ದೆಹಲಿ ಮೂಲದ ಬಾಲಿವುಡ್‌ನ ಬ್ಯೂಟಿಫುಲ್ ಕಲಾವಿದೆ ಹುಮಾ ಕುರೇಶಿಯನ್ನು ಚಿತ್ರರಸಿಕರು ಆಕೆಯ ಸೌಂದರ್ಯ, ಜಬರ್ದಸ್ತ್ ನಟನೆ, ಜೊತೆಗೆ ಹೆಲ್ದಿ ಪರ್ಸನಾಲಿಟಿಯಿಂದ ಚೆನ್ನಾಗಿ ಬಲ್ಲರು.

ಕಾಲೇಜು ಕಲಿಕೆಯ ನಂತರ ಹುಮಾ ನಾಟಕಗಳಿಗೆ ಅಂಟಿಕೊಂಡಳು. 2008ರಲ್ಲಿ ಆಕೆ ಹಿಂದೂಸ್ಥಾನ್‌ ಯೂನಿಲಿವರ್‌ನ ಮಾಡೆಲಿಂಗ್‌ ಆರಂಭಿಸಿ, ಮುಂದೆ ಅನುರಾಗ್‌ ಕಶ್ಯಪ್‌ರ `ಗ್ಯಾಂಗ್ಸ್ ಆಫ್‌ ವಾಸೆಪುರ್‌’ ಚಿತ್ರದಲ್ಲಿ ಬಾಲಿವುಡ್‌ಗೆ  ಗ್ರ್ಯಾಂಡ್‌ ಎಂಟ್ರಿ ಪಡೆದಳು. ಈ ಚಿತ್ರದ ನಟನೆಯಿಂದ ಹುಮಾ ಎಲ್ಲರ ಪ್ರಶಂಸೆ ಗಿಟ್ಟಿಸಿದಳು. ಇದರ ನಂತರ `ಗ್ಯಾಂಗ್ಸ್ ಆಫ್‌ ವಾಸೆಪುರ್‌, ಲವ್ ಶ್‌ತೇ ಚಿಕನ್‌ ಖುರಾನಾ, ಏಕ್‌ಥೀ ಡಾಯ್‌್ನ, ಡೇಲ್ ಇಶ್ಕಿಯಾ’ ಮುಂತಾದ ಚಿತ್ರಗಳಿಂದ ಎಲ್ಲರ ಗಮನ ಸೆಳೆದಳು.

ಇತ್ತೀಚೆಗೆ ಹುಮಾ ವಿಪುಲ್ ‌ಸ್ಯಾರೀಸ್‌ನವರ ಹೊಸ ಸೀರೆಗಳ ಕಲೆಕ್ಷನ್‌ ಲಾಂಚ್‌ ಮಾಡಿದ್ದಳು. ಅದೇ ಸಂದರ್ಭದಲ್ಲಿ ಆಕೆ ಜೊತೆ ನಡೆಸಿದ ಮಾತುಕಥೆ :

ನೀವೇನೋ ನಿಮ್ಮ ಕೆರಿಯರ್ನ್ನು ಥಿಯೇಟರ್ಮತ್ತು ಮಾಡಿಲಿಂಗ್ನಿಂದ ಶುರುಮಾಡಿದಿರಿ. ಈಗಲೂ ನಾಟಕಗಳ ಸಂಪರ್ಕವಿದೆಯೇ?

ನಾಟಕ ಅಂದ್ರೆ ಬಹಳ ಇಷ್ಟ. ಒಳ್ಳೆ ಅವಕಾಶ ಸಿಕ್ಕಿದರೆ ಈಗಲೂ ಮುಂದುರಿಸುವೆ. ಆದರೆ ನಾನೀಗ ಈ ನಿಟ್ಟಿನಲ್ಲಿ ಹಿರಿಯ ಆಸೆಗಳನ್ನು ಬೆಳೆಸಿಕೊಂಡಿದ್ದೇನೆ. ಸಿನಿಮಾದ ಗ್ಲಾಮರ್‌ ಹುಚ್ಚು ಅಂಟಿಸಿಕೊಂಡಿದ್ದೇನೆ, ಆ್ಯಕ್ಟಿಂಗ್‌ ಅಚ್ಚುಮೆಚ್ಚಾಗಿದೆ. ಸಿನಿಮಾ ಮೂಲಕ ಲಕ್ಷಾಂತರ ವೀಕ್ಷಕರನ್ನು ತಲುಪಬಹುದು.

ನಿಮ್ಮ ದೃಷ್ಟಿಯಲ್ಲಿ ಸೆಕ್ಸ್ ಅಪೀಲ್ ಅರ್ಥ…..?

ನನ್ನ ದೃಷ್ಟಿಯಲ್ಲಿ ಸೆಕ್ಸ್ ಅಪೀಲ್ ‌ಎಂದರೆ, ನೀವು ಯಾರನ್ನು ಎಷ್ಟು ಇಷ್ಟಪಡುತ್ತೀರಿ, ಅವರನ್ನು ಎಷ್ಟು ಮೆಚ್ಚುತ್ತೀರಿ, ಅವರ ಎಷ್ಟು ಸನಿಹ ಇರಲು ಬಯಸುತ್ತೀರಿ ಎಂಬುದನ್ನು ಅವಲಂಬಿಸಿದೆ. ನಮ್ಮಂಥ ಸ್ಟಾರ್ಸ್ ಪ್ರಯಾಣದಲ್ಲಿರುವಾಗ ಫ್ಯಾನ್ಸ್ ನಮ್ಮ ಕೈ ಕುಲುಕಿ ಮಾತನಾಡಬಯಸುತ್ತಾರೆ, ನಮ್ಮನ್ನು ಮುಟ್ಟಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇದುವೇ ಸೆಕ್ಸ್ ಅಪೀಲ್. ದಿಸ್‌ ಈಸ್‌ ಕೂಲ್‌…. ಎಲ್ಲರಿಗಿಂತ ಹೆಚ್ಚು  ಕೂಲೆಸ್ಟ್ ಆದವರು ಮಾತ್ರ ಅಪೀಲಿಂಗ್‌ ಅನಿಸುತ್ತಾರೆ.

ಬಾಲಿವುಡ್ನಲ್ಲಿ ಝೀರೋ ಸೈಜ್ ಫಿಗರ್ ಕ್ರೇಝ್ ಮುಗಿದುಹೋಗಿದೆ ಅನ್ಸುತ್ತಾ?

ಖಂಡಿತಾ ಹೌದು, ಇದು ಕಳೆದ ವರ್ಷವೇ ಆಗಿತ್ತು. ನಾನು ಒಂದು ಪತ್ರಿಕೆಯ ಮುಖಪುಟಕ್ಕಾಗಿ ಫೋಟೋ ತೆಗೆಸುತ್ತಿದ್ದಾಗ ಇದು ಸ್ಪಷ್ಟವಾಯಿತು. ಅಸಲಿ ಭಾರತೀಯ ಹೆಣ್ಣಿನ ದೇಹ ಸೌಂದರ್ಯದಲ್ಲೇ ಒಂದು ಅದ್ಭುತ ಗ್ರೇಸ್‌ ಇರುತ್ತದೆ. ಮಧ್ಯದಲ್ಲಿ ಸ್ವಲ್ಪಕಾಲ ಈ ಹುಚ್ಚು ಆವರಿಸಿತು. ಆದರೆ ಈಗ ಅದು ಮುಗಿದಿದೆ ಬಿಡಿ.

ನಿಮಗೆ ಸೀರೆ ಉಡುವುದು ಎಂದರೆ ಇಷ್ಟವೇ?

ಹೌದು, ಇಷ್ಟವಿದೆ. ಆದರೆ ಅಭ್ಯಾಸವಿಲ್ಲ. ಒಂದಂತೂ ನಿಜ, ಯಾವ ಹುಡುಗಿಗೇ ಆಗಲಿ, ಸೀರೆ ಬ್ಯೂಟಿಫುಲ್ ಲುಕ್‌ ಕೊಡುತ್ತದೆ. ಭಾರತೀಯ ಹೆಣ್ಣಿಗೆ ಸೀರೆಗಿಂತ ಯಾವುದು ತಾನೇ ಹೆಚ್ಚು ಕಳೆಕೊಟ್ಟೀತು? ಸೊರೋನಾ ಡುಪಾಂಟ್‌ ಸೀರೆಗಳು ಹೆಚ್ಚು ಕಂಫರ್ಟೆಬಲ್ ಎನಿಸುತ್ತವೆ. ಅದನ್ನು ನೀವು ಎಲ್ಲಿಗೆ ಬೇಕಾದರೂ ಸುಲಭವಾಗಿ ಕೊಂಡೊಯ್ಯಬಹುದು. ಶಿಫಾನ್‌, ಕ್ರೇಪ್‌, ಸ್ಯಾಟಿನ್ ಸೀರೆಗಳು ಸಹ ಹೆಚ್ಚು ಆರಾಮದಾಯಕ. ಇದು ಉಡುವವರ ಸ್ಟೈಲ್‌, ಅಭಿರುಚಿಯನ್ನು ಆಧರಿಸಿದೆ.

ದೆಹಲಿಯಿಂದ….. ಮುಂಬೈಗೆ ಹೇಗೆ ತಲುಪಿದಿರಿ?

ನಾನು ಸಿನಿಮಾ ಸೇರಲೆಂದೇ ಮುಂಬೈಗೆ ಬಂದಳು. ಬಾಲ್ಯದಿಂದಲೇ ನಾನು ಸಿನಿಮಾ ಬಗ್ಗೆ ಕನಸು ಕಟ್ಟಿಕೊಂಡಳು. ದೆಹಲಿಯ ಹುಡುಗಿ ಮುಂಬೈ ಬೆಡಗಿಯಾಗಿ ಸಿನಿಮಾ ಸೇರ್ತಾಳೆ ಎಂದರೆ ಎಲ್ಲರೂ ಹಾಸ್ಯ ಮಾಡುತ್ತಾರೆ. ಹೀಗಾಗಿಯೇ ನಾನು ಮೊದಲು ರಂಗಭೂಮಿಗೆ ಕಾಲಿಟ್ಟು ನಂತರ ಬೆಳ್ಳಿಪರದೆಯತ್ತ ಹೆಜ್ಜೆ ಹಾಕಿದೆ. ಹೀಗೆ ಮುಂಬೈ ತಲುಪಿದೆ.

ಬಾಲಿವುಡ್ಗೆ ನಿಮ್ಮದು ಗ್ರ್ಯಾಂಡ್ಎಂಟ್ರಿ ಎನಿಸಿತು. ಆದರೆ ಮೊದಲ ಚಿತ್ರ `ಗ್ಯಾಂಗ್ಸ್ ಆಫ್ವಾಸೆಪುರ್‌’ ನಂತರ ನಿಮ್ಮ ಫಿಲ್ಮಿ ಕೆರಿಯರ್ತುಸು ಕುಂಟಿತಲ್ಲ…..

ಕುಂಟಿತು ಅಂತೇನಲ್ಲ, ತುಸು ನಿಧಾನಾಗಿದೆ. ಅದಾದ ಮೇಲೆ 6 ಚಿತ್ರಗಳಲ್ಲಿ ನಟಿಸಿದೆ, ಎಲ್ಲ ಸಕ್ಸಸ್‌ ಅನಿಸಿತು. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ನಾನು ಯಾವ ಸಿನಿ ಬ್ಯಾಕ್‌ಗ್ರೌಂಡ್‌ನಿಂದಲೂ ಬಂದವಳಲ್ಲ, ನನಗಿಲ್ಲಿ ಯಾರೂ ಗಾಡ್‌ಫಾದರ್‌ ಇಲ್ಲ. ನನಗಾಗಿ ಇಲ್ಲಿ ಸಿನಿಮಾ ತಯಾರಿಸುವ ಅಂಕಲ್‌ಗಳಿಲ್ಲ, ಏನಿದ್ದರೂ ನನ್ನ ಸ್ವಂತ ಪರಿಶ್ರಮದಿಂದ ನಾನೇ ಮುಂದಡಿ ಇಡಬೇಕು.

ಅಂದ್ರೆ….. ಬಾಲಿವುಡ್ನಲ್ಲಿ ಗಾಡ್ಫಾದರ್ಕಾನ್ಸೆಪ್ಟ್ ಅನಿವಾರ್ಯ ಅಂತೀರಾ?

ನಾನು ದೆಹಲಿಯ ತವರೂರಿನಲ್ಲಿದ್ದಾಗ, ಮುಂಬೈ ಅಂದ್ರೆ ಯಾವುದೋ ಕೆಟ್ಟ ಊರು ಅಂತ್ಲೇ ತಿಳಿದಿದ್ದೆ, ಆದರೆ ವಾಸ್ತವ ಹಾಗಲ್ಲ. ಇಲ್ಲೂ ಕೂಡ ಬೇಕಾದಷ್ಟು ಒಳ್ಳೆಯ ಜನರಿದ್ದಾರೆ, ಅಗತ್ಯವಿರುವವರಿಗೆ ತುಂಬಾ ಸಹಾಯ ಮಾಡುತ್ತಾರೆ. ನಿಮ್ಮಲ್ಲಿ ನಿಜವಾಗಿಯೂ ಪ್ರತಿಭೆ ಇದ್ದರೆ ಖಂಡಿತಾ ಇಲ್ಲಿ ಚಿಗುರಲು ಸಾಧ್ಯ.

ನೀವು ಬಾಲಿವುಡ್ಗೆ ಬರಲು ಯಾವ ನಾಯಕಿಯಿಂದ ಪ್ರೇರಣೆ ದೊರಕಿತು?

ನಾನು ಮೊದಲಿನಿಂದಲೂ ಮಾಧುರಿ ದೀಕ್ಷಿತ್‌ರ ದೊಡ್ಡ ಅಭಿಮಾನಿ. ನಾನು ಅವರ ಚಿತ್ರಗಳನ್ನು ಗಮನಿಸುತ್ತಾ ಬೆಳೆದವಳು. ನಮ್ಮ ಮನೆಗೆ ಹತ್ತಿರದ ಥಿಯೇಟರ್‌ನಲ್ಲಿ ಸದಾ ಅವರ ಚಿತ್ರಗಳನ್ನು ನೋಡುತ್ತಿದ್ದೆ. ಅವರ `ಹಂ ಆಪ್‌ಕೆ ಹೈ ಕೌನ್‌’ ಚಿತ್ರ ನನ್ನ ಮೇಲೆ ಅತಿ ಹೆಚ್ಚಿನ ಪ್ರಭಾವ ಬೀರಿತು. ನಾನು ಅವರೊಂದಿಗೆ `ಡೇಲ್ ಇಶ್ಕಿಯಾ’ ಚಿತ್ರದಲ್ಲಿ ನಟಿಸಿದಾಗ, ನನ್ನ ಅಭಿಮಾನದ ಬಗ್ಗೆ ಅವರೊಂದಿಗೆ ಹಂಚಿಕೊಂಡು ಆನಂದಿಸಿದೆ. ಅವರೂ ನನಗೆ ಬಹಳ ಪ್ರೋತ್ಸಾಹ ನೀಡಿದರು.

ಪ್ರಭಾವ ಮಾಧವ್

ಬುಲೆಟ್ಪ್ರಶ್ನೋತ್ತರ

ಫೇವರಿಟ್ಡಿಶ್‌: ಪಾಪಡಿ ಚಾಟ್

ಫೇವರಿಟ್ಸಿಟಿ : ದೆಹಲಿ, ಮುಂಬೈ

ಫೇವರಿಟ್ನಟಿ : ಮಾಧುರಿ ದೀಕ್ಷಿತ್

ಫೇವರಿಟ್ಡ್ರೆಸ್‌ : ಸೀರೆ

ಫೇವರಿಟ್ಸಿನಿಮಾಕ್ವೀನ್‌, ಹಂ ಆಪ್ಕೆ ಹೈ ಕೌನ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ