ಅಷ್ಟಕ್ಕೂ ಮೀನಾ ಬಾಯಿ ಹೇಳಿದ್ದಾದರೂ ಏನು? ಅತಿಥಿಗಳನ್ನು ಸ್ವಾಗತಿಸುವ ಭರದಲ್ಲಿ ಹಾಲ್‌ನಿಂದ ಮುಖ್ಯದ್ವಾರದತ್ತ ಲಗುಬಗೆಯಲ್ಲಿ ಓಡಾಡುತ್ತಿದ್ದ ರೋಹಿಣಿ ತುಂಬಾ ಸುಸ್ತಾದ ಳಂತೆ ಕಾಣುತ್ತಿದ್ದಳು. ಒಂದೇ ಸಮನೆ ಅತ್ತಿಂದಿತ್ತ ಓಡಾಡುತ್ತಿದ್ದುದರಿಂದ ಸ್ವಲ್ಪ ಹೊತ್ತು ರೆಸ್‌್ಟ ತಗೋಬೇಕೆಂದು ಅನಿಸಿತು. ಬಂದ ಅತಿಥಿಗಳ ಹೊಗಳುವಿಕೆ, ಪ್ರಶಂಸೆಯ ಮಾತುಗಳಿಂದ ರೋಹಿಣಿಯ ಸಂತಸಕ್ಕೆ ಪಾರೀ ಇರಲಿಲ್ಲ.ಈ ಸಂತಸಕ್ಕೆ ಕಾರಣ ಏನಂದ್ರೆ ರೋಹಿಣಿಯ ಸೊಸೆ ಪೂರ್ವಿ ಎಂ.ಬಿ.ಎ ಪಾಸು ಮಾಡಿದ್ದು.ಹೀಗಾಗಿ ರೋಹಿಣಿಗೆ ಗಳಿಕೆಯ ಮಹಾಪೂರೀ ಹರಿದುಬಂದಿತ್ತು. ಪೂರ್ವಿಗಂತೂ ಒಂದೇ ಒಂದು ಕ್ಷಣ ಬಿಡುವಿಲ್ಲದೆ ಕಾಲಿಗೆ ಚಕ್ರ ಕಟ್ಟಿಕೊಂಡವಳಂತೆ, ಅಡುಗೆಮನೆ ಹಾಗೂ ಹಾಲ್ ನಡುವೆ ಓಡಾಡುತ್ತಿದ್ದಳು. ನಡುನಡುವೆ ಶುಭಾಶಯ ಹೇಳಲು ಬಂದ ಅತಿಥಿಗಳನ್ನು ಸತ್ಕರಿಸುತ್ತಾ, ಮಂದಹಾಸ ಬೀರುತ್ತಾ, ಕೈ ಜೋಡಿಸಿ ಧನ್ಯವಾದ ಸಮರ್ಪಿಸಬೇಕಾಗಿತ್ತು. ಔತಣಕೂಟಕ್ಕೆ ಆಗಮಿಸಿದ ಅತಿಥಿಗಳಲ್ಲಿ ಹೆಚ್ಚಿನವರು ಮಹಿಳಾ ಕ್ಲಬ್‌ನ ಸದಸ್ಯರೇ ಆಗಿದ್ದರು. ಜೊತೆಗೆ ಸ್ನೇಹಿತರು, ನೆರೆಹೊರೆಯವರು ಹಾಗೂ ಬಂಧುಗಳು ಸೇರಿಕೊಂಡಿದ್ದರು. ಸಂಭ್ರಮದ ಗುಂಗಿನಲ್ಲಿದ್ದ ರೋಹಿಣಿಗೆ ಈ ಅದ್ಭುತ ಸಂಭ್ರಮದೊಂದಿಗೆ ತನ್ನ ಬದುಕಿನ ನವಿರು ಪಯಣದ ನೆನಪು ಹಾದುಹೋಯಿತು.

ಮಹಿಳಾ ಕ್ಲಬ್‌ನ ಚುನಾವಣೆಯಲ್ಲಿ ತಾನು ಅವಿರೋಧವಾಗಿ ಆಯ್ಕೆಯಾದಾಗ ರೋಹಿಣಿಗೆ ಆಶ್ಚರ್ಯವಾಗಿತ್ತು. ಅನಾಯಾಸವಾಗಿ ಬಂದ ಗೆಲುವಿಗೆ ಆಶ್ಚರ್ಯಪಟ್ಟಳು. ಧನ್ಯವಾದ ಹೇಳಲು ಮೈಕ್‌ ಬಳಿ ಬಂದ ರೋಹಿಣಿಗೆ ಬಾಯಿಂದ ಮಾತೇ ಹೊರಡಲಿಲ್ಲ. ಅತ್ಯಂತ ವಿನೀತಳಾಗಿ ಅತೀ ಭಾವುಕತೆಯಿಂದ, ``ಸ್ನೇಹಿತರೆ.... ನೀವೆಲ್ಲರೂ ನನ್ನ ಮೇಲೆ ಇಷ್ಟೊಂದು ನಂಬಿಕೆ ಇಟ್ಟು ಆಯ್ಕೆ ಮಾಡಿದ್ದಕ್ಕೆ ನಾನು ನಿಮಗೆ ತುಂಬಾ ಆಭಾರಿಯಾಗಿದ್ದೀನಿ. ನಿಮ್ಮ ಈ ವಿಶ್ವಾಸ ಎಂದೂ ಮರೆಯುವಂಥದ್ದಲ್ಲ.. ನೀವು ಹೊರಿಸಿರುವ ಈ ಜವಾಬ್ದಾರಿಯನ್ನು ನಿಭಾಯಿಸುವ ನಂಬಿಕೆ ನನಗಿದ್ದು, ನಿಮ್ಮ ಅಪೇಕ್ಷೆಯನ್ನು ಈಡೇರಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವೆ,'' ಎನ್ನುತ್ತಾ ವಾಗ್ದಾನ ನೀಡಿದಳು.

ಈ ರೀತಿಯ ವಾಗ್ದಾನ, ಪೊಳ್ಳು ಭರವಸೆಯಿಂದ ತನ್ನ ಹೊಟ್ಟೆ ತುಂಬುವುದಿಲ್ಲ ಅನ್ನುವ ಸತ್ಯ ಗೊತ್ತಿತ್ತು. ಈ ಪದವಿಯಲ್ಲಿದ್ದುಕೊಡೇ ಎಂತಹ ಸಾಧನೆ ಮಾಡಬೇಕು ಅಂದ್ರೆ ಇಡೀ ಊರೇ ತನ್ನ ತಿರುಗಿ ನೋಡುವಂತಿರಬೇಕು. ಗೆಳತಿಯರೆಲ್ಲಾ `ಭೇಷ್‌.... ಭೇಷ್‌' ಎನ್ನುತ್ತಾ ಬೆನ್ನು ತಟ್ಟುವಂತಿರಬೇಕು. ಅಂತಹ ಒಂದು ವಿಶೇಷ ಸಾಧನೆ ಮಾಡಿದರೆ ಮಾತ್ರವೇ ಈ ಪದವಿಗೊಂದು ನೆಲೆ, ಬೆಲೆ, ಎಲ್ಲವೂ ದಕ್ಕುತ್ತದೆ ಎನ್ನುವ ಸತ್ಯ ಅಂದಾಜು ಮಾಡತೊಡಗಿದಳು.

ಬಹಳ ಹೊತ್ತಿನವರೆಗೂ ಯೋಚಿಸಿ, ಯೋಚಿಸಿ ಒಂದು ನಿರ್ಧಾರಕ್ಕೆ ಬಂದೇಬಿಟ್ಟಳು. ಅದು ತನ್ನ ಸೊಸೆ ಪೂರ್ವಿಗೆ ಎಂಬಿಎ ಓದಿಸುವುದು. ಇದರಿಂದಾಗಿ ಸಮಾಜದಲ್ಲೂ ಪ್ರತಿಷ್ಠೆ ಜೊತೆಗೆ ತನ್ನ ಬಂಧುಗಳಿಂದಲೂ ಕೂಡ ವಿಶೇಷ ಮರ್ಯಾದೆ. ಅಲ್ಲದೆ ಅಧ್ಯಕ್ಷರ ಸೊಸೆ ಎಂ.ಬಿ.ಎ. ಮಾಡಿದ್ದಾರೆಂದರೆ ಆ ಪದವಿಗೂ ಕೂಡ ಒಂದು ಘನತೆ. ಇದರಿಂದ ಇಷ್ಟೆಲ್ಲಾ ಅನುಕೂಲ ಇರಬೇಕಾದರೆ ಪೂರ್ವಿಗೆ ಎಂ.ಬಿ.ಎ ಓದಿಸೋದು ಸರಿ ಅನ್ನಿಸಿತು.

ಮದುವೆಯಾಗಿ ಸುಮಾರು 4 ವರ್ಷದ ನಂತರ ಅದೂ ಒಂದು ಮಗುವಿನ ತಾಯಿಯಾದ ಮೇಲೆ ಈಗ ಕಾಲೇಜಿಗೆ ಸೇರಿಸುವ ಅತ್ತೆಯ ಪ್ರಸ್ತಾಪ ಪೂರ್ವಿಗೆ ಆಶ್ಚರ್ಯ ತಂದಿತ್ತು. ಅತ್ತೆಯ ಈ ನಿರ್ಧಾರವನ್ನು ಕಠಿಣ ಶಬ್ದಗಳಿಂದ ಖಂಡಿಸಬೇಕೆಂದುಕೊಂಡಿದ್ದ ಪೂರ್ವಿಗೆ ತಂಪಾದ `ಕೂಲ್ ‌ಡ್ರಿಂಕ್ಸ್' ನೀಡಿ ಅವಳ ಬಾಯಿ ಮುಚ್ಚಿಸುವಲ್ಲಿ ಅತ್ತೆ ರೋಹಿಣಿ ಸಫಲಳಾದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ