ಭಾರತದಲ್ಲಿ ಜೀವವಿಮೆ ಸಾಂಪ್ರದಾಯಿಕ ಜೀವವಿಮೆಯ ಉತ್ಪನ್ನಗಳಾದ ಪಾರ್ಟಿಸಿಪೇಟಿಂಗ್‌ ಎಂಡಾರ್ಸ್‌ಮೆಂಟ್‌ ಮತ್ತು ಮನಿಬ್ಯಾಕ್‌ ಪ್ಲ್ಯಾನ್‌ ಮೂಲಕ ನಿರ್ವಹಣೆ ನಡೆಸುತ್ತದೆ. ಸದ್ಯಕ್ಕೆ ಈ ಕ್ಷೇತ್ರದಲ್ಲಿ ಜಾಗತೀಕರಣದ ಯೂನಿಟ್‌ ಲಿಂಕ್ಡ್ ಇನ್‌ಶ್ಯೂರೆನ್ಸ್ ಪ್ಲ್ಯಾನ್‌ ಸಾಕಷ್ಟು ಜನಪ್ರಿಯಗೊಂಡಿದೆ ಮತ್ತು ಅವರು ಮಾರುಕಟ್ಟೆ ಹಾಗೂ ಗ್ರಾಹಕರ ಮೇಲೂ ತಮ್ಮ ಪ್ರಭಾವವನ್ನು ಖಾಯಂಗೊಳಿಸಿದ್ದಾರೆ. 2008ರಲ್ಲಿ ಬೀಸಿದ ಆರ್ಥಿಕ ಹಿಂಜರಿತದ (ರಿಸಿಷನ್‌) ಚಂಡಮಾರುತಕ್ಕೂ ಮುನ್ನ ಗ್ರಾಹಕರಿಗೆ ಈಕ್ವಿಟಿ ಮಾರುಕಟ್ಟೆಯಲ್ಲಿ ಅತಿ ವೇಗವಾಗಿ ತಮ್ಮ ಪಾಲಿಸಿಗಳಿಗೆ ದೊರಕುತ್ತಿದ್ದ ಅಸಾಧಾರಣ ರಿಟರ್ನ್ಸ್ ಪ್ರಾಪ್ತಿಯ ಕಾರಣ ಸಾಕಷ್ಟು ಉತ್ಸಾಹದ ವಾತಾವರಣವಿತ್ತು.

ಆದರೆ ನಂತರ ಈಕ್ವಿಟಿ ಮಾರುಕಟ್ಟೆಯಲ್ಲಿ ಬಂದ ಅನಿಶ್ಚಿತತೆಯ ಕಾರಣ ಗ್ರಾಹಕರು ಮತ್ತೊಮ್ಮೆ ಗ್ಯಾರಂಟಿ ರಿಟರ್ನ್ಸ್ ಬರುವಂಥ ಕಡೆ ತಮ್ಮ ಗಮನವನ್ನು ಲಾಭದಾಯಕ ಯೋಜನೆಗಳತ್ತ ತಿರುಗಿಸಿದರು. ಉತ್ತಮ ರಿಟರ್ನ್ಸ್ ಒದಗಿಸುವಂಥ ಸಾಂಪ್ರದಾಯಿಕ ಉತ್ಪನ್ನಗಳಿಗೆ, ಗ್ರಾಹಕರ ಹೆಚ್ಚುತ್ತಿರುವ ಬೇಡಿಕೆಗಳಿಂದಾಗಿ ವಿಮೆಯ ಕಂಪನಿಗಳು ಎನ್‌ಡೌನ್‌ಮೆಂಟ್‌ ಮನಿ ಬ್ಯಾಕ್‌ ಪ್ಲ್ಯಾನ್‌ನಲ್ಲಿ ವೈವಿಧ್ಯತೆಗಳನ್ನು ಒದಗಿಸುತ್ತಿವೆ. ಇಲ್ಲಿಯವರೆಗೂ ನಡೆದುಕೊಂಡು ಬಂದ ಎಷ್ಟೋ ನಿರ್ವಹಣಾ ವ್ಯವಸ್ಥೆಗಳನ್ನು ಸ್ವತಂತ್ರ ಶೋಧಗಳಲ್ಲಿ ನಿಷ್ಕರ್ಷೆಯಾದುದು ಎಂದರೆ ದೀರ್ಘಕಾಲದ ಪ್ಲ್ಯಾನಿಂಗ್‌ ಮೂಲಕ ಅಧಿಕಾಂಶ ಗ್ರಾಹಕರು ರಿಸ್ಕ್ ತೆಗೆದುಕೊಳ್ಳಲು ಖಂಡಿತಾ ಸಿದ್ಧರಿಲ್ಲ ಹಾಗೂ ಅವರು ಗ್ಯಾರಂಟಿ ರಿಟರ್ನ್ಸ್ ಗೆ ಮಾತ್ರ ಪ್ರಾಶಸ್ತ್ಯ ನೀಡುತ್ತಾರೆ ಎಂಬುದು. ಅವರ ವಿಶ್ವಾಸ ಬದಲಿಗೆ ಸಾಂಪ್ರದಾಯಿಕ ಉತ್ಪನ್ನಗಳನ್ನು ಕೊಳ್ಳುವುದೇ ಆಗಿದೆ. ಒಂದು ವರದಿಯ ಪ್ರಕಾರ, ಕೆನರಾ, ಓರಿಯೆಂಟ್‌ ಬ್ಯಾಂಕ್‌ ಆಫ್ ಕಾಮರ್ಸ್‌ ಲೈಫ್‌ ಇನ್‌ಶ್ಯೂರೆನ್ಸ್ ಕಂ. ಲಿ., ಮೂಲಕ ನಿರ್ವಹಿಸಲ್ಪಟ್ಟ ಗ್ರಾಹಕ ಸಮೀಕ್ಷೆಯಿಂದ ತಿಳಿದುಬಂದದ್ದು ಎಂದರೆ, ಗ್ರಾಹಕರ ಉಲ್ಲೇಖನೀಯ ಶೇಕಡಾವಾರು ಅಂಕಿಸಂಖ್ಯೆಗಳು, ಜೀವನದ ವಿಭಿನ್ನ ಹಂತಗಳಲ್ಲಿ ಗುರಿಯ ಸಾಧನೆಗಾಗಿ, ಒಂದೇ ಸಲದ ಹೂಡಿಕೆ ಬದಲು ನಿಯಮಿತ ಆದಾಯಕ್ಕೆ ಆದ್ಯತೆ ನೀಡುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಗ್ಯಾರಂಟಿ ಮಂಥ್ಲಿ ಇನ್‌ಕಂ ಪ್ಲ್ಯಾನ್‌ (ಪಿ) ಯೋಜನೆಗಳ ದೊರೆಯುವಿಕೆ ಸಂಭಿನಿಸಿದೆ.

ಈ ಪಿ ಎಂಥ ಗ್ರಾಹಕರಿಗೆ ಎಂದರೆ, ಯಾರು ತಮ್ಮ ಆದಾಯದ ನಿಯಮಿತ ಮೂಲ ಮಾತ್ರವಲ್ಲದೆ, ಪೂರಕ ಆದಾಯದಿಂದಲೂ ಲಾಭ ಗಳಿಸಬಯಸುತ್ತಾರೋ ಅಂಥವರಿಗೆ ಅಥವಾ ತಮ್ಮ ನಿವೃತ್ತಿಯ ನಂತರ ಅಗತ್ಯ ಪೂರೈಕೆಗಳಿಗಾಗಿ ನಿಯಮಿತ ಆದಾಯದ ಮೂಲದ ಹುಡುಕಾಟದಲ್ಲಿ ತೊಡಗಿರುವವರಿಗೆ.

ಪ್ರಸ್ತುತ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ವಿಭಿನ್ನ ಬಗೆಯ ಪಿ ಮೂಲಗಳು ಲಭ್ಯವಿವೆ. ಆದ್ದರಿಂದ ಯಾವ ಪಿ ನಿಮಗೆ ಅನುಕೂಲಕರ ಎಂದು ಯೋಚಿಸಿ ಆರಿಸಿಕೊಳ್ಳಬೇಕಾದುದು ಅನಿವಾರ್ಯ.

ವಿಮೆಯ ಕಂಪನಿಗಳ ಪಿ ಯಾವ ತರಹ ಕೆಲಸ ಮಾಡುತ್ತವೆ?

ಸಾಮಾನ್ಯವಾಗಿ ಪಿ 10-15 ವರ್ಷಗಳ ಕಾಲಾವಧಿಗೆ ತಕ್ಕಂತೆ ಮಾಸಿಕ ಆಧಾರದಲ್ಲಿ ನಿಯಮಿತ ಅಂತರಾಳದಲ್ಲಿ ಪೇಮೆಂಟ್ಸ್ ಪೂರೈಸುತ್ತವೆ. (ಸಾಮಾನ್ಯವಾಗಿ ಇಂದಿನ ಕಂಪನಿಗಳು ವಾರ್ಷಿಕ ಪೇಮೆಂಟ್‌ನ್ನು ಪೂರೈಸುತ್ತಿವೆ). ಪ್ರೀಮಿಯಂ ಪೇಮೆಂಟ್‌ಅವಧಿಯಲ್ಲಿ ಪಿಯಲ್ಲಿ ಲೈಫ್‌ ಕವರ್‌ನ ಮಹತ್ವಪೂರ್ಣ ಜವಾಬ್ದಾರಿಯನ್ನೂ ನಿರ್ವಹಿಸುತ್ತವೆ. ಕೆಲವು ಪ್ಲ್ಯಾನ್‌ಗಳು ಆದಾಯ ಪ್ರಾಪ್ತಿಯ ಅವಧಿಯಲ್ಲೇ ಲೈಫ್‌ ಕವರೇಜ್‌ನ್ನೂ ಪೂರೈಸುತ್ತವೆ.  ಸಾಧಾರಣ ಹಣ ಸಂಗ್ರಹಣಾ ಉತ್ಪನ್ನಗಳಿಗೆ ಹೋಲಿಸಿದಾಗ ಪಿಯಲ್ಲಿ ಲೈಫ್‌ ಕವರ್‌ನ ಅನುಪಮ ಲಾಭವಿದೆ. ಸಾಧಾರಣ ಉತ್ಪನ್ನಗಳಲ್ಲಿ ಮರಣದ ಪ್ರಸಂಗಗಳಲ್ಲಿ ಇಂಥ ಯಾವ ಲಾಭ ಸಿಗುವುದಿಲ್ಲ. ಈ ರೀತಿ ಪಿಯಲ್ಲಿ ತೊಡಗುವುದರಿಂದ ಗ್ರಾಹಕರಿಗೆ ಎಷ್ಟೋ ಮಾನಸಿಕ ನೆಮ್ಮದಿ ದೊರಕುತ್ತದೆ.

ವಿಮಾದಾರರ ಆಕಸ್ಮಿಕ ಸಾಲವಾದರೂ ಅವರ ಮನೆಯವರು ಸುರಕ್ಷಿತರಾಗಿ ಇರಬಹುದು. ಪ್ರತಿ ಪ್ಲ್ಯಾನಿನಲ್ಲೂ ಲೈಫ್‌ ಕವರೇಜ್‌ಬೇರೆ ಬೇರೆ ಆಗಿರುತ್ತದೆ. ಆದ್ದರಿಂದ ನಿಮಗೆ ಸೂಕ್ತ  ಎನಿಸುವಂಥ ಯಾವ ಲೈಫ್‌ ಕವರೇಜ್‌ ಸರಿಹೋಗುತ್ತದೆ ಎಂಬುದನ್ನು ಪರೀಕ್ಷಿಸುವುದು ಅತ್ಯವಶ್ಯಕ. ನಿಮಗೆ ಭವಿಷ್ಯದ ಸಂರಕ್ಷಣೆ ಬಲು ಮುಖ್ಯ ಎನಿಸಿದರೆ, ಆಗ ನೀವು ಪ್ರೀಮಿಯಂ ಸಲ್ಲಿಸುತ್ತಿರುವ ಕಾಲಾವಧಿಯಲ್ಲಿ ಮಾತ್ರವಲ್ಲದೆ, ಆದಾಯ ಪ್ರಾಪ್ತಿ ಆಗುವವರೆಗೂ ಸಹ ಕವರೇಜ್‌ ಒದಗಿಸುವಂಥ ಪಿಯನ್ನೇ ಆರಿಸಿಕೊಳ್ಳಬೇಕು. ಜೊತೆಗೆ, ವಿಮಾದಾರರ ಮೃತ್ಯು ಲಾಭದ ಪೇಮೆಂಟ್‌ಗೆ ಮೊದಲೇ ಸಲ್ಲಿಸುವ ಪೇಮೆಂಟ್‌ನಿಂದ ಮಾಸಿಕ ಆದಾಯದಲ್ಲಿ ಕಡಿತ ಆಗದಂಥ  ಪಿ ಪ್ಲ್ಯಾನ್‌ನ್ನೇ ಆರಿಸಿಕೊಳ್ಳಬೇಕು. ಆಗ ಲೈಫ್‌ ಕವರೇಜ್‌ನಲ್ಲಿ ಕೊರತೆ ಉಂಟಾಗದು. ನೀವು ಇದರಿಂದ ತೆರಿಗೆ ಲಾಭ ಬಯಸುವುದಾದರೆ, ನಿಮ್ಮ ಲೈಫ್‌ ಕವರ್‌ ಪ್ರಸ್ತುತ ಆದಾಯತೆರಿಗೆ ಕಾನೂನಿನ ನಿಯಮಾನುಸಾರ ಪ್ರಾಸಂಗಿಕ ತೆರಿಗೆ ಲಾಭ ಗಳಿಸುವಲ್ಲಿ ಪೂರಕವೇ ಅಲ್ಲವೇ ಎಂಬುದನ್ನು ಮೊದಲೇ ಪರಾಮರ್ಶಿಸಿ ದೃಢಪಡಿಸಿಕೊಳ್ಳಿ. ಈ ವಿಷಯದ ಕುರಿತಾಗಿ ನಿಮ್ಮ ಹಣಕಾಸು ಸಲಹೆಗಾರರಿಂದ ಟಿಪ್ಸ್ ಪಡೆಯಿರಿ.

ವಿಮೆಯ ಕಂಪನಿಗಳಿಂದ ಪಿ ಖರೀದಿಸುವುದು ಸರಿಯೇ?

ಎಲ್ಲಕ್ಕೂ ಮೊದಲು ನೀವು ನಿಮ್ಮ ಗುರಿಯನ್ನು ನಿರ್ಧರಿಸಬೇಕು, ಅದನ್ನು ನಿಮ್ಮ ಈ ಹೂಡಿಕೆಯಿಂದ ಪೂರೈಸಲಾಗುವುದೋ ಇಲ್ಲವೋ ನೋಡಿಕೊಳ್ಳಬೇಕು. ನಿಮ್ಮ ಗುರಿ ಯಾವುದಾದರೂ ನಿಶ್ಚಿತ ಅಗತ್ಯಗಳಾದ ಮನೆ ಕೊಳ್ಳುವಿಕೆ, ಮಗಳ ಮದುವೆ ಇತ್ಯಾದಿಗಳಿಗೆ ಒಂದೇ ಬಾರಿಯ ಧನಪ್ರಾಪ್ತಿ ಆದಲ್ಲಿ, ಆಗ ಒಂದೇ ಸಲದ ಧನಪ್ರಾಪ್ತಿ ಪೂರೈಸುವ ಎನ್‌ಡೋಮೆಂಟ್‌ ಪ್ಲ್ಯಾನ್‌ನಿಮಗೆ ಅತಿ ಸೂಕ್ತ ಆಯ್ಕೆ ಆಗಿರುತ್ತದೆ. ಬದಲಿಗೆ, ನೀವು ನಿಮ್ಮ ಜೀವನಶೈಲಿ ಅಥವಾ ಅವಲಂಬಿತರ ಅವಶ್ಯಕತೆಗಳನ್ನು (ಮಕ್ಕಳ ಹಾಸ್ಟೆಲ್ ಲೈಫ್‌ಗಾಗಿ ಹೆಚ್ಚುವರಿ ಸಪೋರ್ಟ್‌ ಅಥವಾ ತಾಯಿತಂದೆಯರ ಸಪೋರ್ಟ್‌ಗಾಗಿ ಇತ್ಯಾದಿ)  ಪೂರೈಸಲು ನಿಯಮಿತ ಆದಾಯದ ಹೊರತಾಗಿ ಹೆಚ್ಚುವರಿ ಆದಾಯದ ಕುರಿತು ಚಿಂತಿಸುತ್ತಿದ್ದರೆ, ಆಗ ಇಂಥ ಪಿ ಸ್ಕೀಮುಗಳು ಬಹಳ ಉಪಯಕ್ತ ಎನಿಸುತ್ತವೆ. ಇದಾದ ನಂತರ ನಿಮ್ಮ ಗುರಿಯ ಅವಧಿಯ ಕುರಿತಾಗಿ ವಿಚಾರ ನಡೆಸುವುದೂ ಅಷ್ಟೇ ಮಹತ್ತರ ವಿಷಯ. ನೀವು ಜೀವನವಿಡೀ ಆದಾಯದ ಪೇಮೆಂಟ್‌ಗಳ ಹುಡುಕಾಟದಲ್ಲಿದ್ದರೆ, ಆಗ ವಾರ್ಷಿಕ ವೇತನ ಪ್ಲ್ಯಾನ್‌ ಎಲ್ಲಕ್ಕಿಂತಲೂ ಉತ್ತಮ ಆಗುತ್ತದೆ. ಅದರ ಬದಲು, ಈಗ ನೀವು 10-15 ವರ್ಷದ ನಿಯಮಿತ ಆದಾಯದ ಕುರಿತು ಯೋಚಿಸುತ್ತಿದ್ದರೆ, ಆಗ ಪಿ ಹೆಚ್ಚು ಉಪಯುಕ್ತ. ಆದರೆ ಪಿ ಸಣ್ಣ ಕಾಲಾವಧಿಯ ಮೂಲಕವೇ ನಿಮಗೆ ಆದಾಯದ ಪೂರೈಕೆ ಮಾಡುವುದರಿಂದ, ಆಗ ಆದಾಯದ ಸಮಾನ್ಯಕ್ಕಿಂತಲೂ ಹೆಚ್ಚಿನ ಮಟ್ಟದ್ದಾಗುತ್ತದೆ. ಇದರ ಹೊರತಾಗಿ ದೊರೆತ ಆದಾಯ ತೆರಿಗೆ ಹೆಚ್ಚು ಯೋಗ್ಯವೆನಿಸುತ್ತದೆ, ಆದರೆ ಪಿ ಯೋಜನೆಯು ಆದಾಯ ತೆರಿಗೆಯ ಬಾಬತ್ತಿನಲ್ಲಿ ಬರುವುದಿಲ್ಲ.

ನಾನು ಎಂಥ ಪಿ ಯೋಜನೆಯನ್ನು ಖರೀದಿಸಬೇಕು?

ರಿಸ್ಕ್ ಫ್ಯಾಕ್ಟರ್‌ ಗಮನದಲ್ಲಿರಿಸಿಕೊಂಡು ನೀವು ಒಟ್ಟು ಎಷ್ಟು ಮೊತ್ತವನ್ನು ಹೂಡಲು ಸಮರ್ಥರು ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಬೇಕಾದುದು ಅಗತ್ಯ. ಪ್ರಸ್ತುತ ಮಾರುಕಟ್ಟೆಯಲ್ಲಿ ಪಾರ್ಟಿಸಿಪೇಟಿಂಗ್‌ ನಾನ್‌ ಪಾರ್ಟಿಸಿಪೇಟಿಂಗ್‌ ಪಿಗಳು ಲಭ್ಯವಿವೆ. ನಾ.ಪಾ. ಪ್ಲ್ಯಾನ್‌ ನಿಮಗೆ ಆರಂಭದಿಂದಲೇ ಲಾಭದ ನಿಶ್ಚಿತತೆ ಒದಗಿಸುತ್ತದೆ, ಆದರೆ ಇದಕ್ಕೆ ಯಾ ಅಪ್‌ ಸೈಡ್‌ಸಾಮರ್ಥ್ಯ ಇಲ್ಲ. ಅದೇ ಪಾ.ಪ್ಲ್ಯಾನ್‌ನಲ್ಲಿ ಡೆಫ್‌ ನೆಟ್‌ ಅಪ್‌ ಫ್ರಂಟ್‌ ಗ್ಯಾರಂಟಿ ನೀಡುತ್ತಾರೆ, ಆದರೆ ಇದರಲ್ಲಿ ಬೋನಸ್ ನಿಧಾನವಾಗಿ ಕೂಡಿಕೊಳ್ಳುತ್ತಾ ಅಪ್‌ಸೈಡ್‌ ರಿಟರ್ನ್ಸ್ ನ ಸೌಲಭ್ಯದ ಸಾಮರ್ಥ್ಯ ಇರುತ್ತದೆ.

ಆದ್ದರಿಂದ ಪ್ಲ್ಯಾನ್‌ ಕೊಳ್ಳುವಾಗ, ನೀವು ಆ ಸ್ಕೀಮಿನ ಪೂರ್ತಿ ವಿವರಗಳನ್ನು ಸಾಧಾನಪೂರ್ವಕವಾಗಿ ಓದಿಕೊಳ್ಳತಕ್ಕದ್ದು. ಆಗ ಮಾತ್ರ ನೀವು ಪ್ಲ್ಯಾನಿನ ಏನೆಂಬುದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬಹುದು. ಅಂದರೆ, ಪ್ರೀಮಿಯಂ ರೂಪದಲ್ಲಿ ನೀವು ಎಷ್ಟು ಕಟ್ಟುತ್ತೀರಿ, ಬದಲಿಗೆ ನಿಮಗೆ ಏನೇನು ಲಾಭಗಳು ದೊರಕುತ್ತವೆ ಎಂಬುದು ತಿಳಿಯುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ವಿಭಿನ್ನ ಪ್ಲ್ಯಾನ್‌ಗಳ  ಅಂಕಿ ಅಂಶಗಳನ್ನು ಹೋಲಿಸಿನೋಡಿ. ನೀವು ಒಂದು ನಿರ್ಧಾರ ತೆಗೆದುಕೊಳ್ಳಲು ಸಾಧ್ಯ, ಆಗ ಮಾತ್ರ ಯಾವುದು ನಿಮಗೆ ಹೇಗೆ ಪೂರಕ ಎಂದು ತಿಳಿಯುತ್ತದೆ.

ಪಿ ಖರೀದಿಸಿದ ನಂತರ ನಾನೇನು ಮಾಡಬೇಕು?

ನೀವು ಯಾವುದೇ ಪ್ಲ್ಯಾನ್‌ ಖರೀದಿಸಿರಲಿ, ಅದರ ಪ್ರಗತಿಯ ಕುರಿತಾಗಿ ಪೂರ್ತಿ ಅಪ್‌ಡೇಟ್‌ ಆಗಿರಬೇಕು. ನಿಮ್ಮ ಗುರಿಯ ಸಾಧನೆಗೆ ಈ ಪ್ಲ್ಯಾನ್‌ ಪೂರಕವೋ ಅಲ್ಲವೋ ಎಂಬುದನ್ನು ಅಗತ್ಯವಾಗಿ ಗಮನಿಸಿ. ನಿಮ್ಮ ಪ್ಲ್ಯಾನಿನ ಮೌಲ್ಯವನ್ನು ಗರಿಷ್ಠಗೊಳಿಸಲು ನೀವು ಎಲ್ಲಾ ಪ್ರೀಮಿಯಂಗಳನ್ನೂ ನಿಯಮಿತವಾಗಿ ಆಯಾ ತಾರೀಕಿನಂದು ಕಟ್ಟಿದ್ದೀರಿ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಪ್ರೀಮಿಯಂ ಪೇಮೆಂಟ್‌ ಮಾಡದೆ ಇರುವುದು ಅಥವಾ ಸಮಯಕ್ಕೆ ಮೊದಲೇ ಪ್ಲ್ಯಾನನ್ನು ಸರೆಂಡರ್‌ಮಾಡುವುದು, ನಿಮ್ಮ ಪಾಲಿಸಿಗೆ ಲಾಭ ಇಲ್ಲದಂತೆ ಮಾಡಬಹುದು. ಪಿ ನಿಮ್ಮ ಗುರಿಸಾಧನೆಯನ್ನು ಸುರಕ್ಷಿತವಾಗಿಡಲು ಇನ್‌ ಬಿಲ್ಟ್ ಲೈಫ್‌ ಕವರ್‌ನ ಜೊತೆ ಆದಾಯ ತೆರಿಗೆಯು ಹಿಂಸೆಪಡಿಸದಂತೆ, ಸರಾಗವಾಗಿ ನಿಮ್ಮ ಹೂಡಿಕೆ ಮುಂದುವರಿಸಲು ಅನುಪಮ ಸಾಧನವಾಗಿದೆ ಎಂದರೆ ಉಪ್ರೇಕ್ಷೆಯಲ್ಲ.

ಪ್ಲ್ಯಾನಿನ ಪ್ರಕಾರ ಆದಾಯ ತೆರಿಗೆಯ ಲಾಭ ಪ್ರಸ್ತುತ ಆದಾಯ ತೆರಿಗೆಯ ಕಾನೂನಿನ ಚೌಕಟ್ಟಿಗೆ ತಕ್ಕಂತಿರುತ್ತದೆ. ಇದರಲ್ಲಿ ಕಾಲಕಾಲಕ್ಕೆ ಬದಲಾವಣೆ ಆಗುತ್ತಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಆದಾಯ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ.

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ