ಎಂದಿನಂತೆ ಅಂದೂ ಸಹ ಅವರು ಊಟದ ಸಮಯದಲ್ಲಿ ಭೇಟಿಯಾಗಿದ್ದರು. ಸಿದ್ದಾರ್ಥ ಸುಜಾತಾಗೆ, ``ನಾನು ನಿಮ್ಮ ತಂದೆ ತಾಯಿಯರನ್ನು ನೋಡುವುದಕ್ಕೂ ಮುನ್ನ ನೀನೊಮ್ಮೆ ನನ್ನ ತಂದೆತಾಯಿಯರನ್ನು ಭೇಟಿಯಾಗು,'' ಎಂದ.

``ಏಕೆ?'' ಅವಳು ಅಚ್ಚರಿಯಿಂದ ಕೇಳಿದಳು.

``ನನಗೆ ಗೊತ್ತಿಲ್ಲ. ಆದರೆ ಅವರು ನಿನ್ನನ್ನು ಭೇಟಿಯಾಗುವುದಕ್ಕೆ ಬಹಳ ಕಾತುರರಾಗಿ ಇದ್ದಾರೆ,'' ಸಿದ್ಧಾರ್ಥನಿಗೂ ಅವನ ತಂದೆ ತಾಯಿ ಯಾವ ಕಾರಣಕ್ಕಾಗಿ ಸುಜಾತಾಳನ್ನು ಬರಹೇಳಿದ್ದಾರೆ ಎನ್ನುವ ಅರಿವಿರಲಿಲ್ಲ.

``ಸರಿ ಹಾಗಾದರೆ, ತಡವೇಕೆ? ನಾಳೆ ಸಂಜೆ ಆಫೀಸ್‌ ಮುಗಿದ ನಂತರ ನಾನು ನಿನ್ನೊಂದಿಗೆ ನಿನ್ನ ಮನೆಗೆ ಬರುತ್ತೇನೆ,'' ಸುಜಾತಾ ನುಡಿದಳು.

``ಒಳ್ಳೆಯದು,'' ಸುಜಾತಾಳಿಗೆ ಸಿದ್ದಾರ್ಥನ ಅಸ್ಪಷ್ಟ ದನಿ ಕೇಳಿಸಿತು.

``ನಾನು ನನ್ನ ತಂದೆ ತಾಯಿಗೆ ನಾಳೆ ಮನೆಗೆ ಬರುವುದು ಸ್ವಲ್ಪ ತಡವಾಗುತ್ತದೆ ಎಂದು ತಿಳಿಸುತ್ತೇನೆ,'' ಭೇಟಿ ಖಚಿತಗೊಳಿಸಿಕೊಳ್ಳುವಂತೆ ಸುಜಾತಾ ಹೇಳಿದಳು.

ಅವರಿಬ್ಬರ ಸಂಬಂಧ ಹಾಗೂ ಪ್ರಣಯ ಇದು ಒಂದು ದಿನದಲ್ಲಿ ಪ್ರಾರಂಭವಾಗಿದ್ದಲ್ಲ. ಅದು ನಿಧಾನವಾಗಿ ಹಂತಹಂತವಾಗಿ ಬೆಳೆದದ್ದಾಗಿತ್ತು.

ಇದು ಪ್ರಾರಂಭವಾದದ್ದು ಎರಡು ವರ್ಷಗಳ ಹಿಂದೆ ಆಫೀಸಿನಲ್ಲಿ ಇಬ್ಬರೂ ಊಟದ ಡಬ್ಬಿಗಳನ್ನು ಬದಲಾಯಿಸಿಕೊಳ್ಳುವುದು, ಕಾಫಿ ಟೀಗಾಗಿ ಹತ್ತಿರದ ಹೋಟೆಲ್‌ಗೆ ಹೋಗುವುದು ಮಾಡುತ್ತಿದ್ದರು. ಇಬ್ಬರೂ ಆಗಾಗ ಚಲನಚಿತ್ರ ವೀಕ್ಷಣೆಗೆ ತೆರಳುವುದು, ಇತರೆ ಸಹೋದ್ಯೋಗಿಗಳ ಜೊತೆ ಸೇರಿ ಪಿಕ್ನಿಕ್‌ಗೆ ಹೋಗುವುದೂ ನಡೆದಿತ್ತು. ಆದರೆ ಅವರೆಂದೂ ಸಭ್ಯತೆಯ ಎಲ್ಲೇ ಮೀರಿರಲಿಲ್ಲ.

ಕಛೇರಿ ಅವಧಿಯಲ್ಲಿ ತಾವಿಬ್ಬರೂ ಭೇಟಿಯಾಗುವುದನ್ನು ಆದಷ್ಟೂ ತಪ್ಪಿಸಿದ್ದರು. ಇದಕ್ಕಿದ್ದ ಪ್ರಮುಖ ಕಾರಣಗಳೆಂದರೆ ಕಛೇರಿ ಅನುಭವದ ಆಧಾರದಲ್ಲಿ ಸುಜಾತಾ, ಸಿದ್ದಾರ್ಥನಿಗಿಂತ ಹೆಚ್ಚಿನ ಅನುಭವ ಹೊಂದಿದ್ದಳು. ಅಲ್ಲದೆ, ಇಬ್ಬರ ಕೆಲಸದ ವಿಭಾಗಗಳು ಬೇರೆ ಬೇರೆಯಾಗಿದ್ದವು. ಹೀಗಾಗಿ ಪದೇಪದೇ ಭೇಟಿಯಾಗುವ ಮೂಲಕ ಸಹೋದ್ಯೋಗಿಗಳ ಬಾಯಿಗೆ ಅಗ್ಗದ ಸುದ್ದಿಯಾಗುವುದು ಅವರಿಗೆ ಬೇಕಾಗಿರಲಿಲ್ಲ. ದಿನ ಕಳೆದಂತೆ ಅವರಿಬ್ಬರಿಗೂ ತಾವು ಪರಸ್ಪರ ಪ್ರೀತಿಸುತ್ತಿರುವುದರ ಅರಿವಾಗಿತ್ತು. ಜೊತೆಗೆ ಪ್ರೀತಿ ದಿನದಿಂದ ದಿನಕ್ಕೆ ಗಾಢವಾಗುತ್ತಿರುವುದೂ ಅವರ ಗಮನಕ್ಕೆ ಬಂದಿತ್ತು. ಹೀಗಾಗಿ ತಾವು ಆದಷ್ಟು ಬೇಗನೆ ತಮ್ಮ ತಮ್ಮ ಪೋಷಕರ ಜೊತೆಗೆ ಮಾತನಾಡಿ ಅವರಲ್ಲಿ ತಮ್ಮ ಮದುವೆಯ ನಿರ್ಧಾರವನ್ನು ತಿಳಿಸಲು ಉತ್ಸುಕರಾಗಿದ್ದರು.

ಸುಜಾತಾ ತನ್ನ ಪೋಷಕರಿಗೆ ತಾನು ಸಿದ್ದಾರ್ಥನನ್ನು ಮದುವೆ ಆಗುವುದಾಗಿ ತಿಳಿಸಿದಾಗ ಅವರೇನೂ ಅಡ್ಡಿ ಮಾಡಲಿಲ್ಲ. ಸಿದ್ದಾರ್ಥ ಅವಳಿಗೆ ತಕ್ಕ ಜೋಡಿ ಎಂದೂ, ಅವನೊಡನೆ ತಮ್ಮ ಮಗಳು ಹೆಚ್ಚು ಕ್ಷೇಮದಿಂದಿರುವಳೆಂದೂ ಅವರು ತಿಳಿದಿದ್ದರು. ಆದರೆ ಇಷ್ಟು ದೀರ್ಘಕಾಲದ ಗೆಳೆತನವನ್ನು ತಮಗೆ ತಿಳಿಸಲು ಇಷ್ಟೊಂದು ಸಮಯ ತೆಗೆದುಕೊಂಡಿದ್ದಕ್ಕಾಗಿ ಅವಳ ಪೋಷಕರಿಗೆ ಕೊಂಚ ಬೇಸರವಾಗಿತ್ತು.

ಅಂದೂ ಸಹ ಸುಜಾತಾ ತಾನು ಸಿದ್ದಾರ್ಥನ ಮನೆಗೆ ಹೋಗುವೆನೆಂದಾಗ ತಂದೆ ಸಂತೋಷದಿಂದಲೇ ಒಪ್ಪಿಕೊಂಡರು. ಅವರಿಗೆ ತಮ್ಮ ಮಗಳ ಬಗ್ಗೆ ಸಂಪೂರ್ಣ ನಂಬಿಕೆ ಇತ್ತು. ಜೊತೆಗೆ ಸುಜಾತಾಳ ತಂಗಿ ವಂದನಾ ತಾನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಾಗೆ ಹೋಗುವ ಸಂದರ್ಭದಲ್ಲಿ ತಾನು ಅಕ್ಕನ ಮದುವೆಯನ್ನು ತಪ್ಪಿಸಿಕೊಳ್ಳುವುದಿಲ್ಲ ಎಂದು ನಿರ್ಧರಿಸಿದ್ದಳು.

ಸಿದ್ದಾರ್ಥನ ತಂದೆ ತಾಯಿ ಮತ್ತೊಂದು ವಿಧದ ಆಲೋಚನೆಯಲ್ಲಿದ್ದರು. ಸಿದ್ದಾರ್ಥ ತನ್ನ ಹಾಗೂ ಸುಜಾತಾಳ ವಿಚಾರವನ್ನು ತಿಳಿಸಿದಾಗ ಅವರು ಆಘಾತಗೊಂಡರು. ಅವರು ತಮ್ಮ ಮನೆಗೆ ಬರುವ ಸೊಸೆ ಅಪಾರ ಹಣ ಹಾಗೂ ವರದಕ್ಷಿಣೆ ತರುತ್ತಾಳೆ, ಇದರಿಂದ ಸಿದ್ದಾರ್ಥನ ತಂಗಿ ಸುಮತಿಯ ಮದುವೆ ಮಾಡಿಸಬಹುದು ಎನ್ನುವ ಲೆಕ್ಕಾಚಾರ ಹಾಕಿಕೊಂಡಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ