ಪ್ರತಿಯೊಬ್ಬ ನವ ವಧು ಬಯಸುವುದೇನೆಂದರೆ ನನ್ನ ಸ್ಟೈಲ್ ‌ಮತ್ತು ಲುಕ್‌ನಿಂದ ಜೀವನ ಸಂಗಾತಿಯ ಮತ್ತು ಎಲ್ಲ ಬಂಧುಗಳ ಮನವನ್ನು  ಸೂರೆಗೊಳ್ಳಬೇಕು ಎಂದು. ಹಾಗಾದರೆ ಪತಿಯ ಮನಸ್ಸನ್ನು ಸೆಳೆಯಲು ಅವಳು ಏನು ಮಾಡಬೇಕು?

ಸೆಲೆಬ್ರಿಟಿ ಮೇಕಪ್

ಆರ್ಟಿಸ್ಟ್  ಅನಿತಾ ರಾಜನ್‌ ಹೀಗೆ ಹೇಳುತ್ತಾರೆ, “ಎಲ್ಲಕ್ಕಿಂತ ಮೊದಲು ನವ ವಧು ಪರ್ಸನಾಲಿಟಿ, ಸ್ಕಿನ್‌ ಟೈಪ್‌,  ಹೇರ್‌ ಟೆಕ್ಸ್ ಚರ್‌, ಕಲರ್‌, ಐ ಬ್ರೋಸ್‌ ಶೇಪ್‌, ಫೇಸ್‌ ಕಟ್‌ಗಳನ್ನು ಪರೀಕ್ಷಿಸಬೇಕಾಗುತ್ತದೆ. ಇದರಲ್ಲಿ ಏನಾದರೂ ಕೊರತೆ ಕಂಡರೆ ಎಕ್ಸರ್‌ಸೈಜ್‌ ಮತ್ತು ಸ್ಕಿನ್‌ ಕೇರ್‌ ರೊಟೀನ್‌ನ ಸಲಹೆ ನೀಡಲಾಗುತ್ತದೆ. ಇದರಿಂದ ಚರ್ಮ ಯೌವನ ಮತ್ತು ಕಾಂತಿಯುತವಾಗಿ ಕಾಣುತ್ತದೆ.”

ಸ್ಕಿನ್‌ ಕೇರ್‌ ರೊಟೀನ್‌ : ಬ್ರೈಡ್‌ಲ್ ಮೇಕಪ್‌ ಆರ್ಟಿಸ್ಟ್ ಆಕಾಂಕ್ಷಾ ನಾಯಕ್‌ ಸ್ಕಿನ್‌ಕೇರ್‌ ರೊಟೀನ್‌ ಬಗ್ಗೆ ಹೀಗೆ ಹೇಳುತ್ತಾರೆ, “ನವ ವಧು ತನ್ನ ಸ್ಕಿನ್‌ ಟೈಪ್‌ ವಿಷಯಾಗಿ ತಿಳಿದಿರುವುದು ಅಗತ್ಯ. ಮದುವೆಗೆ ಮೊದಲು ಅವಳು ದಿನ ಕ್ಲೆನ್ಸಿಂಗ್‌, ಟೋನಿಂಗ್‌ಮತ್ತು ಮಾಯಿಶ್ಚರೈಸಿಂಗ್‌ನ ರೊಟೀನ್‌ ಕೈಗೊಳ್ಳಬೇಕು. ಶುಷ್ಕ ಚರ್ಮವಾದರೆ ಸೋಪ್‌ ಫ್ರೀ ಕನ್ಸೀಲರ್‌ ಬಳಸಬೇಕು. ದಿನಕ್ಕೆ 2 ಸಲ ಮಾಯಿಶ್ಚರೈಸ್‌ ಮಾಡಬೇಕು.“ಆಯ್ಲಿ ಸ್ಕಿನ್‌ ಆದರೆ ಕ್ಲೆನ್ಸಿಂಗ್‌ ಜೊತೆಗೆ ದಿನದಲ್ಲಿ 2-3 ಸಲ ಮುಖ ತೊಳೆಯಬೇಕು. ಈ ಸ್ಕಿನ್‌ ಟೈಪ್‌ಗೆ ಟೋನಿಂಗ್‌ ಅಗತ್ಯ. ಇದರಿಂದ ಮುಖ ಚರ್ಮದ ರಂಧ್ರಗಳು ಮುಚ್ಚಿ ಚರ್ಮದಿಂದ ತೈಲ ಒಸರುವುದು ನಿಲ್ಲುತ್ತದೆ. ಟೋನಿಂಗ್‌ ಜೊತೆಗೆ ವಾಟರ್‌ ಬೇಸ್ಡ್ ಮಾಯಿಶ್ಚರೈಸರ್‌ ಹಚ್ಚಬೇಕು. ಆಯ್ಲಿ ಸ್ಕಿನ್‌ಗೆ ಫೇಸ್‌ ಮಾಸ್ಕ್ ಕೂಡ ಅಗತ್ಯ. ಇದರಿಂದ ಮುಖದ ಡೆಡ್‌ ಸ್ಕಿನ್‌ ನಿವಾರಣೆಯಾಗುತ್ತದೆ.”

ಬೇಸ್‌ ಮೇಕಪ್‌ನ ಆಯ್ಕೆ : ಮೇಕಪ್‌ಗೆ ಸೂಕ್ತ ಫೌಂಡೇಶನ್‌ ಅತ್ಯಗತ್ಯ. ಬೇಸ್‌ ಮೇಕಪ್‌ ಸರಿಯಾಗಿದ್ದು, ಅದರ ಬಣ್ಣ ಚರ್ಮಕ್ಕೆ  ಹೊಂದಿಕೆಯಾದರೆ, ಒಂದು ಲೈನರ್‌ ಹಚ್ಚುವುದರಿಂದಲೇ ನವ ವಧು ಸುಂದರವಾಗಿ ಕಾಣಬಲ್ಲಳು.

ಮುಖದ ಮೇಲೆ ಕಲೆ, ಪಿಂಪಲ್ಸ್, ಡಾರ್ಕ್‌ ಸ್ಪಾಟ್ಸ್ ಇಲ್ಲದವರಿಗೆ ಕ್ರೀಮ್ ಬೇಸ್ಡ್ ಮೇಕಪ್‌ ಸರಿ ಇರುತ್ತದೆ. ಆದರೆ ಆಯ್ಲಿ ಸ್ಕಿನ್‌ಗೆ ಇದನ್ನು ಬಳಸಲೇಬಾರದು. ಕಲೆಯುಳ್ಳ ಚರ್ಮಕ್ಕೆ ವಾಟರ್‌ ಬೇಸ್ಡ್ ಮೇಕಪ್‌ ಬೇಕಾಗುತ್ತದೆ. ಬಿಸಿಲಿನಲ್ಲಿರಬೇಕಾದ ಸಂದರ್ಭದಲ್ಲೂ ವಾಟರ್‌ ಬೇಸ್ಡ್ ಮೇಕಪ್‌ ಸೂಕ್ತವಾಗಿರುತ್ತದೆ.

ಕಾಂಪ್ಲೆಕ್ಸ್ ಗೆ ತಕ್ಕಂತೆ ಮೇಕಪ್‌ : ಭಾರತೀಯರು 3 ಬಗೆಯ ಕಾಂಪ್ಲೆಕ್ಷನ್‌ನವರಾಗಿರುತ್ತಾರೆ. ಗೌರವರ್ಣ, ಗೋಧಿ ಬಣ್ಣ, ಶ್ಯಾಮಲ ವರ್ಣ. ಆದ್ದರಿಂದ ಕಾಂಪ್ಲೆಕ್ಸ್ ಗೆ ಅನುಸಾರವಾಗಿ ಈ ರೀತಿಯಲ್ಲಿ ಮೇಕಪ್‌ ಆರಿಸಿ :

ಗೌರವರ್ಣದ ಚರ್ಮ : ನೀವು ಗೌರವರ್ಣದವರಾದರೆ ನಿಮಗೆ ರೋಸಿ ಟಿಂಟ್‌ ಬೇಸ್‌ ಕಲರ್‌ಮತ್ತು ಕೆಲವು ಸಂದರ್ಭಗಳಲ್ಲಿ ಹೊಂಬಣ್ಣದ ಫೌಂಡೇಶನ್‌ ಬೇಸ್‌ ಹೊಂದುತ್ತದೆ. ಐ ಮೇಕಪ್‌ ಮಾಡುವಾಗ ಐ ಬ್ರೋಸ್‌ಗೆ ಬ್ರೌನ್‌ ಕಲರ್‌ ಬಳಸಿ. ಗೌರವರ್ಣಕ್ಕೆ ಪಿಂಕ್‌ ಮತ್ತು ತಿಳಿ ಕೆಂಪು ಬಣ್ಣದ ಬ್ಲಶರ್‌ ಹಾಗೂ ತಿಳಿ ಬಣ್ಣದ ಲಿಪ್‌ಸ್ಟಿಕ್‌ ಚೆನ್ನಾಗಿರುತ್ತದೆ.

ಗೋಧಿ ಬಣ್ಣದ ಚರ್ಮ : ನಿಮ್ಮದು ಗೋಧಿ ಬಣ್ಣದ ಚರ್ಮವಾದರೆ. ತಿಳಿ ಬಣ್ಣದ ಫೌಂಡೇಶನ್‌ ದೂರವಿರಿಸಿ. ಕಣ್ಣಿಗೆ ಬ್ರಾಂಜ್‌ ಅಥವಾ ಬ್ರೌನ್‌ ಕಲರ್‌ ಬಳಸಿ. ಬ್ರಾಂಜ್‌ ಕಲರ್‌ ಬ್ಲಶರ್‌ ಮತ್ತು ಡಾರ್ಕ್‌ ಕಲರ್‌ ಲಿಪ್‌ಸ್ಟಿಕ್‌ ನಿಮಗೆ ಸೂಕ್ತವಾಗಿರುತ್ತದೆ.

ಶ್ಯಾಮಲ ವರ್ಣದ ಚರ್ಮ : ಶ್ಯಾಮಲ ವರ್ಣದ ಚರ್ಮಕ್ಕೆ ವಾಟರ್‌ ಬೇಸ್ಡ್ ನ್ಯಾಚುರಲ್ ಬ್ರೌನ್‌ ಟೋನ್‌ ಫೌಂಡೇಶನ್ ಬಳಸಬೇಕು. ಫೌಂಡೇಶನ್‌ನ ಬ್ಲೆಂಡಿಂಗ್‌ನ್ನು ಚೆನ್ನಾಗಿ ಗಮನಿಸಬೇಕು. ನಿಮ್ಮ ಚರ್ಮದ ಬಣ್ಣಕ್ಕಿಂತ ಗಾಢ ಬಣ್ಣದ ಫೌಂಡೇಶನ್ ಬಳಸಬಾರದೆಂಬುದನ್ನು ನೆನಪಿಡಿ.

ಕಣ್ಣಿಗೆ ಲೈಟ್‌ ಕಲರ್‌ ಐ ಬ್ರೋಸ್‌ ಪ್ಲಮ್ ಮತ್ತು ಬ್ರಾಂಜ್‌ ಕಲರ್‌ನ ಬ್ಲಶರ್‌ ಬಳಸಿ. ತುಟಿಗಳಿಗೆ ಪರ್ಪಲ್, ರೋಸ್‌ ಮತ್ತು ಪಿಂಕ್ ಗ್ಲಾಸ್‌ ಬಳಸಬಹುದು.

ಶ್ಯಾಮಲ ವರ್ಣದ ತ್ವಚೆಗೆ ಮೇಕಪ್‌ ಗಾಢವಾದರೆ ವಯಸ್ಸು ಹೆಚ್ಚಾದಂತೆ ಕಾಣುತ್ತದೆ. ಆದ್ದರಿಂದ ಹೆವಿ ಮೇಕಪ್‌ ಆಗದಂತೆ ನೋಡಿಕೊಳ್ಳಿ.

ಲಿಪ್‌ ಕಲರ್‌ : ಅನಿತಾ ರಾಜನ್‌ ಪ್ರಕಾರ ತಾರೆಯರೂ ಸಹ ಕಡಿಮೆ ಮೇಕಪ್‌ ಮತ್ತು ಲೈಟ್‌ಶೇಪ್‌ನ ಲಿಪ್‌ಸ್ಟಿಕ್‌ ಇಷ್ಟಪಡುತ್ತಾರೆ. ಇಂದಿನ ಹೈ ಡೆಫಿನೇಶನ್‌ ಕ್ಯಾಮೆರಾಗಳು ನಿಮ್ಮ ಮೇಕಪ್‌ನ್ನು ಎತ್ತಿ ತೋರಿಸುತ್ತವೆ. ನೀವು ಡಾರ್ಕ್‌ ಶೇಡ್‌ ಲಿಪ್‌ಸ್ಟಿಕ್‌ ಹಚ್ಚಿದರೆ, ನಿಮ್ಮ ಮದುವೆಯ ಫೋಟೋಗಳಲ್ಲಿ  ಭಯ ಹುಟ್ಟಿಸುವಂತೆ ಕಾಣಬಹುದು.

ಇಂದಿನ ಟ್ರೆಂಡ್‌ಗೆ ತಕ್ಕಂತೆ ಅಂಗಡಿಗಳಲ್ಲಿ ಅನೇಕ ಬಗೆಯ ಲೈಟ್‌ ಶೇಡ್‌ಲಿಪ್‌ಸ್ಟಿಕ್‌ ದೊರೆಯುತ್ತವೆ. ಅವು ತಿಳಿ ಬಣ್ಣದ್ದಾದರೂ ಡಾರ್ಕ್‌ ಲಿಪ್‌ಸ್ಟಿಕ್‌ನ ಲುಕ್‌ ನೀಡುತ್ತವೆ. ನೀವೇನಾದರೂ ಡಾರ್ಕ್‌ ಲಿಪ್‌ಸ್ಟಿಕ್‌ ಬಳಸಿದರೆ, ನಿಮ್ಮ ಐ ಮೇಕಪ್‌ ಕಡಿಮೆ ಇರಬೇಕು. ಐ ಮೇಕಪ್‌ ಹೆವಿ ಇರುವಾಗ ತುಟಿಗಳಿಗೆ ಲೈಟ್‌ ಶೇಡ್‌ನ ಲಿಪ್‌ಸ್ಟಿಕ್‌ ಆರಿಸಿಕೊಳ್ಳಬೇಕು.

ಕಲರ್ಡ್‌ ಲೆನ್ಸ್ : ನಿಮ್ಮ ಚರ್ಮದ ಬಣ್ಣ ಯಾವುದೇ ಇರಲಿ, ನೀವು ತಿಳಿ ಕಂದು ಬಣ್ಣದ ಲೆನ್ಸ್ ನ್ನೇ ಆರಿಸಿಕೊಳ್ಳಬೇಕು. ಗ್ರೀನ್‌ಮತ್ತು ಬ್ರೌನ್‌ ಕಲರ್‌ ಸೇರಿಸಿ ಒಂದು ಹೊಸ ಬಣ್ಣದ ಐ ಲೆನ್ಸ್ ತಯಾರಿಸಲಾಗಿದ್ದು ನೋಡಲು ಚೆನ್ನಾಗಿ ಕಾಣುತ್ತದೆ. ಗ್ರೇ ಮತ್ತು ಬ್ಲೂ ಕಲರ್‌ ಲೆನ್ಸ್ ಗಳನ್ನು ಆರಿಸಬೇಡಿ.

ಫ್ಲಾಶ್‌ ಟೆಸ್ಟ್ : ಮೇಕಪ್‌ ಮಾಡುವಾಗ ಬೇಸ್‌ ಅಥವಾ ಫೌಂಡೇಶನ್‌ ಪರ್ಫೆಕ್ಟ್ ಆಗಿರಬೇಕು. ಕ್ಯಾಮೆರಾದ ಫ್ಲಾಶ್‌ನಿಂದಾಗಿ ಮೇಕಪ್‌ ಗ್ರೇ ಆಗಿ ಕಾಣಿಸುತ್ತದೆ. ಆದ್ದರಿಂದ ಬೇಸ್‌ ಹಚ್ಚಿದ ನಂತರ ನಿಮ್ಮ ಫೋನ್‌ ಕ್ಯಾಮೆರಾದ ಫ್ಲಾಶ್‌ ಆನ್‌ ಮಾಡಿ ಒಂದು ಫೋಟೋ ತೆಗೆಯಿರಿ. ಇದರಿಂದ ನಿಮ್ಮ ಫೌಂಡೇಶನ್‌ ಸರಿಯಾಗಿದೆಯೋ ಇಲ್ಲವೋ ಎಂದು ತಿಳಿಯುತ್ತದೆ. ಮೇಕಪ್‌ ಆರ್ಟಿಸ್ಟ್ ಇದನ್ನು ಫ್ಲಾಶ್‌ ಟೆಸ್ಟ್ ಎಂದು ಹೇಳುತ್ತಾರೆ.

ಮೇಕಪ್‌ನಲ್ಲಿ ಕಡಿಮೆ ಬೇಸ್‌ ಮತ್ತು ಅಗತ್ಯವಿರುವಷ್ಟು ಮೇಕಪ್‌ ಇರಬೇಕೆಂದು ನೋಡಿಕೊಳ್ಳಬೇಕು. ಲೈಟ್‌ ಕಲರ್‌ನ ಬ್ಲಶ್‌ ಮತ್ತು ಲಿಪ್‌ಸ್ಟಿಕ್‌ ನಿಮ್ಮ ದೇಹಕ್ಕೆ ಶೋಭೆ ನೀಡುತ್ತವೆ. ಈ ಸಾಫ್ಟ್ ಸ್ಟೈಲಿಂಗ್‌ನಲ್ಲಿ ನವವಧು ರೂಪವತಿಯಾಗಿ ತೋರುತ್ತಾಳೆ. ಇದಲ್ಲದೆ, ನಿಮ್ಮ ಪರ್ಸನಾಲಿಟಿಯನ್ನು ಗಮನದಲ್ಲಿರಿಸಿಕೊಂಡು ಮೇಕಪ್‌ ಮಾಡಬೇಕು.

– ಉಷಾ ರಾಣಿ

ಮೇಕಪ್‌ ಟಿಪ್ಸ್   

ನವ ವಧು ಸ್ಕಿನ್‌ಟೋನ್‌ಗೆ ಮ್ಯಾಚ್‌ ಆಗುವಂತಹ ಕನ್ಸೀಲರ್‌ ಇರಿಸಿಕೊಂಡಿರಬೇಕು. ಇದರಿಂದ ಕಣ್ಣ ಕೆಳಗಿನ ಕಪ್ಪು ವರ್ತುಲ ಮತ್ತು ಕಲೆಗಳನ್ನು ಮರೆ ಮಾಡಬಹುದು. ಟಿಂಟಿಡ್‌ ಮಾಯಿಶ್ಚರೈಸರ್‌ನ ಬಳಕೆಯಿಂದ ಮುಖಕ್ಕೆ ಗ್ಲೋ ಒದಗುತ್ತದೆ.

ಸರಿಯಾದ ಹೇರ್‌ಸ್ಟೈಲ್‌ನಿಂದ ಸೌಂದರ್ಯ ಹೆಚ್ಚುತ್ತದೆ. ಕೂದಲು ಫ್ರೀಝಿ ಆಗಿದ್ದರೆ ಸ್ಟೈಲಿಶ್‌ ಮತ್ತು ಗ್ಲಾಮರಸ್‌ ಲುಕ್‌ದೊರೆಯುತ್ತದೆ. ಸ್ಟ್ರೇಟ್‌ ಹೇರ್‌ನಿಂದ ಮೆಚೂರ್‌ ಲುಕ್‌ ದೊರೆಯುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ