ಟಿವಿ ಲೋಕದಲ್ಲಿ ಅತ್ಯಧಿಕ ಯಶಸ್ವಿ ಧಾರಾವಾಹಿಗಳನ್ನು ತಯಾರಿಸಿದ ಪ್ರೊಡ್ಯೂಸರ್‌ ರಶ್ಮಿ ಶರ್ಮ 2006ರಲ್ಲಿ `ರಶ್ಮಿ ಶರ್ಮ ಟೆಲಿಫಿಲಮ್ಸ್’ ಸ್ಥಾಪಿಸಿದರು. ಆಗಿನಿಂದ ಈಗಿನವರೆಗೂ ಅವರು ಹಿಂದಿರುಗಿ ನೋಡಲೇ ಇಲ್ಲ. ಅವರಿಗೆ ಯಾರ ಕಥೆ ಧಾರಾವಾಹಿಯಾಗಿ ಜನರಿಗೆ ಹೆಚ್ಚು ಇಷ್ಟವಾಗುತ್ತದೆ ಎಂಬುದು ಮೊದಲೇ ಸ್ಪಷ್ಟವಾಗಿ ಗೊತ್ತಾಗುತ್ತದೆ. ಈ ಕಾರಣದಿಂದಲೇ ಆಕೆಯ ಅನೇಕ ಧಾರಾವಾಹಿಗಳು 1 ಸಾವಿರಕ್ಕೂ ಹೆಚ್ಚಿನ ಕಂತುಗಳನ್ನು ದಾಟಿವೆ.

ರಶ್ಮಿ ಮಧ್ಯಮ ವರ್ಗಕ್ಕೆ ಸೇರಿದವರು. ಅವರ ತಂದೆ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಿನ್ಸಿಪಾಲ್ ‌ಆಗಿದ್ದರು. ಅವರ ತವರೂರು ಜೈಪುರ್‌. ತಂದೆಯವರದು ವರ್ಗಾವಣೆಯ ನೌಕರಿಯಾದ್ದರಿಂದ, ಆಕೆ ಹಲವಾರು ಊರುಗಳಲ್ಲಿ ಶಾಲಾ ಕಾಲೇಜು ಕಲಿಯಬೇಕಾಯಿತು. 7ನೇ ಕ್ಲಾಸ್‌ ನಂತರ ಅವರು ಮುಂಬೈನಲ್ಲೇ ಕಲಿತರು. ಅವರು ತಾಯಿ ತಂದೆ, ಒಬ್ಬ ಅಣ್ಣನ ಜೊತೆ ವಾಸವಾಗಿದ್ದಾರೆ.

ರಶ್ಮಿ ಹೇಳುವುದೆಂದರೆ ಅವರು ಎಂದೂ ಪುರಸತ್ತಾಗಿ ಕೂರುವುದೇ ಇಲ್ಲವಂತೆ. ಸದಾ ಏನಾದರೊಂದು ಮಾಡುವುದರಲ್ಲಿ ಅವರಿಗೆ ಹೆಚ್ಚಿನ ಸಂತೋಷ ಹಾಗೂ ಒಮ್ಮೊಮ್ಮೆ ಬಿಡುವಿನಲ್ಲಿ ಪುಸ್ತಕ ಓದುವುದು, ಪ್ರವಾಸ ಹೊರಡುವುದು ಅವರಿಗೆ ಹೆಚ್ಚಿನ ಪ್ರೀತಿ. ಮತ್ತೊಂದು ಹುಚ್ಚು ಎಂದರೆ ಶಾಪಿಂಗ್‌ನದು. ದುಬೈ, ಅಮೆರಿಕಾಗಳ ತಿರುಗಾಟವೆಂದರೆ ಹೆಚ್ಚು ಇಷ್ಟ. ಆಕೆ ಹೆಚ್ಚು ಕೇರಿಂಗ್ ಎಮೋಶನ್‌. ಸಣ್ಣಪುಟ್ಟ ವಿಷಯಗಳೂ ಆಕೆಗೆ ಹೆಚ್ಚು ಮುಖ್ಯ ಎನಿಸುತ್ತವೆ. ಅವರಿಗೆ ಸಾಧಾರಣ ಜೀವನದಲ್ಲೇ ಹೆಚ್ಚು ಒಲವು.

ಕ್ರಿಯೇಟಿವ್ ಕೆಲಸದಲ್ಲೇ ಆಸಕ್ತಿ

ರಶ್ಮಿಗೆ ಬಾಲ್ಯದಿಂದಲೇ ಏನಾದರೊಂದು ಕ್ರಿಯೇಟಿವ್ ‌ಮಾಡಲು ಬಲು ಆಸೆ. ಹಾಗಿರುವಾಗ ಅವರಿಗೆ ಒಂದು ಮೀಡಿಯಾ ಕಂಪನಿಯಲ್ಲಿ ಕೆಲಸ ಸಿಕ್ಕಿದಾಗ ಅವರಿಗೆ ದಾರಿ ಸುಗಮವಾಯಿತು. ಮುಂದೆ ತಾವೇನು ಮಾಡಬೇಕು ಎಂಬುದರ ಸುಳಿವು ಸಿಕ್ಕಿತು. ಹೀಗಾಗಿ ಧಾರಾವಾಹಿಗಳ ನಿರ್ದೇಶಕಿ ಎನಿಸಿದರು. ಕ್ರಿಯೇಟಿವ್ ‌ಹೆಡ್‌ ಆಗಿ ಹಲವಾರು ದೊಡ್ಡ ದೊಡ್ಡ ಪ್ರೊಡಕ್ಷನ್‌ ಹೌಸ್‌ಗಳ ಶೋಗಳನ್ನು ಟಿವಿಗೆ ತಂದರು. ಅದರಲ್ಲಿ ಸಾತ್‌ಫೇರೆ, ವಿದಾಯಿ, ಬೇಟಿಯಾ, ರಬ್ಬಾ ಇಶ್ಕ್ ನ ಹೋವೆ, ಪಿಯಾ ಕಾ ಘರ್‌ಮುಂತಾದ ಧಾರಾವಾಹಿಗಳಿದ್ದವು. ಅಷ್ಟು ಹೊತ್ತಿಗೆ ಅವರು ತಾವೇನು ಮಾಡಬೇಕೆಂದು ಗಟ್ಟಿ ನಿರ್ಧಾರ ತಳೆದಿದ್ದರು.

ಪತಿಯಿಂದ ಪ್ರೇರಣೆ

ಉದ್ಯಮಿ ಆಗಲು ಪ್ರೇರಣೆ ಯಾರಿಂದ ಅಂದರೆ, “ನಾವು ಬೇರೆಯವರಿಗಾಗಿ ಕೆಲಸ ಮಾಡುತ್ತಿದ್ದೆವು. ಹಣದ ವಿಷಯ ಬಿಟ್ಟು ಉಳಿದೆಲ್ಲವನ್ನು ನಾನು ನೋಡಿಕೊಳ್ಳುತ್ತಿದ್ದೆ. ಕಥೆ ಶುರುವಾಗುವುದರಿಂದ ಹಿಡಿದು ಟಿವಿಯವರೆಗೆ ತಲುಪಿಸುವ ಸಂಪೂರ್ಣ ಜವಾಬ್ದಾರಿ ಇತ್ತು. ಅದೇ ಸಂದರ್ಭದಲ್ಲಿ ನಾನು ಟೆಲಿ ನಿರ್ದೇಶಕ ಪವನ್‌ ಕುಮಾರ್‌ರನ್ನು ಭೇಟಿಯಾದೆ. ನಮ್ಮಿಬ್ಬರ ವಿಚಾರ ಒಂದೇ ಆಗಿತ್ತು. ಹೀಗಾಗಿ ನಾವೇ ಪ್ರೊಡ್ಯೂಸರ್‌ ಆಗಬಾರದೇಕೆ ಎಂದು ನಿರ್ಧರಿಸಿದೆ.  ಹೀಗಾಗಿ ನಮ್ಮ  ಸ್ನೇಹ, ಪ್ರೇಮವಾಗಿ, ಮದುವೆಯಲ್ಲಿ ಸುಖಾಂತ್ಯವಾಯಿತು. ಅಂದಿನಿಂದ ಪತಿ ಪವನ್‌ ನನಗೆ ಧಾರಾಳ ಸಹಕಾರ ನೀಡತೊಡಗಿದರು. ಹೀಗಾಗಿ 2006ರಲ್ಲಿ ನಾವು `ರಶ್ಮಿ ಶರ್ಮ ಟೆಲಿ ಫಿಲಮ್ಸ್’ ಶುರು ಮಾಡಿದೆವು.

ಇದರ ಮೊದಲ ಧಾರಾವಾಹಿ `ರಾಜಾ ಕೀ ಆಯೇಗಿ ಬಾರಾತ್‌’  ಸ್ಟಾರ್‌ ಪ್ಲಸ್‌ನಲ್ಲಿ ಪ್ರಸಾರವಾಯ್ತು. ಇದಾದ ನಂತರ ಸಾಥ್ ನಿಭಾನಾ ಸಾಥಿಯಾ, ಪಲ್ಕೋಂಕಿ ಛಾವೋ ಮೇ, ಸಸುರಾಲ್ ‌ಸಿಮರ್‌ ಕಾ ಇತ್ಯಾದಿಗಳು ಬಂದ. ಇತ್ತೀಚೆಗೆ ಪ್ರಸಾರಗೊಳ್ಳುತ್ತಿರುವ ಇವರ ಧಾರಾವಾಹಿಗಳೆಂದರೆ ಸಸುರಾಲ್ ‌ಸಿಮರ್‌ ಕಾ, ಸ್ವರಾಗಿಣಿ, ತುಂ ಐಸೆ ಹೀ ರಹ್ನಾ, ಭಾಗ್ಯಲಕ್ಷ್ಮಿ, ಸಾಥ್‌ ನಿಭಾನಾ ಸಾಥಿಯಾ ಇತ್ಯಾದಿ.

ರಶ್ಮಿ ಹೇಳುತ್ತಾರೆ, ಪ್ರತಿಯೊಬ್ಬರಿಗೂ ಕೆಲಸ ಮಾಡಲು ಅವರವರದೇ ಆದ ಇತಿಮಿತಿಗಳಿರುತ್ತವೆ. ಅದಕ್ಕಿಂತ ಮುನ್ನೇರಲು ಅವರಿಗೆ ಕಷ್ಟವಾಗುತ್ತದೆ. ಎಲ್ಲಿಯವರೆಗೂ ಒಂದು ಉತ್ಪನ್ನವನ್ನು ನೀವೇ ತಯಾರಿಸುವುದಿಲ್ಲವೇ, ನೀವು ಅದರ ಮಾಲೀಕರು ಎಂದು ಹೇಳಲಾಗದು. ಅದರಲ್ಲೂ ಕ್ರಿಯೇಟಿವ್ ‌ಕ್ಷೇತ್ರದಲ್ಲಂತೂ ಪ್ರತಿಯೊಬ್ಬರೂ 100% ಪರಿಶ್ರಮ ವಹಿಸಲೇಬೇಕು.

ದೊರೆತ ಅವಕಾಶಗಳು

ತಮಗೆ ದೊರಕಿದ ಅತ್ಯುತ್ತಮ ಅವಕಾಶದ ಕುರಿತು ರಶ್ಮಿ ಹೇಳುತ್ತಾರೆ, “ಸಾಥ್‌ ನಿಭಾನಾ ಸಾಥಿಯಾ ಶೋ ನನಗೆ ಮುಂದುವರಿಯಲು ಪ್ರೇರಣೆ ನೀಡಿತು. ನನ್ನ ಪರಿಶ್ರಮ ಸಾರ್ಥಕವಾಗಿತ್ತು. ಇಷ್ಟು ಮಾತ್ರವಲ್ಲದೆ, ಸಸುರಾಲ್ ‌ಸಿಮರ್‌ಕಾ ಸಹ ನನ್ನ ಉತ್ತಮ ಧಾರಾವಾಹಿಗಳಲ್ಲಿ ಒಂದು ಎನಿಸಿತು. “ನಾನು ಮುಂದೆ ಉತ್ತಮ ಧಾರಾವಾಹಿಗಳನ್ನು ತಯಾರಿಸತೊಡಗಿದಂತೆ, ವೀಕ್ಷಕರು ಅದರಲ್ಲಿ ತಮ್ಮನ್ನು ತಾವೇ ಗುರುತಿಸಿಕೊಳ್ಳುವಂತೆ ಇರಬೇಕು ಎಂಬ ಪಾಯಿಂಟ್‌ ನೋಟ್‌ಮಾಡಿದೆ. ನಾನ್‌ ಫ್ಲಿಕ್ಷನ್‌, ರಿಯಾಲಿಟಿ ಶೋ, ಡ್ರಾಮಾ ಶೋ, ಐತಿಹಾಸಿಕ ಧಾರಾವಾಹಿಗಳನ್ನೂ ತಯಾರಿಸ ಬಯಸುವೆ. ಸಿನಿಮಾ ಸಹ ಮಾಡಬೇಕೆಂಬ ಗುರಿ ಇದೆ. ಆದರೆ ಸದ್ಯಕ್ಕೆ ಧಾರಾವಾಹಿಗಳ ಕಡೆ ಮಾತ್ರ ಗಮನಹರಿಸುತ್ತಿದ್ದೇನೆ.”

ರಶ್ಮಿ ಹೇಳುತ್ತಾರೆ, ಯಾವುದೇ ಮಹಿಳೆ ಯಶಸ್ವಿ ಎನಿಸಲು ತನ್ನ ಮೇಲೆ ತಾನು ವಿಶ್ವಾಸ ಇರಿಸಿ ಮುನ್ನಡೆಯುವುದು ಅತ್ಯಗತ್ಯ. ಆಕೆಗೆ ಎಲ್ಲಾ ಕೆಲಸಗಳೂ ಗೊತ್ತಿರಲೇಬೇಕು ಎಂಬ ನಿಯಮವೇನಿಲ್ಲ. ಆದರೆ ಆಕೆ ಎಷ್ಟು ಮಾಡಲು ಸಾಧ್ಯವೋ, ಅದರಲ್ಲಿ 100% ವಿಶ್ವಾಸ ಇರಿಸಿಕೊಳ್ಳಬೇಕು, ಆ ಕೆಲಸವನ್ನು ಇಷ್ಟಪಟ್ಟು ಮಾಡುವ ಬಯಕೆ ಇರಬೇಕು. ಮದುವೆ ನಂತರ ಆಕೆ ಕುಟುಂಬದ ಜವಾಬ್ದಾರಿ ಜೊತೆ ತನ್ನ ಆತ್ಮತೃಪ್ತಿಗಾಗಿಯೂ ಏನಾದರೂ ಮಾಡುವಂತಿರಬೇಕು.

ಯಾರು ದೈಹಿಕ ಹಾಗೂ ಮಾನಸಿಕಾಗಿ ಹಿಟ್‌ ಆಗಿರುತ್ತಾರೋ, ಅವರು ಮಾತ್ರವೇ ತಮ್ಮ ಕೆಲಸವನ್ನು ಶ್ರದ್ಧೆ ಹಾಗೂ ನಿಷ್ಠೆಯಿಂದ ಮಾಡಲು ಸಾಧ್ಯ ಎಂದು ರಶ್ಮಿ ನಂಬುತ್ತಾರೆ. ರಶ್ಮಿ ತಮ್ಮ ಆರೋಗ್ಯದ ಕುರಿತು ಬಹಳ ಜಾಗೃತಿ ವಹಿಸುತ್ತಾರೆ. ತಮ್ಮ ಫಿಟ್‌ನೆಸ್ ಕಾಯ್ದುಕೊಳ್ಳಲು ಆಕೆ ಪ್ರತಿದಿನ ಮುಂಜಾನೆ ಲಾಂಗ್‌ ವಾಕ್‌ ಹೊರಡುತ್ತಾರೆ, ಜೊತೆಗೆ ತಮ್ಮ ಊಟ ತಿಂಡಿ ಕುರಿತು ವಿಶೇಷ ಎಚ್ಚರಿಕೆ ವಹಿಸುತ್ತಾರೆ ಅವರಿಗೆ ಆಯ್ಲಿ ರೆಸಿಪೀಸ್‌ ಎಂದೂ ಇಷ್ಟವಾಗುವುದಿಲ್ಲ. ಅವರಿಗೆ ಒಬ್ಬ ಪರ್ಸನಲ್ ಟ್ರೇನರ್‌ ಸಹ ಇದ್ದಾರೆ. ಅವರು ಈಕೆ ಫಿಟ್‌ ಆಗಿರಲು ಸಲಹೆ ನೀಡುತ್ತಿರುತ್ತಾರೆ.

“ಅಕಸ್ಮಾತ್‌ ಯಾವುದೋ ಕಾರಣಕ್ಕಾಗಿ ನಾನು ವರ್ಕ್‌ಔಟ್‌ ಮಾಡಲು ಆಗದಿದ್ದರೆ, ಮಧ್ಯಾಹ್ನ ಸಂಜೆ ನಮ್ಮ ಆಫೀಸ್‌ನ ಲಾನಿನಲ್ಲೇ ವಾಕಿಂಗ್‌ ಮಾಡ್ತೀನಿ. ಆರೋಗ್ಯವೇ ಭಾಗ್ಯ ಎಂದು ದೃಢವಾಗಿ ನಂಬಿರುವವಳು ನಾನು!” ಎನ್ನುತ್ತಾರೆ ರಶ್ಮಿ.

ಸಿಹಿಕಹಿ ಕ್ಷಣಗಳು

ತಮ್ಮ ಜೀವನದ ಸಿಹಿಕಹಿ ಕ್ಷಣಗಳ ಕುರಿತು ರಶ್ಮಿ ಹೇಳುತ್ತಾರೆ, “ನಾನು ಪವನ್‌ರನ್ನು ಕೈಹಿಡಿದದ್ದು ನನ್ನ ಜೀವನದ ಅತಿ ಮಧುರ ಘಳಿಗೆ. ಅದಾದ ನಂತರ ಪವನ್‌ ಸಪೋರ್ಟ್‌ ಕಾರಣದಿಂದ ನಾನು ಬಿಸ್‌ನೆಸ್‌ನಲ್ಲಿ ಹಂತ ಹಂತವಾಗಿ ಮೇಲೇರಿದ್ದು ಪ್ರತಿಯೊಂದೂ ಸಿಹಿ ಘಳಿಗೆಯೇ!”

ಆಕೆ ಪ್ರಗತಿಪರ ಮಹಿಳೆಯರಿಗೆ ಸಂದೇಶ ನೀಡುತ್ತಾ, “ಇಂದಿನ ಯುವಜನತೆ ತಮ್ಮ ಬೇಸಿಕ್‌ ಶಿಕ್ಷಣವನ್ನು ಪೂರೈಸಲೇಬೇಕು. ಯಾವುದೇ ಪ್ರೊಫೆಶನ್‌ಗೆ ಆಸೆಬಿದ್ದು ತಮ್ಮ ಶಿಕ್ಷಣವನ್ನು ಅಪೂರ್ಣ ಮಾಡಿಕೊಳ್ಳಬಾರದು. ನಿಮ್ಮ ಶಿಕ್ಷಣ ಕಂಪ್ಲೀಟ್‌ ಆಗಿದ್ದರೆ ಯಾವ ಸಮಯದಲ್ಲೇ ಆಗಲಿ, ನೀವು ಅದಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆರಿಯರ್‌ ಮುಂದುವರಿಸಬಹುದು.

“ವಿಷಯ ಮದುವೆಗೆ ಮೊದಲಿರಲಿ ಅಥವಾ ನಂತರ, ನಿಮಗಾಗಿ ಏನನ್ನಾದರೂ ಮಾಡಬೇಕೆಂದಿದ್ದರೆ ಅಗತ್ಯವಾಗಿ ಅದನ್ನು ಮಾಡಿ. ನಿಮ್ಮ ಸ್ವಾವಲಂಬಿ ಗುಣ ಹೆಚ್ಚಿಸಿಕೊಳ್ಳಿ. ಪತ್ನಿ ಆರ್ಥಿಕವಾಗಿ ಕುಟುಂಬಕ್ಕೆ ನೆರವಾಗುವ ಹಾಗಿದ್ದರೆ, ಪತಿ ಸಂತಸದಿಂದ ಸಹಕಾರ ನೀಡದಿರುತ್ತಾರೆಯೇ?” ಎನ್ನುತ್ತಾರೆ.

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ