ಬಂಜಾರಾ ಸ್ಕೂಲ್ ಆಫ್ ಡ್ಯಾನ್ಸ್, ನಂ.2, ಥರ್ಡ್ ಫ್ಲೋರ್, ಹೌಸ್ ಖಾಸ್ ವಿಲೇಜ್ ಮಾರ್ಕೆಟ್, ನವದೆಹಲಿ.
ಇದು ಬ್ಯಾಲೆ ಡ್ಯಾನ್ಸರ್ ಮೆಹರ್ ಮಲಿಕ್ ಅವರ ನೃತ್ಯ ಕಾರ್ಯಸ್ಥಳ. ಇಲ್ಲಿ ಮುಂಜಾನೆಯಿಂದ ಸಂಜೆ ತನಕ ನೂರಾರು ವಿದ್ಯಾರ್ಥಿಗಳಿಗೆ ಬ್ಯಾಲೆ ನೃತ್ಯ ಕಲಿಸಿದರೂ ಅವರಲ್ಲಿ ಎಳ್ಳಷ್ಟೂ ದಣಿವು ಕಾಣಿಸುವುದಿಲ್ಲ. ದಣಿವು ಬರುವುದಾದರೂ ಹೇಗೆ? ನೃತ್ಯ ಕಲಿಸುವುದು ಹಾಗೂ ನೃತ್ಯ ಮಾಡುವುದನ್ನು ನೋಡುವುದು ಅವರ ಪ್ಯಾಶನ್ ಆಗಿದೆ.
ಈ ಕುರಿತಂತೆ ಮೆಹರ್ ಹೀಗೆ ಹೇಳುತ್ತಾರೆ, “ಜನರ ದೃಷ್ಟಿಯಲ್ಲಿ ಬ್ಯಾಲೆ ನೃತ್ಯ ಈಗಲೂ ಅಸಹಜ ನೃತ್ಯವಾಗಿದೆ. ಭಾರತದಲ್ಲಿ ಕೆಲವರು ಈ ರೀತಿಯ ನೃತ್ಯವನ್ನು ಕ್ಯಾಬರೆ ನೃತ್ಯದೊಂದಿಗೆ ಹೋಲಿಸಿ ನೋಡುತ್ತಾರೆ. ಆದರೆ ಈ ತೆರನಾದ ಯೋಚನೆ ಮಾಡುವವರ ಬಗ್ಗೆ ನನಗೆ ಅನುಕಂಪ ಉಂಟಾಗುತ್ತದೆ. ಏಕೆಂದರೆ ಅವರಿಗೆ ಈ ನೃತ್ಯದ ಕಲಾತ್ಮಕತೆ ಮತ್ತು ಸೃಜನಶೀಲತೆಯನ್ನು ಅರಿಯುವ ಶಕ್ತಿ ಇಲ್ಲ.”
ಮೆಹರ್ ತಮ್ಮ ಕ್ರಿಯೇಟಿವಿಟಿಯನ್ನು ಬೇರೆಯವರಿಗೆ ತಲುಪಿಸಲು ಮತ್ತು ಬ್ಯಾಲೆ ನೃತ್ಯದ ಬಗ್ಗೆ ಜನರ ಯೋಚನೆಯನ್ನು ಬದಲಿಸಲು ಸಾಕಷ್ಟು ಮಟ್ಟಿಗೆ ಯಶಸ್ವಿ ಕೂಡ ಆಗಿದ್ದಾರೆ. ಇದೇ ಕಾರಣದಿಂದ ಮೆಹರ್ ಪ್ರತಿವರ್ಷ 5000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬ್ಯಾಲೆ ಡ್ಯಾನ್ಸರ್ ಆಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೇಗೆ ಶುರುವಾಯಿತು?
ಅರಬ್ ದೇಶದಲ್ಲಿ ಇದ್ದ ಕಾರಣದಿಂದ ಮೆಹರ್ ಅಲ್ಲಿನ ಭಾಷೆ, ಹಾವಭಾವ ಹಾಗೂ ನಡೆನುಡಿಯ ಬಗ್ಗೆ ಪ್ರಭಾವಿತರಾಗಿದ್ದರು. ಮಧ್ಯಪ್ರಾಚ್ಯ ದೇಶಗಳಲ್ಲಿ ಮಹಿಳೆಯರು ತಮ್ಮ ಖುಷಿ ಮತ್ತು ಮದುವೆಯ ಸಂಭ್ರಮವನ್ನು ಬ್ಯಾಲೆ ಡ್ಯಾನ್ಸ್ ಮೂಲಕ ತೋರಿಸುತ್ತಿದ್ದರು. ಓಮನ್ ದೇಶದಲ್ಲಿ ಮುಸ್ಲಿಂ ಸ್ತ್ರೀಯರು ಪುರುಷರ ಮುಂದೆ ಅಥವಾ ಅವರ ಜೊತೆ ಡ್ಯಾನ್ಸ್ ಮಾಡುವ ಅನುಮತಿ ಇರಲಿಲ್ಲ. ಹೀಗಾಗಿ ಅವರು ಪರಸ್ಪರರ ಎದುರು ಡ್ಯಾನ್ಸ್ ಮಾಡುತ್ತಿದ್ದರು. `ನಾನು ಅದನ್ನು ನೋಡಿ ಸ್ವಲ್ಪ ಸ್ವಲ್ಪ ಕಲಿತುಕೊಂಡೆ,’ ಎನ್ನುತ್ತಾರೆ.
ಮೆಹರ್ಗೆ ನೃತ್ಯ ಪ್ರಕಾರವನ್ನು ಪ್ರೊಫೆಶನ್ ಆಗಿ ಕಲಿತುಕೊಳ್ಳುವ ಅವಕಾಶ ದೊರೆತದ್ದು ತಮ್ಮ ತಂದೆತಾಯಿಯರ ಜೊತೆ ಈಜಿಪ್ಟ್ ದೇಶಕ್ಕೆ ಕ್ರೂಜ್ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಹೋದಾಗ.
ಈ ಕುರಿತಂತೆ ಮೆಹರ್ ಹೀಗೆ ಹೇಳುತ್ತಾರೆ, “ಹಿಂದಿ ಚಿತ್ರೋದ್ಯಮಕ್ಕೆ ಮುಂಬೈನ ಪ್ರಸ್ತಾಪ ಹೇಗೆ ಮಾಡುತ್ತಾರೊ, ಹಾಗೆಯೇ ಅರಬ್ ಜಗತ್ತಿನಲ್ಲಿ ಈಜಿಪ್ಟ್ ಪಡೆದುಕೊಂಡಿದೆ. ಅಲ್ಲಿಗೆ ಹೋದ ಬಳಿಕವೇ ಬ್ಯಾಲೇ ನೃತ್ಯ ಕದ್ದುಮುಚ್ಚಿ ಮಾಡುವ ನೃತ್ಯ ಪ್ರಕಾರವಲ್ಲ ಎನ್ನುವುದು ಮನವರಿಕೆಯಾಯಿತು.
“ಏಕೆಂದರೆ ಅಲ್ಲಿ ಮಹಿಳೆಯರು ವೇದಿಕೆಯ ಮೇಲೆ ಪುರುಷರ ಜೊತೆಯೇ ಮುಕ್ತವಾಗಿ ನೃತ್ಯ ಮಾಡುತ್ತಿದ್ದರು. ಅವರು ಸಮತೋಲನದ ರೀತಿಯಲ್ಲಿ ತಮ್ಮ ದೇಹದ ಭಾಗಗಳನ್ನು ಅಲ್ಲಾಡಿಸುತ್ತಿದ್ದರು. ಅವರ ಆ ನೃತ್ಯದಲ್ಲಿ ನನಗೆ ಕ್ರಿಯೇಟಿವಿಟಿ ಮಾತ್ರ ಕಂಡುಬರುತ್ತಿತ್ತು. ಒಬ್ಬ ಡ್ಯಾನ್ಸರ್ ನನ್ನನ್ನು ಕೂಡ ವೇದಿಕೆಗೆ ಕರೆದಳು.
“ನಾನು ಚೆನ್ನಾಗಿ ಡ್ಯಾನ್ಸ್ ಮಾಡಲಿಲ್ಲ. ಆದರೆ ನನಗೂ ಬ್ಯಾಲೆ ಡ್ಯಾನ್ಸ್ ಮಾಡಲು ಬರುತ್ತದೆ ಎಂಬುದು ಮೊಟ್ಟ ಮೊದಲ ಬಾರಿಗೆ ಗೊತ್ತಾಯಿತು. ಅದನ್ನು ಪ್ರೊಫೆಶನ್ ಆಗಿ ಕಲಿಯುವ ಅಗತ್ಯವಿದೆ ಎಂಬುದು ನನಗೆ ಮನದಟ್ಟಾಯಿತು.”
ಕೆರಿಯರ್ ಆದ ಬ್ಯಾಲೆ ಡ್ಯಾನ್ಸ್
ಬ್ಯಾಲೆ ಡ್ಯಾನ್ಸ್ ಕಲಿಯುವುದು ಮೆಹರ್ಗೆ ಕೇವಲ ಹವ್ಯಾಸವಾಗಿತ್ತು. ಆದರೆ ಭಾರತಕ್ಕೆ ವಾಪಸ್ಸಾದ ಬಳಿಕ ಅವರ ಹವ್ಯಾಸವೇ ಕೆರಿಯರ್ ರೂಪ ಪಡೆದುಕೊಂಡಿತು.
ಈ ಕುರಿತಂತೆ ಮೆಹರ್ ಹೀಗೆ ಹೇಳುತ್ತಾರೆ, “ನಾನು ಭಾರತದಲ್ಲಿ ಎನ್ಐಎಫ್ಟಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ಗೆ ಅಡ್ಮಿಟ್ ಆಗಿದ್ದೆ. ಆದರೆ ಕೇವಲ 4 ತಿಂಗಳಲ್ಲಿಯೇ ನಾನು ಆ ಕೋರ್ಸ್ ಬಿಟ್ಟುಬಿಟ್ಟೆ. ಅಂದಹಾಗೆ ನಾನು ಕೋರ್ಸ್ ಜೊತೆ ಜೊತೆಗೆ ಡ್ಯಾನ್ಸ್ ಕ್ಲಾಸ್ಗೂ ಜಾಯಿನ್ ಆಗಿದ್ದೆ. ಕಾಲೇಜು ಮುಗಿದ ಬಳಿಕ ನೇರವಾಗಿ ಡ್ಯಾನ್ಸ್ ಕ್ಲಾಸ್ಗೆ ಹೋಗುತ್ತಿದ್ದೆ. ಆದರೆ ಕಾಲೇಜಿನಲ್ಲಿದ್ದಾಗಲೂ ನನ್ನ ಮನಸ್ಸು ಡ್ಯಾನ್ಸ್ ನಲ್ಲಿಯೇ ಇರುತ್ತಿತ್ತು.”
ಯಾವ ನೃತ್ಯ ಕೇಂದ್ರದಲ್ಲಿ ಅವರು ಸಾಲ್ಸಾ ನೃತ್ಯ ಕಲಿಯುತ್ತಿದ್ದರೊ, ಅಲ್ಲಿ ಬ್ಯಾಲೆ ಡ್ಯಾನ್ಸ್ ಟೀಚರ್ರ ಅಗತ್ಯವಿತ್ತು ಎನ್ನುವ ಸಂಗತಿ ಮೆಹರ್ಗೆ ಗೊತ್ತಾಯಿತು. ಅವರು ಮ್ಯಾನೇಜರ್ ಜೊತೆ ಮಾತನಾಡಿ ತಮಗೆ ಆ ನೃತ್ಯ ಮಾಡಲು ಬರುವುದಾಗಿ ಹೇಳಿದರು. ಮ್ಯಾನೇಜರ್ ಅದರ ಡೆವೊ ತೋರಿಸಲು ತಿಳಿಸಿದರು.
“ನಾನು ಆ ನೃತ್ಯವನ್ನು ಮಾಡಿ ತೋರಿಸಿದಾಗ ನನಗೆ ಬ್ಯಾಲೆ ಡ್ಯಾನ್ಸ್ ಟೀಚರ್ ಜಾಬ್ ಸಿಕ್ಕಿತು. ನನ್ನ ಹವ್ಯಾಸವೇ ನನ್ನ ವೃತ್ತಿಯಾಯಿತು.”
ಸೃಜನಶೀಲತೆಯ ಅಪೇಕ್ಷೆ
ಮೆಹರ್ ಅವರ ಮುಂದೆ ಒಂದು ಬಹುದೊಡ್ಡ ಸಮಸ್ಯೆ ಇತ್ತು. ಬ್ಯಾಲೆಗೆ ಇಂಡಿಯನ್ ಟಚ್ ಹೇಗೆ ಕೊಡುವುದು ಎಂಬುದೇ ಆ ಸಮಸ್ಯೆಯಾಗಿತ್ತು.
“ನನಗೆ ಅರಬ್ಬಿ ಭಾಷೆ ಗೊತ್ತಿತ್ತು. ಹೀಗಾಗಿ ಅರಬ್ಬಿ ಹಾಡುಗಳಿಗೆ ಡ್ಯಾನ್ಸ್ ಮಾಡುವಾಗ ನನ್ನ ಮುಖದ ಮೇಸೆ ಸರಿಯಾದ ಹಾವಭಾವಗಳು ಗೋಚರಿಸುತ್ತಿದ್ದವು. ಆದರೆ ನನ್ನ ವಿದ್ಯಾರ್ಥಿಗಳಿಗೆ ಅರಬ್ಬಿ ಭಾಷೆ ತಿಳಿಯುತ್ತಿರಲಿಲ್ಲ. ಹೀಗಾಗಿ ಅವರಿಗೆ ತೊಂದರೆಯಾಗುತ್ತಿತ್ತು. ಒಬ್ಬ ವಿದ್ಯಾರ್ಥಿ ಬಾಲಿವುಡ್ ಸಾಂಗ್ಗೆ ಬ್ಯಾಲೆ ನೃತ್ಯ ಕಲಿಸಲು ನನ್ನ ಬಳಿ ಕೇಳಿದ. ನಾನು ಅದಕ್ಕೆ ನಿರಾಕರಿಸಿದೆ. ಆದರೆ ಆ ವಿದ್ಯಾರ್ಥಿ ಹೋದ ಬಳಿಕ ಪ್ರಯತ್ನ ಮಾಡುವುದರಲ್ಲಿ ತಪ್ಪೇನಿದೆ ಎಂದು ನನಗೆ ಅನಿಸಿತು.
“ಆ ಬಳಿಕ ಮೆಹರ್ ಬಾಲಿವುಡ್ ಹಾಡುಗಳನ್ನು ಗಮನವಿಟ್ಟು ಆಲಿಸಲು ಆರಂಭಿಸಿದರು. ಈ ಕುರಿತಂತೆ ಅವರು ಹೇಳುತ್ತಾರೆ, “ನಾನು ಹಿಂದಿ ಚಲನಚಿತ್ರವೊಂದರ ಗೀತೆಗೆ ಮೊದಲ ಬಾರಿಗೆ ನೃತ್ಯದ ಸ್ಟೆಪ್ಸ್ ಸೇರಿಸಿದ್ದು `ಸಸುರಾಲ್ ಗೇಂದಾ ಪ್’ ಹಾಡಿಗೆ. ಆ ಬಳಿಕ ನಾನು ಹಲವು ಹಿಂದಿ ಸಿನಿಮಾಗಳ ಗೀತೆಗಳಿಗೆ ನೃತ್ಯ ಅಳವಡಿಸಿದೆ. ಆ ಫ್ಯೂಷನ್ಗೆ ನಾನು ಕೊಟ್ಟ ಹೆಸರು ಬ್ಯಾಲ್ಡ್”
ಮೆಹರ್ ಬಳಿ ತಮ್ಮದೇ ಆದ ಸ್ಟೈಲ್ ಇತ್ತು. ಏನಾದರೂ ಹೊಸತು ಮಾಡಬೇಕೆಂದು ಅವರು 2009ರಲ್ಲಿ ಒಂದು ಡ್ಯಾನ್ಸ್ ಕಂಪನಿಯನ್ನು ಆರಂಭಿಸಿದರು. ಅದಕ್ಕೆ `ಬಂಜಾರಾ ಸ್ಕೂಲ್ ಆಫ್ ಡ್ಯಾನ್ಸ್’ ಎಂದು ಹೆಸರಿಟ್ಟರು.
ಮೆಹರ್ ಹೇಳುತ್ತಾರೆ, “ನಾನು ಕೊರಿಯೊ ಗ್ರಾಫ್ ಮಾಡಿದ ಹಾಡುಗಳು ಜನರಿಗೆ ಬಹಳ ಇಷ್ಟವಾದದ್ದು ನನಗೆ ಖುಷಿ ಕೊಟ್ಟಿತು. ಆದರೆ ಬಾಲಿವುಡ್ ಹೊರತಾಗಿಯೂ ಬ್ಯಾಲ್ಡ್ ಗೆ ಒಂದು ವಿಶೇಷ ವೇದಿಕೆ ಸಿಗಬೇಕು ಎಂದು ನಾನು ಬಯಸುತ್ತೇನೆ. ನಮಗೂ ಕೂಡ ನಮ್ಮ ಕ್ರಿಯೇಟಿವಿಟಿ ತೋರಿಸಲು ದೊಡ್ಡ ದೊಡ್ಡ ಶೋಗಳು ಮತ್ತು ಈವೆಟ್ಸ್ ನಲ್ಲಿ ಪರ್ಫಾರ್ಮ್ ಮಾಡುವ ಅವಕಾಶ ಸಿಗಬೇಕು.
“ನಾನು ಈಗ ಅದೇ ಪ್ರಯತ್ನದಲ್ಲಿ ಇದ್ದೇನೆ. ಅದೇ ಪ್ರಯತ್ನದ ಬಲದ ಮೇಲೆ ಒಂದಾದ ಬಳಿಕ ಒಂದು ಯಶಸ್ಸಿನ ಮೆಟ್ಟಿಲು ಹತ್ತುತ್ತ ಹೊರಟಿರುವೆ.”
– ಅನುರಾಧಾ