ಫೆಸ್ಟಿವಲ್ ಸೀಸನ್ ಸಂತಸದ ವಾತಾವರಣ ತರುತ್ತದೆ. ಹೀಗಿರುವಾಗ ಕಾರ್ಪೋರೇಟ್ ವರ್ಲ್ಡ್ ಕೂಡ ಈ ಪರಿಸ್ಥಿತಿಯನ್ನು ಇನ್ನೂ ಹೆಚ್ಚು ಸಂತಸಮಯವನ್ನಾಗಿ ಮಾಡಿ ಬಿಸ್‌ನೆಸ್ ಹೆಚ್ಚಿಸಲು ಬಯಸುತ್ತದೆ. ಫೆಸ್ಟಿವಲ್‌ನ ಈ ಸೀಸನ್‌ನಲ್ಲಿ ಮನೆಗಳು, ಫ್ಲ್ಯಾಟ್‌ಗಳು ಮತ್ತು ಕಾರುಗಳು ಖರೀದಿಸಲ್ಪಡುತ್ತವೆ. ಕಾರ್ಪೋರೇಟ್ ವರ್ಲ್ಡ್ ಹೆಚ್ಚಾಗಿ 30-40 ವರ್ಷದ ಜನರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ತನ್ನ ಯೋಜನೆ ಮಾಡುತ್ತದೆ. ಆ ವಯಸ್ಸಿನವರು ತಮ್ಮ ಮನೆಗಳನ್ನು ಅಲಂಕರಿಸಲು ಇಚ್ಛಿಸುತ್ತಾರೆ. ಉದ್ಯೋಗಸ್ಥರಾದ ಅಂತಹವರು ಒಂದೇ ಕಂತಿನಲ್ಲಿ ಹಣ ಕೊಡಲು ಸಾಧ್ಯವಾಗುವುದಿಲ್ಲ. ಆಗ ಅವರು ಬಹಳಷ್ಟು ಸಣ್ಣಪುಟ್ಟ ವಸ್ತುಗಳನ್ನು ಇಎಂಐ ಅಂದ್ರೆ ಈಸಿ ಮಂಥ್ಲಿ ಇನ್‌ಸ್ಟಾಲ್‌ಮೆಂಟ್‌ನಲ್ಲಿ ತೆಗೆದುಕೊಳ್ಳುತ್ತಾರೆ. ಬಿಸ್‌ನೆಸ್ ಮಾಡುವವರು ತಮ್ಮ ವ್ಯಾಪಾರ ಹೆಚ್ಚಿಸಿಕೊಳ್ಳಲು ದೀಪಾವಳಿಯಲ್ಲಿ ಇಂತಹ ಆಫರ್ ತರುತ್ತಾರೆ. 20-30 ಸಾವಿರ ರೂ.ಗಳ ವಸ್ತುಗಳನ್ನು ಹಲವಾರು ಬಾರಿ ಬಡ್ಡಿಯನ್ನು ವಜಾ ಮಾಡಲಾಗುತ್ತದೆ. ಬರೀ ಕಾರ್ಪೋರೇಟ್ ವರ್ಲ್ಡ್ ಅಷ್ಟೇ ಅಲ್ಲ, ಬ್ಯಾಂಕುಗಳು ಕೂಡ ಅಂತಹ ಸಂದರ್ಭಗಳ ಲಾಭ ಪಡೆಯಲು ಮನೆಗಳು ಹಾಗೂ ಫ್ಲ್ಯಾಟ್‌ಗಳ ಇಎಂಐಯನ್ನು ಅಗ್ಗವಾಗಿ ಮಾಡುತ್ತವೆ. ಇನ್ನು ಕೆಲವು ತಮ್ಮ ಪ್ರೋಸೆಸಿಂಗ್ ಫೀಸ್‌ನ್ನು ಝೀರೋ ಮಾಡುತ್ತವೆ. ಈ ದೀಪಾವಳಿಯಲ್ಲಿ ಹೋಮ್ ಲೋನ್ ಮತ್ತು ಅದರ ಇಎಂಐ ಬಗ್ಗೆ ಬ್ಯಾಂಕ್ ಹೊಸ ಆಫರ್‌ಗಳನ್ನು ಕೊಡಬಹುದೆಂದು ಭರವಸೆ ಇಟ್ಟುಕೊಳ್ಳಬಹುದು.
ಕಾರ್ ಲೋನ್‌ನ ಆಫರ್ ತಿಳಿದುಕೊಳ್ಳಿ
5 ಲಕ್ಷಕ್ಕಿಂತ ಹೆಚ್ಚು ಬೆಲೆಯ ಕಾರುಗಳು ದುಬಾರಿಯಾದ್ದರಿಂದ ಅವುಗಳ ಇಎಂಐನಲ್ಲೂ ಬದಲಾವಣೆ ಆಗಬಹುದು. ಹೀಗಿರುವಾಗ ದೀಪಾವಳಿಯಲ್ಲಿ ಕಾರು ಲೋನ್‌ನ ಇಎಂಐ ತೆಗೆದುಕೊಳ್ಳುವ ಮೊದಲು ಸರಿಯಾಗಿ ಪರೀಕ್ಷಿಸಿ ನೋಡಿ. ಹೋಮ್ ಲೋನ್ ನಂತರ ಹೆಚ್ಚು ಇಎಂಐ ಕಾರು ಲೋನ್‌ಗೇ ಹೋಗುತ್ತದೆ. ಕಾರು ಮಾರುವ ಡೀಲರ್‌ಗಳು ಈ ವಿಷಯವನ್ನು ಅರ್ಥ ಮಾಡಿಕೊಂಡಿದ್ದಾರೆ. ಅವರು ಫೆಸ್ಟಿವಲ್ ಆಫರ್‌ನಲ್ಲಿ ಎಂತಹ ಘೋಷಣೆ ಮಾಡುತ್ತಾರೆಂದರೆ ದುಬಾರಿಯಾದರೂ ಕಾರು ಖರೀದಿಸುವುದು ಜನಸಾಮಾನ್ಯರ ಜೇಬಿಗೆ ಹೊರೆಯಾಗುವುದಿಲ್ಲ. ಮಾರುಕಟ್ಟೆ ತಜ್ಞರು ಹೇಳುವುದೇನೆಂದರೆ ಬೆಲೆಯೇರಿಕೆ ಹಬ್ಬಗಳ ಮೋಜಿಗೆ ಕಿರಿಕಿರಿಯುಂಟು ಮಾಡುತ್ತವೆ. ಆದ್ದರಿಂದ ಇತರ ವಸ್ತುಗಳಾದ ಎ.ಸಿ., ದುಬಾರಿ ಮೊಬೈಲ್, ಫ್ರಿಜ್, ಫರ್ನೀಚರ್, ಎಲ್ಇಡಿ ಟಿ.ವಿ., ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗೂ ಇಎಂಐ ಪಡೆಯಲಾಗುವುದು.
ಮಾರುಕಟ್ಟೆ ತಜ್ಞರು ಹೇಳುವುದೇನೆಂದರೆ ಈಗ ಜನರಿಗೆ ಹಣ ಉಳಿಸಿ ಯಾವುದಾದರೂ ವಸ್ತು ಖರೀದಿಸಲು ಸಮಯವಿಲ್ಲ. ಅವರು ವಸ್ತುಗಳನ್ನು ಖರೀದಿಸಿ ಕಂತುಗಳಲ್ಲಿ ತೀರಿಸುತ್ತಿದ್ದಾರರೆ. ಹೀಗಿರುವಾಗ ಇಎಂಐ ಅತ್ಯಂತ ಅಗತ್ಯ. ಉತ್ಪನ್ನಗಳನ್ನು ಮಾರುವ ಕಂಪನಿಗಳೂ ಸಹ ಇಎಂಐಯನ್ನು ಸುಲಭ ಮಾಡುತ್ತಿವೆ. ಫೆಸ್ಟಿವಲ್ ಸಮಯದಲ್ಲಿ ಇಂತಹ ಬಹಳಷ್ಟು ಆಫರ್‌ಗಳನ್ನು ಪ್ರಚಾರಕ್ಕೆ ತಯರಾಗುತ್ತದೆ.
ಅಸೋಚೆಮ್ ನ ಡೈರೆಕ್ಟರ್ ಜನರಲ್ ಡಿ.ಎಸ್. ರಾವತ್ ಹೀಗೆ ಹೇಳುತ್ತಾರೆ. “ಬೆಲೆಯೇರಿಕೆಯಿಂದ ಜನರಲ್ಲಿ ವಸ್ತುಗಳನ್ನು ಕೊಳ್ಳುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಕಂಪನಿಗಳು ಆ ನಷ್ಟವನ್ನು ತಡೆದುಕೊಳ್ಳಬೇಕು. ಕಂಪನಿಗಳು ಮತ್ತು ಮಾರುಕಟ್ಟೆ ಎರಡಕ್ಕೂ ಬೆಲೆಯೇರಿಕೆ ನಷ್ಟವುಂಟು ಮಾಡುತ್ತದೆ. ಈ ನಷ್ಟವನ್ನು ತಡೆಯುವಲ್ಲಿ ಇಎಂಐ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಇಎಂಐ ಮೂಲಕ ಪೂರ್ತಿ ಹಣ ಕೊಡದಿದ್ದರೂ ವಸ್ತುವನ್ನು ನಿಮ್ಮ ಮನೆಗೆ ಕೊಂಡೊಯ್ಯಬಹುದು. ಅದರಿಂದ ಹಬ್ಬದ ಮೋಜೂ ಸಿಗುತ್ತದೆ ಜೇಬಿಗೂ ಹೊರೆಯಾಗಿರುವುದಿಲ್ಲ.”
ಮೋಹಗೊಳಿಸುವ ಆಫರ್ಗಳು
ಫೆಸ್ಟಿವಲ್ ಸೀಸನ್‌ನಲ್ಲಿ ಗ್ರಾಹಕರನ್ನು ಮರುಳು ಮಾಡುವ ಉದ್ದೇಶದಿಂದಲೇ ಟಿ.ವಿ., ಫ್ರಿಜ್, ಮೈಕ್ರೋಓವನ್ ತಯಾರಿಸುವ ಕಂಪನಿಗಳು ದೊಡ್ಡ ಪ್ರಚಾರ ಕೈಗೊಂಡಿದ್ದಾರೆ. ಬೆಲೆಯೇರಿಕೆ ಇದ್ದರೂ ದೀಪಾವಳಿಯಲ್ಲಿ ಶೇ.30ಕ್ಕೂ ಹೆಚ್ಚು ಟಿ.ವಿ. ಮತ್ತು ಫ್ರಿಜ್‌ಗಳು ಮಾರಾಟಗೊಳ್ಳುತ್ತವೆ. ಇವನ್ನು ತಯಾರಿಸುವ ಎಲ್.ಜಿ. ಪ್ಯಾನಾಸೋನಿಕ್ ಮತ್ತು ಸ್ಯಾಮ್ ಸಂಗ್‌ನಂತಹ ಕಂಪನಿಗಳು ಹೊಸ ಪ್ರಚಾರದ ನಿಯಮಗಳೊಂದಿಗೆ ಮಾರುಕಟ್ಟೆಗೆ ಬರುತ್ತವೆ. ಎಲ್ಲರ ಫೋಕಸ್ ಇಎಂಐ ಮೇಲಿರುತ್ತದೆ. ಅವರು ಇಎಂಐನ್ನು ಸರಳಗೊಳಿಸಲು ಯೋಚಿಸುತ್ತಿದ್ದಾರೆ. ಗ್ರಾಹಕರಿಗೆ ಹೆಚ್ಚಿನ ಬಡ್ಡಿ ಹಾಕದೆ ಅಥವಾ ಕನಿಷ್ಠ ಬಡ್ಡಿಯೊಂದಿಗೆ 1 ವರ್ಷ ಅಥವಾ ಇನ್ನೂ ಕಡಿಮೆ ಅವಧಿಯಲ್ಲಿ ಸಾಲ ತೀರಿಸುವ ಆಫರ್ ಕೊಡಲಾಗುತ್ತದೆ. ಗ್ರಾಹಕರಿಂದ ಕೇವಲ 1 ಫಾರ್ಮ್ ಭರ್ತಿ ಮಾಡಿ ಕಂತುಗಳ ಪೋಸ್ಟ್ ಡೇಟೆಡ್ ಚೆಕ್‌ಗಳನ್ನು ತೆಗೆದುಕೊಳ್ಳಲಾಗುತ್ತದೆ.
ಪ್ಯಾನಾಸೋನಿಕ್ ಇಂಡಿಯಾ ಬರೀ ಭಾರತದ ಫೆಸ್ಟಿವಲ್ ಸೀಸನ್‌ನಲ್ಲಿ ಮಾರ್ಕೆಟಿಂಗ್ ವಿಧಾನಗಳಿಗೆ 90 ಕೋಟಿ ರೂ. ಬಜೆಟ್ ಇಟ್ಟಿದೆ. ಇತರ ಕಂಪನಿಗಳೂ ಇಂತಹ ಆಫರ್ ಕೊಡುತ್ತವೆ. ಎಲೆಕ್ಟ್ರಾನಿಕ್ ಮಾರುಕಟ್ಟೆಯಲ್ಲಿ ಎಲ್ಇಡಿ, ಟಿವಿ, ಸ್ಮಾರ್ಟ್ ಟಿ.ವಿ., ಡಬಲ್ ಡೋರ್ ಫ್ರಿಜ್ ಮತ್ತು ಜೆಟ್ ಸ್ಪ್ರೇ ವಾಷಿಂಗ್ ಮೆಷಿನ್‌ನಂತಹ ಗೃಹಬಳಕೆಯ ವಸ್ತುಗಳು ಸೇರಿರುತ್ತವೆ. ಕುಕಿಂಗ್ ರೇಂಜ್ ಕೂಡ ಇಂತಹ ಆಫರ್‌ನೊಂದಿಗೆ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಮಾಡಿಕೊಂಡಿದೆ.
ಈಗ ಮಾರುಕಟ್ಟೆಯ ರೂಪ ಬದಲಾಗಿದೆ. ಬೆಲೆಯೇರಿಕೆಯ ಪ್ರಭಾವವನ್ನು ಕಡಿಮೆಗೊಳಿಸಲು ಆಫರ್ ಯೋಜನೆಗಳು ಹೆಚ್ಚಾಗಿ ಇರುತ್ತವೆ. ಈ ಆಫರ್‌ಗಳಲ್ಲಿ ಬಟ್ಟೆಗಳು, ಕಿಚನ್ ವಸ್ತುಗಳು, ಆಹಾರ ಪದಾರ್ಥಗಳು, ಗಿಫ್ಟ್ಸ್ ಎಲ್ಲ ಆಫರ್‌ಗಳೊಂದಿಗೆ ಮಾಲ್‌ಗಳಲ್ಲಿ ಮಾರಾಟವಾಗುತ್ತವೆ. ಗ್ರಾಹಕರನ್ನು ಮಾರುಕಟ್ಟೆಯಿಂದ ಮಾಲ್‌ಗಳವರೆಗೆ ಕರೆತರುವಲ್ಲಿ ಆಫರ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಮಾಲ್‌ಗಳಲ್ಲಿ ಎಲ್ಲ ರೀತಿಯ ಆಫರ್‌ಗಳೂ ಸಿಗುತ್ತವೆ. ಅವುಗಳಲ್ಲಿ ಅನೇಕ ರೀತಿಯ ರಿಯಾಯಿತಿಗಳು ಸಿಗುತ್ತವೆ. ಅನೇಕ ವೇಳೆ ನಿಶ್ಚಿತ ಅಮೌಂಟ್‌ವರೆಗೆ ಖರೀದಿಸಿದರೆ ಬಿಲ್‌ನಲ್ಲಿ ರಿಯಾಯಿತಿ ಮತ್ತು ಏನಾದರೂ ಉಡುಗೊರೆ ನೀಡಲಾಗುತ್ತದೆ. ಒಂದೇ ಜಾಗದಲ್ಲಿ ಬಹಳಷ್ಟು ವೆರೈಟಿ ಇರುವುದರಿಂದ ಮಾಲ್‌ಗಳಲ್ಲಿ ಖರೀದಿಸಿದರೆ ಗ್ರಾಹಕರಿಗೆ ಅನುಕೂಲವಾಗುತ್ತದೆ. ಗ್ರಾಹಕರು ತಿಳಿವಳಿಕೆಯಿಂದ ಆಫರ್‌ನ ಲಾಭ ಪಡೆದು ತಮ್ಮ ಜೇಬಿನ ಭಾರವನ್ನು ಹಗುರವಾಗಿಸಿಕೊಳ್ಳಬಹುದು. ಅದರಿಂದ ಅವರ ಫೆಸ್ಟಿವಲ್‌ನ ಅಗತ್ಯಗಳು ಪೂರ್ಣವಾಗುತ್ತವೆ.
– ಭಾಗೀರಥಿ ಭಟ್