ನಿಮ್ಮನ್ನು ಡೇಟಿಂಗ್‌ಗೆ ಕರೆದೊಯ್ಯಲು ಯಾರೂ ಇಲ್ಲದಿದ್ದರೆ ನಿಮ್ಮೊಂದಿಗೇ ನೀವೇ ಡೇಟಿಂಗ್ ಮಾಡಿ. ನಿಮ್ಮ ವ್ಯಾಲೆಂಟೈನ್‌ನಿಂದ ನೀವು ನಿರೀಕ್ಷಿಸುವುದನ್ನು ನಿಮಗೇ ಮಾಡಿಕೊಳ್ಳಿ ವ್ಯಾಲೆಂಟೈನ್ ಡೇ ಹೂಗಳು, ಚಾಕಲೇಟ್‌ಗಳು, ಹೃದಯಗಳು ಮತ್ತು ಉಡುಗೊರೆಗಳನ್ನು ಕೊಡುವ ದಿನವೊಂದು ಮಾನ್ಯತೆ ನಡೆದಿದೆ. ಅದು ಪ್ರೀತಿಯನ್ನು ಆಚರಿಸುವುದಾಗಿದೆ. ಅದು ವರ್ಷದ ಅತ್ಯಂತ ರೊಮ್ಯಾಂಟಿಕ್ ದಿನವಾಗಿದ್ದು, ಕೆಲವರಿಗೆ ನಿರಾಶೆ ಉಂಟು ಮಾಡುತ್ತದೆ. ಒಂಟಿಯಾಗಿರುವವರಿಗೆ ಹಾಗೂ ಏನಾದರೊಂದು ಕಾರಣಕ್ಕಾಗಿ ತಮ್ಮ ಸಂಗಾತಿಯೊಂದಿಗೆ ಇರದವರಿಗೆ ಖಿನ್ನತೆ, ತಿರಸ್ಕಾರ ಹಾಗೂ ಒಂಟಿತನದ ಭಾವನೆಗಳು ಕಾಡುತ್ತವೆ. ಒಂಟಿ ಮಹಿಳೆಯರು ಅಥವಾ ಅವಿವಾಹಿತೆಯರು ಹಾರ್ಟ್ ಶೇಪ್‌ನ ಸಿಹಿ ಮಿಠಾಯಿಗಳು, ಸಂತೃಪ್ತ ದಂಪತಿಗಳು, ಹೂಗಳು ಇತ್ಯಾದಿ ವ್ಯಾಲೆಂಟೈನ್ ಡೇಯನ್ನು ಗುರುತಿಸುವ ವಸ್ತುಗಳನ್ನು ನೆನೆಸಿಕೊಂಡರೇನೇ ಸಂಕೋಚಪಟ್ಟುಕೊಳ್ಳುತ್ತಾರೆ.
ಆದರೆ, ವ್ಯಾಲೆಂಟೈನ್ ಡೇ ಜೋಡಿಗಳಿಗೆ ಮಾತ್ರ ಎಂದು ಯಾರು ಹೇಳಿದ್ದು? ಅದು ಪ್ರೀತಿಯ ಆಚರಣೆಯ ದಿನ. ಪ್ರೀತಿ ಜಾಗತಿಕವಾಗಿದೆ. ಅದು ನಮ್ಮೆಲ್ಲರಿಗೂ ಬೇಕು. ಏಕಾಂತವಾಗಿದ್ದರೆ ನಾವು ಒಬ್ಬರೇ ಎಂದೇನೂ ಅಲ್ಲ.
ಪಾಲ್ ಜೋಹಾನ್ಸ್ ಟಿಲಿಚ್ ಹೀಗೆ ಹೇಳುತ್ತಾರೆ, ಒಂಟಿತನ ಎಂಬ ಪದ ಒಂಟಿಯಾಗಿರುವುದರ ನೋವನ್ನು ವಿವರಿಸಲು ಬಳಸಲಾಗಿದೆ. ಹಾಗೆಯೇ `ಏಕಾಂತ’ ಪದವನ್ನು ಒಂಟಿಯಾಗಿರುವುದನ್ನು ವೈಭವೀಕರಿಸಲು ಬಳಸಲಾಗುತ್ತದೆ. ನಾವು ಸಂಬಂಧ ಬೆಳೆಸಿರಲಿ, ಇಲ್ಲದಿರಲಿ ನಮ್ಮೊಂದಿಗೆ ಮಾತ್ರ ಕಳೆದ ಸಮಯ ಅಮೂಲ್ಯವಾಗಿರುತ್ತದೆ. ದಲೈ ಲಾಮಾ ಹೇಳುವಂತೆ, “ನಿಮ್ಮನ್ನು ನೀವು ಪ್ರೀತಿಸದಿದ್ದರೆ ನೀವು ಬೇರೆಯವರನ್ನು ಪ್ರೀತಿಸಲು ಸಾಧ್ಯವಿಲ್ಲ. ನಿಮ್ಮ ಬಗ್ಗೆ ನಿಮಗೆ ಕರುಣೆ ಇಲ್ಲದಿದ್ದರೆ ನೀವು ಬೇರೆಯವರ ಬಗ್ಗೆ ಕರುಣೆ ಬೆಳೆಸಿಕೊಳ್ಳಲು ಸಾಧ್ಯವಿಲ್ಲ.” ಆದ್ದರಿಂದ ಈ ಶುಭದಿನದಂದು ನಿಮ್ಮನ್ನು ಪ್ರೀತಿಸಿ. ನಂತರ ಎಲ್ಲ ಅಲ್ಲಿಂದ ಸುಂದರವಾಗಿ ಹರಿದುಬರುತ್ತವೆ. ಏಕಾಂತವನ್ನು ಆನಂದಿಸಿ. ಅದಕ್ಕೆ ನಾವು ಯತಿಗಳಾಗಲೀ, ಸನ್ಯಾಸಿಗಳಾಗಲೀ ಆಗಬೇಕಾಗಿಲ್ಲ. ನಾವು ನಾವಾಗಿದ್ದು ನಮ್ಮ ಅಸ್ತಿತ್ವ ಉಳಿಸಿಕೊಂಡರೆ ಸಾಕು. ದುರದೃಷ್ಟವಶಾತ್, ನಾವು ಬಹಳಷ್ಟು ಜನ ಏಕಾಂತವನ್ನು ಒಂಟಿತನ ಹಾಗೂ ಪ್ರತ್ಯೇಕವಾಗಿರುವುದು ಎಂದು ತಪ್ಪು ತಿಳಿದುಕೊಂಡಿದ್ದೇವೆ.
ಏಕಾಂತವೆಂದರೆ ನಾವು ಜೀವನವೆಲ್ಲಾ ಏಕಾಂಗಿಯಾಗಿದ್ದು ಸಮಾಜಕ್ಕೆ ವಿರುದ್ಧವಾಗಿರಬೇಕು ಎಂದೇನಲ್ಲ. ಬದಲಾಗಿ ನಮಗಾಗಿ ಕೊಂಚ ಸಮಯ ಮೀಸಲಿಡುವುದು. ಎಲ್ಲ ಸಮಯದಲ್ಲೂ ಬೇರೆಯವರೊಂದಿಗೆ ಇರಲೇಬೇಕೆಂದಿಲ್ಲ. ನಾವು ಒಂಟಿಯಾಗಿ ಹುಟ್ಟುತ್ತೇವೆ ಮತ್ತು ಒಂಟಿಯಾಗಿ ಸಾಯುತ್ತೇವೆ. ಹೀಗಾಗಿ ನಾವು ಎಲ್ಲ ಸಂದರ್ಭಗಳಲ್ಲೂ ನಾವೇ ನಮ್ಮ ಅತ್ಯುತ್ತಮ ಸಂಗಾತಿಗಳಾಗುತ್ತೇವೆ. ನಾವು ಬಯಸಿದರೆ ಮಾತ್ರ. ಏಕಾಂತದ ಬಗ್ಗೆ ಹೆನ್ರಿ ಡೇವಿಡ್ ತೋರಿಯೋ ಹೀಗೆ ಹೇಳುತ್ತಾರೆ, “ನಾನು ಏಕಾಂತದಂತಹ ಜೊತೆಗಾರನನ್ನು ಕಾಣಲೇ ಇಲ್ಲ. ನಾವು ವಿದೇಶಕ್ಕೆ ಹೊರಟಾಗ, ನಮ್ಮ ಚೇಂಬರ್‌ನಲ್ಲಿ ಇರುವುದಕ್ಕಿಂತಲೂ ಹೆಚ್ಚಾಗಿ ಒಂಟಿಯಾಗಿರುತ್ತೇವೆ.”
ಏಕಾಂತ ಅನಿವಾರ್ಯ. ಜನ ಆಗಾಗ್ಗೆ ಸ್ವಲ್ಪ ಸಮಯ ಅಥವಾ ಹೆಚ್ಚು ಸಮಯ ಏಕಾಂತ ಅನುಭವಿಸುತ್ತಾರೆ. ಈ ಪ್ರಪಂಚದಲ್ಲಿ ಸಂಬಂಧಗಳು ಕೆಲಕಾಲ ಮಾತ್ರ ನಿಲ್ಲುತ್ತವೆ ಎಂದು ಎಲ್ಲರಿಗೂ ಗೊತ್ತು. ನಾವೆಲ್ಲರೂ ಸ್ವಲ್ಪ ಕಾಲ ಯಾರಾದರೊಬ್ಬರ ಹೆಂಡತಿ, ತಾಯಿ, ಮಗು, ಗೆಳತಿ ಆಗಿರುತ್ತೇವೆ. ನಮಗೆ ನಮ್ಮೊಂದಿಗಿನ ಸಂಬಂಧ ಮಾತ್ರ ಶಾಶ್ವತವಾಗಿರುತ್ತದೆ. ಆದ್ದರಿಂದ ನಮ್ಮ ಭವ್ಯತೆಯನ್ನು ಕೊಂಡಾಡೋಣ. ನಮ್ಮ ಇರುವಿಕೆಯನ್ನು ಗೌರವಿಸಿ, ಪಾಲಿಸೋಣ. ನಮ್ಮನ್ನು ನಾವು ಪ್ರೀತಿಸುವುದನ್ನು ಆರಂಭಿಸಲು ವ್ಯಾಲೆಂಟೈನ್ ಡೇಗಿಂತ ಉತ್ತಮ ದಿನ ಯಾವುದಿದೆ?
ಏಕಾಂತದ ಅನುಕೂಲಗಳು
ಆತ್ಮ ಜಾಗೃತಿ : ಏಕಾಂತ ನಮ್ಮನ್ನು ನಾವು ತಿಳಿದುಕೊಳ್ಳಲು ಅವಕಾಶ ಕೊಡುತ್ತದೆ. ನಮ್ಮೊಂದಿಗೆ ಮಾತಾಡಿಕೊಳ್ಳುವುದರಿಂದ ನಮ್ಮ ಶಕ್ತಿ, ದೌರ್ಬಲ್ಯ, ಪ್ರೀತಿ, ನಮ್ಮ ಸೋಲು ತಿಳಿದುಕೊಳ್ಳಬಹುದು. ಅದರಿಂದ ನಮ್ಮೊಂದಿಗಿನ ಬಾಂಧವ್ಯ ಆರೋಗ್ಯಕರವಾಗಿರುತ್ತದೆ.
ಸ್ವಾವಲಂಬನೆ : ನಮ್ಮ ಬದುಕಿನ ಸವಾಲುಗಳ ಒಳಹೊಕ್ಕು ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಏಕಾಂತ ನಮ್ಮನ್ನು ಸಶಕ್ತರನ್ನಾಗಿಸುತ್ತದೆ. ನಮ್ಮ ಕೆಲಸಗಳನ್ನು ನಾವೇ ಮಾಡಿಕೊಂಡಾಗ ಬಹಳ ಸಂತೋಷವಾಗುತ್ತದೆ. ಸ್ವಾತಂತ್ರ್ಯದ ಅರಿವು ನಮ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಉದಾಹರಣೆಗೆ ವಾರಾಂತ್ಯದಲ್ಲಿ ದಿನಸಿ ಸಾಮಾನುಗಳನ್ನು ಕೊಳ್ಳಲು ಸಂಗಾತಿಗೆ ಕಾಯುವುದು ಬೇಕಾಗಿಲ್ಲ. ಅದನ್ನು ನಾವೇ ಮಾಡಬಹುದು.
ಚಿಂತನೆಗೆ ಸಕಾಲ : ಏಕಾಂತ ನಮಗೆ ಧ್ಯಾನ ಮಾಡಲು ಸಮಯ ಕೊಡುತ್ತದೆ. ಆ ಸಮಯದಲ್ಲಿ ನಮ್ಮ ಮನಸ್ಸಿನ ನಿರಂತರ ಹೊಯ್ದಾಟಗಳನ್ನು ನಿಯಂತ್ರಿಸಿಕೊಳ್ಳಬಹುದು. ಆಗ ನಾವು ಅನುಭವಿಸುವ ತಾತ್ಕಾಲಿಕ ಶಾಂತಿ ನಮಗೆ ಹಾಗೂ ನಮ್ಮ ಸುತ್ತಮುತ್ತಲಿನವರಿಗೆ ಸುಂದರ ವ್ಯಾಲೆಂಟೈನ್ ಡೇ ಆಗಿರಲು ಸಹಾಯ ಮಾಡುತ್ತದೆ.
ನಿಮ್ಮ ಮೌಲ್ಯಮಾಪನ ಮಾಡಿಕೊಳ್ಳಿ : ನಾವು ಹೆಚ್ಚಾಗಿ ನಮ್ಮ ಬಗ್ಗೆ ಬಹಳ ವಿಮರ್ಶಾತ್ಮಕವಾಗಿರುತ್ತೇವೆ. ಆದ್ದರಿಂದ ಈ ವ್ಯಾಲೆಂಟೈನ್ ಡೇಯಂದು ನಮ್ಮೊಳಗಿನ ಶಕ್ತಿಯನ್ನು ಪ್ರಶಂಸಿಸಲು ಆರಂಭಿಸೋಣ. ನಾವು ನಾವಾಗಿರುವುದಕ್ಕೆ ಗೌರವಿಸೋಣ. ನಮ್ಮೊಳಗಿನ ಶಕ್ತಿಯನ್ನು ಗುರುತಿಸಿದರೆ ಸ್ವಸಾಮರ್ಥ್ಯ ಹೆಚ್ಚಾಗಿ ನಮ್ಮ ಆತ್ಮಗೌರವ ಮತ್ತು ವಿಶ್ವಾಸ ಹೆಚ್ಚುತ್ತದೆ.
ನಿಮ್ಮ ಕಾರ್ಯಶೀಲತೆ ಹೆಚ್ಚಿಸಲು ಸಕಾಲ : ನಾವು ನಮ್ಮ ಆಲೋಚನೆಗಳಲ್ಲಿ ಮೂಡಿರುವಾಗ ಅತ್ಯುತ್ತಮ ಸೃಷ್ಟಿ ಉಂಟಾಗುತ್ತದೆ. ಏಕಾಂತ ಕ್ರಿಯಾಶೀಲತೆಗೆ ಪ್ರಮುಖವಾಗಿರುತ್ತದೆ.
ಆರೋಗ್ಯಕರ ಸಂಬಂಧಗಳನ್ನು ಉಳಿಸಿಕೊಳ್ಳಲು ಏಕಾಂತ
ಏಕಾಂತ ನಮ್ಮ ಭಾವನಾತ್ಮಕ ಪ್ರಬುದ್ಧತೆ ಅಭಿವೃದ್ಧಿಗೊಳಿಸಿ ನಮ್ಮ ಸಂಗಾತಿಗಳಿಗೆ ನಮ್ಮ ಸಂಬಂಧವನ್ನು ಅರ್ಥ ಮಾಡಿಸುತ್ತದೆ. ನಮ್ಮ ಬಗ್ಗೆ ನಮಗೇ ಅರಿವಿರದಿದ್ದರೆ, ನಮ್ಮ ಬದುಕಿನಲ್ಲಿ ನಿಜವಾದ ಪ್ರೀತಿಯನ್ನು ಹೊಂದಲು ಕಷ್ಟವಾಗುತ್ತದೆ.
ನಾವು ಒಂದು ಸಂಬಂಧದಲ್ಲಿದ್ದಾಗ ಪ್ರತಿ ಕ್ಷಣವನ್ನೂ ಒಟ್ಟಿಗೆ ಕಳೆಯಲು ಪ್ರಯತ್ನಿಸುತ್ತೇವೆ. ನಮ್ಮ ಸಂಗಾತಿಗಳು ಹೋದಲ್ಲೆಲ್ಲಾ ನಾವು ಹೋಗುತ್ತೇವೆ ಮತ್ತು ನಾವು ಅದನ್ನೇ ನಿರೀಕ್ಷಿಸುತ್ತೇವೆ. ಆದರೆ ಎಲ್ಲರಿಗೂ ತಾವು ಬಯಸಿದ್ದನ್ನೇ ಮಾಡಲು ಸಮಯ ಹಾಗೂ ಅವಕಾಶ ಬೇಕಾಗಿದೆ ಎಂದು ಮರೆತುಬಿಡುತ್ತೇವೆ. ಆದ್ದರಿಂದ ಈ ವ್ಯಾಲೆಂಟೈನ್ ಡೇಯಂದು ನಮಗಾಗಿ ಮತ್ತು ನಮ್ಮ ಸಂಗಾತಿಗೆ ಸಮಯ ಕೊಡೋಣ.
ಸಮಕಾಲೀನ ಧಾರ್ಮಿಕತೆಯ ಅಗ್ರಗಣ್ಯರಾದ ಪೆಟ್ರೀಶಿಯಾ ಮೊನಾಘನ್ ಹೀಗೆ ಹೇಳುತ್ತಾರೆ, “ಗಾಳಿ ಹಾಗೂ ಜಾಗ ಇಲ್ಲದಿದ್ದರೆ ಯಾವುದೂ ಸರಿಯಾಗಿ ಬೆಳೆಯುವುದಿಲ್ಲ. ಆದರೆ ಈ ಏಕಾಂತದ ಕಲೆಯಲ್ಲಿ ನಮ್ಮ ಸಂಗಾತಿಗಳು ತಮ್ಮನ್ನು ಕಡೆಗಣಿಸಲಾಗುತ್ತಿದೆ ಅಥವಾ ಏಕಾಂಗಿಗಳನ್ನಾಗಿ ಮಾಡಲಾಗಿದೆ ಎಂದುಕೊಳ್ಳಬಾರದು.
ಏಕಾಂತ ನಮ್ಮ ಸಂಬಂಧಗಳಲ್ಲಿ ಅಡೆತಡೆಗಳನ್ನು ಉಂಟುಮಾಡುತ್ತಿರುವ ನಮ್ಮ ಕ್ರಿಯೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಲು ಅವಕಾಶ ಕೊಡುತ್ತದೆ. ನಮ್ಮ ಸ್ವಭಾವಗಳು, ಅನಿಯಂತ್ರಿತ ಭಾವನೆಗಳು ನಮ್ಮ ಸಂಗಾತಿಗಳಿಗೆ ನೋವುಂಟು ಮಾಡುತ್ತಿರಬಹುದು. ನಮ್ಮ ಸಂಗಾತಿಗಳೊಂದಿಗೆ ಸಂತಸಭರಿತ ಸಂಬಂಧಗಳನ್ನು ಹೊಂದಿರಬೇಕು. ಉದಾಹರಣೆಗೆ ನಮ್ಮ ಸಂಗಾತಿಗಳಿಗೆ ನಾವು ಕಿಟಿ ಪಾರ್ಟಿಗೆ ಹೋಗುವುದು, ಗಾಸಿಪ್ ಮಾಡುವುದು ಇಷ್ಟವಾಗದಿರಬಹುದು. ಏಕಾಂತ ನಮಗೆ ಸಂತೃಪ್ತಿ ಹಾಗೂ ಪರಿಪೂರ್ಣತೆ ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ನಾವು ನಮ್ಮನ್ನು ಪರಿಪೂರ್ಣರನ್ನಾಗಿಸಲು ಸಂಗಾತಿಗಳಿಗಾಗಿ ಹುಡುಕದೆ ಬೇಷರತ್ ಪ್ರೀತಿಯನ್ನು ಅರಸುತ್ತೇವೆ. ನಾವು ಪ್ರಜ್ಞಾಪೂರ್ವಕ ಆಯ್ಕೆ ಮಾಡಿಕೊಳ್ಳಲು ಏಕಾಂತ ಅವಕಾಶ ಕೊಡುತ್ತದೆ.
ಏಕಾಂತ ಅನುಭವಿಸುವ ವಿಧಾನಗಳು
ನಿಮ್ಮನ್ನು ಲಾಲಿಸಿ : ಮಹಿಳೆಯರಾಗಿ ನಾವು ಬಹಳಷ್ಟು ಸಂಬಂಧಗಳಲ್ಲಿರಬೇಕಾಗುತ್ತದೆ. ನಾವು ಯಾರದೋ ಮಗಳು, ಹೆಂಡತಿ, ಲವರ್, ಸೊಸೆಯಾಗಿರುತ್ತೇವೆ. ನಮ್ಮ ಜವಾಬ್ದಾರಿಗಳನ್ನು ನಿಭಾಯಿಸುತ್ತಿರುತ್ತೇವೆ. ಹೀಗಾಗಿ ನಮಗಾಗಿಯೇ ಕೊಂಚ ಸಮಯ ಇಟ್ಟುಕೊಳ್ಳಬೇಕಲ್ಲವೇ? ಈ ವ್ಯಾಲೆಂಟೈನ್ ಡೇಯಂದು ಬೆಳಗಿನ ವ್ಯಾಯಾಮಕ್ಕಾಗಿ, ಮೆನಿಕ್ಯೂರ್, ಪೆಡಿಕ್ಯೂರ್‌ಗಳಿಗಾಗಿ ಕೊಂಚ ಸಮಯ ಇಟ್ಟುಕೊಳ್ಳಿ. ಎಲ್ಲ ಚಿಂತೆಗಳನ್ನೂ ಮರೆಯಿರಿ. ನಿಮಗೆ ಇಷ್ಟವಾದ ಸಂಗೀತ ಕೇಳಿ. ಬೆಡ್ ಕಾಫಿ ಕುಡಿಯಿರಿ. ಫೇಸ್ ಬುಕ್, ಆರ್ಕುಟ್ ಮತ್ತು ಟ್ವಿಟರ್ ಕ್ಲೋಸ್ ಮಾಡಿ, ಮೊಬೈಲ್ ಸ್ವಿಚ್ ಆಫ್ ಮಾಡಿ. ನಿಮಗೆ ಖುಷಿ ತರುವ ಕೆಲಸ ಮಾಡಿ ಸಂತೃಪ್ತ ಮನೋಭಾವದಿಂದ ನಲಿಯಿರಿ.
ನಿಮ್ಮೊಂದಿಗೇ ನೀವೇ ಡೇಟಿಂಗ್ ಮಾಡಿ : ನಿಮ್ಮನ್ನು ಡೇಟಿಂಗ್‌ಗೆ ಕರೆದೊಯ್ಯಲು ಯಾರೂ ಇಲ್ಲದಿದ್ದರೆ ನಿಮ್ಮೊಂದಿಗೇ ಡೇಟಿಂಗ್ ಮಾಡಿ. ನಿಮ್ಮ ವ್ಯಾಲೆಂಟೈನ್‌ನಿಂದ ನೀವು ನಿರೀಕ್ಷಿಸುವುದನ್ನು ನಿಮಗೇ ಮಾಡಿಕೊಳ್ಳಿ. ಅದು ಕ್ಯಾಂಡಲ್ ಲೈಟ್ ಡಿನ್ನರ್ ಆಗಿರಬಹುದು ಅಥವಾ ನೀವು ಕೊಳ್ಳಬಯಸುವ ಗಿಫ್ಟ್ ಆಗಿರಬಹುದು. ಅತ್ಯುತ್ತಮ ಡ್ರೆಸ್ ಧರಿಸಿ ನಿಮ್ಮ ಕಂಪನಿಯನ್ನು ನೀವೇ ಎಂಜಾಯ್ ಮಾಡಿ.
ಗಾರ್ಡನಿಂಗ್ : ನಿಮ್ಮ ಹೃದಯದಲ್ಲಿನ ಪ್ರೀತಿಯನ್ನು ನಿಮಗೆ ಬಹಳಷ್ಟನ್ನು ಕೊಟ್ಟಿರುವ ಪ್ರಕೃತಿಯತ್ತ ವ್ಯಕ್ತಪಡಿಸಿ. ಎಲ್ಲ ತೋಟಗಾರರೂ ಸುಂದರ ಪ್ರದೇಶದಲ್ಲಿ ವಾಸಿಸುತ್ತಾರೆ. ಏಕೆಂದರೆ ಅವರು ಆ ಪ್ರದೇಶವನ್ನು ಸುಂದರವಾಗಿಸುತ್ತಾರೆ. ನಮ್ಮ ಸುತ್ತಮುತ್ತಲಿನಲ್ಲಿ ಸೌಂದರ್ಯ ನೋಡಿದಾಗ ನಮ್ಮ ಬದುಕೂ ಸುಂದರವಾಗುತ್ತದೆ.
ಓದುವುದು : ನಮ್ಮ ಅಮೂಲ್ಯ ಸಮಯನ್ನು ಒಂಟಿಯಾಗಿ ಕಳೆಯಲು ಇದು ಉತ್ತಮ ಉಪಾಯ. ನಮ್ಮ ಅಭಿರುಚಿಗೆ ತಕ್ಕಂತೆ ಕಥೆ, ಕಾದಂಬರಿ, ನಾಟಕ ಇತ್ಯಾದಿಗಳನ್ನು ಓದಬಹುದು.
ಶಾಪಿಂಗ್ ಮಾಡಿ : ಮಹಿಳೆಯರ ಅತ್ಯಂತ ಪ್ರೀತಿಪಾತ್ರ ಚಟುವಟಿಕೆ ನಿಸ್ಸಂಶಯವಾಗಿ ಶಾಪಿಂಗ್ ಆಗಿದೆ. ಆದ್ದರಿಂದ ನಾವು ಒಂಟಿ ಇದ್ದಾಗ ಶಾಪಿಂಗ್‌ಗೆ ಹೋಗಿ ನಮಗಿಷ್ಟವಾದ ಡ್ರೆಸ್ ಮತ್ತು ಆ್ಯಕ್ಸೆಸರೀಸ್ ಕೊಳ್ಳಬಹುದು.
ಬಟ್ಟೆಗಳಿಗೆ ಕ್ರ್ಯಾಫ್ಟಿಂಗ್ ಪ್ರಾಜೆಕ್ಟ್ : ಏನಾದರೂ ಕ್ರಿಯೇಟಿವ್ ವರ್ಕ್ ಮಾಡಿ. ಪೇಟಿಂಗ್, ಡ್ರಾಯಿಂಗ್ ಇತ್ಯಾದಿ ನಿಮಗೆ ಸಂತೋಷ ತರುವಂತಹ ಯಾವುದೇ ಕೆಲಸ ಮಾಡಿ.ಈ ವ್ಯಾಲೆಂಟೈನ್ ಡೇಯಂದು ನಮ್ಮನ್ನು ನಾವು ಮರು ಶೋಧಿಸಿಕೊಳ್ಳಬೇಕು. ಬಾಹ್ಯ ಆಕರಗಳನ್ನು ಅಲಂಭಿಸದೆ ಪ್ರೀತಿ ಮತ್ತು ಒಪ್ಪಿಗೆ ಬಗ್ಗಿ ಕಾಯಬೇಕಾಗಿದೆ. ಈ ಶುಭದಿನದಂದು ನಾವು ಯಾರೊಂದಿಗೆ ಇದ್ದೇವೆ, ಯಾರೊಂದಿಗೆ ಇಲ್ಲ ಎಂದು ಗಮನಿಸದೆ ನಮ್ಮ ಇರುವಿಕೆಯನ್ನು ವಿಜೃಂಭಣೆಯಿಂದ ಆಚರಿಸೋಣ. ನಾವು ಬೇರೆಯವರಿಗೆ ಕೊಡುವ ಪ್ರೀತಿಯನ್ನು ನಮಗೇ ಕೊಡೋಣ.
– ಪ್ರಭಾವತಿ