ಹಬ್ಬದ ಸಂದರ್ಭದಲ್ಲಿ ಮನೆಗೆ ಬಂದವರಿಗೆ ಉಪಚರಿಸದಿದ್ದರೆ ಹೇಗೆ? ಹೀಗಾದಾಗ ಅಡುಗೆ ಕಡಿಮೆ ಆಗಿ ಗೃಹಿಣಿಗೆ ಕಸಿವಿಸಿ ಆಗುತ್ತದೆ. ಇದಕ್ಕಾಗಿ ಈ ಕೆಳಗಿನ ಸಲಹೆಗಳನ್ನು ಅನುಸರಿಸಿ ಅತಿಥಿಗಳನ್ನು ಆದರಿಸಬಹುದು :

ನೀವು ಪನೀರ್‌ ಕ್ಯೂಬ್ಸ್ ಬಳಸಿ ಏನಾದರೂ ಗ್ರೇವಿ ಮಾಡಿದ್ದರೆ, ಒಂದಿಷ್ಟು ಬೆಂದ ಕಡಲೆಕಾಳನ್ನು ಬೇಯಿಸಿ ಮಸೆದ ಆಲೂ, ಹೆಚ್ಚಿದ ಈರುಳ್ಳಿ, ಟೊಮೇಟೊ ಜೊತೆ ಬಾಡಿಸಿ ಇದಕ್ಕೆ ಬೆರೆಸಿ 1-2 ಕುದಿ ಬರಿಸಿದರೆ ಆಯ್ತು. ಚಪಾತಿ, ಅನ್ನಕ್ಕೆ ಎಕ್ಸ್ ಟ್ರಾ ಗ್ರೇವಿ ರೆಡಿ!

ಫ್ರೋಝನ್‌ ಬಟಾಣಿ ಫ್ರಿಜ್‌ನಲ್ಲಿದ್ದರೆ, ಅತಿಥಿಗಳು ಬಂದ ತಕ್ಷಣ ಅದನ್ನು ಹೊರತೆಗೆದು ಬಿಸಿ ನೀರಲ್ಲಿ ನೆನೆಹಾಕಿಡಿ. ಇದನ್ನು ಬಾಣಲೆಗೆ ಹಾಕಿ 2-3 ನಿಮಿಷದಲ್ಲಿ ಬಾಡಿಸಬಹುದು. ಜೊತೆಗೆ ಹೇಗೂ ಆಲೂ ಕಿವುಚಿ, ಟೊಮೇಟೊ ಸೇರಿಸಿ ಬಾಡಿಸಿಕೊಂಡರೆ, ಮನೆಯಲ್ಲಿ ಸಿದ್ಧವಿರುವ ಸಾಂಬಾರ್‌ಗೆ ಇದನ್ನು ಬೆರೆಸಿ.

ಯಾವಾಗ ಆಲೂ ಬೇಯಿಸಿದರೂ 3-4 ಹೆಚ್ಚಿಗೆ ಬೇಯಿಸಿ ಫ್ರಿಜ್‌ನಲ್ಲಿರಿಸಿ. ಇದು ಸದಾ ಹ್ಯಾಂಡಿಯಾಗಿ ಹೆಲ್ಪ್ ಮಾಡುತ್ತದೆ. ಇದನ್ನು ಮಸೆದು ಯಾವುದೇ ಗೊಜ್ಜು, ಗ್ರೇವಿಗೆ ಬೆರೆಸಿ.... ಜೊತೆಗೆ ಹುಳಿ ಮೊಸರು, ಉಪ್ಪು, ಖಾರ ಹಾಕಿ ಕುದಿಸಿದರೆ ಆಯ್ತು. ಅಗತ್ಯವೆನಿಸಿದರೆ (ಆಲೂ ಕಡಿಮೆ ಇದ್ದಾಗ) ಮೊಸರಿಗೆ ಕಡಲೆಹಿಟ್ಟನ್ನು ಕದಡಿಕೊಂಡು ಸಾಂಬಾರ್‌ ಯಾ ಗ್ರೇವಿಗೆ ಬೆರೆಸಿ ಕುದಿಸಿ. ಈ ರೀತಿ ಕಡಲೆಹಿಟ್ಟು ಬೆರೆಸಿದ ಮೊಸರಿಗೆ, ಬೆಂದ ಆಲೂ ಮಸೆದು ಸೇರಿಸಿ ಕುದಿಸಿದರೆ, ಕಡಿಮೆ ಇರುವ ರಸಂ ಜೊತೆ  ಬಳಸಿಕೊಳ್ಳಿ.

ತೊಗರಿಬೇಳೆ, ಹೆಸರುಬೇಳೆ, ಕಡಲೆಬೇಳೆ ಎಲ್ಲಾ ಸೇರಿಸಿ ತೊವ್ವೆ ರೆಡಿ ಆಗಿದೆ. ಆದರೆ ಬಂದಿರುವ ಅತಿಥಿಗಳಿಗೆ ಸಾಲುತ್ತಿಲ್ಲ..... ಆಗ ಬೇಗ ಬೇಗ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ಜಾಸ್ತಿ ಟೊಮೇಟೊ ಹಾಕಿ ಫ್ರೈ ಮಾಡಿ. ಅಕಸ್ಮಾತ್‌ ಹೆಚ್ಚಿದ ಎಲೆಕೋಸು ಉಳಿದಿದ್ದರೆ ಅದನ್ನೂ ಸೇರಿಸಿಕೊಳ್ಳಿ. ಅದಕ್ಕೆ ಮೊಸರಿನಲ್ಲಿ ಕದಡಿದ ಕಡಲೆಹಿಟ್ಟಿನ ಮಿಶ್ರಣ ಬೆರೆಸಿ  ಬೇಗ ಬೇಗ ಕೈಯಾಡಿಸಿ. ಇದಕ್ಕೆ ರೆಡಿ ಇರುವ ತೊವ್ವೆ ಬೆರೆಸಿ ಒಟ್ಟಿಗೆ ಕುದಿಸಿ ಕೆಳಗಿಳಿಸಿ.

ಒಂದೇ ತರಹ ತೊವ್ವೆ, ದಾಲ್ ‌ಮಾಡಿ ಸಾಕಾಗಿದೆಯೇ? ಈ ರೀತಿ ಅತಿಥಿಗಳು ಬಂದಾಗ, ಅಂಥ ದಾಲ್‌ಗೆ ಏನು ಸೇರಿಸಬಹುದು? ಅವಸರದಲ್ಲಿ ಹತ್ತಿರದ ಅಂಗಡಿಯಿಂದ 2-3 ಬಗೆಯ ಸೊಪ್ಪು ತರಿಸಿ ಬೇಗ ಬೇಗ ಹೆಚ್ಚಿ, ಬಾಣಲೆಗೆ ಹಾಕಿ ಬಾಡಿಸಿ. ಇದಕ್ಕೆ ಹಸಿ ಮೆಣಸು, ಉಪ್ಪು, ಖಾರ, ಹೆಚ್ಚಿದ ಟೊಮೇಟೊ ಹಾಕಿ ಬಾಡಿಸಿ.

ಬೇಯಿಸಿದ ಆಲೂ ಕಡಿಮೆ ಆಯ್ತು ಅನ್ನಿಸಿತೇ? ತಕ್ಷಣ ಅದರ ಸಿಪ್ಪೆ ಸುಲಿದು ಮಸೆದಿಡಿ. ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಸಾಸುವೆ, ಜೀರಿಗೆ, ಇಂಗಿನ ಒಗ್ಗರಣೆ ಕೊಡಿ. ಇದಕ್ಕೆ ಹೆಚ್ಚಿದ ಟೊಮೇಟೊ, ಹುಣಿಸೇ ಕಿವುಚಿದ ರಸ, ಉಪ್ಪು, ಖಾರದ ಪುಡಿ, ಅರಿಶಿನ ಸೇರಿಸಿ. ಮಸೆದ ಆಲೂ ಹಾಕಿ ತುಸು ನೀರು ಬೆರೆಸಿ ತೆಳ್ಳಗೆ ಗ್ರೇವಿ ಕುದಿಸಿ. ಇದನ್ನು ಬಿಸಿ ಅನ್ನದ ಜೊತೆ ತಕ್ಷಣ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ