ಡರ್ಟಿ ಆಗ್ತಾಳೆ ಈಶಾ
ಈಶಾ ಗುಪ್ತಾ ಇಷ್ಟರಲ್ಲೇ ಒಂದು ಮ್ಯೂಸಿಕ್ ವಿಡಿಯೋ `ಗಾಟ್ ಡರ್ಟಿ’ಯಲ್ಲಿ ಕಾಣಿಸಲಿದ್ದಾಳೆ. ಇದರ ವಿಶೇಷತೆ ಎಂದರೆ ಈ ವಿಡಿಯೋದಲ್ಲಿ ಈಶಾ ಬೋಲ್ಡ್ ಸೆಕ್ಸೀ ಸ್ಟೆಪ್ಸ್ ನಿಂದ ಗಮನ ಸೆಳೆಯಲಿದ್ದಾಳೆ. ತನ್ನ ಹಾಟ್ ಫೋಟೋಗಳಿಂದ ಈಶಾ ಈಗಾಗಲೇ ಫೇಸ್‌ಬುಕ್‌ನೋಡುಗರ ಎದೆಬಡಿತ ಹೆಚ್ಚಿಸಿದ್ದಾಳೆ. ಇದೀಗ ವಿಡಿಯೋ ಮೂಲಕ ಅವರುಗಳಿಗೆ ಹಾರ್ಟ್‌ಅಟ್ಯಾಕ್‌ಬರಿಸುತ್ತಾಳಾ?
ಎಲ್ಲೆಡೆ ಜನಪ್ರಿಯ ಕಾಲೀನ್ ಭೈಯಾ
ವೆಬ್‌ಸೀರೀಸ್ ಕಲ್ಚರ್ ಪ್ರತಿಭಾವಂತ ಕಲಾವಿದರಿಗೆ ಒಂದು ವರದಾನವೇ ಸರಿ. ತಮ್ಮ ಬಹುಮುಖ ಪ್ರತಿಭೆಯಿಂದ ಹೀಗೆ ಮಿಂಚುತ್ತಿರುವ ನಾಜಿರುದ್ದೀನ್`ಸೇಕ್ರೆಡ್ ಗೇಮ್ಸ್’ನಿಂದ ಎಲ್ಲೆಡೆ ಜನಪ್ರಿಯತೆ ಗಳಿಸುತ್ತಿದ್ದಾರೆ. ಇದಾದ ಮೇಲೆ ಪಂಕಜ್ ತ್ರಿಪಾಠಿಯ `ಮಿರ್ಜಾಪುರ್’ದಲ್ಲಿ ಕಾಲೀನ್ ಭೈಯಾನ ಪಾತ್ರವಹಿಸಿ ಮತ್ತಷ್ಟು ಮಿಂಚಿದರು. ಹಿಂದೆಲ್ಲ ದೊಡ್ಡ ದೊಡ್ಡ ಚಿತ್ರಗಳಲ್ಲಿ ಎಲ್ಲೋ ಎಲೆಮರೆಯ ಕಾಯಿಯಾಗಿ ದೂರ ಸರಿಯುತ್ತಿದ್ದ ಈ ನಟ, ಇದೀಗ `ಸೇಕ್ರೆಡ್ ಗೇಮ್ಸ್’ನ ಗಣೇಶ್‌ಹಾಗೂ `ಮಿರ್ಜಾಪುರ್’ನ ಕಾಲೀನ್ ಭೈಯಾ ಆಗಿ ಗಮನ ಸೆಳೆಯುತ್ತಿದ್ದಾರೆ.
ಬಾಲಿವುಡ್‌ಗೆ ಹೆಜ್ಜೆಯಿಟ್ಟ ಅಲಾಯಿಯಾ
ಬಾಲಿವುಡ್ ಸ್ಟಾರ್ಸ್ ಮಕ್ಕಳು ಚಿತ್ರರಂಗಕ್ಕೇ ಬರುವುದು ಅನಾದಿ ಕಾಲದಿಂದಲೂ ನಡೆದುಕೊಂಡೇ ಬಂದಿದೆ. ಈ ವರ್ಷ ಅಂಥ ಹಲವು ಎಂಟ್ರಿಗಳಾಗಿವೆ. ಈ ಬಾರಿ ಕೇಳಿಬರುತ್ತಿರುವ ಹೊಸ ಹೆಸರು ಪೂಜಾ ಬೇಡಿಯ ಮಗಳು ಅಲಾಯಿಯಾಳದು. ಈಕೆ ನಿತಿನ್ ಕುಕ್ಕಡ್‌ರ ಫ್ಯಾಮಿಲಿ ಕಾಮಿಡಿ `ಜಾನಿ ಜಾನೆಮನ್’ ಚಿತ್ರದಲ್ಲಿ ಸೈಫ್ ಆಲಿಖಾನ್ ಜೊತೆ ಕಾಣಿಸಲಿದ್ದಾಳೆ. ಗ್ಲಾಮರ್‌ವಿಷಯದಲ್ಲಂತೂ ತಾಯಿಗಿಂತ ಮಿಗಿಲು ಈ ಮಗಳು!
ಅಕ್ಷಯ್ ಈಗ ಕೇಸರಿ
ಮುಘಲ್ ಸರಾಯಿಯ ಯುದ್ಧ ಮತ್ತು ಸಿಖ್ ಸೈನಿಕರ ಸಾಹಸಗಾಥೆಯ ಕುರಿತಾದ `ಕೇಸರಿ’ ಚಿತ್ರ ಇದೀಗ ಅಕ್ಷಯ್ ಕುಮಾರ್‌ಗೆ `2.0′ ನಂತರ ಮಹತ್ವದ ಟರ್ನಿಂಗ್ ಪಾಯಿಂಟ್ ಆಗಲಿದೆ. ಇಲ್ಲಿ ಅಕ್ಷಯ್ ಪ್ರತಿಭಾವಂತ ನಟನಾಗಿ ಮಾತ್ರವಲ್ಲದೆ ಭಾವನಾತ್ಮಕ ರೂಪದಲ್ಲಿಯೂ ಮಿಂಚುತ್ತಿದ್ದಾನೆ. ಈ ಚಿತ್ರದ ಪೋಸ್ಟರ್ ಇತ್ತೀಚೆಗೆ ಬಿಡುಗಡೆಗೊಂಡು ಅದರಲ್ಲಿ ಸೈನಿಕ ವೇಷಧಾರಿ ಸಿಖ್ ಆಗಿ ಅಕ್ಷಯ್ ಎಲ್ಲೆಡೆ ಮಿಂಚಿದ್ದಾನೆ. ಈ ಚಿತ್ರ ಬಾಕ್ಸ್ ಆಫೀಸ್ ಯುದ್ಧದಲ್ಲಿ ಗೆಲ್ಲಲಿದೆಯೇ? ಕಾದು ನೋಡಬೇಕು.
ಕೇಸ್ ತೀರ್ಪಿನ ಮೇಲೆ ನಿಂತಿದೆ ಸಲ್ಲೂ ಮದುವೆ
ಇದುವರೆಗೂ ಜನರಿಗೆ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಮದುವೆಯೇ ಆಗಲಾರ ಎನಿಸಿತ್ತು. ಆದರೆ ಇದೀಗ ಬಾಲಿವುಡ್‌ನ ನಂಬಲರ್ಹ ಸುದ್ದಿಮೂಲಗಳ ಪ್ರಕಾರ, ಸಲ್ಮಾನ್ ಮದುವೆ ಆಗಲೇನೋ ಬಯಸಿದ್ದಾನೆ, ಆದರೆ…. ಕಸ್ತೂರಿ ಮೃಗದ ಬೇಟೆಯ ಕೇಸ್ ಅವನನ್ನು ಬಿಡುತ್ತಿಲ್ಲ. ಆ ಪ್ರಕರಣಗಳಲ್ಲಿ ಅಪರಾಧ ಸಾಬೀತಾದರೆ ಸಲ್ಮಾನ್‌ಗೆ ಸೆರೆವಾಸ ತಪ್ಪಿದ್ದಲ್ಲ. ಆದರೆ ಈಗಿರುವ ಸವಾಲು ಎಂದರೆ, ವರ್ಷಗಟ್ಟಲೆ ಎಳೆದಾಡುತ್ತಿರುವ ಕೇಸಿನ ತೀರ್ಪು ಸುಮುಖವಾಗಿ ಬರುವವರೆಗೂ ಲೂಲಿಯಾ ಕಾಯುತ್ತಾಳೆಯೇ?
ಮಿಶಿಕಾಳಿಗೆ ತೆರೆದ ಭಾಗ್ಯದ ಬಾಗಿಲು
`ರಂಗೀಲಾ ರಾಜಾ’ ಚಿತ್ರದಲ್ಲಿ ಗೋವಿಂದ ಜೊತೆ ಮಿಶಿಕಾ ಚೌರಾಸಿಯಾ ನಾಯಕಿಯಾಗಿ ನಟಿಸಿದ್ದಳಂತೆ. ಆದರೆ ಆ ಚಿತ್ರ ಡಬ್ಬದಲ್ಲೇ ಕೊಳೆತಿದ್ದರಿಂದ ಜನ ನೋಡೇ ಇಲ್ಲ! ಆದರೆ ಮಿಶಿಕಾ ಬೇಬಿಗೆ ಗುಡ್ ನ್ಯೂಸ್ ಎಂದರೆ ಪಹ್ಲಾಜ್ ನಿಹ್ಲಾನಿ ತಮ್ಮ ಮುಂದಿನ `ಐ ಲವ್ ಯೂ ಬಾಸ್’ ಚಿತ್ರದಲ್ಲಿ ಚಾನ್ಸ್ ನೀಡಿದರು. ಆದರೆ ಗಮನಿಸಬೇಕಾದ ವಿಷಯ ಎಂದರೆ, ಸೆನ್ಸಾರ್ ಬೋರ್ಡ್‌ನಲ್ಲಿ ತಮ್ಮ ಕರಾಮತ್ತು ಪ್ರದರ್ಶಿಸಿರುವ ಪಹ್ಲಾಜ್ ಸಹ ತಮ್ಮ ಚಿತ್ರಗಳಿಗಾಗಿ ಪ್ರೇಕ್ಷಕರನ್ನು ಕಲೆಹಾಕಲು ಯಶಸ್ವಿಯಾಗಿಲ್ಲ ಎಂಬುದು ಶೋಚನೀಯ!
ದಕ್ಷಿಣದಲ್ಲೂ ಮಿಂಚುತ್ತಿರುವ ಅದಿತಿ
ಒಳ್ಳೆಯ ವಿಷಯ ಎಂದರೆ ಕಲಾವಿದರ ಪ್ರತಿಭಾಲಯ ದಿನೇ ದಿನೇ ವಿಸ್ತೀರ್ಣಗೊಳ್ಳುತ್ತಿದೆ. ದಕ್ಷಿಣದವರು ಹಿಂದಿಯಲ್ಲಿ ಹಾಗೂ ಹಿಂದಿಯವರು ದಕ್ಷಿಣದ ಚಿತ್ರಗಳಲ್ಲಿ ಸಹನೀಯರು ಎನಿಸುತ್ತಿದ್ದಾರೆ. ಇತ್ತೀಚೆಗೆ ಅದಿತಿ ರಾವಾಹೈದರಿ ತೆಲುಗಿನಲ್ಲಿ ಮೊದಲ ಬಾರಿ ನಟಿಸಿದ `ಸಮ್ಮೋಹನಂ’ ಚಿತ್ರ ಅಲ್ಲಿನ ಪ್ರೇಕ್ಷಕರಿಗೆ ಭಾರಿ ಇಷ್ಟವಾಯ್ತು! ಈ ಚಿತ್ರಕ್ಕಾಗಿ ತೆಲುಗಿನಲ್ಲಿ ಸಿಗುವ ಬೆಸ್ಟ್ ಡೆಬ್ಯು ಅವಾರ್ಡ್ ಸಹ ಅದಿತಿಗೆ ಸಿಕ್ಕಿತು. ಗುಡ್ ಗೋಯಿಂಗ್ ಅದಿತಿ!
ಅಲೋಕ್ ನಾಥ್‌ಗೆ ಸಿಕ್ಕ ರಿಲೀಫ್
`ಮೀ ಟೂ’ ಅಭಿಯಾನವಂತೂ ವೇಗವಾಗಿ ಶುರುವಾಯ್ತು. ಆದರೆ ಇದರ ನಿರೀಕ್ಷಿತ ಪರಿಣಾಮ ಸಿಗಲು ಇನ್ನೂ ಕಾಯಬೇಕಿದೆ. ಈ ಅಭಿಯಾನದ ಕಪಿಮುಷ್ಟಿಗೆ ಸಿಲುಕಿದ `ಬಾಬೂಜಿ’ ಅಲೋಕ್ ನಾಥ್‌ಗೆ ಕೋರ್ಟ್ ರಿಲೀಫ್ ನೀಡಿದೆ. ವಿತಾ ನಂದಾ ಇವರ ವಿರುದ್ಧ ಮಾಡಿದ್ದ ಆರೋಪದಲ್ಲಿ ಸಾಕ್ಷ್ಯಾಧಾರದ ಕೊರತೆ ಇತ್ತು. ಜೊತೆಗೆ ವಿತಾ ತನ್ನ ಆರೋಪದಲ್ಲಿ ಹೇಳಿದಂತೆ ಲೈಂಗಿಕ ಶೋಷಣೆ ನಡೆದ ದಿನ, ತಿಂಗಳು, ವರ್ಷ ಸಹ ಸರಿಯಾಗಿ ನೆನಪಿಲ್ಲದೆ ಇರುವುದು. ಅಂತೂ ಬಾಬೂಜಿ ಸದ್ಯಕ್ಕೆ ನೆಮ್ಮದಿಯ ನಿಟ್ಟುಸಿರಿಟ್ಟಿದ್ದಾರೆ.
ಸಿಟ್ಟಿಗೆ ಕೆರಳಿದ ಅಕ್ಷಯ್ ಖನ್ನಾ
ಅಕ್ಷಯ್ ಖನ್ನಾ ಮತ್ತು ಅನುಪಮ್ ಖೇರ್ ಜೊತೆಗೂಡಿ ಮನಮೋಹನ್ ಸಿಂಗ್‌ರ ಕುರಿತಾದ ಬಯೋಪಿಕ್ ಚಿತ್ರ `ಆ್ಯಕ್ಸಿಡೆಂಟ್‌ಪ್ರೈಮ್ ಮಿನಿಸ್ಟರ್’ ಬಿಡುಗಡೆಗೆ ಮೊದಲಿನಿಂದಲೂ ಹಲವು ವಿವಾದಗಳಿಗೆ ಗುರಿಯಾಗಿತ್ತು. ಅಂತೂ ಅದಕ್ಕೆ ಬಿಡುಗಡೆ ಭಾಗ್ಯ ಸಿಕ್ಕಿದ್ದೇ ದೊಡ್ಡ ವಿಷಯ. ಇದರ ಟ್ರೇಲರ್ ಬ್ಯಾನ್ ಆಗಬೇಕು ಎಂದು ಸುದ್ದಿಯಾದರೆ, ಅನುಪಮ್ ರನ್ನು ಬಂಧಿಸಿ ಎಂಬ ಗಲಾಟೆ ಕೇಳಿ ಬರುತ್ತಿತ್ತು. ಅಕ್ಷಯ್ ಖನ್ನಾ ಇದರಿಂದ ಖಿನ್ನರಾಗಿದ್ದಾರೆ. ಇಂಥ ರಾಜಕೀಯ ವಿಷಯಗಳನ್ನು ರಾಜಾರೋಷವಾಗಿ ಬರೆಯಬಹುದಾದರೆ, ಅದನ್ನೇ ಸಿನಿಮಾ ಆಗಿ ತೋರಿಸಿದರೆ ತಪ್ಪೇನು ಎಂದು ಗುಡುಗುತ್ತಾರೆ. ಅಯ್ಯೋ ಅಕ್ಷಯ್, ಇನ್ನೇನು ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವಾಗ ಹೀಗೆಲ್ಲ ಆಗದೆ ಇರಲು ಸಾಧ್ಯವೇ….?
ನೇಹಾಗೆ ಏನಾಯ್ತು?
ನೇಹಾ ತಾನೇ ಒಪ್ಪಿಕೊಂಡಿರುವ ಸಂಗತಿ ಎಂದರೆ ಬಾಯ್‌ಫ್ರೆಂಡ್ ಹಿಮಾಂಶ್ ಕೊಯ್ಲಿ ಜೊತೆ ಬ್ರೇಕ್‌ಅಪ್ ಆಗಿದೆಯಂತೆ! ಅದರಿಂದ ಅವಳು ಡಿಪ್ರೆಶನ್‌ಗೆ ಜಾರಿದಳಂತೆ. ಅದರಿಂದಾಗಿ ಈಕೆ ಚಿತ್ರವಿಚಿತ್ರವಾಗಿ ಆಡುತ್ತಿಲ್ಲ ತಾನೇ? ಇತ್ತೀಚೆಗೆ ಒಂದು ಫೋಟೋಶೂಟ್ ನಡೆಯುತ್ತಿದ್ದಾಗ ಈಕೆ ಸೋನುನಿಗಂ ಎದುರು ತನ್ನ ಗೌನ್ ಬಿಚ್ಚಿದಳಂತೆ…. ಸೋನು ಕೂಡ ಇವಳ ಭಾನಗಡಿಗೆ ಶಾಕ್ ಆದರಂತೆ! ಆಮೇಲೆ ಗೊತ್ತಾದ ವಿಷಯ ಅಂದ್ರೆ ಇದು ನೇಹಾ ಮಾಡಿದ ಪ್ರಾಕ್ಟಿಕಲ್ ಜೋಕ್ ಅಂತೆ! ಇಂಥ ಹಗರಣಗಳಿಂದ ನೇಹಾ ಡಿಪ್ರೆಶನ್‌ನಿಂದ ಹೊರಬರಬಹುದೇ…? ಮತ್ತೇನೂ ಆಘಾತವಾಗದಿದ್ದರೆ ಸರಿ.
ಮತ್ತೆ ಮರಳಿದ ಸೂರಜ್
`ಹೀರೋ’ ಚಿತ್ರದಿಂದ ಹೀರೋ ಆಗುವ ಕನಸು ಕಾಣುತ್ತಿರುವ ಸೂರಜ್ ಪಂಚೋಲಿಯ ಆಸೆ, ಆ ಚಿತ್ರ ಡಬ್ಬದಿಂದ ಹೊರಬರದ ಕಾರಣ ಹಾಗೆಯೇ ಉಳಿದುಬಿಟ್ಟಿದೆ. ಆದರೆ ಆತ ಇಷ್ಟರಲ್ಲೇ ಪ್ರೇಕ್ಷಕರ ಎದುರು `ಸ್ಪಾಟ್ ಲೈಟ್ ಶಂಕರ್’ ಚಿತ್ರದ ಮೂಲಕ ಕಾಣಿಸಲಿದ್ದಾನೆ. ಈ ಚಿತ್ರದಲ್ಲಿ ಸೈನಿಕನಾಗಿರುವ ಸೂರಜ್, ಚಿತ್ರದ ಕಥೆಯಿಂದ ಬಹಳ ಸ್ಛೂರ್ತಿಗೊಂಡಿದ್ದಾನೆ. ನೋಡೋಣ, ಈ ಬಾರಿಯಾದರೂ ಸೂರಜ್‌ನ ಆಸೆ ನೆರವೇರಬಹುದೇ ಅಂತ…..
ಮಾರ್ಜುನ್ ಕಥೆ ಈಗ ಖುಲ್ಲಂಖುಲ್ಲ
`ಕಾಫಿ ವಿತ್ ಕರಣ್’ ಕಾರ್ಯಕ್ರಮದ ಮೂಲಕ ಕರಣ್ ಜೋಹರ್ ಕ್ರಿಕೆಟರ್ ಕೆ.ಎಲ್.ರಾಹುಲ್‌ರನ್ನು ಅವರ ಮೊದಲ ಪ್ರೇಮದ ಬಗ್ಗೆ ಕೆಣಕಿದಾಗ, ರಾಹುಲ್ ಮಲೈಕಾ ಅರೋರಾ ತನ್ನ ಮೊದಲ ಕ್ರಶ್… ಆದರೆ ಈಗಿಲ್ಲ ಎಂದರು. ನೀವು ಹಾಗೆ ಹೇಳಲು, ಅರ್ಜುನ್ ಮತ್ತು ಮಲೈಕಾ ನಡುವೆ ಬೆಳೆಯುತ್ತಿರುವ ರೊಮಾನ್ಸ್ ಕಾರಣವೇ ಎಂದಾಗ ರಾಹುಲ್ ನಿರುತ್ತರ. ಕರಣ್ ಮಾತುಗಳು ಅವರ ಸಂಬಂಧವನ್ನು ದೃಢಪಡಿಸುತ್ತದೆ, ಬಾಲಿವುಡ್ ಸುದ್ದಿ ಮೂಲಗಳು ಸಹ ಅದನ್ನೇ ಸಾರುತ್ತಿವೆ.