ಮದುವೆಗೆ ಮೊದಲು ಹಾಗೂ ಮದುವೆಯ ನಂತರ ಬದುಕು ಉದ್ದೇಶಗಳು ವಿವಿಧ ರೀತಿಯಲ್ಲಿರುತ್ತವೆ. ಮದುವೆಗೆ ಮೊದಲು ನಾವು ಸೆಲ್ಫ್ ಸೆಂಟರ್ಡ್‌ ಲೈಫ್‌ ನಡೆಸಿದ್ದೇವೆ. ಮದುವೆಯ ನಂತರ ಪರಸ್ಪರರಿಗಾಗಿ ಬದುಕಲು ಪ್ರಯತ್ನಿಸುವುದು ಪತಿಪತ್ನಿಯರ ಯಶಸ್ಸಿನ ಮಾನದಂಡವಾಗಿದೆ.

ಆರೋಗ್ಯಕರ ಮಾನಸಿಕತೆಯೊಂದಿಗೆ ಪರಿಸ್ಥಿತಿಗಳು ಅನುಕೂಲ ಅಥವಾ ಪ್ರತಿಕೂಲವಾದಾಗ ಎರಡೂ ಸ್ಥಿತಿಗಳಲ್ಲಿ ನಿಮ್ಮ ಸರಿಯಾದ ಆಲೋಚನೆಗಳೊಂದಿಗೆ ಜೀವನದ ಈ ವಿಶೇಷ ತಂಗುದಾಣದಲ್ಲಿ ಸ್ಥಿರತೆ ಹಾಗೂ ಸಂತಸದ ಕೌಟುಂಬಿಕ ವಾತಾವರಣ ಮಾಡಿಕೊಂಡು ನಿಮ್ಮ ಲೈಫ್‌ ಪಾರ್ಟ್‌ನರ್‌ನ ಸುಖದುಃಖದ ಸಂಗಾತಿಯಾಗಿ.

ಏನು ಮಾಡಬೇಕು?

ಪರಸ್ಪರರಿಗಾಗಿ ಸಾಕಷ್ಟು ಸಮಯ ಮೀಸಲಾಗಿಡಿ. ಮಾತನ್ನು ಕೇಳಲು ಸಮಯ, ಒಟ್ಟಿಗಿರಲು ಸಮಯ ಕೊಡಿ. ಒಟ್ಟಿಗೆ ಕೆಲಸ ಮಾಡುವಾಗ ಸಹಾಯ ಮಾಡಿ. ಅವಸರ ಬಿಟ್ಟು ಇವೆಲ್ಲವನ್ನು ಮಾಡಲು ಸಾಕಷ್ಟು ಸಮಯ ಇರಬೇಕು.

ಬದುಕಿನ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿ. ಒಂದೇ ಟೀಂ ಎಂಬ ಭಾವನೆಯಿಂದ ಸಣ್ಣ ಸಣ್ಣ ವಿಷಯಗಳನ್ನೂ ಎಂಜಾಯ್ ಮಾಡಿ. ಎಲ್ಲರೊಂದಿಗೆ ರಿಲೇಶನ್‌ಶಿಪ್‌ನ್ನು ಮುಗುಳ್ನಗೆಯೊಂದಿಗೆ ಉತ್ಸಾಹದಿಂದ ಇಟ್ಟುಕೊಳ್ಳಿ. ಆಗ ನಿಮ್ಮ ಸಂಪರ್ಕಕ್ಕೆ ಬರುವವರೆಲ್ಲರೂ ಮುಗುಳ್ನಗೆ ಹಾಗೂ ಉತ್ಸಾಹದಿಂದಿರುತ್ತಾರೆ.

ಧನ್ಯವಾದ, ಹೌದು, ಆಯ್ತು, ಡಿಯರ್‌, ನೀನು ಹೇಳಿದ್ದು ಸರಿ, ಕ್ಷಮಿಸು, ನಂದು ತಪ್ಪಾಯ್ತು, ಐ ಆ್ಯಮ್ ಸಾರಿ ಇತ್ಯಾದಿ ಪದಗಳನ್ನು ಸರಿಯಾದ ಸಂದರ್ಭಗಳಲ್ಲಿ ಉಪಯೋಗಿಸಿ.

ತಿಂಗಳಿಗೆ ಕನಿಷ್ಠ 1 ದಿನ ಪರಸ್ಪರರೊಂದಿಗೆ ಕಳೆಯಿರಿ. ಇಬ್ಬರಿಗೂ ಇಷ್ಟವಾದ ಕಾರ್ಯಕ್ರಮಗಳಲ್ಲಿ ಸಮಯ ಕಳೆಯಿರಿ.

ಯಾವುದಾದರೂ ವಿಷಯ ಇಷ್ಟವಾದರೆ ಅದಕ್ಕೆ ಪರಸ್ಪರ ಧನ್ಯವಾದ ಅರ್ಪಿಸಿ.

ನಿಮ್ಮ ಮಾತುಕಥೆಯಲ್ಲಿ ಹಾಸ್ಯ ತುಂಬಿರಲಿ. ಒಂದುವೇಳೆ ಏನಾದರೂ ಅಭಿಪ್ರಾಯ ಭೇದವುಂಟಾದರೆ ಅದನ್ನು ಹಾಸ್ಯದಿಂದಲೇ ಪರಿಹರಿಸಿಕೊಳ್ಳಿ.

ಟೋಟಲ್ ಮೇಕ್‌ ಓವರ್‌ ಮತ್ತು ಡ್ರೆಸ್‌ ಪರಸ್ಪರರ ಇಷ್ಟಕ್ಕೆ ತಕ್ಕಂತೆ ಇರಲಿ. ಆಗ ಪರಸ್ಪರ ಆಕರ್ಷಣೆ ಹೆಚ್ಚುತ್ತದೆ.

ಯಾವಾಗಲೂ ಖುಷಿಯಾಗಿರಲು ನಿರ್ಧರಿಸಿ. ಸಕಾರಾತ್ಮಕ ಆಲೋಚನೆಗಳನ್ನು ನಿಮ್ಮದಾಗಿಸಿಕೊಂಡು ನಿಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳಿ.

ಗುಂಪಿನಲ್ಲಿ ಕಾಲ ಕಳೆಯಬೇಡಿ. ಸರಳ ಜೀವನ ಅನುಸರಿಸಿ. ಜೀವನ ಜಟಿಲವಾಗದಿರಲಿ.

ಯಾವುದೇ ಮಾತುಕಥೆಯನ್ನು ಸ್ನೇಹ ಮತ್ತು ಪ್ರೀತಿಯ ಭಾವನೆಯಿಂದಲೇ ಮಾಡಿ. ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಪ್ರಾಮಾಣಿಕತೆಯಿಂದ ಪ್ರಯತ್ನಿಸಿ.

ಜ್ಯೋತಿ ರಾವ್ ‌ಇದರ ಬಗ್ಗೆ ಹಲವಾರು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ವೈವಾಹಿಕ ಜೀವನ ನಡೆಸುವವರು ಇದನ್ನು ಅಗತ್ಯವಾಗಿ ಗಮನಿಸಬೇಕು.

ಒಳ್ಳೆಯ ಸಂವಾದ ಮತ್ತು ಮಾತುಕಥೆ : ಪರಸ್ಪರ ಮಾತನಾಡಲು ಸಂಕೋಚ ಬೇಡ. ಒಬ್ಬರ ಮಾತನ್ನೊಬ್ಬರು ಗಮನವಿಟ್ಟು ಕೇಳಿ. ಸೀಕ್ರೆಟ್‌ ವಿಷಯಗಳನ್ನು ಶೇರ್‌ ಮಾಡಿಕೊಳ್ಳಿ. ಆದರೆ ವಿವೇಕದೊಂದಿಗೆ. ಮಾತುಗಳು ಮಧುರವಾಗಿರಲಿ ಹಾಗೂ ಐ ಕಾಂಟ್ಯಾಕ್ಟ್ ಬಗ್ಗೆ ಗಮನವಿಡಿ.

ವಿವಾದ ಉಂಟುಮಾಡಿ ಜಗಳ ಆಡಬೇಡಿ : ಜಗಳವಾಡುವಾಗ ಕೋಪ ಬೆಂಕಿಗೆ ತುಪ್ಪ ಹೊಯ್ದಂತೆ ಕೆಲಸ ಮಾಡುತ್ತದೆ. ಕೋಪದಲ್ಲಿರುವಾಗ ಮಾತು ನಿಲ್ಲಿಸಿ. ಮಾತುಕಥೆಗೆ ಸೌಹಾರ್ದಪೂರ್ಣ ವಾತಾವರಣಕ್ಕೆ ಕಾಯಿರಿ. ಪರಸ್ಪರ ತ್ಯಾಗ ಮನೋಭಾವ ಇರಲಿ. ನಿಮ್ಮ ಮಾತೇ ನಡೆಯಬೇಕೆಂಬ ಹಠ ಬೇಡ.  ಗಿಲ್ಟ್ ‌ಅಂಡ್‌ ಟೇಕ್‌ ಒಳ್ಳೆಯ ಪಾಲಿಸಿ. ಒತ್ತಡ ಇಲ್ಲದಿದ್ದರೆ ಎಲ್ಲ ವಿಷಯಗಳನ್ನೂ ಸರಿಯಾದ ದೃಷ್ಟಿಕೋನದೊಂದಿಗೆ ತೆಗೆದುಕೊಳ್ಳಲಾಗುತ್ತದೆ. ನಿಮ್ಮ ಲೈಫ್‌ಪಾರ್ಟ್‌ನರ್‌ನ್ನು ಉತ್ಸಾಹಗೊಳಿಸುತ್ತಿರಿ. ಅವರ ಪ್ರತಿ ಒಳ್ಳೆಯ ಕೆಲಸನ್ನು ಹೊಗಳುತ್ತಿರಿ. ಅವರಿಗೆ ಸಹಾಯ ಮಾಡಿ, ಕ್ಷಮಾಶೀಲರಾಗಿ. ಅವರ ಯೋಗ್ಯತೆ ಹೆಚ್ಚಿಸಲು ಸದಾ ಪ್ರಯತ್ನಿಸಿ. ವ್ಯಂಗ್ಯ ಬಾಣಗಳು ಬೇಡ.

ಕ್ರಿಯೆ ಮತ್ತು ಪ್ರತಿಕ್ರಿಯೆ : ಮಾನವೀಯ ಸಂಬಂಧಗಳ ಲೇಖಕರು ಪ್ರತಿ ವರ್ತನೆ ಹಾಗೂ ಕಾರ್ಯಗಳಿಗೆ ಪ್ರತಿಕ್ರಿಯೆ ಸ್ವಾಭಾವಿಕ ಎಂದು ಹೇಳುತ್ತಾರೆ. ಆದ್ದರಿಂದ ಪ್ರತಿಕ್ರಿಯಗಳು ಸರಿಯಾದ ಮಿತಿಯೊಳಗೆ ಹಾಗೂ ಸಮಯಕ್ಕೆ ತಕ್ಕಂತೆ ಇರಬೇಕು. ನಿಮ್ಮ ಮಾತನ್ನು ನಡೆಸಲು ಸಂಬಂಧಗಳನ್ನು ಹಾಳುಗೆಡವಬೇಡಿ. ಯಾವುದೇ ಬೆಲೆ ಕೊಟ್ಟಾದರೂ ಸಂಬಂಧ ಉಳಿಸಿಕೊಳ್ಳುವುದು ವೈವಾಹಿಕ ಜೀವನದ ಆಧಾರವಾಗಿದೆ. ಒಳ್ಳೆಯ ಮಾನಸಿಕತೆಯೊಂದಿಗೆ ಶಾಂತಿ ಕಾಪಾಡಿಕೊಳ್ಳಿ.

ಸಂಬಂಧಗಳಲ್ಲಿ ತೃಪ್ತಿ ಮುಖ್ಯ : ಚಿಂತೆ ಗೆದ್ದಲಿನಂತೆ ಹಾನಿಕಾರಕ. ಯಾವುದೇ ಸಮಸ್ಯೆಗೆ ಅಗತ್ಯಕ್ಕಿಂತ ಹೆಚ್ಚು ಮಹತ್ವ ಕೊಡಬೇಡಿ. ಸಂಬಂಧ ಉಳಿಸಿಕೊಳ್ಳಲು ನಿಮ್ಮ ಜವಾಬ್ದಾರಿ ನಿಭಾಯಿಸಿ. ನಿಮ್ಮ ಲೈಫ್‌ ಪಾರ್ಟ್‌ನರ್‌ನ ಸೆಲ್ಫ್ ಕಾನ್ಛಿಡೆನ್ಸ್ ಹೆಚ್ಚಿಸಿ. ಅವರನ್ನು ಬಲಹೀನರಾಗಿಸಿದರೆ ಏನೂ ಸಿಗುವುದಿಲ್ಲ. ಆಗಾಗ್ಗೆ ವಿಶ್ವಾಸ ವ್ಯಕ್ತಪಡಿಸಿ. ಅಭಿಪ್ರಾಯ ಭೇದ ಉಂಟಾಗದಂತೆ ನೋಡಿಕೊಳ್ಳಿ. ನಾವು ವಿಜಯಿಯಾಗಲು ಇತರರನ್ನು ಹರ್ಟ್‌ ಮಾಡಬಾರದೆಂದು ಗೌತಮಬುದ್ಧ ಹೇಳಿದ್ದಾನೆ.

ಪರ್ಫೆಕ್ಟ್ ಮ್ಯಾಚ್ಗಾಗಿ ಸಲಹೆಗಳು

ವಿವಾಹ ದೀರ್ಘಕಾಲದ ಹೊಂದಾಣಿಕೆಯಾಗಿದ್ದು, ಹತ್ತಿರದ ಸಂಬಂಧವಾಗಿದೆ. ಅದು ಪರಸ್ಪರರ ಇಷ್ಟವನ್ನು ಆಧರಿಸಿದೆ. ಅದನ್ನು ತೆರೆದ ಮನಸ್ಸಿನಿಂದ ಸ್ವೀಕರಿಸಿ.

ನಿಮ್ಮ ದೃಷ್ಟಿಕೋನವನ್ನು ಮೆದುವಾಗಿರಿಸಿಕೊಳ್ಳಿ. ಪಾರ್ಟ್‌ನರ್‌ನ ದೃಷ್ಟಿಕೋನ ಮತ್ತು ಭಾವನೆಗಳನ್ನು ಗೌರವಿಸಿ. ಹೀಗೆ ಮಾಡುವುದರಿಂದ ಪ್ರೀತಿ ಉಕ್ಕುತ್ತದೆ. ಸಂಬಂಧ ಉಳಿಸಿಕೊಳ್ಳಲು ಬಹಳಷ್ಟು ಪ್ರಯತ್ನ ಮಾಡಬೇಕಾಗುತ್ತದೆ.

ವೈವಾಹಿಕ ತೃಪ್ತಿ ಹೆಚ್ಚಿಸಲು ಪರಸ್ಪರ ಎಮೋಶನ್‌ ಸಪೋರ್ಟ್‌ ಕೊಡಿ. ಪರಸ್ಪರ ತಿಳಿವಳಿಕೆಯಿಂದ ಭಾವನಾತ್ಮಕ ಹೊಂದಾಣಿಕೆ ಇರುತ್ತದೆ. ಅದರಿಂದ ಕರ್ತವ್ಯ ಬದ್ಧತೆ ಮತ್ತು ಕಮಿಟ್‌ಮೆಂಟ್‌ನಂತಹ ಗುಣಗಳು ವಿಕಾಸಗೊಳ್ಳುತ್ತವೆ.

ಪಾರ್ಟ್‌ನರ್‌ ನಿರೀಕ್ಷೆಗಳಿಗೆ ತಕ್ಕಂತೆ ನಡೆದುಕೊಳ್ಳಿ. ಅವರ ಮಾನಸಿಕತೆಯನ್ನು ಗುರುತಿಸಿ. ಸಂದೇಹದ ಮೂಲಕ ಅತೃಪ್ತಿ ಮತ್ತು ಅಸುರಕ್ಷತೆಯ ಭಾವನೆಯನ್ನು ಪರಸ್ಪರರಿಗೆ ಕೊಡಬೇಡಿ.

ನಿಮ್ಮ ವೈಫ್‌ ಪಾರ್ಟ್‌ನರ್‌ ಬಗ್ಗೆ ಯಾವುದೇ ತಪ್ಪುಕಲ್ಪನೆ ಮಾಡಿಕೊಳ್ಳಬೇಡಿ. ಸತ್ಯವಿಲ್ಲದೆ ಅರ್ಥಪೂರ್ಣ ಮಾತುಕಥೆ ಅಸಾಧ್ಯ. ಮಹತ್ವಪೂರ್ಣ ಚರ್ಚೆಗಳನ್ನು ಪತಿಪತ್ನಿಯರು ತಾವಿಬ್ಬರೇ ಮಾಡಿಕೊಳ್ಳಬೇಕು. ಬೇರೆ ವ್ಯಕ್ತಿಯೊಂದಿಗೆ ನಿಮ್ಮ ಸಮಸ್ಯೆಯ ಬಗ್ಗೆ ಚರ್ಚಿಸಬೇಡಿ. ನಿಮ್ಮ ಪ್ರೈವೆಸಿ ಉಳಿಸಿಕೊಳ್ಳಿ     ಅವಾಸ್ತವಿಕ ನಿರೀಕ್ಷೆಗಳನ್ನು ಇಟ್ಟುಕೊಂಡರೆ ದುಃಖವೇ ಸಿಗುತ್ತದೆ. ಗಿವ್ ‌ಅಂಡ್‌ ಟೇಕ್‌ನ ಭಾವನೆ ಇದ್ದರೆ ನಿರೀಕ್ಷೆಗಳು ಅಗತ್ಯವಾಗಿ ಪೂರೈಸುತ್ತವೆ. ಧೈರ್ಯ ಉಳಿಸಿಕೊಳ್ಳಿ.

ಪ್ರಸಿದ್ಧ ಕವಿಯೊಬ್ಬರ ಕೆಳಗಿನ ಸಾಲುಗಳು ಸುಖೀ ದಾಂಪತ್ಯ ಜೀವನಕ್ಕೆ ಪ್ರೇರಣೆಯಾಗಿದೆ. ಎಲ್ಲಿ ಹೂ ಅರಳುವುದೋ ಅದನ್ನು ಉದ್ಯಾನವೆನ್ನುತ್ತೇವೆ. ಎಲ್ಲಿ ರೂಪ ಸುಡಲ್ಪಡುವುದೋ ಅದನ್ನು ಸ್ಮಶಾನ ಎನ್ನುತ್ತೇವೆ. ಆದರೆ ಉದ್ಯಾನ ಮತ್ತು ಸ್ಮಶಾನದ ವ್ಯತ್ಯಾಸ ಇಷ್ಟೇ. ಹಾಳಾದ ಉದ್ಯಾನವನ್ನು ನಾವು ಸ್ಮಶಾನ ಎನ್ನುತ್ತೇವೆ.

ನಿಮ್ಮ ಜೀವನವನ್ನು ಸುವಾಸನೆ ಬೀರುವ ಉದ್ಯಾನವನ್ನಾಗಿ ಮಾಡಿದ್ದೀರೋ ಅಥವಾ ನಿಮ್ಮ ಹಕ್ಕಾದ ಸಂತಸಗಳಿಂದ ವಂಚಿತರನ್ನಾಗಿ ಮಾಡಿಕೊಳ್ಳುತ್ತಿದ್ದೀರೋ ಎಂದು ನೀವೇ ನಿರ್ಧರಿಸಿ.

ಎನ್‌.ಎಸ್‌. ಶಾರದಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ