ಪ್ರೀತಿ, ಪ್ರೇಮ, ಲವ್ ನಂತಹ ಶಬ್ದಗಳನ್ನು ಕೇಳಿದಾಗ ಮನಸ್ಸಿನಲ್ಲಿ ವಿದ್ಯುತ್ ಸಂಚಾರ ಉಂಟಾಗುತ್ತದೆ. ಕಣ್ಣುಗಳಲ್ಲಿ ಕನಸು, ತುಟಿಗಳಲ್ಲಿ ಹಾಡು ಮೂಡುತ್ತದೆ. ಪ್ರತಿಯೊಬ್ಬರಿಗೂ ಸಂಗಾತಿಯನ್ನು ಪಡೆಯುವ ಇಚ್ಛೆ ಇರುತ್ತದೆ. ಈ ಇಚ್ಛೆಯಂತೆ ಕೆಲವರಿಗೆ ಸ್ಕೂಲ್ ನಲ್ಲಿ ಓದುವಾಗ, ಕೆಲವರಿಗೆ ಕಾಲೇಜ್ನಲ್ಲಿ ಓದುವಾಗ ಸಂಗಾತಿ ಸಿಗುತ್ತಾರೆ.
ನಿಮಗೆ ಆಫೀಸಿನಲ್ಲೂ ಸಂಗಾತಿ ಸಿಗಬಹುದು. ಒಂದು ವೇಳೆ ಹಾಗೆ ಸಿಕ್ಕುಬಿಟ್ಟರೆ ಮೋಜೋ ಮೋಜು. ಆದರೆ ಆಫೀಸಿನಲ್ಲಿ ಪ್ರೀತಿ, ಪ್ರೇಮದ ಬಗೆಗಿನ ಮಾತುಗಳು, ತಮಾಷೆ ಇತ್ಯಾದಿ ನಿಮಗೆ ತೊಂದರೆ ತರಬಹುದು. ಅವರು ಜನರ ಕಣ್ಣುಗಳಿಗೆ ಬೀಳಬಾರದೆಂದುಕೊಂಡರೂ ಬಿದ್ದೇ ಬೀಳುತ್ತಾರೆ. ಒಂದು ವೇಳೆ ಯಾರಾದರೂ ನೋಡಿಬಿಟ್ಟರಂತೂ ಆ ವಿಷಯ ಇಡೀ ಆಫೀಸಿನಲ್ಲಿ ಕಾಡ್ಗಿಚ್ಚಿನಂತೆ ಹರಡಿಬಿಡುತ್ತದೆ. ಹೆಚ್ಚಿನ ಜನ ಇಂತಹ ಬಿಸಿಬಿಸಿ ಸುದ್ದಿಗಳ ನಿರೀಕ್ಷೆಯಲ್ಲಿರುತ್ತಾರೆ. ಫ್ರೆಂಡ್ಶಿಪ್ನ ಸುದ್ದಿ ಸಿಕ್ಕರೆ ಅವರ ಆತ್ಮೀಯರೂ ಮೋಜು ಪಡೆಯುತ್ತಾರೆ.
ಆಫೀಸಿನಲ್ಲಾದ ಫ್ರೆಂಡ್ಶಿಪ್ ಒಂದು ವೇಳೆ ಮದುವೆಯವರೆಗೆ ಮುಂದುವರಿದರೆ ಒಳ್ಳೆಯದೇ. ಇಲ್ಲದಿದ್ದರೆ ಪ್ರೊಫೆಶನಲ್ ಮತ್ತು ಪರ್ಸನಲ್ ಲೈಫ್ ಎರಡೂ ಪ್ರಭಾವಿತವಾಗುತ್ತವೆ. ಏಕೆಂದರೆ ಒಂದು ಬಾರಿ ಬ್ರೇಕ್ಅಪ್ ಆದರೆ ಆಫೀಸಿನಲ್ಲಿ ತಮಾಷೆಯ ವಸ್ತುವಾಗುತ್ತೀರಿ ಹಾಗೂ ಒಳಗೇ ಕುಗ್ಗಿ ಹೋಗುತ್ತೀರಿ.
ಆಫೀಸ್ ಫ್ರೆಂಡ್ಶಿಪ್ ಏಕೆ ಸರಿಯಲ್ಲ?
ಕೆಲಸದ ಮೇಲೆ ಗಮನ ಇರುವುದಿಲ್ಲ : ಆಫೀಸಿನಲ್ಲಿ ಯಾವುದೇ ರಿಲೇಶನ್ಶಿಪ್ನಲ್ಲಿ ಇಲ್ಲದೇ ಇರುವವರೆಗೆ ನಾವು ಸಂಪೂರ್ಣ ಪ್ರಾಮಾಣಿಕತೆ ಹಾಗೂ ತನ್ಮಯತೆಯಿಂದ ಕೆಲಸ ಮಾಡುತ್ತೇವೆ. ಆದರೆ ನಾವು ಪ್ರೀತಿಯ ಬಂಧನದಲ್ಲಿ ಸಿಕ್ಕಿಬಿಟ್ಟರೆ, ಕೆಲಸದಿಂದ ನಮ್ಮ ಗಮನ ದೂರಾಗುತ್ತದೆ. ನಮ್ಮ ಗಮನವೆಲ್ಲಾ ಪ್ರಿಯಕರ ಅಥವಾ ಪ್ರೇಯಸಿಯ ಮೇಲೆ ಇರುತ್ತದೆ. ಕೆಲಸದ ಬಗೆಗಿನ ಉದಾಸೀನತೆ ಸೀನಿಯರ್ಗಳ ದೃಷ್ಟಿಯಲ್ಲಿ ನಮ್ಮನ್ನು ಕೀಳಾಗಿಸುತ್ತದೆ. ಅದರ ನೇರ ಪರಿಣಾಮ ಪ್ರೊಫೆಶನಲ್ ಲೈಫ್ ಮೇಲೆ ಬೀಳುತ್ತದೆ.
ಆಫೀಸಿನಲ್ಲಿ ಪ್ರೀತಿಯ ಹುಚ್ಚಿಗೆ ಬಿದ್ದರೆ ಕೆಲಸದ ಮೇಲೆ ಗಮನ ಇರುವುದಿಲ್ಲ. ಜೊತೆಗೆ ಇಮೇಜ್ ಹಾಳಾಗುತ್ತದೆ. ಅದರ ಬಗ್ಗೆ ಮೀನಾಕ್ಷಿ ಹೀಗೆ ಹೇಳುತ್ತಾರೆ. ನಮ್ಮ ಆಫೀಸಿನಲ್ಲಿ ನನಗೆ ಒಳ್ಳೆಯ ಇಮೇಜ್ ಇತ್ತು. ನನ್ನ ವರ್ಕ್ ಪರ್ಫಾಮೆನ್ಸ್ ನಿಂದಾಗಿ ನಮ್ಮ ಬಾಸ್ನ ಫೇವರಿಟ್ ಆಗಿದ್ದೆ. ಒಂದು ದಿನ ಅಕೌಂಟ್ಸ್ ಡಿಪಾರ್ಟ್ಮೆಂಟ್ನ ರಾಹುಲ್ನೊಂದಿಗೆ ಭೇಟಿ ಆಯಿತು. ನಿಧಾನವಾಗಿ ನಾವಿಬ್ಬರೂ ಪರಸ್ಪರರತ್ತ ಆಕರ್ಷಿತರಾದೆವು. ನಮ್ಮ ಗೆಳೆತನ ಎಷ್ಟು ಗಾಢವಾಯಿತೆಂದರೆ ನಮಗೆ ಈಗ ಆಫೀಸ್ ಆಗಲಿ ಮನೆಯಾಗಲೀ ನೆನಪಾಗುತ್ತಿರಲಿಲ್ಲ. ನಮ್ಮ ಮೇಲೆ ಪ್ರೀತಿಯ ಭೂತ ಸವಾರಿ ಮಾಡಿತ್ತು. ಅದರ ಪರಿಣಾಮವಾಗಿ ನಮ್ಮನ್ನು ಎಷ್ಟು ಗೇಲಿ ಮಾಡಲಾಯಿತೆಂದರೆ ನಾವಿಬ್ಬರೂ ಆ ಕೆಲಸ ಬಿಡಬೇಕಾಯಿತು.
ವಾಟ್ಸ್ ಆ್ಯಪ್ ಮೂಲಕ ಚ್ಯಾಟಿಂಗ್ : ಇಂದು ಮೆಸೇಜ್ ವೀಡಿಯೋಗಳಿಗಿಂತ ಅತ್ಯಂತ ಮಾಧ್ಯಮ ವಾಟ್ಸ್ ಆ್ಯಪ್ ಆಗಿದೆ. ಈ ಅಫ್ಲಿಕೇಶನ್ ಹೆಚ್ಚಾಗಿ ಯುವಕರ ಫೋನ್ನಲ್ಲಿ ಇರುತ್ತದೆ. ಹೀಗಿರುವಾಗ ಒಂದುವೇಳೆ ಆಫೀಸಿನಲ್ಲಿ ಪ್ರೇಯಸಿ ಅಥವಾ ಪ್ರಿಯಕರ ಇದ್ದರೆ, ಸ್ವಲ್ಪ ಸಮಯದ ನಂತರ ವಾಟ್ಸ್ಆ್ಯಪ್ ಮೂಲಕ `ಐ ಲವ್ ಯೂ’ `ಐ ಮಿಸ್ ಯೂ’ ಇತ್ಯಾದಿ ಮೆಸೇಜ್ಗಳನ್ನು ಕಳಿಸತೊಡಗುತ್ತಾರೆ. ಈ ಮೆಸೇಜ್ಗಳನ್ನು ಕಂಡು ಮನಸ್ಸು ಕೂಡಲೇ ಭೇಟಿಯಾಗಲು ಬಯಸುತ್ತದೆ. ಆಗ ಅತ್ಯಂತ ಮಹತ್ವದ ಕೆಲಸವಿದ್ದರೂ ಅದನ್ನು ಬಿಟ್ಟು ಅವರನ್ನು ಭೇಟಿಯಾಗಲು ಹೊರಡುತ್ತಾರೆ. ಆಗ ಕೆಲಸಕ್ಕೆ ಧಕ್ಕೆಯಾಗುತ್ತದೆ.
ಪಾರ್ಟ್ನರ್ನ ಕೇರ್ ಲಿಮಿಟ್ ಕ್ರಾಸ್ ಮಾಡುವುದು : ಇಂದು ಪಾರ್ಟ್ನರ್ಗೆ ಜ್ವರವಿದ್ದರೂ ನನಗಾಗಿ ಆಫೀಸಿಗೆ ಬಂದಿದ್ದಾರೆ ಒಂದು ತಿಳಿದಾಗ ಇಡೀ ದಿನ ಅವರ ಸತ್ಕಾರದಲ್ಲಿ ತೊಡಗಿರುತ್ತಾರೆ. ಒಮ್ಮೆ ಅವರಿಗೆ ಕಾಫಿ ತರಿಸಿಕೊಟ್ಟರೆ, ಇನ್ನೊಮ್ಮೆ ಮನೆಯಿಂದ ತಂದ ತಿಂಡಿಯನ್ನು ಸಹೋದ್ಯೋಗಿಗಳ ಎದುರಿಗೆ ತಿನ್ನಿಸುತ್ತಾರೆ. ಸಹೋದ್ಯೋಗಿಗಳು ಇದನ್ನು ಕಂಡು ಅವರಿಗೆ ರೇಗಿಸುತ್ತಾರೆ.
ಆಗಾಗ್ಗೆ ಆಫೀಸಿಗೆ ಬಂಕ್ : ಮನೆಯಿಂದ ಆಫೀಸಿಗಂತೂ ಬರುತ್ತಾರೆ. ಅಲ್ಲಿ 2 ಗಂಟೆ ಕೂತಿದ್ದು ಯಾವುದೋ ಕೆಲಸದ ನೆಪದಲ್ಲಿ ಇಬ್ಬರೂ 3 ಗಂಟೆಗಳ ಕಾಲ ನಾಪತ್ತೆಯಾಗುತ್ತಾರೆ. ಯಾವುದಾದರೂ ಪಾರ್ಕ್ನಲ್ಲಿ ಕುಳಿತು ರೊಮ್ಯಾನ್ಸ್ ಮಾಡುತ್ತಾರೆ. ರಿರೇಶನ್ಶಿಪ್ನಲ್ಲಿ ಮುಳುಗಿದ ನಂತರವೇ ಈ ಅಭ್ಯಾಸ ಶುರುವಾಗುತ್ತದೆ. ಯಾರಾದರೂ ಹಿಡಿದು ಛೀಮಾರಿ ಹಾಕುವವರೆಗೆ ನಡೆಯುತ್ತಿರುತ್ತದೆ.
ಬಾಸ್ನೊಂದಿಗೂ ಜಗಳ : ಗರ್ಲ್ ಫ್ರೆಂಡ್ನ ಎದುರಿಗೆ ಬಾಸ್ ಬೈದರೆ ಮನಸ್ಸಿಗೆ ಬಹಳ ನೋವಾಗುತ್ತದೆ. ಗರ್ಲ್ ಫ್ರೆಂಡ್ ಎದುರು ತಮ್ಮನ್ನು ಸರಿಯೆಂದು ಸಾಧಿಸಲು ಬಾಸ್ನ ಒಳ್ಳೆಯ ಮಾತುಗಳನ್ನೂ ತಪ್ಪೆಂದು ತೋರಿಸಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಬಾಸ್ನೊಂದಿಗೆ ನೀನು ತಾನು ಎಂದು ಜಗಳವಾಡಿ ಅದರ ಪರಿಣಾಮವಾಗಿ ಕೆಲಸ ಕಳೆದುಕೊಳ್ಳಬೇಕಾಗುತ್ತದೆ.
ಗೆಳೆಯರನ್ನು ಕಡೆಗಣಿಸುವುದು : ಫ್ರೆಂಡ್ಶಿಪ್ನ ಹುಚ್ಚಿನಲ್ಲಿ ಬಿದ್ದು ನಮ್ಮ ಹಳೆಯ ಸ್ನೇಹಿತರನ್ನು ಮರೆತುಬಿಡುತ್ತೇವೆ. ಅವರೊಂದಿಗೆ ಕುಳಿತು ಮಾತಾಡುವುದಿರಲಿ, ಒಂದೇ ಫ್ಲೋರ್ನಲ್ಲಿ ಕೆಲಸ ಮಾಡುತ್ತಿದ್ದರೂ ಹಾಯ್ ಹಲೋ ಕೂಡ ಹೇಳುವುದಿಲ್ಲ. ಏಕೆಂದರೆ ಸಂಪೂರ್ಣ ಗಮನ ಗರ್ಲ್ ಫ್ರೆಂಡ್ ಮೇಲಿರುತ್ತದೆ. ಗರ್ಲ್ ಫ್ರೆಂಡ್ ಇದ್ದರೆ ಎಲ್ಲ ಇದೆ. ಅವಳಿಲ್ಲದಿದ್ದರೆ ಏನೂ ಇಲ್ಲ ಎಂದು ಅನ್ನಿಸುತ್ತದೆ.
ಆಫೀಸ್ ವಾತಾವರಣ ಹಾಳಾಗುತ್ತದೆ : ಆಫೀಸಿನಲ್ಲಿ ಕೆಲಸದ ವಾತಾವರಣವಿದ್ದರೆ ಚೆನ್ನಾಗಿರುತ್ತದೆ. ಅಲ್ಲಿ ಪ್ರೀತಿ ಗೀತಿ ಶುರುವಾದರೆ ಅದು ಆಫೀಸ್ ಅನ್ನಿಸದೆ ಲವ್ ಪಾಯಿಂಟ್ ಅನ್ನಿಸುತ್ತದೆ.
ಪ್ರೀತಿಯ ಹುಚ್ಚಿನಲ್ಲಿ ಬಿದ್ದವರಿಗೆ ನಾವು ಎಲ್ಲಿದ್ದೇವೆ ಎಂದು ತಿಳಿಯುವುದೇ ಇಲ್ಲ. ಅವರು ಎಲ್ಲಿ ಬೇಕಾದರೂ ರೊಮ್ಯಾನ್ಸ್ ಮಾಡುತ್ತಾರೆ. ಅವರಿಗೆ ದೊಡ್ಡವರ ಎದುರು ನಾಚಿಕೆಯೂ ಇಲ್ಲ. ಅವರ ಈ ತರಲೆಗಳನ್ನು ಕಂಡು ಇತರರೂ ಕೆಲಸ ಬಿಟ್ಟು ಅದರಲ್ಲಿ ಆಸಕ್ತಿ ಹೊಂದುತ್ತಾರೆ. ಅದರಿಂದ ಕೆಲಸ ಹಾಳಾಗುತ್ತದೆ. ಆದ್ದರಿಂದ ಆಫೀಸಿನಲ್ಲಿ ಇಂಥದ್ದಕ್ಕೆಲ್ಲಾ ಅವಕಾಶ ಕೊಡಬೇಡಿ.
ಗರ್ಲ್ ಫ್ರೆಂಡ್ಗೆ ಸಹಾಯ ಮಾಡುವ ನಿಟ್ಟಿನಲ್ಲಿ ನಮ್ಮ ಪರ್ಫಾರ್ಮೆನ್ಸ್ ಝೀರೋ : ಒಂದೇ ಡಿಪಾರ್ಟ್ಮೆಂಟಿನಲ್ಲಿ ಕೆಲಸ ಮಾಡುವಾಗ ಗರ್ಲ್ ಫ್ರೆಂಡ್ಗೆ ಬಹಳ ಕಷ್ಟಕರವಾದ ಪ್ರಾಜೆಕ್ಟ್ ಸಿಕ್ಕಿದ್ದು ಅದನ್ನು ಸಂಭಾಳಿಸುವುದು ಕಷ್ಟವಾದರೆ ಅವಳ ಪ್ರೇಮಿ ಅವಳ ಕಷ್ಟವನ್ನು ನೋಡಲಾರದೆ ತನ್ನ ಕೆಲಸ ಬಿಟ್ಟು ಅವಳ ಪ್ರಾಜೆಕ್ಟ್ ಪೂರೈಸಲು ಹಗಲೂ ರಾತ್ರಿ ಕೆಲಸ ಮಾಡುತ್ತಾನೆ. ಏಕೆಂದರೆ ತನ್ನ ಪ್ರೇಯಸಿಯೇ ಮೊದಲ ಸ್ಥಾನ ಗಳಿಸಲಿ ಎಂದು. ಗರ್ಲ್ ಫ್ರೆಂಡನ್ನು ಇಂಪ್ರೆಸ್ ಮಾಡಲು ಹೋಗಿ ಬಾಸ್ನ ಕಣ್ಣುಗಳಲ್ಲಿ ಸ್ವಯಂ ಝೀರೋ ಎಂದು ಸಾಬೀತುಪಡಿಸುತ್ತಾನೆ.
ಅನೇಕ ಬಾರಿ ಹೀಗೂ ಆಗುತ್ತದೆ. ತನ್ನ ಹೊಗಳಿಕೆ ಕೇಳುವಾಗ ಹುಡುಗಿಯ ಬಾಯಿಂದ ಒಂದು ಬಾರಿಯೂ ಇದರ ಶ್ರೇಯಸ್ಸು ನನಗಲ್ಲ. ನನ್ನ ಫ್ರೆಂಡ್ಗೆ ಕೊಡಬೇಕು ಎಂದು ಹೊರಡುವುದಿಲ್ಲ. ಸದ್ದಿಲ್ಲದೆ ಎಲ್ಲ ಶ್ರೇಯಸ್ಸನ್ನೂ ತಾನೇ ಪಡೆಯುತ್ತಾಳೆ. ತನ್ನ ಕೆಲಸ ಮಾಡಿಸಿಕೊಳ್ಳಲು ಮಾತ್ರ ಅಕೆ ಗೆಳೆತನ ಬೆಳೆಸಿರಲೂಬಹುದು.
ಯೂಸ್ ಮಾಡಿಕೊಳ್ಳಲೂ ಫ್ರೆಂಡ್ಶಿಪ್ : ಹುಡುಗಿ ಹೆಚ್ಚು ಇಂಟೆಲಿಜೆಂಟ್ ಆಗಿಲ್ಲದೆ ಇರಬಹುದು. ಅವಳು ಹುಡುಗನ ಸಾಮರ್ಥ್ಯ ನೋಡಿರಬಹುದು. ಆ ಕಾರಣದಿಂದಲೇ ಅವಳು ಅವನೊಂದಿಗೆ ಗೆಳೆತನ ಬೆಳೆಸಿರಬಹುದು. ಅಂತಹ ಹುಡುಗಿಯರು ಆಫೀಸಿನಲ್ಲಿ ಬಹಳ ಚಾಲಾಕಿತನದಿಂದ ಫ್ರೆಂಡ್ಶಿಪ್ ಬೆಳೆಸಿ ಅವರ ಐಡಿಯಾಗಳನ್ನು ಕದ್ದುಬಿಡುತ್ತಾರೆ. ಅದರಿಂದಾಗಿ ಅವರ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತವೆ. ಹುಡುಗರು, ಹುಡುಗಿಯರ ಈ ಚಾಲಾಕಿತನವನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಅದರಿಂದ ಅವರ ಪರ್ಫಾಮೆನ್ಸ್ ದಿನದಿನಕ್ಕೂ ಕಡಿಮೆಯಾಗುತ್ತದೆ.
ಇನ್ನೊಬ್ಬರ ಕಣ್ಣಿಗೆ ಬೀಳುತ್ತಾರೆ : ತಮ್ಮ ಪರ್ಫಾರ್ಮೆನ್ಸ್ ಮೂಲಕ ಕಣ್ಣಿಗೆ ಬೀಳುವುದು ಬೇರೆ ವಿಷಯ. ಆದರೆ ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ಕಾರಣದಿಂದಾಗಿ ಜನರ ಕಣ್ಣಿನಲ್ಲಿ ನಗೆಪಾಟಲಿಗೆ ಗುರಿಯಾಗುತ್ತಾರೆ.
ಇಂದಿನ ವಾತಾವರಣ ಹೇಗಾಗಿದೆಯೆಂದರೆ ಒಂದು ವೇಳೆ ಆಫೀಸಿನಲ್ಲಿ ಯಾರಾದರೂ ಹುಡುಗ ಮತ್ತು ಹುಡುಗಿ ಕೆಲಸದ ಸಂದರ್ಭದಲ್ಲಿ ಪರಸ್ಪರ ಸಮೀಪದಲ್ಲಿ ಕುಳಿತಿದ್ದರೆ ಸಹೋದ್ಯೋಗಿಗಳು ಕುಹಕದಿಂದ ಮಾತಾಡುತ್ತಾರೆ. ಇನ್ನು ಯಾರದಾದರೂ ಅಫೇರ್ ನಡೆದಿದ್ದರೆ ಕೇಳುವುದೇ ಬೇಡ.
ಮೆಟ್ಟಿಲುಗಳ ಮೇಲೆ ಅಥವಾ ಬೇರೆಲ್ಲಾದರೂ ಏಕಾಂತದಲ್ಲಿ ಅವರನ್ನು ನೋಡಿದವರು ಆಡುವ ಮಾತುಗಳನ್ನು ಕೇಳಿದಾಗ ಅವರಿಗೆ ತಮ್ಮ ಬಗ್ಗೆಯೇ ನಾಚಿಕೆಯಾಗುತ್ತದೆ.
ಹೆಚ್ಚಾಗುವ ತೊಂದರೆಗಳು
ಮೊದಲು ಪರಸ್ಪರರನ್ನು ಇಷ್ಟಪಡುತ್ತಿದ್ದರು ಬ್ರೇಕ್ ಅಪ್ ನಂತರ ಪರಸ್ಪರ ಶತ್ರುಗಳಾಗಿಬಿಡುತ್ತಾರೆ. ಮಾತು ಮಾತಿಗೂ ಪರಸ್ಪರ ಕಾಲೆಳೆಯಲು ಹಿಂದೆ ಬೀಳುವುದಿಲ್ಲ.
ಬ್ರೇಕ್ಅಪ್ ನಂತರ ಒಬ್ಬರು ಕೆಲಸದ ಬಗ್ಗೆ ಹೆಚ್ಚು ಸೀರಿಯಸ್ ಆಗಿ ಅವರಿಗೆ ಪ್ರಮೋಶನ್ ಸಿಗುತ್ತದೆ. ಇದರಿಂದ ಇನ್ನೊಬ್ಬರು ಅಸೂಯೆಗೊಂಡು ಅವರನ್ನು ಬಾಸ್ನ ದೃಷ್ಟಿಯಲ್ಲಿ ಕೀಳಾಗಿಸಲು ಪ್ರಯತ್ನಿಸುತ್ತಾರೆ.
ಇಬ್ಬರಲ್ಲೂ ಬಹಳ ಪ್ರೀತಿ ಇತ್ತು. ಈಗ ಏನಾಯ್ತು ಗೊತ್ತಿಲ್ಲ. ಇವಳಿಗೆ ಬೇರೆ ಯಾರೋ ಸಿಕ್ಕಿರಬೇಕು ಎಂಬ ವ್ಯಂಗ್ಯ ನುಡಿಗಳನ್ನು ಕೇಳಿದಾಗ ಕೆಲಸವನ್ನೇ ಬಿಡಬೇಕಾಗಬಹುದು.
ಇತರ ಹುಡುಗಿಯರೊಂದಿಗೆ ಮಾತಾಡಿದರೆ, ಅವನು ತನ್ನ ಪ್ರೀತಿಭರಿತ ಮಾತುಗಳಿಂದ ಮರುಳು ಮಾಡಿ ಯಾವುದೇ ಹಂತದವರೆಗೂ ಹೋಗುತ್ತಾನೆ ಎಂದೆಲ್ಲಾ ಅವನ ವಿರುದ್ಧವಾಗಿ ಆ ಹುಡುಗಿಯರ ಬಳಿ ಚಾಡಿ ಹೇಳುತ್ತಾರೆ. ಆ ಮಾತುಗಳನ್ನು ಕೇಳಿ ಮುಂದೆ ಯಾವ ಹುಡುಗಿಯೂ ಅವನೊಂದಿಗೆ ಮಾತಾಡಲು ಇಷ್ಟಪಡುವುದಿಲ್ಲ. ಅದರಿಂದ ಅವನು ಒತ್ತಡಕ್ಕೆ ಸಿಲುಕುತ್ತಾನೆ.
ಅವಳ ಬಳಿ ಬಂದು ಹೋಗುವುದನ್ನು ಕಂಡಾಗ ಕೀಳು ಅಭಿರುಚಿಯಿಂದ ಪ್ರತಿಕ್ರಿಯಿಸುವುದು.
ಬ್ರೇಕ್ಅಪ್ ನಂತರ ಬಂದ ವೆಚ್ಚನ್ನು ಗೆಳೆಯರ ಮುಂದೆ ಹೇಳಿ ಅವರ ದೃಷ್ಟಿಯಲ್ಲಿ ನಗೆಗೀಡು ಮಾಡಿದ್ದು.
ಒಮ್ಮೆ ನಿಮ್ಮ ಬ್ರೇಕ್ಅಪ್ ಆಯಿತೋ ಇಲ್ಲವೋ, ಇತರರೂ ನಿಮ್ಮ ಬಗ್ಗೆ ಪ್ರಯತ್ನಿಸತೊಡಗುತ್ತಾರೆ. ಎಲ್ಲಿಯವರೆಗೆಂದರೆ, ಅವನಿಲ್ಲದಿದ್ದರೆ ಬಿಡು. ನಾವಿಲ್ಲವೇ? ಎಂದು. ಏಕೆಂದರೆ ಅವರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ತಪ್ಪುಕಲ್ಪನೆ ಇರುತ್ತದೆ.
ಆದ್ದರಿಂದ ಆಫೀಸಿನಲ್ಲಿ ಫ್ರೆಂಡ್ಶಿಪ್ನ ಗೊಂದಲಗಳಲ್ಲಿ ಬೀಳಬೇಡಿ. ಏಕೆಂದರೆ ಇದರಲ್ಲಿ ಮೋಜು ಮಾಡುವುದು ಮತ್ತು ಟೆನ್ಶನ್ಬಿಟ್ಟು ಬೇರೇನೂ ಕೈಗೆ ಸಿಗುವುದಿಲ್ಲ.