ಆಫೀಸಿನಲ್ಲಿ ಕುಳಿತಿದ್ದ ರಾಧಾಳ ದೃಷ್ಟಿ ಇದ್ದಕ್ಕಿದ್ದಂತೆ ಕ್ಯಾಲೆಂಡರ್ ಮೇಲೆ ಬಿತ್ತು. ದೀಪಾವಳಿ ಹಬ್ಬದ ತಾರೀಖು ಹತ್ತಿರ ಬರುತ್ತಿರುವುದನ್ನು ನೋಡಿದ ಕೂಡಲೇ ಅವಳಿಗೆ ಹೊಳೆದ ಪ್ರಶ್ನೆ ಒಂದೇ. ರಿಸರ್ವೇಶನ್ ಸಿಗುವುದೋ ಇಲ್ಲವೇ? ಮರುಕ್ಷಣವೇ ಅವಳ ಬೆರಳುಗಳು ಲ್ಯಾಪ್‌ಟಾಪ್‌ನ ಕೀಬೋರ್ಡ್ ಮೇಲೆ ಓಡತೊಡಗಿದವು. ಆದರೆ ಅವಳಿಗೆ ಹತಾಶೆ ಮೂಡಿತು. ಎಲ್ಲ ಸೀಟ್‌ಗಳೂ ಭರ್ತಿಯಾಗಿದ್ದವು. ಟ್ರೇನ್ ಅಷ್ಟೇ ಅಲ್ಲ, ಅವಳಿಗೆ ಬಸ್ ಮತ್ತು ವಿಮಾನದ ಟಿಕೆಟ್ ಸಹ ಸಿಗಲಿಲ್ಲ. ತಾನು ಹೇಗೆ ಊರಿಗೆ ಹೋಗುವುದು? ಒಂದು ವೇಳೆ ಹೋಗಲಾಗದಿದ್ದರೆ ಮನೆಯವರಿಂದ ದೂರವಿದ್ದು ಹಬ್ಬ ಹೇಗೆ ಆಚರಿಸುವುದು ಎಂದು ಚಿಂತಾಮಗ್ನಳಾದಳು.
ರಾಧಾಳಂತೆಯೇ ಇನ್ನೂ ಅದೆಷ್ಟೋ ಜನ ಮನೆಯವರಿಂದ ದೂರವಿದ್ದು ನಗರಗಳಲ್ಲಿ ವಾಸಿಸುತ್ತಿದ್ದಾರೆ. ಮನೆಯವರಿಂದ ದೂರ ಇರಲು ಎಲ್ಲರಿಗೂ ತಮ್ಮದೇ ಆದ ಕಾರಣಗಳಿವೆ. ಕೆಲವರು ಶಿಕ್ಷಣಕ್ಕಾಗಿಯೂ, ಕೆಲವರು ನೌಕರಿಯ ಕಾರಣದಿಂದಾಗಿಯೂ ಬೇರೊಂದು ನಗರದಲ್ಲಿ ವಾಸಿಸುತ್ತಿದ್ದಾರೆ. ಕೆಲಸ ಹಾಗೂ ಓದಿನ ಜಂಜಾಟದಲ್ಲಿ ಸಿಲುಕಿದ ಇಂತಹವರಿಗೆ ಪ್ರತಿದಿನ ಅಲ್ಲದಿದ್ದರೂ ಹಬ್ಬಗಳಂದು ಮನೆಯವರು ಹತ್ತಿರ ಇಲ್ಲದಿರುವುದು ಬಹಳ ಬಾಧಿಸುತ್ತದೆ. ಆದ್ದರಿಂದ ಅವರು ಹಬ್ಬಗಳಲ್ಲಿ ಊರಿಗೆ ಹೋಗಲು ಹಂಬಲಿಸುತ್ತಾರೆ. ರಿಸರ್ವೇಶನ್ ಶುರುವಾದಾಗ ಜನ ತಮ್ಮ ಸೀಟ್ ಬುಕ್ ಮಾಡಿಸಲು ಇಂಟರ್‌ನೆಟ್‌ನಲ್ಲಿ ಅಂಟಿಕೊಳ್ಳುತ್ತಾರೆ. ಕೆಲವರು ರಿಸರ್ವೇಶನ್ ಮಾಡಿಸಲು ಆಫೀಸಿಗೆ ರಜೆ ಹಾಕಿ ರೇಲ್ವೆ ಸ್ಟೇಷನ್‌ನಲ್ಲಿನ ಉದ್ದನೆಯ ಕ್ಯೂಗಳಲ್ಲಿ ಗಂಟೆಗಟ್ಟಲೇ `ಕ್ಯೂ’ ನಿಲ್ಲುತ್ತಾರೆ. ಅದರ ನಂತರ ಅನೇಕ ಬಾರಿ ರಿಸರ್ವೇಶನ್ ಸಿಗುವುದಿಲ್ಲ. ಹೀಗಿರುವಾಗ ತಮ್ಮ ಊರಿನವರಾದ, ಮನೆಗೆ ಹೊಗಲು ಸೀಟ್ ಸಿಕ್ಕ ಗೆಳೆಯರನ್ನು ಅಭಿನಂದಿಸಬೇಕು. ಕೆಲವೊಮ್ಮೆ ಲಂಚ ಕೊಡಬೇಕಾಗುತ್ತದೆ. ಹೀಗೆ ಹಲವಾರು ತೊಂದರೆಗಳು ಆಗ ಒಂದು ದಿನದ ಹಬ್ಬಕ್ಕೆ ಇಷ್ಟು ಹೋರಾಟ ಏಕೆ ಎಂದು ಅನ್ನಿಸುತ್ತದೆ. ಹಬ್ಬವನ್ನು ಅವರು ಇರುವ ಸ್ಥಳದಲ್ಲೇ ಆಚರಿಸಬಹುದು. ಊರಿಗೆ ಹೋಗುವ ವ್ಯವಸ್ಥೆ ಆಗದಿದ್ದರೆ ಚಿಂತಿಸುವುದಾದರೂ ಏಕೆ? ಹಬ್ಬದ ನಂತರ ಬಿಡುವು ಪಡೆದು ಊರಿಗೆ ಹೋಗಬಹುದು. ಹೌದು, ನಮ್ಮವರ ಜೊತೆಯಲ್ಲಿ ಆಚರಿಸಿದರೇನೇ ಹಬ್ಬಗಳ ಮಜಾ ಬಹಳ ಸವಿಯಾಗಿರುತ್ತದೆ. ಅದಕ್ಕಾಗಿ ಜಾಗೃತರಾಗಿರಬೇಕು. ಅಂದರೆ ಊರಿಗೆ ಹೊರಡಲು ಮುಂಚಿತವಾಗಿಯೇ ವ್ಯವಸ್ಥೆ ಮಾಡಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಈ ಗಡಿಬಿಡಿಯಿಂದ ಹಲವಾರು ತೊಂದರೆಗಳು ಉದ್ಭವಿಸುತ್ತವೆ.
ಮೊದಲನೆಯ ಹಾಗೂ ದೊಡ್ಡ ತೊಂದರೆ ನಿಮ್ಮ ಜೇಬಿಗೆ ಸಂಬಂಧಿಸಿದ್ದು. ಒಂದು ವೇಳೆ ಸಮಯಕ್ಕೆ ಸರಿಯಾಗಿ ನೀವು ಬುಕ್ ಮಾಡಿಸಲಾಗದಿದ್ದರೆ ತತ್ ಕಾಲ್ ಟಿಕೆಟ್‌ಸಿಗುವುದು ಅಸಂಭವ. ಯಾರಾದರೂ ಏಜೆಂಟ್‌ರಿಂದ ತತ್ ಕಾಲ್ ಟಿಕೆಟ್ ಬುಕ್ ಮಾಡಿಸಿದರೆ ಬಹಳ ದುಬಾರಿಯಾಗುವುದು. ಒಂದು ವೇಳೆ ನೀವು ಬಸ್ ಅಥವಾ ಫ್ಲೈಟ್‌ನಿಂದ ಹೋಗಲು ಯೋಚಿಸುತ್ತಿದ್ದರೆ ಆಗಲೂ ಬಹಳ ದುಬಾರಿಯಾಗುತ್ತದೆ.
ಹಣವಲ್ಲದೆ ಇನ್ನೊಂದು ತೊಂದರೆಯೆಂದರೆ ಆಫೀಸ್ ಕೆಲಸ. ನೀವು ಊರಿಗೆ ಹೋಗಬೇಕೆಂದು ನಿರ್ಧರಿಸಿದರೆ ಅದಕ್ಕೆ ಮೊದಲು ಎಲ್ಲ ಕೆಲಸಗಳನ್ನು ಮುಗಿಸಬೇಕೆಂದು ಯೋಚಿಸಿರುತ್ತೀರಿ. ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಕೆಲಸದ ಹೊರೆ ಇನ್ನೊಬ್ಬರ ಮೇಲೆ ಬೀಳಬಾರದು. ಆದರೆ ಕೆಲಸಗಳನ್ನು ತಕ್ಷಣವೇ ಮಾಡಿ ಮುಗಿಸಲಾಗುವುದಿಲ್ಲ. ಮನೆಗೆ ಹೋಗುವ ಗಡಿಬಿಡಿಯಲ್ಲಿ ಹೆಚ್ಚು ಸಮಯ ಹಿಡಿಯುವ ಕೆಲಸವನ್ನು ಕಡಿಮೆ ಸಮಯದಲ್ಲಿ ನಿರ್ವಹಿಸಿದರೆ ಅದರ ಗುಣಮಟ್ಟ ಹೇಗಿರಬಹುದು? ಹೀಗಿರುವಾಗ ಕೆಲಸವನ್ನು ಕುಶಲತೆಯಿಂದ ಮಾಡದಿದ್ದರೆ ನಿಮ್ಮ ಅಪ್ರೈಸ್ ಸಮಯ ಬಂದಾಗ ತೊಂದರೆಯಾಗುತ್ತದೆ. ಏಕೆಂದರೆ ಸಂಸ್ಥೆಗಳಲ್ಲಿ ನೌಕರರು ಕೆಲಸದ ಬಗ್ಗೆ , ತೋರುವ ಪ್ರಾಮಾಣಿಕತೆ, ಪರಿಶ್ರಮ ಮತ್ತು ನಿಷ್ಠೆಗಳನ್ನು ಪರೀಕ್ಷಿಸಲಾಗುತ್ತದೆ. ಹೀಗಿರುವಾಗ ಈ ಒಂದು ಮೈನಸ್ ಪಾಯಿಂಟ್ ನಿಮ್ಮ ಇಡೀ ವರ್ಷದ ಪರಿಶ್ರಮಕ್ಕೆ ತಣ್ಣೀರೆರಚಿದಂತಾಗುತ್ತದೆ.
ಅನೇಕ ಬಾರಿ ಕೆಲಸ ನಿರ್ವಹಿಸುವಾಗ ಮತ್ತು ಊರಿಗೆ ಹೋಗುವ ವ್ಯವಸ್ಥೆ ಮಾಡಿಕೊಳ್ಳುವ ಚಿಂತೆಯಲ್ಲಿ ಊಟ, ತಿಂಡಿಯ ಬಗ್ಗೆ ನಿರ್ಲಕ್ಷ್ಯತೆ ವಹಿಸುತ್ತಾರೆ ಅಥವಾ ಅಸಮಯದಲ್ಲಿ ಊಟ ಮಾಡುತ್ತಾರೆ. ಆರೋಗ್ಯ ಹಾಳಾಗಲು ಇದೂ ಒಂದು ಕಾರಣ.
ಸಾಧಾರಣವಾಗಿ ಜನ ಟಿಟಿಗೆ ದುಡ್ಡು ಕೊಟ್ಟು ಅಡ್ಜಸ್ಟ್ ಮಾಡಿಕೊಳ್ಳೋಣವೆಂದು ಟಿಕೆಟ್ ಇಲ್ಲದೆ ಟ್ರೇನ್ ಹತ್ತಿಬಿಡುತ್ತಾರೆ. ಸೀಟ್ ಸಿಗದಿದ್ದರೂ ನಿಲ್ಲಲು ಜಾಗವಿರುತ್ತದೆ. ಆದರೆ ಲಂಚ ಕೊಡುವುದು ಅಪರಾಧ. ಅದಕ್ಕೆ ಶಿಕ್ಷೆ ಅನುಭವಿಸಬೇಕಾಗಬಹುದು ಎಂದು ನಿಮಗೆ ಗೊತ್ತೆ?
ಸೀಟ್ ಕನ್‌ಫರ್ಮ್ ಆಗದಿದ್ದರೆ ಜಾಗ ಪಡೆಯಲು ಒದ್ದಾಡುವುದಷ್ಟೇ ಅಲ್ಲ, ವಸ್ತುಗಳನ್ನು ಕಳೆದುಕೊಳ್ಳುವ ಅಪಾಯ ಹೆಚ್ಚಾಗುತ್ತದೆ. ಏಕೆಂದರೆ ಪ್ರಯಾಣದುದ್ದಕ್ಕೂ ಹೆಗಲ ಮೇಲೆ ಸಾಮಾನು ಇಟ್ಟುಕೊಂಡು ಪ್ರಯಾಣ ಮಾಡಲಾಗುವುದಿಲ್ಲ. ನಿಮ್ಮ ಸಾಮಾನುಗಳನ್ನು ಎಲ್ಲಿಯಾದರೂ ಇಡಲೇಬೇಕು. ಅಂತಹ ಸ್ಥಿತಿಯಲ್ಲಿ ನೀವೊಂದು ಕಡೆ ನಿಮ್ಮ ವಸ್ತುಗಳೊಂದು ಕಡೆ ಆಗಿ ಅವು ಕಳುವಾಗುವ ಭಯವಿರುತ್ತದೆ.
ಮೊದಲಿನಿಂದಲೇ ತಯಾರಿ ಮಾಡಿಕೊಳ್ಳಿ
ಹಬ್ಬವನ್ನು ಊರಿನಲ್ಲೇ ಆಚರಿಸಲು ತೀರ್ಮಾನಿಸಿದ್ದರೆ ಅದಕ್ಕಾಗಿ ಸರಿಯಾದ ರೀತಿಯಲ್ಲಿ ಪ್ಲಾನ್ ಮಾಡಿಕೊಳ್ಳಿ. ಅದಕ್ಕಾಗಿ ಕೆಲವು ಟಿಪ್ಸ್ ಹೀಗಿವೆ.
ಟ್ರೇನ್‌ನಲ್ಲಿ ಸೀಟ್‌ರಿಸರ್ವೇಶನ್‌ಗೆ 4 ತಿಂಗಳ ಮೊದಲೇ ಟಿಕೆಟ್ ಕೊಡಲಾರಂಭಿಸುತ್ತಾರೆ. ಇದನ್ನು ನೆನಪಿಟ್ಟುಕೊಳ್ಳುವುದು ನಿಮ್ಮ ಜವಾಬ್ದಾರಿ. ನೀವು ದೀಪಾವಳಿಯಂತಹ ಸಂದರ್ಭಗಳಲ್ಲಿ ಊರಿಗೆ ಹೋಗಲು ಯೋಚಿಸುತ್ತಿದ್ದರೆ, ರಿಸರ್ವೇಶನ್ ಟಿಕೆಟ್ ಕೊಡುವ ಮೊದಲ ದಿನವೇ ಬುಕ್ ಮಾಡಿಸಿಬಿಡಿ. ಹಬ್ಬಕ್ಕೆ 1 ತಿಂಗಳು ಅಥವಾ ವಾರಕ್ಕೆ ಮೊದಲು ಟಿಕೆಟ್ ಸಿಗುವುದು ಅಸಂಭವ. ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ ಏಜೆಂಟರಿಂದ ನಿಮಗೆ ಟಿಕೆಟ್ ಸಿಕ್ಕೇ ಸಿಗುತ್ತದೆಂಬ ಭರವಸೆಯಿಲ್ಲ. ಏಕೆಂದರೆ ಆವು ಸಮಯದಲ್ಲಿ ನಿಮ್ಮಂತೆಯೇ ಬಹಳಷ್ಟು ಜನ ಏಜೆಂಟರ ಆಫೀಸ್ ಮುಂದೆ ದೊಡ್ಡ ಕ್ಯೂನಲ್ಲಿ ನಿಂತಿರುತ್ತಾರೆ. ಅಲ್ಲಿ ಫಸ್ಟ್ ಕಮ್ ಫಸ್ಟ್ ಸರ್ವ್ ಪದ್ಧತಿ ಇರುತ್ತದೆ. ಅಲ್ಲಿಯೂ ತಡವಾದರೆ ನೀವು ಗೊಂದಲದಲ್ಲೇ ಪ್ರವಾಸ ಮಾಡದೇ ವಿಧಿಯಿಲ್ಲ.
ಹಬ್ಬದಂದು ಅಥವಾ ಅದರ ಹಿಂದೆ
ಮುಂದಿನ ದಿನಗಳಲ್ಲಿ ಲೋಕಲ್ ಸಾರಿಗೆಗಳಲ್ಲೂ ಜಾಗ ಸಿಗುವುದಿಲ್ಲ. ಆದ್ದರಿಂದ ಊರಿಗೆ ಹೋಗಲು ಮುಂಚೆಯೇ ಟಿಕೆಟ್ ವ್ಯವಸ್ಥೆ ಮಾಡಿಕೊಳ್ಳಿ.
ಕನಿಷ್ಠ 1 ತಿಂಗಳ ಮೊದಲೇ ಬಾಸ್‌ಗೆ ಊರಿಗೆ ಹೋಗುವ ವಿಷಯ ತಿಳಿಸಿ. ಏನಾದರೂ ಮುಖ್ಯವಾದ ಕೆಲಸಗಳಿದ್ದರೆ ಮೊದಲೇ ಮಾಡುವಂತೆ ಅವರು ನಿಮಗೆ ಹೇಳುತ್ತಾರೆ. ಆಗ ನೀವು ಅವನ್ನು ಸಂಪೂರ್ಣ ಕೌಶಲ್ಯದಿಂದ ಸಮಯಕ್ಕೆ ಮುಂಚೆಯೇ ಮಾಡಿಮುಗಿಸಬಹುದು.
ಕಾಲೇಜಿನಲ್ಲಿ ನಿಮಗೆ ಹಬ್ಬಕ್ಕೆ ರಜೆ ಕೊಡಬಹುದು. ಆದರೆ ಹಬ್ಬದ ಹಿಂದೆ ಮುಂದೆ ಯಾವುದೇ ಪರೀಕ್ಷೆ ಇದೆಯೇ ಅಥವಾ ಯಾವುದೇ ಪ್ರಾಜೆಕ್ಟ್ ಅರ್ಜೆಂಟಾಗಿ ಸಲ್ಲಿಸಬೇಕಾಗಿದೆಯೇ ಎಂಬುದನ್ನು ಗಮನಿಸಿ. ಆ ರೀತಿ ಏನಾದರೂ ಇದ್ದರೆ ಅದಕ್ಕೆ ತಕ್ಕಂತೆ ರಿಸರ್ವೇಶನ್ ಮಾಡಿಸಿ.ಊರಿಗೆ ಹೋಗಲಾಗದಿದ್ದರೆ ಏನು ಮಾಡುವುದು?
ಬಹಳಷ್ಟು ಪ್ರಯತ್ನದ ನಂತರ ನೀವು ಊರಿಗೆ ಹೋಗಲು ಆಗದಿದ್ದರೆ ಉದಾಸರಾಗದಿರಿ. ಹಬ್ಬದ ಉತ್ಸಾಹ ಕಡಿಮೆ ಮಾಡಿಕೊಳ್ಳಬೇಡಿ. ನೀವು ಇರುವ ಊರಿನಲ್ಲಿಯೇ ನಿಮ್ಮಿಷ್ಟದಂತೆ ಆಚರಿಸಬಹುದು. ನಿಮ್ಮ ಕುಟುಂಬದವರೊಂದಿಗೆ ನೀವು ಎಷ್ಟೋ ಬಾರಿ ಹಬ್ಬ ಆಚರಿಸಬಹುದು. ಆದರೆ ಈ ಬಾರಿ ಹೊಸಬರೊಂದಿಗೆ, ಹೊಸ ಪದ್ಧತಿಯಲ್ಲಿ ಹಬ್ಬ ಆಚರಿಸಿ ನೋಡಿ.
ನಿಮ್ಮ ಏರಿಯಾದಲ್ಲಿ ಯಾರಾದರೂ ನಿಮ್ಮಂತೆಯೇ ಊರಿಗೆ ಹೋಗಲಾಗದಿದ್ದರೆ ಅಂಥವರೊಂದಿಗೆ ಹಬ್ಬದ ಆನಂದ ಸವಿಯಿರಿ.
ಈಗ ಕೆಲವು ಸಂಸ್ಥೆಗಳು ಹಾಗೂ ಸಮುದಾಯಗಳ ಹಬ್ಬಗಳಂದು ಕಾರ್ಯಕ್ರಮಗಳಲ್ಲಿ ನೀವು ಭಾಗವಹಿಸಬಹುದು. ಆಗ ನೀವು ಹಬ್ಬದ ಆನಂದವನ್ನು ಹೊಸ ರೀತಿಯಲ್ಲಿ ಪಡೆಯಬಹುದು.
ನೀವು ಇರುವ ಊರಿನ ಸುತ್ತಮುತ್ತ ಪ್ರವಾಸ ಮಾಡಲು ಯಾವುದಾದರೂ ಜಾಗಗಳಿದ್ದರೆ ಹಬ್ಬದ ದಿನದಂದು ಅಲ್ಲಿಗೆ ಹೋಗಬಹುದು. ಈ ಚಿಕ್ಕ ಪ್ರವಾಸದಲ್ಲಿ ಯಾರಾದರೂ ಸಂಗಾತಿ ಸಿಕ್ಕರೆ ಇನ್ನೂ ಚೆನ್ನಾಗಿರುತ್ತದೆ.
ಹಬ್ಬದಂದು ನೀವು ಎಂದೂ ಮಾಡಿರದಿದ್ದ ಕೆಲಸ ಮಾಡಿ. ನೀವು ಪ್ರತಿ ಹಬ್ಬಕ್ಕೆ ನಿಮಗೆ ಹಾಗೂ ಮನೆಯವರಿಗೆ ಬಹಳಷ್ಟು ವಸ್ತುಗಳನ್ನು ಖರೀದಿಸುತ್ತೀರಿ. ಈ ಬಾರಿ ತಮಗಾಗಿ ಏನನ್ನಾದರೂ ಖರೀದಿಸಲು ಅಸಮರ್ಥರಾಗಿರುವವರಿಗೆ, ಅವರಿಗೆ ಯಾರೂ ಏನನ್ನೂ ಖರೀದಿಸಿ ಕೊಡದವರಿಗೆ ಏನಾದರೂ ಖರೀದಿಸಿ. ಹಬ್ಬದ ಆನಂದವನ್ನು ಅನಾಥ ಮಕ್ಕಳು, ವೃದ್ಧರು ಮತ್ತು ಸ್ಪಾ ಸೆಂಟರ್‌ಗೆ ಹೋಗಿ ಅಲ್ಲಿನ ಜನರೊಂದಿಗೂ ಸವಿಯಬಹುದು. ಹಬ್ಬ ಆಚರಿಸುವ ಈ ಹೊಸ ವಿಧಾನ ನಿಮಗೆ ಎಂತಹ ಅನುಭೂತಿ ಕೊಡುತ್ತದೆಂದರೆ ಅದನ್ನು ನೀವೆಂದೂ ಮರೆಯುವುದಿಲ್ಲ.
– ಅನುರಾಧಾ
ಹಬ್ಬಗಳ ಸೀಸನ್‌ನಲ್ಲಿ ಟ್ರೇನ್. ಬಸ್ ಅಥವಾ ವಿಮಾನವಿರಲಿ ಎಲ್ಲಾ ಕಡೆಯೂ ಜನಜಂಗುಳಿ ಇರುತ್ತದೆ. ಒಂದು ವೇಳೆ ನಿಮ್ಮ ಟಿಕೆಟ್ ಕನ್‌ಫರ್ಮ್ ಆಗಿರದಿದ್ದರೆ ಆಗ ನೀವು ಆ ಗುಂಪಿನ ಒಂದು ಭಾಗವಾಗುತ್ತೀರಿ ಅದಕ್ಕಾಗಿ ಎಷ್ಟೋ ಅಪಾಯಗಳನ್ನು ಎದುರಿಸುವುದು, ಎಷ್ಟೋ ಅನುಮಾನಗಳನ್ನು ಸಹಿಸಿಕೊಳ್ಳಬೇಕಾಗಬಹುದು. ಕೊಂಚ ಯೋಚಿಸಿ, ಟ್ರೇನ್‌ನಲ್ಲಿ ಸೀಟ್ ಇಲ್ಲದಿದ್ದರೆ ನೀವು ಇಡೀ ಪ್ರಯಾಣ ನಿಂತೇ ಇರಬೇಕು ಅಥವಾ ಯಾರನ್ನಾದರೂ ಸೀಟ್‌ಗಾಗಿ ವಿನಂತಿಸಿಕೊಳ್ಳಬೇಕು.