ಶಾಪಿಂಗ್‌ ಎಂಬ ಶಬ್ದದ ಸಂಶೋಧನೆ ಮತ್ತು ಚಾಲನೆ ಎಂದಿನಿಂದ ಶುರುವಾಯ್ತೋ ಗೊತ್ತಿಲ್ಲ. ಆದರೆ ಈಗ ಅದೆಷ್ಟು ಸಹಜವಾಗಿದೆಯೆಂದು ತಳ್ಳಾಡಿಸಿಕೊಂಡು ಕೊನೆಗೂ ಬುದ್ಧಿ ಬಂದ ಮೇಲೆ ನಾನು ಆನ್‌ಲೈನ್‌ ಬೈಯರ್‌ ಆಗುತ್ತೇನೆಂದು ಪ್ರತಿಜ್ಞೆ ಮಾಡಿದೆ. ನಂತರ ತಡಮಾಡದೆ ಆರ್ಡರ್‌ ಮಾಡಿಯೇ ಬಿಟ್ಟೆ.

ಲೇಟ್‌ ಆದರೂ ಲೇಟೆಸ್ಟ್ ಆಗಿ ಬಂದ ನನ್ನ ಯೋಚನೆಗೆ ನನ್ನ ಬೆನ್ನು ನಾನೇ ತಟ್ಟಿಕೊಂಡೆ. ಸಂತೋಷದಿಂದ ಉಬ್ಬಿಹೋದೆ. (ಮೊದಲೇ ಉಬ್ಬಿದ್ದೇನೆ) ನಂತರ ನೆಮ್ಮದಿಯಾಗಿ ದೇಶಭಕ್ತಿಯ ಸ್ಲೋಗನ್‌ ಇರುವ ಟೀ ಕುಡಿಯುತ್ತಾ ಆರ್ಡರ್‌ಗಳು ಬರುವುದನ್ನು ಕಾಯತೊಡಗಿದೆ.

ಆದರೆ ನಂತರ ತಿಳಿದದ್ದು ನನಗಿಂತ ಮೊದಲೇ ನಮ್ಮ ಎಲ್ಲಾ ನೆರೆಹೊರೆಯವರು ಆನ್‌ಲೈನ್‌ ಗ್ರಾಹಕರಾಗಿಬಿಟ್ಟಿದ್ದರು. ಕೊರಿಯರ್‌ ಬಾಯ್‌ ಬರುವುದೆಂದರೆ ಕೆಲವು ಪೋಸ್ಟ್ ಮನ್‌ಗಳ ದಿನನಿತ್ಯದ ಆಗಮನದಂತಿತ್ತು. ಈಗಂತೂ ಹೊತ್ತಲ್ಲದ ಹೊತ್ತಿನಲ್ಲಿಯೂ ಸರ್ಕಾರಿ ಪತ್ರಗಳೊಂದಿಗೆ ಬರತೊಡಗಿದ್ದಾರೆ. ಆನ್‌ಲೈನ್‌ ಗ್ರಾಹಕರ ಆರ್ಡರ್‌ಗಳನ್ನು ಕಂಪನಿಗಳ ವಾಹನಗಳು ಭಾರಿ ಸಾಮಾನುಗಳನ್ನು ಹೊತ್ತು ವೇಗವಾಗಿ ಸುತ್ತಾಡುತ್ತಾ ಮನೆಯಲ್ಲಿಯೇ ಕುಳಿತು ಶಾಪಿಂಗ್‌ ಮಾಡುವವರ ಕೈಗೆ ಒಪ್ಪಿಸುತ್ತಿವೆ.

ನಾನು ಮುಂಗೇರಿಾ್‌ನಂತೆ ಸುಂದರ ಕನಸುಗಳನ್ನು ಕಾಣುತ್ತಿದ್ದೆ. ಪೆಟ್ರೋಲ್ ಖರ್ಚಿನಲ್ಲಿ ಉಳಿತಾಯದ ಬಗ್ಗೆ ಕನಸು, ಈಗ ಹೆಚ್ಚು ರಿಲ್ಯಾಕ್ಸ್ ಆಗಿದ್ದು ಒಳ್ಳೆಯ ಕೆಲಸ ಮಾಡಿ ಆಫೀಸಿನಲ್ಲಿ ಬಾಸ್‌ರನ್ನು ಖುಷಿಪಡಿಸುತ್ತೇನೆಂಬ ಕನಸು, ಪ್ರಮೋಶನ್‌ ಚಾನ್ಸ್ ಗಳು ಇತ್ಯಾದಿ ಕನಸುಗಳ ಮಧ್ಯೆ ರಸ್ತೆಗಳಲ್ಲಿ ಅರೆತೆರೆದ ಚೇಂಬರ್‌ಗಳಲ್ಲಿ, ಅವೇಳೆಗಳಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳಬಹುದು.

ಗಂಟೆಗಟ್ಟಲೆ ಡ್ರೈವ್ ‌ಮಾಡಿ ಮಾಲ್‌ಗಳು, ಅಂಗಡಿಗಳವರೆಗೆ ಹೋಗುವ ಸಾಹಸ, ಜಾಮ್ ಗಳಲ್ಲಿ ಸಿಲುಕಿಕೊಳ್ಳುವುದು, ದಾರಿಹೋಕರ ಮೇಲೆ ಕೊಚ್ಚೆ ಎಗರಿಸುವುದು, ಅವರಿಂದ ಬೈಗಳು, ತಿರಸ್ಕಾರಗಳನ್ನು ಕೇಳುವಿಕೆ.

ನನ್ನ ಮೊದಲ ಆರ್ಡರ್‌ ನನ್ನಾಕೆಗೆ 3 ಸುಂದರ ಸೀರೆಗಳಾಗಿತ್ತು. ಆದರೆ ಮಾಡೆಲ್‌ಗಳ ಮೇಲೆ ಸುಂದರವಾಗಿ ಕಾಣಿಸುತ್ತಿದ್ದ ಸೀರೆಗಳಲ್ಲಿ ಒಳಗೆಲ್ಲಾ ತೂತುಗಳಿದ್ದವು. ಬಣ್ಣಗಳೂ ಅಲ್ಲಲ್ಲಿ ಮಾಸಿದ್ದವು. ಮಗಳಿಗೆ ತರಿಸಿದ್ದ 4 ಜೋಡಿ ಚಪ್ಪಲಿಗಳು (ನಾನು ಸರಿಯಾಗಿ ಅಳತೆ ನೋಡಿ ಆರ್ಡರ್‌ ಮಾಡಿದ್ದರೂ) ಅವಳ ಕಾಲಿಗೆ ಬಹಳ ಚಿಕ್ಕದಾಗಿದ್ದವು.

ನಾನು ಆಸೆಪಟ್ಟು ತರಿಸಿದ್ದ ಲೆದರ್‌ ಬೂಟ್ಸ್ ಒಂದೊಂದು ಕಾಲಿನ ಒಂದೊಂದು ಬಣ್ಣದ್ದಾಗಿತ್ತು. ಒಂದೂವರೆ ಗಂಟೆ ಕಾಲ  ಕಷ್ಟಪಟ್ಟು ನಾನು ಆರ್ಡರ್‌ ಕಿಕ್‌್ಲ ಮಾಡಿದ್ದೆ. ಈಗ ಅವನ್ನು ವಾಪಸ್‌ ಕೊಡಲು 15 ಕಿ.ಮೀ. ದೂರ ಹೋಗಬೇಕಾಗಿತ್ತು.

ಮುರಿದುಬಿದ್ದ ನನ್ನ ಕನಸುಗಳ ಬಗ್ಗೆ ನನ್ನ ದುಃಖ ಇನ್ನೂ ಆರಿರಲಿಲ್ಲ. ಅಷ್ಟರಲ್ಲಿ ನನ್ನ ಬುದ್ಧಿ ಮಣ್ಣು ತಿಂದಿತು. ಕನೆಕ್ಟಿವಿಟಿ ಪ್ರಾಬ್ಲಂಗಳಿಂದ ಬೇಸತ್ತು ಇಂಟರ್‌ನೆಟ್‌ ಕನೆಕ್ಟಿವಿಟಿ ತೆಗೆದುಕೊಳ್ಳಲು ಒಂದೇ ವಸ್ತುವನ್ನು 2-2 ಬಾರಿ ಆರ್ಡರ್‌ ಕ್ಲಿಕ್‌ ಮಾಡಿಬಿಟ್ಟೆ. ನಾನು ತಲೆ ಚಚ್ಚಿಕೊಂಡೆ. ಈಗತಾನೆ ಮೊದಲು ಕೊಂಡ ಪದಾರ್ಥಗಳನ್ನು ವಾಪಸ್‌ ಮಾಡಲು ಮರ್ಕೆಂಡೈನ್‌ ರಿಟರ್ನಿಂಗ್‌ಕಡೆಯವರ ಬಳಿ ಓಡಾಡಿ ಓಡಾಡಿ ವಾಸ್ಕೋಡಿಗಾಮ ಆಗಿದ್ದೆ. ಮತ್ತೆ ಕನೆಕ್ಟಿನಿಟಿ ಬರುವವರೆಗೆ ನಡುಗುವ ಹೃದಯದೊಂದಿಗೆ ಎಲ್ಲಾ ಕೆಲಸಗಳನ್ನು ಬಿಟ್ಟು ಡಬಲ್‌ ಆರ್ಡರ್‌ ಕ್ಯಾನ್ಸೆಲ್ ಮಾಡಲು ಮಾನಿಟರ್‌ ಮುಂದೆ ಕುಳಿತುಕೊಳ್ಳುತ್ತಿದ್ದೆ. ನನ್ನ ದುಃಖಭರಿತ ಇಂಟರ್ನೆಟ್‌ ವ್ಯಾಪಾರ ಇಷ್ಟಕ್ಕೆ ಮುಗಿಯುವುದು ನನ್ನ ಹಣೆಯಲ್ಲಿ ಬರೆದಿರಲಿಲ್ಲ. ಒಬ್ಬ ಮಧ್ಯಮ ವರ್ಗದ ಭಾರತೀಯನಾಗಿರುವುದರ ಶಾಪ ನನ್ನನ್ನು ಬೆಂಬಿಡದ ಬೇತಾಳನಂತೆ ಕಾಡುತ್ತಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ