ಓಪನ್ ಚಿಕನ್ ಬರ್ಗರ್
ಸಾಮಗ್ರಿ : 4 ಚಮಚ ಬೆಣ್ಣೆ, ಅರ್ಧ ಕಪ್ ಫಾರ್ಚೂನ್ ಎಣ್ಣೆ, 2 ಕಪ್ ಗೋಧಿಹಿಟ್ಟು, ತುಸು ಹಾಲು, ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಸೆಲೆರಿ, ಕ್ಯಾಪ್ಸಿಕಂ, 2 ಜೆಲ್‌ಪಿನೋ, 350 ಗ್ರಾಂ ಚಿಕನ್ ಪೀಸ್, 4-5 ಬರ್ಗರ್ ಬನ್ಸ್, ತುರಿದ ಚೀಸ್, ತುಸು ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಮೆಣಸು.
ವಿಧಾನ : ಬಾಣಲೆಗೆ ತುಸು ಫಾರ್ಚೂನ್ ಎಣ್ಣೆ, ಬೆಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಹಿಟ್ಟು ಬೆರೆಸಿ ಮಂದ ಉರಿಯಲ್ಲಿ ಕೆದಕಬೇಕು. ಗಂಟಾಗದಂತೆ ನಡುನಡುವೆ ಫಾರ್ಚೂನ್ ಎಣ್ಣೆ ಬೆರೆಸುತ್ತಾ ಕೆದಕಬೇಕು. ಸ್ವಲ್ಪ ಹೊತ್ತಿನ ನಂತರ ಹಾಲು ಬೆರೆಸಿ ಕೈಯಾಡಿಸಿ. ಇದು ಥಿಕ್ ಸಾಸ್ ಆಗುವಂತೆ ಮಾಡಿ, ಕೆಳಗಿಳಿಸಿ.ಅದೇ ಬಾಣಲೆಯಲ್ಲಿ ಉಳಿದ ಫಾರ್ಚೂನ್ ಎಣ್ಣೆ ಬಿಸಿ ಮಾಡಿ ಹೆಚ್ಚಿದ ಬೆಳ್ಳುಳ್ಳಿ. ಈರುಳ್ಳಿ, ಸೆಲೆರಿ ಹಾಕಿ ಬಾಡಿಸಿ. ನಂತರ ಕ್ಯಾಪ್ಸಿಕಂ, ಚಿಕನ್ ತುಂಡುಗಳನ್ನು ಸೇರಿಸಿ, ತುಸು ನೀರು ಚಿಮುಕಿಸಿ ಬಾಡಿಸಿ. ಆಮೇಲೆ ಇದಕ್ಕೆ ಜೆಲ್‌ಪೀನೋ, ಉಪ್ಪು, ಮೆಣಸು ಹಾಕಿ ಕೆದಕಬೇಕು. ಇದನ್ನು ಸಾಸ್‌ಗೆ ಬೆರೆಸಿ, ಗುಂಡಗೆ ಕತ್ತರಿಸಿದ, ಬೆಣ್ಣೆ ಸವರಿದ ಬರ್ಗರ್ ಬನ್ ಮೇಲೆ ಹರಡಿ, ತುರಿದ ಚೀಸ್, ಕೊ.ಸೊಪ್ಪು ಉದುರಿಸಿ ಸವಿಯಲು ಕೊಡಿ.
ಚಿಪ್ಸ್ ಡಿಪ್
ಸಾಮಗ್ರಿ : ಒಂದಿಷ್ಟು ಹೆಚ್ಚಿದ ಅವಕ್ಯಾಡೋ, ಈರುಳ್ಳಿ, ಹಸಿಮೆಣಸು, ಟೊಮೇಟೊ, ಪಾರ್ಸ್ಲೆ, 2 ಆಲೂ, ಕರಿಯಲು ಫಾರ್ಚೂನ್ ಎಣ್ಣೆ, ಜೊತೆಗೆ ಒಂದಿಷ್ಟು ಪೊಟೇಟೊ, ಬನಾನಾ, ಟಾರ್ಟಿಲಾ ಚಿಪ್ಸ್, ರುಚಿಗೆ ತಕ್ಕಷ್ಟು ಉಪ್ಪು ಮೆಣಸು, ತುಸು ಕ್ರೀಂ.
ವಿಧಾನ : ಒಂದು ಬಟ್ಟಲಿಗೆ ಈರುಳ್ಳಿ, ಅವಕ್ಯಾಡೋ, ಹಸಿಮೆಣಸು, ಉಪ್ಪು, ಮೆಣಸು ಹಾಕಿ ಬೆರೆಸಿ ಡಿಪ್ ರೆಡಿ ಮಾಡಿ ಫ್ರಿಜ್‌ನಲ್ಲಿಡಿ. ಇನ್ನೊಂದು ಬಟ್ಟಲಿಗೆ ಟೊಮೇಟೊ, ಬೆಳ್ಳುಳ್ಳಿ, ಪಾರ್ಸ್ಲೆ, ಉಪ್ಪು, ಮೆಣಸು ಹಾಕಿ ಮಿಶ್ರಣ ತಯಾರಿಸಿ ಇದನ್ನೂ ಫ್ರಿಜ್‌ನಲ್ಲಿಡಿ. 3ನೇ ಡಿಪ್‌ಗಾಗಿ ಒಂದು ಬಟ್ಟಲಿಗೆ ಕ್ರೀಂ, ಉಪ್ಪು, ಮೆಣಸು ಹಾಕಿ ಬೆರೆಸಿಡಿ. ಉಪ್ಪು ನೀರಲ್ಲಿ ನೆನೆಹಾಕಿದ ಉದ್ದಕ್ಕೆ ಹೆಚ್ಚಿದ ಆಲೂ ತುಂಡುಗಳನ್ನು ಒರೆಸಿ, ಒಣಗಿಸಿ. ಬಾಣಲೆಯಲ್ಲಿ ಫಾರ್ಚೂನ್ ಎಣ್ಣೆ ಬಿಸಿ ಮಾಡಿ. ಇವನ್ನು ಹೊಂಬಣ್ಣಕ್ಕೆ ಕರಿಯಿರಿ. ಚಿತ್ರದಲ್ಲಿರುವಂತೆ ಒಂದು ದೊಡ್ಡ ಪ್ಲೇಟಿನಲ್ಲಿ ಆಲೂ ಫ್ರೈ, ಉಳಿದ ಚಿಪ್ಸ್, 3 ಬಗೆ ಡಿಪ್ ಇರಿಸಿ ಸವಿಯಲು ಕೊಡಿ.
ಜೆಲ್‌ಪೀನೋ ಪೌಪರ್ಸ್
ಸಾಮಗ್ರಿ : ಅರ್ಧರ್ಧ ಕಪ್ ತುರಿದ ಪನೀರ್, ಚ್ಯಾಡರ್ ಚೀಸ್, ಮೋಜೆರೆಲಾ ಚೀಸ್, 10 ಜೆಲ್‌ಪೀನೋ ಮೆಣಸಿನಕಾಯಿ (ಬೀಜ ತೆಗೆದು ಸಣ್ಣಗೆ ಹೆಚ್ಚಿಡಿ), 1 ಮೊಟ್ಟೆ, 1 ಕಪ್ ಬ್ರೆಡ್ ಕ್ರಂಬ್ಸ್, ಕರಿಯಲು ಸಾಕಷ್ಟು ಫಾರ್ಚೂನ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ತುಸು ಕೊ.ಸೊಪ್ಪು.
ವಿಧಾನ : ಒಂದು ಬೇಸನ್ನಿಗೆ ಪನೀರ್, ತುರಿದ ಚೀಸ್‌ಗಳು, ಹೆಚ್ಚಿದ ಜೆಲ್‌ಪೀನೊ, ಉಪ್ಪು, ಖಾರ ಸೇರಿಸಿ ಮಿಶ್ರ ಮಾಡಿ. ಈ ಮಿಶ್ರಣದಿಂದ ಸಣ್ಣ ಉಂಡೆ ಮಾಡಿ, ಚಿತ್ರದಲ್ಲಿರುವಂತೆ ಸುರುಳಿ ಮಾಡಿ. ಬೀಟ್ ಮಾಡಿದ ಮೊಟ್ಟೆಯಲ್ಲಿ ಅದ್ದಿಕೊಂಡು ಬ್ರೆಡ್ ಕ್ರಂಬ್ಸ್ ನಲ್ಲಿ ಚೆನ್ನಾಗಿ ಹೊರಳಿಸಿ, ಕಾದ ಫಾರ್ಚೂನ್ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಇದರ ಮೇಲೆ ಕೊ.ಸೊಪ್ಪು ಉದುರಿಸಿ, ಡಿಪ್ ಜೊತೆ ಸವಿಯಲು ಕೊಡಿ.
ಇಂಡೋ ಅಮೆರಿಕನ್ ಹಾಟ್ ಡಾಗ್
ಸಾಮಗ್ರಿ : 4-5 ದೊಡ್ಡ ಚಿಕನ್ ಸಾಸೇಜ್, 1 ಕಪ್ ಫಾರ್ಚೂನ್‌ಎಣ್ಣೆ, 4-5 ಹಾಟ್ ಡಾಗ್ ಬನ್ಸ್, 4-5 ಲೆಟ್ಯೂಸ್ ಎಲೆಗಳು, 1 ಕಪ್ ಹೆಚ್ಚಿದ ಎಲೆಕೋಸು, 2 ಈರುಳ್ಳಿ, 2 ಜೆಲ್‌ಪೀನೋ ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಟೊಮೇಟೊ ಕೆಚಪ್, ಮಸ್ಟರ್ಡ್ ಸಾಸ್, ಮೆಯೋನೀಸ್.
ವಿಧಾನ : ಸಾಸೇಜ್ ಮೇಲೆ ಬ್ರಶ್‌ನಿಂದ ಫಾರ್ಚೂನ್ ಎಣ್ಣೆ ಸವರಿಡಿ. ನಂತರ ಒಂದು ಗ್ರಿಲ್ ಪ್ಯಾನ್‌ನ್ನು ಫಾರ್ಚೂನ್ ಎಣ್ಣೆಯಿಂದ ಚೆನ್ನಾಗಿ ಗ್ರೀಸ್ ಮಾಡಿ. ಇದನ್ನು ತುಸು ಬಿಸಿ ಮಾಡಿ, ಸಾಸೇಜ್ ಹಾಕಿ ಗ್ರಿಲ್ ಮಾಡಿ. ನಂತರ ಒಂದು ಬೇಸನ್ನಿಗೆ ಹೆಚ್ಚಿದ ಎಲೆಕೋಸು, ಈರುಳ್ಳಿ, ಜೆಲ್‌ಪೀನೋ, ಉಪ್ಪು, ಮೆಣಸು, ಸಾಸ್‌ಗಳನ್ನು ಬೆರೆಸಿ ಮಿಶ್ರಗೊಳಿಸಿ. ಹಾಟ್ ಡಾಗ್ ಬನ್ನುಗಳನ್ನು ಉದ್ದಕ್ಕೆ 2 ಭಾಗ ಮಾಡಿ, ಬೆಣ್ಣೆ ಸವರಿ. ಇದರ ಮೇಲೆ ಲೆಟ್ಯೂಸ್ ಎಲೆ ಹರಡಿ, ಮೇಲೆ ಮಿಶ್ರಣ ಹರಡಿರಿ. ನಂತರ ಇದನ್ನು ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿ 120 ಡಿಗ್ರಿ ಶಾಖದಲ್ಲಿ ಹದನಾಗಿ ಬೇಕ್ ಮಾಡಿ ಸವಿಯಲು ಕೊಡಿ.
ಹಾಟ್ ಗಾರ್ಲಿಕ್ ಚಿಕನ್ ವಿಂಗ್ಸ್
ಸಾಮಗ್ರಿ : 20 ಚಿಕನ್ ವಿಂಗ್ಸ್, 4 ಚಮಚ ಬೆಣ್ಣೆ, 8-10 ಎಸಳು ಬೆಳ್ಳುಳ್ಳಿ, ಕರಿಯಲು ಸಾಕಷ್ಟು ಫಾರ್ಚೂನ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಒಣ ಮೆಣಸಿನಕಾಯಿಯ ಪೇಸ್ಟ್, ಟೊಮೇಟೊ ಪೇಸ್ಟ್, ಮೆಣಸು, ಸಕ್ಕರೆ, ತುಸು ಹೆಚ್ಚಿದ ಈರುಳ್ಳಿ ತೆನೆ.
ವಿಧಾನ : ಚಿಕನ್ ವಿಂಗ್ಸ್ ಮೇಲೆ ಉಪ್ಪು, ಮೆಣಸು ಉದುರಿಸಿ 10 ನಿಮಿಷ ಮ್ಯಾರಿನೇಟ್ ಮಾಡಿ. ಬಾಣಲೆಯಲ್ಲಿ ಫಾರ್ಚೂನ್ ಎಣ್ಣೆ ಬಿಸಿ ಮಾಡಿ. ಅದಕ್ಕೆ ಚಿಕನ್ ವಿಂಗ್ಸ್ ಹಾಕಿ ಡೀಪ್ ಫ್ರೈ ಮಾಡಿ. ಇನ್ನೊಂದು ಸಣ್ಣ ಬಾಣಲೆಯಲ್ಲಿ ತುಸು ಫಾರ್ಚೂನ್ ಎಣ್ಣೆ, ಬೆಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಬೆಳ್ಳುಳ್ಳಿ, ಒಣ ಮೆಣಸಿನಕಾಯಿ ಪೇಸ್ಟ್, ಟೊಮೇಟೊ ಪೇಸ್ಟ್, ಉಪ್ಪು, ಸಕ್ಕರೆ ಹಾಕಿ ಸಾಸ್ ಗಟ್ಟಿ ಆಗುವಂತೆ ಕುದಿಸಬೇಕು. ಇದನ್ನು ಕೆಳಗಿಳಿಸಿ ಡೀಪ್ ಫ್ರೈಡ್ ವಿಂಗ್ಸ್ ಹಾಕಿ 2 ನಿಮಿಷ ನೆನೆಸಿ ಸವಿಯಲು ಕೊಡಿ.
ಕ್ರಂಬ್ಡ್ ಫಿಶ್ ಫಿಂಗರ್
ಸಾಮಗ್ರಿ : 750 ಗ್ರಾಂ ಬೋನ್‌ಲೆಸ್ ಫಿಶ್ (ಫಿಂಗರ್ ಶೇಪ್‌ನಲ್ಲಿ ಕತ್ತರಿಸಿದ್ದು), 3 ಮೊಟ್ಟೆ, 4-5 ಚಮಚ ಕಾರ್ನ್‌ಫ್ಲೋರ್, 3-4 ಕಪ್ ಬ್ರೆಡ್ ಕ್ರಂಬ್ಸ್, ರುಚಿಗೆ ತಕ್ಕಷ್ಟು ಉಪ್ಪು ಮೆಣಸು, ಕರಿಯಲು ಸಾಕಷ್ಟು ಫಾರ್ಚೂನ್ ಎಣ್ಣೆ.
ವಿಧಾನ : ಒಂದು ಬೇಸನ್ನಿಗೆ ಉಪ್ಪು, ಮೆಣಸು, ಮಸ್ಟರ್ಡ್ ಪೇಸ್ಟ್ ಮಿಶ್ರ ಮಾಡಿ. ಅದರಲ್ಲಿ ಫಿಶ್ ಹಾಕಿ ಮ್ಯಾರಿನೇಟ್ ಮಾಡಿ. ಬೇರೊಂದು ಬಟ್ಟಲಿಗೆ ಮೊಟ್ಟೆ ಒಡೆದು ಬೀಟ್ ಮಾಡಿಕೊಂಡು ಕಾರ್ನ್‌ಫ್ಲೋರ್ ಹಾಕಿ ಮಿಕ್ಸ್ ಮಾಡಿ. ಬಾಣಲೆಯಲ್ಲಿ ಫಾರ್ಚೂನ್ ಎಣ್ಣೆ ಬಿಸಿ ಮಾಡಿ, ಫಿಶ್ ಪೀಸ್‌ನ್ನು ಹಿಟ್ಟಿನಲ್ಲಿ ಅದ್ದಿಕೊಂಡು, ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಿಸಿ ಹೊಂಬಣ್ಣ ಬರುವಂತೆ ಕರಿಯಿರಿ. ಡಿಪ್ ಜೊತೆ ಸವಿಯಲು ಕೊಡಿ.
ಸ್ವಾದಿಷ್ಟ ಪಾನಿಪೂರಿ
ಸಾಮಗ್ರಿ : 250 ಗ್ರಾಂ ಆಟಾ, ರುಚಿಗೆ ತಕ್ಕಷ್ಟು ಉಪ್ಪು, ಓಮ, ಕರಿಯಲು ಸಾಕಷ್ಟು ಫಾರ್ಚೂನ್ ಎಣ್ಣೆ, ರೆಡಿಮೇಡ್ ಪಾನಿಪೂರಿ ಮಸಾಲೆ, ಜಲ್‌ಜೀರಾ, ತುಸು ಬೇಯಿಸಿದ ಮಸೆದ ಆಲೂ, ಬಟಾಣಿ, ಅಲಂಕರಿಸಲು ದಾಳಿಂಬೆ ಹರಳು, ಜೊತೆಗೆ ಪುದೀನಾ ಚಟ್ನಿ, ಹುಳಿಸಿಹಿ ಚಟ್ನಿ.
ವಿಧಾನ : ಮೊದಲು ಆಟಾಗೆ ಉಪ್ಪು, ಓಮ ಹಾಕಿ ಮೃದುವಾದ ಹಿಟ್ಟು ಕಲಸಿ. ಇದಕ್ಕೆ ಫಾರ್ಚೂನ್ ಎಣ್ಣೆ ಬೆರೆಸಿ ಚೆನ್ನಾಗಿ ನಾದಿಕೊಂಡು ನೆನೆಯಲು ಬಿಡಿ. ನಂತರ ದಪ್ಪ ಪೂರಿಗಳಾಗಿ ಲಟ್ಟಿಸಿ, ಗುಂಡಗಿನ ಸ್ಟೀಲ್ ಬಟ್ಟಲಿನ ಚೂಪಾದ ಅಂಚಿನಿಂದ ಪುಟ್ಟ ಪುಟ್ಟದಾಗಿ ಕತ್ತರಿಸಿ ಕಾದ ಫಾರ್ಚೂನ್ ಎಣ್ಣೆಯಲ್ಲಿ ಕರಿದು, ಆರಲು ಬಿಡಿ. ಒಂದು ಬಟ್ಟಲಿಗೆ ಮಸೆದ ಆಲೂ, ಬೆಂದ ಬಟಾಣಿ, ರೆಡಿ ಮಸಾಲೆ ಸೇರಿಸಿ. ಅವನ್ನು ಒಡೆದ ಪೂರಿಗಳಿಗೆ ತುಂಬಿಸಿ, ಚಿತ್ರದಲ್ಲಿರುವಂತೆ ಇತರ ಸಾಮಗ್ರಿ ಜೊತೆ ಸವಿಯಲು ಕೊಡಿ.
ಕ್ರಿಸ್ಪಿ ರಾಕ್ ಶ್ರಿಂಪ್ ವಿತ್ ಚಿಲಿ
ಮೂಲ ಸಾಮಗ್ರಿ : ಅರ್ಧ ಕಪ್ ಮೆಯೋನೀಸ್, 2 ಮೊಟ್ಟೆ, 1 ಕಪ್ ಆಟಾ, ಅರ್ಧ ಕಪ್ ಕಾರ್ನ್‌ಫ್ಲೋರ್, ಕರಿಯಲು ಸಾಕಷ್ಟು ಫಾರ್ಚೂನ್ ಎಣ್ಣೆ, 500 ಗ್ರಾಂ ಶ್ರಿಂಪ್ (ಸೀಗಡಿ), 4-5 ಲೆಟ್ಯೂಸ್ ಎಲೆಗಳು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಚಿಲೀ ಸಾಸ್, ಜೇನುತುಪ್ಪ.
ವಿಧಾನ : ಒಂದು ಬಟ್ಟಲಿಗೆ ಮೆಯೋನೀಸ್, ಚಿಲೀ ಸಾಸ್, ಜೇನು, ಉಪ್ಪು, ಮೆಣಸು ಬೆರೆಸಿ ಚಿಲೀ ಮೇೂೕ ರೆಡಿ ಮಾಡಿ, ಇದನ್ನು ಫ್ರಿಜ್‌ನಲ್ಲಿ ಇರಿಸಿ. ಈಗ 2 ಬಟ್ಟಲು ತೆಗೆದುಕೊಳ್ಳಿ. ಒಂದರಲ್ಲಿ ಮೊಟ್ಟೆ ಒಡೆದು ಬೀಟ್ ಮಾಡಿ. ಇನ್ನೊಂದಕ್ಕೆ ಆಟಾ, ಕಾರ್ನ್‌ಫ್ಲೋರ್, ಉಪ್ಪು, ಮೆಣಸು ಹಾಕಿ ಬೆರೆಸಿಕೊಳ್ಳಿ. ನಂತರ ಬಾಣಲೆಯಲ್ಲಿ ಫಾರ್ಚೂನ್ ಎಣ್ಣೆ ಬಿಸಿ ಮಾಡಿ. ಈಗ ಶ್ರಿಂಪ್‌ನ್ನು ಮೊದಲು ಮೊಟ್ಟೆ ಮಿಶ್ರಣದಲ್ಲಿ ಅದ್ದಿ, ನಂತರ ಆಟಾ ಮಿಶ್ರಣದಲ್ಲಿ ಹೊರಳಿಸಿ, ಹೊಂಬಣ್ಣ ಬರುವಂತೆ ಕರಿಯಿರಿ. ಸರ್ವಿಂಗ್ ಪ್ಲೇಟ್‌ನಲ್ಲಿ ಲೆಟ್ಯೂಸ್ ಎಲೆ ಹರಡಿ, ಇದರ ಮೇಲೆ ಕರಿದ ಶ್ರಿಂಪ್ ಹರಡಿ, ಕೋಲ್ಡ್ ಚಿಲೀ ಮೇೂೕ ಜೊತೆ ಸವಿಯಲು ಕೊಡಿ.