ಆ ದಿನ ಜುಲೈ 29, ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಇತ್ತು. ಅಂದು ಕಿಟ್ಟಿ ಮತ್ತು ಗುಂಡ ಒಂದು ಸಿನಿಮಾ ನೋಡಲು ಹೋದರು. ಚಿತ್ರದಲ್ಲಿ ಒಂದು ಗಂಭೀರ ದೃಶ್ಯ. ಅಭಯಾರಣ್ಯದಲ್ಲಿ ಓಡುತ್ತಿದ್ದ ನಾಯಕಿ ಪ್ರಜ್ಞೆತಪ್ಪಿ ಬಿದ್ದೇಬಿಟ್ಟಳು. ಅವಳನ್ನು ಅರಸುತ್ತಾ ಬಂದ ನಾಯಕ ಎದುರಿಗೆ ಬರುತ್ತಿದ್ದ ಒಂದು ಹುಲಿಯನ್ನು ಕಂಡು ಶಾಕ್‌ ಆಗಿ ನಿಂತ. ಇದನ್ನು ನೋಡಿ ಗೆಳೆಯರು ಬೆಚ್ಚಿದರು.

ಕಿಟ್ಟಿ : ನೀನು ಹೇಳೋ ಗುಂಡ, ಈಗ ಹೀರೋ ಅವಳನ್ನು ಬಚಾವ್ ಮಾಡುತ್ತಾನಾ ಇಲ್ವಾ? ಒಂದು ಪಕ್ಷ ನೀನೇ ಅವನ ಸ್ಥಾನದಲ್ಲಿ ಇದ್ದಿದ್ದರೆ ಆಗ ಏನು ಮಾಡುತ್ತಿದ್ದೆ. ಹುಲಿ ಜೊತೆ ಹೋರಾಡಿ ಅವಳನ್ನು ಕಾಪಾಡುತ್ತಿದ್ದೆಯಾ?

ಗುಂಡ : ಖಂಡಿತಾ ಇಲ್ಲ! ನಾನಂತೂ ಹುಲಿಯನ್ನೇ ಕಾಪಾಡುತ್ತಿದ್ದೆ. ಬೆಳಗ್ಗಿನಿಂದ `ಹುಲಿ ರಕ್ಷಿಸಿ,' `ಹುಲಿಯನ್ನು ಕಾಪಾಡಿ,' ಅಂತ ವಾಟ್ಸ್ಅ್ಯಪ್‌, ಫೇಸ್‌ಬುಕ್‌ಗಳಲ್ಲಿ ಮೆಸೇಜ್‌ ಓದಿ ಓದಿ ಅಷ್ಟೂ ಮಾಡದಿದ್ದರೆ ಹೇಗೆ?

ಕಿಟ್ಟಿ ಅಂದು ಮನೆಯಲ್ಲಿ ಒಬ್ಬನೇ ಇದ್ದ. ತಕ್ಷಣ ತನ್ನ ಗರ್ಲ್ ಫ್ರೆಂಡ್‌ಗೆ ಫೋನ್‌ ಮಾಡಿ ಮನೆಗೆ ಕರೆಸಿಕೊಂಡ. ``ಬೇಬಿ, ಬೇಗ ಬಾ..... ಈಗ ಮನೆಯಲ್ಲಿ ಯಾರೂ ಇಲ್ಲ. ಮಮ್ಮಿ ಡ್ಯಾಡಿ ಯಾರದೋ ಮದುವೆಗೆ ಹೋಗಿದ್ದಾರೆ, ಬರಲು ತಡವಾಗುತ್ತೆ.''

ಸ್ಮಿತಾ ಸ್ಟೈಲಾಗಿ ಮೇಕಪ್‌ ಮಾಡಿಕೊಂಡು ಫ್ರೆಶ್‌ ಮೂಡ್‌ನಲ್ಲಿ ಬಾಯ್‌ಫ್ರೆಂಡ್‌ ಮನೆಗೆ ಬಂದಳು. ಬಂದವಳೇ ಕಿಟ್ಟಿಯನ್ನು ಗಟ್ಟಿಯಾಗಿ ತಬ್ಬಿಕೊಂಡಳು. ಅವನ ಕೆನ್ನೆಗೆ ಒಮ್ಮೆ ಚುಂಬಿಸಿದಳು.

ಕಿಟ್ಟಿ ಸ್ಮಿತಾಳನ್ನು ತನ್ನ ಕೋಣೆಗೆ ಕರೆದೊಯ್ದ. ಅವಳನ್ನು ಮಂಚದ ಮೇಲೆ ಕೂರಿಸಿ, ಕೋಣೆಯ ಎಲ್ಲಾ ಕಿಟಕಿ, ಬಾಗಿಲು ಭದ್ರಪಡಿಸಿದ. ರೂಮ್ ಫ್ರೆಶ್‌ನರ್‌ನಿಂದ ಕೋಣೆಗೆ ಪರಿಮಳ ತುಂಬಿಸಿದ. ಕೊನೆಯಲ್ಲಿ ಕೋಣೆಯ ಲೈಟ್ಸ್ ಸಹ ಆಫ್‌ ಮಾಡಿದ. ಸ್ಮಿತಾ ಹತ್ತಿರ ಹೋಗಿ ಮೆಲ್ಲಗೆ ಅವಳ ಕಿವಿಯಲ್ಲಿ, ``ಬೇಬಿ, ನನ್ನ ಈ ಹೊಸ ವಾಚ್‌ ನೋಡು, ಕತ್ತಲೆಯಲ್ಲಿ ಇದರ ರೇಡಿಯಂ ಮುಳ್ಳುಗಳು ಎಷ್ಟು ಫಳಫಳ ಹೊಳೆಯುತ್ತೆ ಗೊತ್ತಾ.....?'' ಎನ್ನುವುದೇ?

ರತ್ನಾಳಿಗೆ ಮಹಾ ಮರೆವಿನ ಸ್ವಭಾವ. ಒಮ್ಮೆ ಶಾಪಿಂಗ್‌ಗೆಂದು ದೂರದ ಮಾಲ್‌ಗೆ ಹೊರಟಳು. ಬೇಕಾದಷ್ಟು ಖರೀದಿ ಮಾಡಿದ್ದು ಆಯಿತು. ಖುಷಿಯಾಗಿ ಹಾಡು ಹೇಳುತ್ತಾ, ಪಾರ್ಕಿಂಗ್‌ ಸ್ಲಾಟ್‌ಗೆ ಬಂದು ನೋಡುತ್ತಾಳೆ... ತಾನು ಪಾರ್ಕ್‌ ಮಾಡಿದ್ದ ಹೊಸ ಕಾರೇ ಇಲ್ಲ! ಓಹೋ, ಯಾರೋ ತನ್ನ ಕಾರು ಕದ್ದುಬಿಟ್ಟಿದ್ದಾರೆ ಎನಿಸಿತು. ತಕ್ಷಣ ಅವಳು ಪೊಲೀಸರಿಗೆ ಫೋನ್‌ ಮಾಡಿ ತನ್ನ ಕಾರಿನ ನಂಬರ್‌ ಇತ್ಯಾದಿ ಸಮಸ್ತ ವಿವರ ತಿಳಿಸಿದಳು. ತನ್ನ ಲೊಕೇಶನ್‌ ಹಾಗೂ ಪಾರ್ಕಿಂಗ್‌ ಜಾಗದ ವಿವರ ಸಹ ನೀಡಿದಳು.

ಅದಾಗಿ ಅರ್ಧ ಗಂಟೆ ಕಳೆದ ಮೇಲೆ ತನ್ನ ಗಂಡನಿಗೂ ಫೋನ್‌ ಮಾಡಿದಳು. ಬಲು ನಿಧಾನವಾಗಿ ತಡವರಿಸುತ್ತಾ, ``ಡಾರ್ಲಿಂಗ್‌, ಐಯಾಮ್ ವೆರಿ ಸಾರಿ.... ಅದೇನಾಯ್ತೋ ಗೊತ್ತಿಲ್ಲ.... ಇಲ್ಲ ಇಲ್ಲ.... ಇದರಲ್ಲಿ ನನ್ನ ತಪ್ಪೇನೂ ಇಲ್ಲ. ಶಾಪಿಂಗ್‌ ಮುಗಿಸಿ ವಾಪಸ್ಸು ಬಂದು ನೋಡ್ತೀನಿ.... ಯಾರೋ ಪಾಪಿಗಳು ನಮ್ಮ ಕಾರು ಕದ್ದುಬಿಟ್ಟಿದ್ದಾರೆ. ಏನ್ರಿ, ಬೇಗ ಇಲ್ಲಿಗೆ ಬರ್ತೀರಾ.....''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ