರೆಸ್ಟ್ ಮಾಡಿದ್ದಾರೆ. ಮೊದಲು ಈ ಪೊಲೀಸರಿಗೆ ಅರ್ಥವಾಗುವಂತೆ `ನಾನು ನಿನ್ನ ಕಾರು ಕದ್ದಿಲ್ಲ!’ ಅಂತ ಹೇಳು……!!!
‘ವಾಟ್ಸ್ಆ್ಯಪ್‌ನಲ್ಲಿ ಸಂದೇಶ ಕಳುಹಿಸುತ್ತಾ, ಪರಸ್ಪರ ವೈಯಕ್ತಿಕವಾಗಿ ಭೇಟಿಯಾಗದೆ, ಫೋನಿನಲ್ಲೇ ಬಹಳ ದಿನಗಳಿಂದ ಗುಂಡಗುಂಡಿ ಪ್ರೇಮಿಗಳಾಗಿದ್ದರು.
ಗುಂಡ : ಆಹಾ ಪ್ರಿಯೆ, ಪ್ರೇಯಸಿ, ಒಲವಿನ ರತಿ…. ನೀನಂತೂ ಧರೆಗಿಳಿದ ದೇವತೆ! ನಿನ್ನ ಈ ಕೋಮಲ ಸೌಂದರ್ಯವನ್ನು ಎಷ್ಟು ವರ್ಣಿಸಿದರೂ ಸಾಲದು ಎನಿಸುತ್ತೆ…… ಬೇಗ ಇಂಥ ಇನ್ನಷ್ಟು ಫೋಟೋ ಕಳುಹಿಸಿಕೊಡು!
ಗುಂಡಿ : ಓಹ್….ವೆರಿ ನೈಸ್, ಥ್ಯಾಂಕ್ಸ್ ಸೋ ಮಚ್.
ಗುಂಡ : ಅದು ಸರಿ ಬೇಬಿ, ನೀನು ನಿನ್ನ ಈ ಬ್ಯೂಟಿ, ಗ್ಲಾಮರ್ ಇದನ್ನೆಲ್ಲ ಹೇಗೆ ಇಷ್ಟು ಪರ್ಫೆಕ್ಟ್ ಆಗಿ ಮೇಂಟೇನ್ ಮಾಡ್ತೀಯಾ?
ಗುಂಡಿ : ಓ ಅದಾ…. ಅದೇ ಫೋಟೋಶಾಪ್. ಕ್ಯಾಮೆರಾ ಫಿಲ್ಟರ್, ಫೋನ್ ಎಡಿಟರ್…
ಕಿಟ್ಟಿ ಬಲು ಜಿಪುಣ. ಬ್ಯಾಂಕಿನಲ್ಲಿ ಕ್ಯಾಶಿಯರ್ ಆಗಿದ್ದವನು ಎಲ್ಲದಕ್ಕೂ ಬಲು ಲೆಕ್ಕ ಹಾಕುತ್ತಿದ್ದ. ಮನೆಯಲ್ಲಿ ಸಣ್ಣಪುಟ್ಟ ಖರ್ಚಿನ ವ್ಯತ್ಯಾಸ ಆದರೂ ರೇಖಾಳ ಜೀವ ಹಿಂಡುತ್ತಿದ್ದ. ಮಗು ಈ ತಿಂಗಳು ಏಕೆ ಇಷ್ಟು ಹಾಲಿನ ಡಬ್ಬಾ ಖರ್ಚು ಮಾಡಿದೆ ಎಂದೆಲ್ಲ ಕೇಳುತ್ತಿದ್ದ.
ಅವನಿಗೆ ಬುದ್ಧಿ ಕಲಿಸಲೇಬೇಕು ಎಂದು ರೇಖಾ ನಿರ್ಧರಿಸಿದಳು.
ಅಂದು ಜನವರಿ ತಿಂಗಳ ಕೊನೆಯ ದಿನ. ಬೆಳಗ್ಗೆ ಪೇಪರ್ ಹಿಡಿದು ಕುಳಿತ ಕಿಟ್ಟಿ ಜೋರಾಗಿ ಕಿರುಚಿದ, “ಕಾಫಿ…. ಕಾಫಿ!”
“ನೋಡ್ರಿ, ನೀವು ಕೊಟ್ಟ ಸಂಬಳದ ಹಣ ನಿನ್ನೆ 30ನೇ ತಾರೀಖಿಗೇ ಮುಗಿದುಹೋಯ್ತು. ಇವತ್ತು ಎಲ್ಲವನ್ನೂ ಪಕ್ಕದ ಮನೆಯಿಂದ ಸಾಲ ತಂದಿದ್ದೇನೆ. 1 ಕಾಫಿಗೆ 20/ ರೂ., ತಿಂಡಿಗೆ 50, ಊಟಕ್ಕೆ 100, ಸಂಜೆ ಬಜ್ಜಿ ಬೋಂಡ ಅಂದ್ರೆ 25/ ಕೊಡಬೇಕಾಗುತ್ತೆ. ಗೊತ್ತಾಯ್ತಾ?
ಜಾಣ ಕಿಟ್ಟಿ ಸುಮ್ಮನಿರುತ್ತಾನೆಯೇ? “ನಿನ್ನೆಯ ಅನ್ನ ಸಾರು ಫ್ರಿಜ್‌ನಲ್ಲಿ ಉಳಿದಿದೆ ಅಲ್ವಾ? ಅದರಲ್ಲೇ ಮ್ಯಾನೇಜ್ ಮಾಡ್ತೀನಿ ಬಿಡು!” ಎಂದು ಅವಳ ಮಾತನ್ನೇ ತಿರುಗಿಸುವುದೇ?
ಬಹಳ ಹೊತ್ತಿನಿಂದ ಪತ್ನಿ ಬೇಸರದಲ್ಲಿ ಕುಳಿತಿರುವುದನ್ನು ಗಮನಿಸಿದ ಪತಿ ವಿಚಾರಿಸಿದ.
ಪತಿ : ಏನಾಯ್ತು? ಬಹಳ ಚಿಂತೆಯಲ್ಲಿರುವ ಹಾಗಿದೆ.
ಪತ್ನಿ : ಏನೋ…. ಆರೋಗ್ಯ ಸರಿ ಇಲ್ಲ ಬಿಡಿ.
ಪತಿ : ಆರೋಗ್ಯ ಸರಿ ಇಲ್ಲವೇ? ತಕ್ಷಣ ಡಾಕ್ಟರ್ ಬಳಿ ಹೋಗಿ ತೋರಿಸಬೇಕಿತ್ತು.
ಪತ್ನಿ : ಅವರ ಬಳಿ ಹೋಗಿದ್ದರಿಂದಲೇ ಚಿಂತೆ ಜಾಸ್ತಿ ಆಗಿರುವುದು.
ಪತಿ : ಯಾಕೆ ಏನಾಯ್ತು? ಸಿನಿಮಾದಲ್ಲಿ ತೋರಿಸೋ ಹಾಗೆ ಸಡನ್ನಾಗಿ ನಿನಗೆ ಬ್ಲಡ್ ಕ್ಯಾನ್ಸರ್ ಅಂದ್ರಾ?
ಪತ್ನಿ : ಬ್ಲಡ್ ಕ್ಯಾನ್ಸರ್ ಲ್ಯುಕೇಮಿಯಾ ಅಲ್ಲ…. ನನ್ನ ಬ್ಲಡ್ ಟೆಸ್ಟ್ ಮಾಡಿ ಶಾಪಿಂಗ್ ಮೇನಿಯಾ ಆಗಿದೆ ಅಂದ್ರು. ಇದಕ್ಕೆ ಪರಿಹಾರ ಅಂದ್ರೆ 4 ಮಾಲ್ ಹತ್ತಿಳಿದು 45 ಲಕ್ಷದಷ್ಟು ಖರ್ಚು ಮಾಡಿ ಧಾರಾಳ ಶಾಪಿಂಗ್ ಮಾಡಬೇಕಂತೆ!
ಪತ್ನಿ : ಏನ್ರಿ, ಸದಾ ಈ ಸೀರಿಯಲ್‌ಗಳಲ್ಲಿ ಪರ್ಸನಲ್ ಸೀಕ್ರೆಟ್, ಟಾಪ್ ಸೀಕ್ರೆಟ್ ಅಂತ ಇರ್ತಾರೆ….. ಹಾಗಂದ್ರೇನು?
ಪತಿ : ನೋಡು, ಸರಿಯಾಗಿ ತಿಳಿದುಕೋ. ನಾನು ನಿನಗೆ ಇಷ್ಟ ಅಂತ ಮದುವೆ ಆದೆ, ಅದು ಪರ್ಸನಲ್. ನಿನ್ನ ಫ್ರೆಂಡ್ ರಾಧಿಕಾ ನನಗೆ ಇಷ್ಟ, ಅದು ಸೀಕ್ರೆಟ್. ನಿನ್ನ ಫ್ರೆಂಡ್‌ಗೆ ನಾನು ಅಂದ್ರೆ ಬಹಳ ಬಹಳ ಇಷ್ಟ ಅಂತ ಆಗಾಗ ನಾವು ಮೀಟ್ ಮಾಡ್ತೀವಿ, ಅದು ಟಾಪ್ ಸೀಕ್ರೇಟ್…..
ಗಂಡ ಇನ್ನೂ ಏನೋ ಹೇಳುತ್ತಲಿದ್ದಾಗಲೇ ಧಡ್ ಅಂತ ಅವನ ತಲೆ ಮೇಲೆ ಏನೋ ಬಡಿದು, ಹಗಲಿನಲ್ಲೇ ಅವನು ನಕ್ಷತ್ರಗಳನ್ನು ಎಣಿಸತೊಡಗಿದ.
ಗುಂಡ : ಅಲ್ಲ, `ಮಿ. ಇಂಡಿಯಾ’ ಸಿನಿಮಾದಲ್ಲಿ ಆ ವಿಲನ್ ಆಗಾಗ `ಮುಗ್ಯಾಂಬೋ ಖುಷ್ ಹುವಾ’ ಅಂತ ಇರ್ತಾನಲ್ಲ, ಮುಗ್ಯಾಂಬೋ ಅಂದ್ರೆ ಅವನೇ ಅಂತ ಗೊತ್ತಾಯ್ತು. ಅವನು ಆಗಾಗ ಖುಷಿಯಾಗಿ ಹೇಗೆ ಇರಬಲ್ಲ ಅಂತೀನಿ…..
ಕಿಟ್ಟಿ : ಅದಾ ನಿನ್ನ ಡೌಟು? ನಿನಗೆ ಗೊತ್ತಿಲ್ಲದ ಇನ್ನೊಂದು ವಿಷಯವಿದೆ…. ಮುಗ್ಯಾಂಬೋಗೆ ಮದುವೇನೇ ಆಗಿರಲಿಲ್ಲವಂತೆ!