ರಸ್ತೆಯ ಬದಿಯಲ್ಲಿ ಟೆಂಟ್‌ ಹಾಕಿಕೊಂಡು ವಾಸಿಸುವವರ ಮಕ್ಕಳು ಇಂಗ್ಲಿಷ್‌ನಲ್ಲಿ ಮಾತನಾಡಬಲ್ಲರೇ? ಸಾಧ್ಯವಿಲ್ಲ, ಇದೇ ನಿಮ್ಮ ಉತ್ತರವಿರಬೇಕು. ಆದರೆ ಅಸಾಧ್ಯವಾದ ಕೆಲಸವನ್ನು ಸಾಧ್ಯ ಮಾಡಿದ್ದಾರೆ `ಮೇಕ್‌ ಎ ಡಿಫರೆನ್ಸ್' ಹೆಸರಿನ ಸಂಸ್ಥೆ ನಡೆಸುತ್ತಿರುವ ಗ್ಲೋರಿಯಾ ಬೇನಿ.

ಯಾವುದೇ ಕೆಲಸವನ್ನು ಮಾಡಲಾಗುವುದಿಲ್ಲ ಎಂದು ನಾವು ಯೋಚಿಸಬಾರದು. ಅದರ ಬದಲು ನಾವು ಮಾಡಲಾಗದಂತಹ ಯಾವುದೇ ಕೆಲಸವಿಲ್ಲ ಎಂದು ಯೋಚಿಸಬೇಕು. ಹಾಗೆ ಯೋಚಿಸಿದಾಗ ಅಸಾಧ್ಯವಾದ ಕೆಲಸಗಳೂ ಸಾಧ್ಯವಾಗುತ್ತವೆ. ಗ್ಲೋರಿಯಾರ ಈ ಆಲೋಚನೆ ಅವರು ಇಷ್ಟು ಮುಂದುವರಿಯಲು ಕಾರಣವಾಯಿತು. ಇಂದು ಅವರು ಹಿಂತಿರುಗಿ ನೋಡಿದಾಗ, ``ನಾನೆಂದೂ ಇದರ ಬಗ್ಗೆ ಯೋಚಿಸಿರಲಿಲ್ಲ. ಇದು ಹೇಗೆ ಸಾಧ್ಯವಾಯಿತು?'' ಎಂದು ಅವರು ಆಶ್ಚರ್ಯಪಡುತ್ತಾರೆ.

ಕಳೆದುಹೋದ ದಿನಗಳ ಬಗ್ಗೆ ಮಾತನಾಡುತ್ತಾ ಗ್ಲೋರಿಯಾ ಹೀಗೆ ಹೇಳುತ್ತಾರೆ, ``ನಾನು ಕೇರಳದ ಕೊಚ್ಚಿನ್‌ ನಗರದವಳು. ನನ್ನ ಬಾಲ್ಯ ಮತ್ತು ಆರಂಭದ ಶಿಕ್ಷಣ ಅಲ್ಲೇ ನಡೆಯಿತು. ಆದರೆ ನಮ್ಮ ತಂದೆಯ ಟ್ರ್ಯಾನ್ಸ್ ಫರೆಬಲ್ ಜಾಬ್‌ನಿಂದ 5-10ನೇ ತರಗತಿಯವರೆಗೆ ನನ್ನ ಶಿಕ್ಷಣ ಸೌದಿ ಅರೇಬಿಯಾದಲ್ಲಾಯಿತು. ಆದರೂ ಭಾರತದ ಬಗ್ಗೆ ನನ್ನ ಆಕರ್ಷಣೆ ಎಂದೂ ಕಡಿಮೆಯಾಗಲಿಲ್ಲ. ನನಗೆ ನಮ್ಮ ಕೊಚ್ಚಿನ್‌ ನಗರ ಬಹಳ ಇಷ್ಟ. ಸೌದಿ ಅರೇಬಿಯಾಗೆ ಹೋದರೂ ಆ 5 ವರ್ಷಗಳಲ್ಲಿ ನಾನು ಪ್ರತಿದಿನ ನಮ್ಮ ಊರಿಗೆ ಹಿಂದಿರುಗಲು ಬಯಸುತ್ತಿದ್ದೆ.''

ಗ್ಲೋರಿಯಾಗೆ ಈ ಅವಕಾಶ 11ನೇ ತರಗತಿಗೆ ಬಂದ ನಂತರ ಸಿಕ್ಕಿತು. ಅವರು ಶಾಶ್ವತವಾಗಿ ತಮ್ಮ ಮಾತೃಭೂಮಿಗೆ ಹಿಂದಿರುಗಿದರು. ಗ್ಲೋರಿಯಾರ ಶಾಲೆಯ ಶಿಕ್ಷಣ ಇನ್ನೆರಡು ವರ್ಷ ಕಳೆಯಿತು. ಅವರು ಕಾಮರ್ಸ್‌ ಪದವಿಗೆ ಕೇರಳದ ಒಂದು ಕಾಲೇಜಿಗೆ ಸೇರಿದರು. ಅಲ್ಲಿಂದಲೇ ಗ್ಲೋರಿಯಾರ ಹೊಸ ಬದುಕು ಶುರುವಾಯಿತು.

``ಕಾಲೇಜ್‌ ಲೈಫ್‌ ಎಲ್ಲರಿಗೂ ವಿಶೇಷವಾಗಿರುತ್ತದೆ. ನನಗೂ ಅಷ್ಟೇ. ನಮ್ಮದು 6 ಗೆಳತಿಯರ ಒಂದು ಗ್ರೂಪ್‌ ಇತ್ತು. ನಾವು ಯಾವಾಗಲೂ ಒಟ್ಟಿಗಿದ್ದೆವು. ಓದುವುದು, ಮೋಜು ಮಾಡುವುದು ಇತ್ಯಾದಿ ನಾವು ಎಲ್ಲವನ್ನೂ ಗ್ರೂಪ್‌ನಲ್ಲಿಯೇ ಮಾಡುತ್ತಿದ್ದೆವು.

``ಒಂದು ಸಲ ನಮ್ಮ ಗ್ರೂಪ್‌ನಲ್ಲಿ ಒಬ್ಬರ ಬರ್ಥ್‌ ಡೇ ಬಂದಾಗ ನಾವೆಲ್ಲರೂ ಬರ್ಥ್‌ ಡೇಯನ್ನು ಕೊಂಚ ವಿಭಿನ್ನವಾಗಿ ಆಚರಿಸಲು ತೀರ್ಮಾನಿಸಿ ನಗರದ ಒಂದು ಅನಾಥಾಶ್ರಮದ ಮಕ್ಕಳೊಂದಿಗೆ ಆಚರಿಸಲು ನಿರ್ಧರಿಸಿದೆವು,'' ಎಂದರು.

ಬದುಕಿನ ವಿಶೇಷ ದಿನ

ಅಂದು ಗ್ಲೋರಿಯಾರ ಬದುಕಿನ ವಿಶೇಷ ದಿನವೆಂದು ಸಾಬೀತಾಯಿತು. ಮುದ್ದು ಮಕ್ಕಳೊಂದಿಗೆ ಕಳೆದ 1 ದಿನ ಅವರ ಬದುಕಿನಲ್ಲಿ ದೊಡ್ಡ ಬದಲಾವಣೆ ತರುವುದೆಂದು ಅವರು ಯೋಚಿಸಿರಲಿಲ್ಲ.

ಗ್ಲೋರಿಯಾ ಹೇಳುತ್ತಾರೆ, ``ನಾವು ಆ ಅನಾಥಾಶ್ರಮಕ್ಕೆ ಹೋಗಿ ನೋಡಿದಾಗ ಅಲ್ಲಿನ ಮಕ್ಕಳು ಬಹಳ ಟ್ಯಾಲೆಂಟೆಡ್‌ ಆಗಿದ್ದರು. ಆದರೆ ಸೌಲಭ್ಯಗಳ ಕೊರತೆಯಿಂದ ಅವರ ಟ್ಯಾಲೆಂಟ್‌ಗೆ ಬೆಲೆ ಇರಲಿಲ್ಲ. ಅವರಿಗೆ ಓದಲು ಇಷ್ಟವಿತ್ತು. ಆದರೆ ಪುಸ್ತಕಗಳಿರಲಿಲ್ಲ. ಅವರಿಗೆ ಸರಿಯಾದ ಗೈಡೆನ್ಸ್ ಬೇಕಿತ್ತು. ನಾವು ಪರಸ್ಪರ ಇಂಗ್ಲಿಷ್‌ನಲ್ಲಿ ಮಾತನಾಡುವುದು ಅವರಿಗೆ ಇಷ್ಟವಾಗಿತ್ತು. ಅವರಿಗೆ ಸರ್ಕಾರಿ ಶಾಲೆಯಲ್ಲಿ ಕಲಿಸಿದ್ದಷ್ಟು ಮಾತ್ರ ಇಂಗ್ಲಿಷ್‌ ತಿಳಿದಿದ್ದರಿಂದ ನಿರರ್ಗಳವಾಗಿ ಇಂಗ್ಲಿಷ್‌ ಮಾತನಾಡುವುದು ಕಷ್ಟವಾಗಿತ್ತು. ನಾವು ಹೊರಡುವಾಗ ಮುಂದಿನ ಬಾರಿ ಅಲ್ಲಿಗೆ ಬಂದಾಗ ಅವರಿಗೇನು ತರುವುದೆಂದು ಕೇಳಿದೆವು. ಆಗ ಆ ಮಕ್ಕಳು ನಮ್ಮನ್ನು ಚಾಕಲೇಟ್‌, ಟಾಫಿ ಅಥವಾ ಆಟದ ಸಾಮಾನುಗಳನ್ನು ಕೇಳದೆ ಪುಸ್ತಕಗಳನ್ನು ತರಲು ಹೇಳಿದರು.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ