ಟಿವಿ ಲೋಕದಲ್ಲಿ ಅತ್ಯಧಿಕ ಯಶಸ್ವಿ ಧಾರಾವಾಹಿಗಳನ್ನು ತಯಾರಿಸಿದ ಪ್ರೊಡ್ಯೂಸರ್ ರಶ್ಮಿ ಶರ್ಮ 2006ರಲ್ಲಿ `ರಶ್ಮಿ ಶರ್ಮ ಟೆಲಿಫಿಲಮ್ಸ್' ಸ್ಥಾಪಿಸಿದರು. ಆಗಿನಿಂದ ಈಗಿನವರೆಗೂ ಅವರು ಹಿಂದಿರುಗಿ ನೋಡಲೇ ಇಲ್ಲ. ಅವರಿಗೆ ಯಾರ ಕಥೆ ಧಾರಾವಾಹಿಯಾಗಿ ಜನರಿಗೆ ಹೆಚ್ಚು ಇಷ್ಟವಾಗುತ್ತದೆ ಎಂಬುದು ಮೊದಲೇ ಸ್ಪಷ್ಟವಾಗಿ ಗೊತ್ತಾಗುತ್ತದೆ. ಈ ಕಾರಣದಿಂದಲೇ ಆಕೆಯ ಅನೇಕ ಧಾರಾವಾಹಿಗಳು 1 ಸಾವಿರಕ್ಕೂ ಹೆಚ್ಚಿನ ಕಂತುಗಳನ್ನು ದಾಟಿವೆ.
ರಶ್ಮಿ ಮಧ್ಯಮ ವರ್ಗಕ್ಕೆ ಸೇರಿದವರು. ಅವರ ತಂದೆ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಿನ್ಸಿಪಾಲ್ ಆಗಿದ್ದರು. ಅವರ ತವರೂರು ಜೈಪುರ್. ತಂದೆಯವರದು ವರ್ಗಾವಣೆಯ ನೌಕರಿಯಾದ್ದರಿಂದ, ಆಕೆ ಹಲವಾರು ಊರುಗಳಲ್ಲಿ ಶಾಲಾ ಕಾಲೇಜು ಕಲಿಯಬೇಕಾಯಿತು. 7ನೇ ಕ್ಲಾಸ್ ನಂತರ ಅವರು ಮುಂಬೈನಲ್ಲೇ ಕಲಿತರು. ಅವರು ತಾಯಿ ತಂದೆ, ಒಬ್ಬ ಅಣ್ಣನ ಜೊತೆ ವಾಸವಾಗಿದ್ದಾರೆ.
ರಶ್ಮಿ ಹೇಳುವುದೆಂದರೆ ಅವರು ಎಂದೂ ಪುರಸತ್ತಾಗಿ ಕೂರುವುದೇ ಇಲ್ಲವಂತೆ. ಸದಾ ಏನಾದರೊಂದು ಮಾಡುವುದರಲ್ಲಿ ಅವರಿಗೆ ಹೆಚ್ಚಿನ ಸಂತೋಷ ಹಾಗೂ ಒಮ್ಮೊಮ್ಮೆ ಬಿಡುವಿನಲ್ಲಿ ಪುಸ್ತಕ ಓದುವುದು, ಪ್ರವಾಸ ಹೊರಡುವುದು ಅವರಿಗೆ ಹೆಚ್ಚಿನ ಪ್ರೀತಿ. ಮತ್ತೊಂದು ಹುಚ್ಚು ಎಂದರೆ ಶಾಪಿಂಗ್‌ನದು. ದುಬೈ, ಅಮೆರಿಕಾಗಳ ತಿರುಗಾಟವೆಂದರೆ ಹೆಚ್ಚು ಇಷ್ಟ. ಆಕೆ ಹೆಚ್ಚು ಕೇರಿಂಗ್ ಎಮೋಶನ್. ಸಣ್ಣಪುಟ್ಟ ವಿಷಯಗಳೂ ಆಕೆಗೆ ಹೆಚ್ಚು ಮುಖ್ಯ ಎನಿಸುತ್ತವೆ. ಅವರಿಗೆ ಸಾಧಾರಣ ಜೀವನದಲ್ಲೇ ಹೆಚ್ಚು ಒಲವು.
ಕ್ರಿಯೇಟಿವ್ ಕೆಲಸದಲ್ಲೇ ಆಸಕ್ತಿ
ರಶ್ಮಿಗೆ ಬಾಲ್ಯದಿಂದಲೇ ಏನಾದರೊಂದು ಕ್ರಿಯೇಟಿವ್ ಮಾಡಲು ಬಲು ಆಸೆ. ಹಾಗಿರುವಾಗ ಅವರಿಗೆ ಒಂದು ಮೀಡಿಯಾ ಕಂಪನಿಯಲ್ಲಿ ಕೆಲಸ ಸಿಕ್ಕಿದಾಗ ಅವರಿಗೆ ದಾರಿ ಸುಗಮವಾಯಿತು. ಮುಂದೆ ತಾವೇನು ಮಾಡಬೇಕು ಎಂಬುದರ ಸುಳಿವು ಸಿಕ್ಕಿತು. ಹೀಗಾಗಿ ಧಾರಾವಾಹಿಗಳ ನಿರ್ದೇಶಕಿ ಎನಿಸಿದರು. ಕ್ರಿಯೇಟಿವ್ ಹೆಡ್ ಆಗಿ ಹಲವಾರು ದೊಡ್ಡ ದೊಡ್ಡ ಪ್ರೊಡಕ್ಷನ್ ಹೌಸ್‌ಗಳ ಶೋಗಳನ್ನು ಟಿವಿಗೆ ತಂದರು. ಅದರಲ್ಲಿ ಸಾತ್‌ಫೇರೆ, ವಿದಾಯಿ, ಬೇಟಿಯಾ, ರಬ್ಬಾ ಇಶ್ಕ್ ನ ಹೋವೆ, ಪಿಯಾ ಕಾ ಘರ್‌ಮುಂತಾದ ಧಾರಾವಾಹಿಗಳಿದ್ದವು. ಅಷ್ಟು ಹೊತ್ತಿಗೆ ಅವರು ತಾವೇನು ಮಾಡಬೇಕೆಂದು ಗಟ್ಟಿ ನಿರ್ಧಾರ ತಳೆದಿದ್ದರು.
ಪತಿಯಿಂದ ಪ್ರೇರಣೆ
ಉದ್ಯಮಿ ಆಗಲು ಪ್ರೇರಣೆ ಯಾರಿಂದ ಅಂದರೆ, ``ನಾವು ಬೇರೆಯವರಿಗಾಗಿ ಕೆಲಸ ಮಾಡುತ್ತಿದ್ದೆವು. ಹಣದ ವಿಷಯ ಬಿಟ್ಟು ಉಳಿದೆಲ್ಲವನ್ನು ನಾನು ನೋಡಿಕೊಳ್ಳುತ್ತಿದ್ದೆ. ಕಥೆ ಶುರುವಾಗುವುದರಿಂದ ಹಿಡಿದು ಟಿವಿಯವರೆಗೆ ತಲುಪಿಸುವ ಸಂಪೂರ್ಣ ಜವಾಬ್ದಾರಿ ಇತ್ತು. ಅದೇ ಸಂದರ್ಭದಲ್ಲಿ ನಾನು ಟೆಲಿ ನಿರ್ದೇಶಕ ಪವನ್ ಕುಮಾರ್‌ರನ್ನು ಭೇಟಿಯಾದೆ. ನಮ್ಮಿಬ್ಬರ ವಿಚಾರ ಒಂದೇ ಆಗಿತ್ತು. ಹೀಗಾಗಿ ನಾವೇ ಪ್ರೊಡ್ಯೂಸರ್ ಆಗಬಾರದೇಕೆ ಎಂದು ನಿರ್ಧರಿಸಿದೆ. ಹೀಗಾಗಿ ನಮ್ಮ ಸ್ನೇಹ, ಪ್ರೇಮವಾಗಿ, ಮದುವೆಯಲ್ಲಿ ಸುಖಾಂತ್ಯವಾಯಿತು. ಅಂದಿನಿಂದ ಪತಿ ಪವನ್ ನನಗೆ ಧಾರಾಳ ಸಹಕಾರ ನೀಡತೊಡಗಿದರು. ಹೀಗಾಗಿ 2006ರಲ್ಲಿ ನಾವು `ರಶ್ಮಿ ಶರ್ಮ ಟೆಲಿ ಫಿಲಮ್ಸ್' ಶುರು ಮಾಡಿದೆವು.
ಇದರ ಮೊದಲ ಧಾರಾವಾಹಿ `ರಾಜಾ ಕೀ ಆಯೇಗಿ ಬಾರಾತ್' ಸ್ಟಾರ್ ಪ್ಲಸ್‌ನಲ್ಲಿ ಪ್ರಸಾರವಾಯ್ತು. ಇದಾದ ನಂತರ ಸಾಥ್ ನಿಭಾನಾ ಸಾಥಿಯಾ, ಪಲ್ಕೋಂಕಿ ಛಾವೋ ಮೇ, ಸಸುರಾಲ್ ಸಿಮರ್ ಕಾ ಇತ್ಯಾದಿಗಳು ಬಂದ. ಇತ್ತೀಚೆಗೆ ಪ್ರಸಾರಗೊಳ್ಳುತ್ತಿರುವ ಇವರ ಧಾರಾವಾಹಿಗಳೆಂದರೆ ಸಸುರಾಲ್ ಸಿಮರ್ ಕಾ, ಸ್ವರಾಗಿಣಿ, ತುಂ ಐಸೆ ಹೀ ರಹ್ನಾ, ಭಾಗ್ಯಲಕ್ಷ್ಮಿ, ಸಾಥ್ ನಿಭಾನಾ ಸಾಥಿಯಾ ಇತ್ಯಾದಿ.