ನೀನು ವೆರಿ ಸ್ಪೆಷಲ್

ನಮಗಾಗಿ ಯಾರಾದರೂ ಸರ್‌ಪ್ರೈಸ್‌ ಪ್ಲಾನ್‌ ಮಾಡಿದರೆ ಆಗದು ನಮಗೆ ಸ್ಪೆಷಲ್ ಎನಿಸುತ್ತದೆ. ಈ ವ್ಯಾಲೆಂಟೈನ್‌ ದಿನದಂದು ಪತಿ ಪತ್ನಿ ಇಬ್ಬರೂ ಪರಸ್ಪರರಿಗಾಗಿ ಏನಾದರೂ ಸ್ಪೆಷಲ್ ಆಗಿ ಪ್ಲಾನ್‌ ಮಾಡಬೇಕು. ಇದರಿಂದ ಇಬ್ಬರ ಮುಖದಲ್ಲೂ ಪ್ರೇಮದ ಮಧುರ ಮಂದಹಾಸ ಮಿಂಚುತ್ತದೆ. ನೀವು ಅವರಿಗಾಗಿ ಇಷ್ಟದ ಗಿಫ್ಟ್ ನ್ನು ಆನ್‌ಲೈನ್‌ ಆರ್ಡರ್‌ ಮಾಡಿದರೆ, ಅವರು ನಿಮಗಾಗಿ ಮೂವಿ ಟಿಕೆಟ್‌, ಕ್ಯಾಂಡಲ್ ಲೈಟ್‌ ಡಿನ್ನರ್‌ ಏರ್ಪಡಿಸಿ ಇಬ್ಬರಿಗೂ ಪುಳಕದ ಆನಂದ ನೀಡಬಹುದು.

ಅವರಿಗಾಗಿ ಸ್ಪೆಷಲ್ ಗಿಫ್ಟ್ಸ್

ಈ ದಿನ ಅಗತ್ಯವಾಗಿ ನಿಮ್ಮ ಪತಿಗೆ ಸ್ಪೆಷಲ್ ಗಿಫ್ಟ್ ನೀಡಿ. ಅದು ದುಬಾರಿ ಗಿಫ್ಟ್ ಆಗಬೇಕು ಎಂದೇನಲ್ಲ. ಅವರಿಗೆ ಅತಿ ಅಗತ್ಯವಾದ ಸಣ್ಣಪುಟ್ಟ ವಸ್ತುಗಳನ್ನು ಗಿಫ್ಟ್ ಆಗಿ ಕೊಡಬಹುದು.

ಮಾತುಮಾತುಗಳಲ್ಲೇ ಪ್ರೀತಿ ಉಕ್ಕಲಿ

ಸಂಸಾರ ಎಂದ ಮೇಲೆ ಪತಿ ಪತ್ನಿ ಜೊತೆಗೇನೋ ಇರುತ್ತಾರೆ, ಆದರೆ ಮನೆಯ ಜವಾಬ್ದಾರಿಗಳಿಂದಾಗಿ ಪರಸ್ಪರ 2 ನಿಮಿಷ ಕುಳಿತು ಪ್ರೀತಿ ಪ್ರೇಮದ ಮಾತುಗಳನ್ನು ವಿನಿಮಯ ಮಾಡಿಕೊಳ್ಳಲು ಸಹ ಪುರಸತ್ತು ಇರುವುದಿಲ್ಲ. ಆದ್ದರಿಂದ ಈ ವ್ಯಾಲೆಂಟೈನ್ ಡೇನಂದು ಸಾಂಸಾರಿಕ ಜಂಜಾಟ ಮರೆತು ಪತಿಯೊಡನೆ ಪ್ರೀತಿಯ ಮಾತನಾಡಿ, ರೊಮ್ಯಾಂಟಿಕ್‌ ಮೂಡ್ ಮುಂದುರಿಯಲಿ.

ರೊಮ್ಯಾಂಟಿಕ್ವಾತಾವರಣ

ಈ ದಿನ ಮನೆಯನ್ನು ನೀಟಾಗಿ ಸಿಂಗರಿಸಿ. ಅದಕ್ಕೆ ರೊಮ್ಯಾಂಟಿಕ್‌ ಟಚ್‌ ಕೊಡಿ. ಗೋಡೆಗೆ ನಿಮ್ಮಿಬ್ಬರ ಫೋಟೋ ಹಾಕಿಸಿ. ಮನೆಯನ್ನು ಹೂ, ತೋರಣಗಳಿಂದ ಅಲಂಕರಿಸಿ. ಈ ದಿನ ಬೆಡ್‌ ರೂಂ ಸ್ಪೆಷಲ್ ಆಗಿರಲಿ. ಆಗ ಅವರು ನಿಮ್ಮಿಂದ ಹೇಗೆ ತಾನೇ ದೂರ ಹೋದಾರು?

ನಾನು ನೀನು ಮಾತ್ರ

ಈ ದಿನ ಹೊರಗೆಲ್ಲಾದರೂ ಸುತ್ತಾಡುವ ಕಾರ್ಯಕ್ರಮ ರೂಪಿಸಿ. ಹೊರಗಿನ ವಾತಾವರಣದಲ್ಲಿ ಪರಸ್ಪರ ಸಾಂಗತ್ಯ ಎಂಜಾಯ್ ಮಾಡಿ. ಈ ದಿನ ನಿಮ್ಮ ಸಂಗಾತಿಗೆ ಅಗತ್ಯವಾಗಿ `ಐ ಲವ್ ಯೂ’ ಹೇಳಿ. ಈ 3 ಮ್ಯಾಜಿಕ್‌ ಮಂತ್ರಗಳು ನಿಮ್ಮ ಬಾಂಧವ್ಯವನ್ನು ಇನ್ನೂ ಹೆಚ್ಚು ಬಲಪಡಿಸುತ್ತವೆ.

ಯಾವುದು ಬೇಡ?

ಸಾಮಾನ್ಯವಾಗಿ ಹೆಂಗಸರು ತಮ್ಮ ತಮ್ಮಲ್ಲೇ ಹೋಲಿಕೆ ಮಾಡಿಕೊಳ್ಳುವುದು ಹೆಚ್ಚು. ನನ್ನ ಗೆಳತಿಯ ಪತಿ ಅವಳಿಗಾಗಿ ಗ್ರ್ಯಾಂಡ್‌ ಪಾರ್ಟಿ ಏರ್ಪಡಿಸಿದ್ದರು, ದುಬಾರಿ ಗಿಫ್ಟ್ ಕೊಡಿಸಿದ್ದರು….. ಇತ್ಯಾದಿ. ಆದರೆ ನೀವು ಹೀಗೆಲ್ಲಾ ಹೋಲಿಕೆ ಮಾಡಲು ಹೋಗಬೇಡಿ. ಹಣಕ್ಕೆ ಮಹತ್ವ ಕೊಡಬೇಡಿ, ಬದಲಿಗೆ ಗಂಡ ಕೊಡಿಸಿದ್ದರಲ್ಲೇ ಖುಷಿ ಪಡಿ.

ಸೆಲೆಬ್ರೇಟ್‌ ಮಾಡುವ ಬದಲು ದೂರು ಹೇಳುತ್ತಾ ಕೂರಬೇಡಿ. ನೀವು ಅವರಿಗಾಗಿ ಏನೋ ಸರ್‌ಪ್ರೈಸ್‌ ಪ್ಲ್ಯಾನ್‌ ಮಾಡಿದ್ದೀರಿ, ಆದರೆ ಅವರು ಕೆಲಸದ ಒತ್ತಡದಿಂದ ಏನೂ ತರದೇ ಬಂದಾಗ, ಇರುವ ಸಂತೋಷದ ವಾತಾವರಣ ಹಾಳು ಮಾಡಿಕೊಳ್ಳಬೇಡಿ.

ಅವರು ತಂದ ಗಿಫ್ಟ್ ಅಕಸ್ಮಾತ್‌ ನಿಮಗೆ ಇಷ್ಟವಾಗದಿದ್ದರೆ ಖಂಡಿತಾ ಟೀಕೆ ಟಿಪ್ಪಣಿ ಮಾಡಬೇಡಿ. ಎಷ್ಟೋ ಸಲ ಮಹಿಳೆಯರು ಗಂಡನ ಭಾವನೆಗಳನ್ನು ಗೌರವಿಸದೆ, ಮನ ಬಂದಂತೆ ಮಾತನಾಡಿಬಿಡುತ್ತಾರೆ. ಹಾಗೆ ಮಾಡದೆ, ಆ ರಸಘಳಿಗೆ ಆನಂದ ಅನುಭವಿಸಿ. ನಮ್ಮ ಸಮಾಜದಲ್ಲಿ ಇಂಥ ಅಮೂಲ್ಯ ದಿನವನ್ನು ಸಹ ಧರ್ಮ, ಸಂಸ್ಕೃತಿಯ ಹೆಸರಿನಲ್ಲಿ ಕೀಳಾಗಿ ಕಾಣುತ್ತಾರೆ. ಅವರ ಪ್ರಕಾರ ಇದು ನಮ್ಮ ಸಂಸ್ಕೃತಿಗೆ ತಕ್ಕುದಲ್ಲ, ಬೇಡ ಎಂಬುದು. ಇಂಥ ಆಧಾರವಿಲ್ಲದ ಮಾತುಗಳಿಗೆ ಅರ್ಥ ಹುಡುಕಲು ಹೋಗಬೇಡಿ. ಈ ರೊಮ್ಯಾಂಟಿಕ್‌ ದಿನವನ್ನು ನಿಮ್ಮ ಸಂಗಾತಿಯೊಂದಿಗೆ ಪ್ರೀತಿಯಿಂದ ಎಂಜಾಯ್‌ ಮಾಡಿ, ಹ್ಯಾಪಿ ವ್ಯಾಲೆಂಟೈನ್‌ ಡೇ!

ಎನ್‌. ಅಮೃತಾ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ