ಪುರುಷನೇ ಆಗಿರಬಹುದು ಅಥವಾ ಮಹಿಳೆ, ಖಾಸಗಿ ರಸನಿಮಿಷಗಳ ಕುರಿತಂತೆ ಇಬ್ಬರಿಗೂ ವಿಭಿನ್ನ ಫ್ಯಾಂಟಸಿ ಇರುತ್ತದೆ. ಅದರ ಕುರಿತಂತೆ ಇಬ್ಬರೂ ಪರಸ್ಪರ ಚರ್ಚೆ ನಡೆಸದೇ ಇದ್ದರೆ ಸಂಬಂಧದಲ್ಲಿ ಬಿರುಕು ಮೂಡುವುದು ಸಹಜ. ಈ ಸಮಸ್ಯೆಯಿಂದ ಹೇಗೆ ಹೊರಬರುವುದು ಸ್ವಲ್ಪ ತಿಳಿದುಕೊಳ್ಳಿ.
ದೈಹಿಕ ಸಂಬಂಧದಲ್ಲಿ ಅನವಶ್ಯಕವಾಗಿ ಸಹಿಸಿಕೊಳ್ಳುವುದು ಅಥವಾ ಭವಿಷ್ಯದಲ್ಲಿ ಸುಧಾರಣೆ ಆಗುತ್ತದೆ ಎಂದು ಹಾಗೆಯೇ ದಿನ ದೂಡುವುದು ಸರಿಯಾದುದಲ್ಲ. ಅದು ಸಂಬಂಧದಲ್ಲಿನ ಸಹಜ ಆನಂದವನ್ನು ಕಡಿಮೆಗೊಳಿಸುತ್ತದೆ. ಕೆಲವು ಮಹಿಳೆಯರಿಗೆ ತಮ್ಮ ಪತಿಯ ಆಕ್ರಮಣಕಾರಿ ನೀತಿ ಇಷ್ಟವಾಗುವುದಿಲ್ಲ ಎಂದು ಹೇಳುತ್ತಾರೆ. ಆದರೆ ಸಂಕೋಚದ ಕಾರಣದಿಂದ ಆ ಬಗ್ಗೆ ಹೇಳುವುದು ತಮಗೆ ಸರಿ ಎನಿಸುವುದಿಲ್ಲ ಎಂದೂ ಹೇಳುತ್ತಾರೆ. ಮತ್ತೆ ಕೆಲವು ಮಹಿಳೆಯರು ತಮಗೆ ಏನು ಇಷ್ಟವಾಗುತ್ತದೆ, ಏನು ಇಷ್ಟ ಆಗುವುದಿಲ್ಲ ಎನ್ನುವುದನ್ನು ಪತಿ ತಿಳಿದುಕೊಳ್ಳಬೇಕು ಎನ್ನುತ್ತಾರೆ. ಈ ಆಸಕ್ತಿ ಅನಾಸಕ್ತಿಯ ಯಾವುದೇ ನಿಶ್ಚಿತ ಮಾನದಂಡಗಳೇನೂ ಇಲ್ಲ, ಅದು ಅವರಿಗೆ ತಂತಾನೇ ಅರ್ಥವಾಗಬೇಕು, ತಕ್ಷಣವೇ ಹೆಚ್ಚೆಚ್ಚು ಆನಂದ ಸಿಗಬೇಕು ಎಂದು ಅಪೇಕ್ಷಿಸುವ ಹಾಗಿಲ್ಲ.
ಒಬ್ಬ ಮಹಿಳೆ ಹೇಳಿದ್ದೇನೆಂದರೆ, ಆಕೆಯ ಪತಿ ಮೊದಲ ರಾತ್ರಿಯಿಂದಲೇ ಅಶ್ಲೀಲ ವಿಡಿಯೋ ತೋರಿಸಿ ಅವಳ ಜೊತೆ ಅನೈಸರ್ಗಿಕ ಸಂಬಂಧ ಬೆಳೆಸುತ್ತಿದ್ದ. ಈ ಪ್ರಕ್ರಿಯೆ ಹಲವು ವರ್ಷಗಳ ತನಕ ಹಾಗೆಯೇ ಮುಂದುವರಿದಿತ್ತು. ಒಂದು ವೇಳೆ ಅವಳು ಅದನ್ನು ವಿರೋಧಿಸಿದರೆ ಗಂಡ ಅವಳಿಗೆ ಬೆದರಿಕೆ ಹಾಕುತ್ತಿದ್ದ. ನಾಚಿಕೆ, ಸಂಕೋಚದ ಕಾರಣದಿಂದ ಅವಳು ಈ ವಿಷಯವನ್ನು ತನ್ನ ತಂದೆತಾಯಿಯ ಮುಂದೆ ಹೇಳಲು ಸಾಧ್ಯವಾಗುತ್ತಿರಲಿಲ್ಲ. ಈ ಮಧ್ಯೆ ಅವಳ ದೇಹದಲ್ಲಿ ಹಲವು ಬಗೆಯ ತೊಂದರೆಗಳು ಕಾಣಿಸಿಕೊಂಡವು. ಅನೈಸರ್ಗಿಕ ಸಂಬಂಧದಿಂದ ಉಂಟಾಗುವ ತೊಂದರೆಗಳ ಬಗ್ಗೆ ಪತಿಯ ಮುಂದೆ ಹೇಳಿದಾಗ ಆತ ಅದನ್ನು ನಂಬಲು ಕೂಡ ತಯಾರಿರಲಿಲ್ಲ. ಆದರೂ ಅವನು ಅದನ್ನು ಮುಂದುವರಿಸಿದ್ದ. ದೂರು ಹೇಳಲು ನೋಡಿದಾಗ ಅವಳ ಮೇಲೆ ಕೈ ಎತ್ತುತ್ತಿದ್ದ. ಆ ಮಹಿಳೆಯ ಪ್ರಕಾರ, ಉಳಿದ ಸಮಯದಲ್ಲಿ ಅವನು ಸಾಮಾನ್ಯನಂತೆ ಇರುತ್ತಿದ್ದ. ಆದರೆ ಸಮಾಗಮದ ಸಮಯದಲ್ಲಿ ಮಾತ್ರ ರಾಕ್ಷಸನಂತೆ ವರ್ತಿಸುತ್ತಿದ್ದ. ಅವಳು ಅನಿವಾರ್ಯವಾಗಿ ಗಂಡನ ವಿರುದ್ಧ ಪೊಲೀಸ್ ಠಾಣೆಗೆ ದೂರು ಕೊಡುವ ಸ್ಥಿತಿ ಬಂತು.
ಭಾವನಾ ಈ ಕುರಿತಂತೆ ಹೀಗೆ ಹೇಳುತ್ತಾರೆ, “ನಾನು ಕೆಲವು ದಿನಗಳವರೆಗೆ ಗಂಡನ ಆಕ್ರಮಣಕಾರಿ ಧೋರಣೆಯನ್ನು ಸಹಿಸಿಕೊಂಡೆ. ಹನಿಮೂನ್ ಬಳಿಕ ಹೇಳೋಣ ಅಂದುಕೊಂಡೆ. ಆದರೆ ಧೈರ್ಯ ಸಾಲಲಿಲ್ಲ. ಆದರೆ ಕ್ರಮೇಣ ಅದೇ ಪ್ರವೃತ್ತಿ ಮುಂದುವರಿದಾಗ ನಾನು ಆ ಬಗ್ಗೆ ಮಾತನಾಡಲೇಬೇಕಾಯಿತು. ನಾನು ಮಾತನಾಡಿದ್ದು ಅವರಿಗೆ ಹಿಡಿಸಲಿಲ್ಲ. ನಮ್ಮ ಸಂಬಂಧ ಕೆಲವು ದಿನಗಳರೆಗೆ ಪ್ರಭಾವಿತವಾಗಿತ್ತು. ಪತಿ ಈ ಕುರಿತಂತೆ ನನ್ನನ್ನು ತೆಗಳುತ್ತಿದ್ದ. ನಾನು ಸಕಾಲದಲ್ಲಿ ಈ ಬಗ್ಗೆ ಹೇಳಿರದಿದ್ದರೆ ಆ ಪರಿಸ್ಥಿತಿಯೇ ಉದ್ಭವಿಸುತ್ತಿರಲಿಲ್ಲ.”
ರಮಾ ಈ ಬಗ್ಗೆ ಹೇಳುತ್ತಾರೆ, “ನಾನು ಮೊದಲ ರಾತ್ರಿಯೇ ಪತಿಗೆ ನಿಮ್ಮ ಆ ಅನೈಸರ್ಗಿಕ ಅಭ್ಯಾಸ ನನಗೆ ಇಷ್ಟವಿಲ್ಲ ಎಂದೆ ಪತಿ ಈ ಬಗ್ಗೆ ಕ್ರಮೇಣ ಅಭ್ಯಾಸ ಆಗುತ್ತದೆ ಎಂದು ಹೇಳುತ್ತಿದ್ದ. ಆದರೆ ನಾನು ಸ್ಪಷ್ಟವಾಗಿ ನಾವು ಮನುಷ್ಯರು, ಪ್ರಾಣಿಗಳಲ್ಲ ಎಂದು ಹೇಳಿದೆ. ಆ ಬಳಿಕ 4-5 ದಿನಗಳಲ್ಲಿ ಪರಿಸ್ಥಿತಿ, ಸರಿಹೋಯಿತು. ಆ ಬಗೆಯ ಆಕ್ರಮಣಕಾರಿ ಪ್ರವೃತ್ತಿಯನ್ನು ಸಹಿಸಿಕೊಳ್ಳುವುದು ಎಷ್ಟು ಕಷ್ಟಕರ ಎನ್ನುವುದು ನನಗೆ ಗೊತ್ತಿತ್ತು. ಅದರಿಂದ ಸಮಾಗಮ ಪ್ರಕ್ರಿಯೆಯೇ ಒಂದು ಹೊರೆ ಎನಿಸುತ್ತದೆ. ಮುಕ್ತವಾಗಿ ಮಾತನಾಡುವುದರಿಂದ ಕೇವಲ ಅಪ್ರಿಯ ಪರಿಸ್ಥಿತಿಗಳಷ್ಟೇ ಸುಧಾರಣೆಯಾಗುವುದಿಲ್ಲ, ಒಳ್ಳೆಯ ಪರಿಸ್ಥಿತಿಗೆ ಒಳ್ಳೆಯ ವಾತಾವರಣ ಕೂಡ ಸೃಷ್ಟಿಯಾಗುತ್ತದೆ.”
ಸೆಕ್ಸ್ ಬಗ್ಗೆ ಪುರುಷರು ಎಷ್ಟು ಆತುರದ ಮನೋಭಾವದರಾಗಿರುತ್ತಾರೊ, ಮಹಿಳೆಯರು ಕೂಡ ಅಷ್ಟೇ ಆತುರ ಹೊಂದಿರುತ್ತಾರೆ. ಆದರೆ ಅವರು ಈ ಬಗ್ಗೆ ಯಾರ ಮುಂದೆಯೂ ಪ್ರಸ್ತಾಪಿಸುವುದಿಲ್ಲ. ಒಂದು ವೇಳೆ ಆ ರಾತ್ರಿ ವಿಶೇಷವಾಗಿದ್ದರೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಉತ್ಕಟರಾಗಿರುತ್ತಾರೆ. ಈ ಕಥೆ ಹೀರೋನ ನಿರೀಕ್ಷೆ ಮಾಡುತ್ತ ಕುಳಿತ ಹೀರೋಯಿನ್‌ದಲ್ಲ, ಪ್ರತಿಯೊಬ್ಬ ಸಾಮಾನ್ಯ ಹುಡುಗಿ ಕೂಡ ಅದನ್ನು ನಿರೀಕ್ಷೆ ಮಾಡುತ್ತಿರುತ್ತಾಳೆ.
ಯಾವ ಸಂಬಂಧವೂ ಪರ್ಫೆಕ್ಟ್ ಅಲ್ಲ
ವಾಸ್ತವ ಸಂಗತಿಯೇನೆಂದರೆ, ಯಾವುದೇ ಸಂಬಂಧ ಪರ್ಫೆಕ್ಟ್ ಆಗಿರುವುದಿಲ್ಲ. ಒಂದು ವೇಳೆ ನೀವು ಎಲ್ಲ ನನ್ನಿಚ್ಛೆಯ ಮೇರೆಗೆ ಅಥವಾ ಯಾವುದೊ ಸಿನಿಮಾ ಕಥೆಯಂತೆ ನಡೆಯಬೇಕು ಎಂದು ಅಪೇಕ್ಷಿಸಿದರೆ, ನಿಮಗೆ ನೋವಾಗುವುದು ಸಹಜ. ಪ್ರತಿಯೊಂದು ಬಂಧವೂ ವಿಭಿನ್ನ. ಅಷ್ಟೇ ಅಲ್ಲ, ಪ್ರತಿಯೊಂದು ಸಂಬಂಧಕ್ಕೆ ಪ್ರೀತಿ, ಸಮರ್ಪಣೆ, ಶ್ರದ್ಧೆಯ ಜೊತೆಗೆ ನಿಮ್ಮ ಉತ್ಸಾಹ, ಪ್ರೇರಣೆ ಕೂಡ ಅಗತ್ಯ.
ಅವನು ಸರಿಯಾದುದನ್ನೇ ಹೇಳುತ್ತಾನೆ. ಹೀಗಾಗುವುದು ಸಾಧ್ಯವಿಲ್ಲ. ನೀವು ಅಂತಹ ನಿರೀಕ್ಷೆ ಕೂಡ ಇಟ್ಟುಕೊಳ್ಳಬೇಡಿ. ಅವನು ಯಾವುದೇ ರೊಮ್ಯಾನ್ಸ್ ಚಿತ್ರವೊಂದರ ಹೀರೋ ಅಲ್ಲ, ಅವನು ಯಾವಾಗಲೂ ಸರಿಯಾದ ಒಳ್ಳೆಯ ಮಾತುಗಳನ್ನೇ ಹೇಳುತ್ತಾನೆ ಎಂದೆಲ್ಲ ಅಂದುಕೊಳ್ಳಬೇಡಿ. ಅವನೊಬ್ಬ ಮನುಷ್ಯ. ಬೇರೆ ಸಾಮಾನ್ಯ ವ್ಯಕ್ತಿಗಳ ಹಾಗೆ ಅವನು ಕೂಡ ತಪ್ಪು ಮಾಡುತ್ತಾನೆ. ಯಾವ ಮಾತುಗಳನ್ನು ಹೇಳಬಾರದು ಎಂದು ನೀವು ಇಚ್ಛಿಸುತ್ತೀರೊ ಆ ಮಾತುಗಳನ್ನು ಅವನು ಹೇಳುತ್ತಾನೆ.
ಆರ್ಗಸಂ (ಪರಾಕಾಷ್ಠೆ)
ಗಂಡನೇ ಆಗಿರಬಹುದು ಅಥವಾ ಹೆಂಡತಿ, ಇಬ್ಬರಲ್ಲಿ ಒಬ್ಬರ ಧೋರಣೆ ಆಕ್ರಮಣಕಾರಿ ಅಥವಾ ನೆಗೆಟಿವ್ ಆಗಿದ್ದರೆ, ಅವರ ಭಾವನೆಗಳ ಬಗ್ಗೆ ಗಮನ ಕೊಡಬೇಕು. ಬಹಳಷ್ಟು ಪತ್ನಿಯರು ತಮ್ಮ ಪತಿಗೆ `ನೀವು ಬಹಳ ಸ್ವಾರ್ಥಿಗಳು, ನಿಮ್ಮ ಖುಷಿಯಷ್ಟೇ ನಿಮಗೆ ಆಗಬೇಕು, ನನ್ನ ಬಗ್ಗೆ ಕಾಳಜಿಯೇ ಇಲ್ಲ’ ಎಂದು ಹೇಳುತ್ತಾರೆ. ಇದರರ್ಥ ಅವರು ಇನ್ನೂ ಆರ್ಗಸಂಗೆ ತಲುಪಿಲ್ಲ ಅಥವಾ ನೀವು ಆರ್ಗಸಂ ತಲುಪಲು ಉತ್ತೇಜನ ನೀಡುತ್ತಿಲ್ಲ ಎಂದರ್ಥ. ಮೇಲಿಂದ ಮೇಲೆ ನೀವು ಹೇಳಿದ ಮಾತು ಸಿಡಿಮಿಡಿಗೊಳ್ಳಲು ಹಾಗೂ ಸ್ವಾಭಿಮಾನಕ್ಕೆ ಪೆಟ್ಟು ಕೊಡುವುದಾಗಿರಬಹುದು.
ಹೀಗಾಗಿ ಯಾವಾಗ ಏನನ್ನು ಹೇಳಲಾಗುತ್ತೋ, ಅದನ್ನು ಆಗಲೇ ಮಾಡಿದರೆ ಆಗ ಅದು ಸಾರ್ಥಕ ಮತ್ತು ಪರಿಣಾಮಕಾರಿ ಬದಲಾವಣೆ ತರುವುದಾಗಿರುತ್ತದೆ. ಖಾಸಗಿ ಸಂಬಂಧಗಳಿಗೆ ಹೇಳುವ ಕೇಳುವ ಕೌಶಲ್ಯ ಕೇವಲ ಬೆಡ್‌ರೂಮಿಗಷ್ಟೇ ಸೀಮಿತವಾಗಿರುವುದಿಲ್ಲ. ಅದು ಜೀವನದಲ್ಲಿ ಮನೆಯ ಹೊರಗೂ ಸಾರ್ಥಕ ಮಾತುಕಥೆಯ ವ್ಯವಸ್ಥೆ ಸೃಷ್ಟಿಸುತ್ತದೆ ಮತ್ತು ಅದಕ್ಕೆ ಪ್ರೇರಣೆ ನೀಡುತ್ತದೆ. ಸೆಕ್ಸ್ ಎನ್ನುವುದು ಕೇವಲ ಒಂದು ಕ್ರಿಯೆಯಲ್ಲ. ಅದು ಸುಂದರ ಕಲೆ. ಇದು ಶತಶತಮಾನಗಳಿಂದ ಕಾಮಕಲೆಯ ಸ್ಥಾನ ಪಡೆದುಕೊಂಡಿದೆ. ಇದರಲ್ಲಿ ಪ್ರತಿಸಲ ಹೊಸ ಹೊಸದನ್ನು ಮಾಡುವ ಅವಕಾಶಗಳಿರುತ್ತವೆ. ಗಂಡಹೆಂಡತಿಯ ಸಂಬಂಧದಲ್ಲಿ ಪ್ರೀತಿ ಮತ್ತು ಸೆಕ್ಸ್ ದಾಂಪತ್ಯವೆಂಬ ಕಟ್ಟಡ ನಿರ್ಮಾಣದಲ್ಲಿ ಬಲಿಷ್ಠ ಕಂಬಗಳಾಗಿವೆ.
– ಮೋನಿಕಾ