ಶಾಪಿಂಗ್ ಎಂಬ ಶಬ್ದದ ಸಂಶೋಧನೆ ಮತ್ತು ಚಾಲನೆ ಎಂದಿನಿಂದ ಶುರುವಾಯ್ತೋ ಗೊತ್ತಿಲ್ಲ. ಆದರೆ ಈಗ ಅದೆಷ್ಟು ಸಹಜವಾಗಿದೆಯೆಂದು ತಳ್ಳಾಡಿಸಿಕೊಂಡು ಕೊನೆಗೂ ಬುದ್ಧಿ ಬಂದ ಮೇಲೆ ನಾನು ಆನ್‌ಲೈನ್ ಬೈಯರ್ ಆಗುತ್ತೇನೆಂದು ಪ್ರತಿಜ್ಞೆ ಮಾಡಿದೆ. ನಂತರ ತಡಮಾಡದೆ ಆರ್ಡರ್ ಮಾಡಿಯೇ ಬಿಟ್ಟೆ.
ಲೇಟ್ ಆದರೂ ಲೇಟೆಸ್ಟ್ ಆಗಿ ಬಂದ ನನ್ನ ಯೋಚನೆಗೆ ನನ್ನ ಬೆನ್ನು ನಾನೇ ತಟ್ಟಿಕೊಂಡೆ. ಸಂತೋಷದಿಂದ ಉಬ್ಬಿಹೋದೆ. (ಮೊದಲೇ ಉಬ್ಬಿದ್ದೇನೆ) ನಂತರ ನೆಮ್ಮದಿಯಾಗಿ ದೇಶಭಕ್ತಿಯ ಸ್ಲೋಗನ್ ಇರುವ ಟೀ ಕುಡಿಯುತ್ತಾ ಆರ್ಡರ್‌ಗಳು ಬರುವುದನ್ನು ಕಾಯತೊಡಗಿದೆ.
ಆದರೆ ನಂತರ ತಿಳಿದದ್ದು ನನಗಿಂತ ಮೊದಲೇ ನಮ್ಮ ಎಲ್ಲಾ ನೆರೆಹೊರೆಯವರು ಆನ್‌ಲೈನ್ ಗ್ರಾಹಕರಾಗಿಬಿಟ್ಟಿದ್ದರು. ಕೊರಿಯರ್ ಬಾಯ್ ಬರುವುದೆಂದರೆ ಕೆಲವು ಪೋಸ್ಟ್ ಮನ್‌ಗಳ ದಿನನಿತ್ಯದ ಆಗಮನದಂತಿತ್ತು. ಈಗಂತೂ ಹೊತ್ತಲ್ಲದ ಹೊತ್ತಿನಲ್ಲಿಯೂ ಸರ್ಕಾರಿ ಪತ್ರಗಳೊಂದಿಗೆ ಬರತೊಡಗಿದ್ದಾರೆ. ಆನ್‌ಲೈನ್ ಗ್ರಾಹಕರ ಆರ್ಡರ್‌ಗಳನ್ನು ಕಂಪನಿಗಳ ವಾಹನಗಳು ಭಾರಿ ಸಾಮಾನುಗಳನ್ನು ಹೊತ್ತು ವೇಗವಾಗಿ ಸುತ್ತಾಡುತ್ತಾ ಮನೆಯಲ್ಲಿಯೇ ಕುಳಿತು ಶಾಪಿಂಗ್ ಮಾಡುವವರ ಕೈಗೆ ಒಪ್ಪಿಸುತ್ತಿವೆ.
ನಾನು ಮುಂಗೇರಿಾ್‌ನಂತೆ ಸುಂದರ ಕನಸುಗಳನ್ನು ಕಾಣುತ್ತಿದ್ದೆ. ಪೆಟ್ರೋಲ್ ಖರ್ಚಿನಲ್ಲಿ ಉಳಿತಾಯದ ಬಗ್ಗೆ ಕನಸು, ಈಗ ಹೆಚ್ಚು ರಿಲ್ಯಾಕ್ಸ್ ಆಗಿದ್ದು ಒಳ್ಳೆಯ ಕೆಲಸ ಮಾಡಿ ಆಫೀಸಿನಲ್ಲಿ ಬಾಸ್‌ರನ್ನು ಖುಷಿಪಡಿಸುತ್ತೇನೆಂಬ ಕನಸು, ಪ್ರಮೋಶನ್ ಚಾನ್ಸ್ ಗಳು ಇತ್ಯಾದಿ ಕನಸುಗಳ ಮಧ್ಯೆ ರಸ್ತೆಗಳಲ್ಲಿ ಅರೆತೆರೆದ ಚೇಂಬರ್‌ಗಳಲ್ಲಿ, ಅವೇಳೆಗಳಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳಬಹುದು.
ಗಂಟೆಗಟ್ಟಲೆ ಡ್ರೈವ್ ಮಾಡಿ ಮಾಲ್‌ಗಳು, ಅಂಗಡಿಗಳವರೆಗೆ ಹೋಗುವ ಸಾಹಸ, ಜಾಮ್ ಗಳಲ್ಲಿ ಸಿಲುಕಿಕೊಳ್ಳುವುದು, ದಾರಿಹೋಕರ ಮೇಲೆ ಕೊಚ್ಚೆ ಎಗರಿಸುವುದು, ಅವರಿಂದ ಬೈಗಳು, ತಿರಸ್ಕಾರಗಳನ್ನು ಕೇಳುವಿಕೆ.
ನನ್ನ ಮೊದಲ ಆರ್ಡರ್ ನನ್ನಾಕೆಗೆ 3 ಸುಂದರ ಸೀರೆಗಳಾಗಿತ್ತು. ಆದರೆ ಮಾಡೆಲ್‌ಗಳ ಮೇಲೆ ಸುಂದರವಾಗಿ ಕಾಣಿಸುತ್ತಿದ್ದ ಸೀರೆಗಳಲ್ಲಿ ಒಳಗೆಲ್ಲಾ ತೂತುಗಳಿದ್ದವು. ಬಣ್ಣಗಳೂ ಅಲ್ಲಲ್ಲಿ ಮಾಸಿದ್ದವು. ಮಗಳಿಗೆ ತರಿಸಿದ್ದ 4 ಜೋಡಿ ಚಪ್ಪಲಿಗಳು (ನಾನು ಸರಿಯಾಗಿ ಅಳತೆ ನೋಡಿ ಆರ್ಡರ್ ಮಾಡಿದ್ದರೂ) ಅವಳ ಕಾಲಿಗೆ ಬಹಳ ಚಿಕ್ಕದಾಗಿದ್ದವು.
ನಾನು ಆಸೆಪಟ್ಟು ತರಿಸಿದ್ದ ಲೆದರ್ ಬೂಟ್ಸ್ ಒಂದೊಂದು ಕಾಲಿನ ಒಂದೊಂದು ಬಣ್ಣದ್ದಾಗಿತ್ತು. ಒಂದೂವರೆ ಗಂಟೆ ಕಾಲ ಕಷ್ಟಪಟ್ಟು ನಾನು ಆರ್ಡರ್ ಕಿಕ್‌್ಲ ಮಾಡಿದ್ದೆ. ಈಗ ಅವನ್ನು ವಾಪಸ್ ಕೊಡಲು 15 ಕಿ.ಮೀ. ದೂರ ಹೋಗಬೇಕಾಗಿತ್ತು.
ಮುರಿದುಬಿದ್ದ ನನ್ನ ಕನಸುಗಳ ಬಗ್ಗೆ ನನ್ನ ದುಃಖ ಇನ್ನೂ ಆರಿರಲಿಲ್ಲ. ಅಷ್ಟರಲ್ಲಿ ನನ್ನ ಬುದ್ಧಿ ಮಣ್ಣು ತಿಂದಿತು. ಕನೆಕ್ಟಿವಿಟಿ ಪ್ರಾಬ್ಲಂಗಳಿಂದ ಬೇಸತ್ತು ಇಂಟರ್‌ನೆಟ್ ಕನೆಕ್ಟಿವಿಟಿ ತೆಗೆದುಕೊಳ್ಳಲು ಒಂದೇ ವಸ್ತುವನ್ನು 2-2 ಬಾರಿ ಆರ್ಡರ್ ಕ್ಲಿಕ್ ಮಾಡಿಬಿಟ್ಟೆ. ನಾನು ತಲೆ ಚಚ್ಚಿಕೊಂಡೆ. ಈಗತಾನೆ ಮೊದಲು ಕೊಂಡ ಪದಾರ್ಥಗಳನ್ನು ವಾಪಸ್ ಮಾಡಲು ಮರ್ಕೆಂಡೈನ್ ರಿಟರ್ನಿಂಗ್‌ಕಡೆಯವರ ಬಳಿ ಓಡಾಡಿ ಓಡಾಡಿ ವಾಸ್ಕೋಡಿಗಾಮ ಆಗಿದ್ದೆ. ಮತ್ತೆ ಕನೆಕ್ಟಿನಿಟಿ ಬರುವವರೆಗೆ ನಡುಗುವ ಹೃದಯದೊಂದಿಗೆ ಎಲ್ಲಾ ಕೆಲಸಗಳನ್ನು ಬಿಟ್ಟು ಡಬಲ್ ಆರ್ಡರ್ ಕ್ಯಾನ್ಸೆಲ್ ಮಾಡಲು ಮಾನಿಟರ್ ಮುಂದೆ ಕುಳಿತುಕೊಳ್ಳುತ್ತಿದ್ದೆ. ನನ್ನ ದುಃಖಭರಿತ ಇಂಟರ್ನೆಟ್ ವ್ಯಾಪಾರ ಇಷ್ಟಕ್ಕೆ ಮುಗಿಯುವುದು ನನ್ನ ಹಣೆಯಲ್ಲಿ ಬರೆದಿರಲಿಲ್ಲ. ಒಬ್ಬ ಮಧ್ಯಮ ವರ್ಗದ ಭಾರತೀಯನಾಗಿರುವುದರ ಶಾಪ ನನ್ನನ್ನು ಬೆಂಬಿಡದ ಬೇತಾಳನಂತೆ ಕಾಡುತ್ತಿತ್ತು.
ನನ್ನ ಬಾಸ್‌ನ ವಿವಾಹ ವಾರ್ಷಿಕೋತ್ಸಕ್ಕೆ ಗಿಫ್ಟ್ ಕೊಡಲು ಖರೀದಿಸಿದ ಮೈಕ್ರೋವೇವ್ ಓವನ್ ಒಂದು ಸಣ್ಣ ಶಿಪ್ಪಿಂಗ್ ಮಿಸ್ಟೇಕ್‌ನಿಂದಾಗಿ ಅದು ಇನ್ಯಾರದೋ ಮನೆ ಸೇರಿಬಿಟ್ಟಿತು. ಬದಲಾಗಿ ಆ ಮನೆಯವರ ಪ್ಯಾಕೇಜಿಂಗ್ ಮಿಸ್ಟೇಕ್‌ನಿಂದಾಗಿ ಒಡೆದುಹೋದ ಡಿನ್ನರ್ ಸೆಟ್ ಬಂದು ನನ್ನ ಮೂತಿ ತಿವಿಯುತ್ತಿತ್ತು.
ಮೈಕ್‌ಶ್ಯುಮಾಕರ್ ಮತ್ತು ಸೆಬಾಸ್ಟಿಯನ್ ಿಟ್ಟ್ ನಂತರ ನಾನೊಂದು ಹೊಸ ರೆಕಾರ್ಡ್ ಮಾಡುತ್ತಿದ್ದೇನೆ. ಏಕೆಂದರೆ ಫಾರ್ಮುಲಾ ಒನ್ ರೇಸ್‌ನಲ್ಲಿ ಓಡಿಸುವುದು ನಮ್ಮ ನಗರದ ಗಲ್ಲಿಗಳಲ್ಲಿ ಕಾರು ಓಡಿಸುವುದಕ್ಕಿಂತ ಬೇರೆಯಲ್ಲ. ನನ್ನ ಚಿಕ್ಕ ಹೃದಯದಲ್ಲಿ ಏಳುವಾಗ ಮಲಗುವಾಗ ನನ್ನ ಶಾಪಿಂಗ್ ಐಟಂಗಳು ಮತ್ತು ಆರ್ಡರ್‌ಗಳ ಬಗ್ಗೆ ಧಡ್ ಧಡ್ ಎಂದು ಹೊಡೆದುಕೊಳ್ಳುತ್ತಿರುತ್ತದೆ. ಯಾವಾಗ ಏನಾಗುತ್ತದೋ ತಿಳಿಯುವುದಿಲ್ಲ. ನಾನು ಮನೆಯವರೆಲ್ಲರೊಂದಿಗೆ ಕುಳಿತು ಏನೇ ಆಗಲಿ ಇನ್ನು ಮುಂದೆ ಆಯ್ದ ಒಳ್ಳೆಯ ಕಂಪನಿಗಳಿಗೆ ಆರ್ಡರ್ ಕೊಡುತ್ತೇನೆ ಎಂದು ನಿರ್ಧರಿಸಿದೆ. ಜೊತೆಗೆ ಬೆಸ್ಟ್ ಆಫರ್‌ನ ನಿಟ್ಟಿನಲ್ಲಿ ಇಂಟರ್‌ನೆಟ್ ಮತ್ತು ಕರೆಂಟ್ ಬಿಲ್‌ಗಳಿಂದ ಮನೆಯ ಬಜೆಟ್ ರೂಪಿಸಿ ನಾವೆಯನ್ನು ಮುಳುಗಿಸಬೇಡಿ ಎಂದು ಮನೆಯವರಿಗೆ ಖಂಡತುಂಡಾಗಿ ಹೇಳಿದೆ. ಇವೆಲ್ಲವುಗಳಲ್ಲದೆ ಪೆನ್ಸಿಲ್, ರಬ್ಬರ್, ಬೆಂಕಿಪೊಟ್ಟಣ, ತಾಜಾ ಪನೀರ್, ನಿಂಬೆಹಣ್ಣು, ಮೆಣಸಿನಕಾಯಿ ಇತ್ಯಾದಿಗಳ ದಿನನಿತ್ಯದ ಬೇಡಿಕೆಗಳಿಂದ ರಸ್ತೆಗಳಲ್ಲಿ ಗಲ್ಲಿಗಳಲ್ಲಿ ತಲೆ ಸುತ್ತು ಬಂದು ಉಪವಾಸ ಮಾಡಬೇಕಾಗುತ್ತಿತ್ತು. ಒಮ್ಮೆ ಯಾವುದೋ ಐಟಂನ ಡಬಲ್ ಬಿಲ್ಲಿಂಗ್ ಆದರೆ ಇನ್ನೊಮ್ಮೆ ಎರಡು ಪಟ್ಟು ಶಿಪ್ಪಿಂಗ್‌ಬಿಲ್‌ನ ಹೊಡೆತ ಬೀಳುತ್ತಿತ್ತು.
ಕೆಲವೇ ತಿಂಗಳು ಕಳೆದಿದ್ದವು. ಒಂದು ದಿನ ಇದ್ದಕ್ಕಿದ್ದಂತೆ ನಾನು ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಅನುಭವವಾಯಿತು. (ನೆಮ್ಮದಿಯ ನಿದ್ದೆಯಂತೂ ನನ್ನ ಪಾಲಿಗೆ ದೂರವಾಗಿತ್ತು) ನಾನು ಕಣ್ಣುಗಳನ್ನು ತೆರೆದು ಈ ಪ್ರಪಂಚವನ್ನು ನೋಡಲು ಬಯಸಿದೆ. ಆದರೆ… ಇರಲಿ….. ನನ್ನಾಕೆಯ ಬಾಯಿಂದ ನನ್ನ ಒಡೆದ ಹೃದಯದ ಕಥೆ ಕೇಳತೊಡಗಿದೆ…ಯಾರೋ ಪಾತಕಿ ನನ್ನ ಕ್ರೆಡಿಟ್‌ಕಾರ್ಡ್‌ಗೆ ಕನ್ನ ಹಾಕಿ ನನ್ನ ಉಳಿತಾಯ ಖಾತೆಯಿಂದ ಹಣವನ್ನೆಲ್ಲಾ ಲೂಟಿ ಮಾಡಿದ್ದ.
ನಾನು ಸೋತ ಜೂಜುಗಾರನಂತೆ ಉಸಿರೆಳೆದು ( ಹೇಗೂ ನನಗೆ ಆಕ್ಸಿಜನ್ ಮಾಸ್ಕ್ ಹಾಕಿದ್ದರು) ಇನ್ನೆಂದೂ ಆನ್‌ಲೈನ್‌ಶಾಪಿಂಗ್‌ಗೆ ಕ್ಲಿಕ್ ಮಾಡುವುದಿಲ್ಲವೆಂದು ಪ್ರಮಾಣ ಮಾಡಿದೆ. ಕೊನೆಗೂ ನಾನೊಬ್ಬ ಜಾಗರೂಕ ಗ್ರಾಹಕನಾಗಿದ್ದೆ. ನಾನು ಗೆದ್ದೆ ಎಂಬ ನಂಬಿಕೆ ಬಂದಿತ್ತು. (ನಂಬಿಕೆ ನನ್ನ ಹಳೆಯ ಅಭ್ಯಾಸವಾಗಿತ್ತು) ಹೇಗೂ ನಾವು ನಾಯಕರು, ಪೂಜಾರಿಗಳು, ಮುಲ್ಲಾಗಳು, ವಿಮಾ ಕಂಪನಿಗಳು ಎಲ್ಲರ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇವೆ.
ಮತ್ತೊಮ್ಮೆ ಸಂಸಾರದ ಜಂಜಾಟ ಹಾಗೂ ಮೋಹದಲ್ಲಿ ಸಿಲುಕಿದ ನಾನು ರಾಮಯ್ಯನ ಚಿಲ್ಲರೆ ಅಂಗಡಿಯಲ್ಲಿ ಅರ್ಧ ಕೆ.ಜಿ. ಟೊಮೇಟೋಗೆ 1 ರೂಪಾಯಿ ಕಡಿಮೆ ಮಾಡಿಸಿ ನನ್ನ ಹಳೆಯ ದಿನಗಳನ್ನು ಮೆಲುಕು ಹಾಕತೊಡಗಿದೆ.