ಇಲ್ಲಿ ಆಶೀರ್ವಾದಗಳಿಂದಲೇ ಕೆಲಸವಾಗುತ್ತದೆ

ಹೇಳಿಕೊಳ್ಳಲು ಸರ್ಕಾರಿ ಆಸ್ಪತ್ರೆಗಳು ಉಚಿತ. ಆದರೆ ಅಲ್ಲಿಗೆ ಹೋಗುವವರಿಗೆ, ಹೆಜ್ಜೆ ಹೆಜ್ಜೆಗೂ ಖಾಸಗಿ ಸೇವೆಗಳನ್ನು ಪಡೆಯುವುದು ಇಡೀ ದೇಶದ ಎಲ್ಲ ಪ್ರೈವೇಟ್‌ ಹಾಗೂ ಚಾರಿಟೆಬಲ್ ಆಸ್ಪತ್ರೆಗಳಲ್ಲೂ ಅಗತ್ಯ ಎಂದು ತಿಳಿದಿದೆ.

ಚಿಕಿತ್ಸೆಯ ಬೇಡಿಕೆ ಎಷ್ಟು ಕೆಟ್ಟದಾಗಿ ಹೆಚ್ಚುತ್ತಿದೆಯೆಂದರೆ, ಯಾವುದೇ ನೂಲುಗಳನ್ನು ಸರ್ಕಾರ ಹೆಣೆದರೆ ಅದು ಮೊದಲು ಸ್ಥಾನ ಪಡೆಯುತ್ತದೆ. ಅಷ್ಟೇ ಅಲ್ಲ, ನಂತರ ರೋಗಿಗೆ ಉಚಿತ ಚಿಕಿತ್ಸೆ ಏಕೆ ಕೊಡಬೇಕೆನ್ನುವ ಭಾವನೆ ಎಲ್ಲ ಸರ್ಕಾರಿ ಸಂಬಳ ಪಡೆಯುವವರ ಮನದಲ್ಲಿ ತುಂಬಿದೆ. ಆದ್ದರಿಂದ ಎಲ್ಲ ಸೇವೆಯೂ ಕಡಿಮೆಯೂ ಬೀಳುತ್ತದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ದೊಡ್ಡ ದೊಡ್ಡ ಕಟ್ಟಡಗಳಿರುತ್ತವೆ. ಹೆಚ್ಚು ಕಮೀಷನ್‌ ಸಿಕ್ಕಿದಾಗ ದುಬಾರಿ ಮೆಷಿನ್‌ಗಳು ಮತ್ತು ಫರ್ನೀಚರ್ ಖರೀದಿಸಬಹುದು. ಆದರೆ ಅವುಗಳ ಸರಿಯಾದ ಉಪಯೋಗವನ್ನು ಸಂಬಳ ಪಡೆಯುವ ನೌಕರರಿಂದ ಮಾಡಲಾಗುವುದಿಲ್ಲ. ಏಕೆಂದರೆ ಸೇವೆ ಪಡೆಯುವವರು ಬಡವರು, ಅಸಹಾಯಕರು ಹಾಗೂ ದುರ್ಬಲರಾಗಿರುತ್ತಾರೆ. ಅವರು ಎಂದೂ ದೂರುವುದಿಲ್ಲ. ಬರೀ ವಿನಂತಿಸಿಕೊಳ್ಳುತ್ತಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಸೇವೆ ನೀಡಲು ಜೊತೆಗೆ ಫೀಸ್‌ ಪಡೆಯಲು ಒಂದು ವಿಧಾನ ಶುರುವಾಗಿದೆ. ಸರ್ಕಾರಿ ಸಂಬಳ ಪಡೆಯುವ ರೋಗಿಗಳಿಂದ ಹಣ ಪಡೆದು ಸೇವೆ ನೀಡುತ್ತಾರೆ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಹೊರಗಿನ ಸೇವೆ ಕೊಡುವವರೂ ಬರುತ್ತಿದ್ದಾರೆ. ಅವರು ಸರ್ಕಾರಿ ಸಂಬಳದಾರರಿಗೆ ಫೀಸ್‌ನಲ್ಲಿ ರಿಯಾಯಿತಿ ಕೊಟ್ಟು ತಮ್ಮ ಜೇಬನ್ನು ಬೆಚ್ಚಗೆ ಮಾಡಿಕೊಳ್ಳುತ್ತಿದ್ದಾರೆ.

ಈ ಪ್ರೈವೇಟ್‌ ನರ್ಸ್‌, ವಾರ್ಡ್‌ ಬಾಯ್‌, ಫಾರ್ಮಾಸಿಸ್ಟ್, ಫಿಸಿಯೋಥೆರಪಿಸ್ಟ್, ಲ್ಯಾಬ್‌ ಟೆಕ್ನೀಶಿಯನ್‌, ರೇಡಿಯಾಲಜಿಸ್ಟ್ ಒಟ್ಟಿಗೆ ಸೇರಿ ರೋಗಿಯನ್ನು ಲೂಟಿ ಮಾಡುತ್ತಿದ್ದರೂ ಜನ ಚಿಕಿತ್ಸೆ ಪಡೆಯುತ್ತಲೇ ಇದ್ದಾರೆ. ಹೀಗಾಗಿಯೇ ದೇಶದೆಲ್ಲೆಡೆ ಸರ್ಕಾರಿ ಆಸ್ಪತ್ರೆಗಳ ಹೊರಗೆ ಜನರ ಗುಂಪು ಇರುತ್ತದೆ. ಅರ್ಥಾತ್‌ ಒಳಗೆ ಸಲ್ಮಾನ್‌ ಖಾನ್‌ರ ಮನರಂಜನೆ ನಡೆಯುತ್ತಿದ್ದರೆ ಹೊರಗೆ ಅವರ ಒಂದು ನೋಟಕ್ಕಾಗಿ ಜನ ಕಾದು ಕುಳಿತಿರುತ್ತಾರೆ.

ಖಾಸಗಿ ಆಸ್ಪತ್ರೆಗಳನ್ನು ಬೈಯುವವರು ಸರ್ಕಾರಿ ಆಸ್ಪತ್ರೆಗಳು ನಡೆಯುತ್ತಿರುವುದು ಅಂಡರ್‌ದ ಟೇಬಲ್ ಪ್ರೈಟೈಸೇಶನ್‌ನಿಂದಾಗಿ ಎಂಬುದನ್ನು ಮರೆತುಬಿಡುತ್ತಾರೆ. ಈ ಖಾಸಗಿ ಸೇವೆಗಳೊಂದಿಗೆ ಒದ್ದಾಡುವುದು ಮಹಿಳೆಯರಿಗೆ ಅವರು ರೋಗಿಯಾಗಿರಲಿ ಅಥವಾ ರೋಗಿಯ ಸಂಬಂಧಿಯಾಗಿರಲಿ ಬಹಳ ದುಬಾರಿಯಾಗುತ್ತದೆ. ಗಂಡಸರು ಸಾಮಾನ್ಯವಾಗಿ ಹೊರಗೆ ಇದ್ದುಬಿಡುತ್ತಾರೆ. ಮಹಿಳೆಯರು ಈ ಸೇವಾಕರ್ತರ ಬಳಿ ಹಣ ಕುದುರಿಸಬೇಕಾಗುತ್ತದೆ. ಅದು ಗಂಡಾಂತರ ತರುವ ಕೆಲಸವಾಗಿರುತ್ತದೆ.

ರೋಗಿಯನ್ನು ನೋಡಿಕೊಳ್ಳುವುದರೊಂದಿಗೆ ಡಾಕ್ಟರ್‌ ಮತ್ತು ನರ್ಸ್‌ಗಳನ್ನು ಸಂಪರ್ಕಿಸುವುದು ಎವರೆಸ್ಟ್ ಹತ್ತಿದಂತಾಗುತ್ತದೆ. ಕೊಳಕು, ದುರ್ವಾಸನೆಯುಳ್ಳ ಇಕ್ಕಟ್ಟಾದ ಜಾಗಗಳಲ್ಲಿ ಮಲಗಿರುವ ರೋಗಿಗಳು ಮತ್ತು ರೋಗಿಗಳ ಸಂಬಂಧಿಕರ ಅಡೆತಡೆಗಳನ್ನು ದಾಟಿಕೊಂಡು ಅಳುತ್ತಿರುವ ತಮ್ಮ ಮಕ್ಕಳು ಅಥವಾ ಗಂಡನಿಗಾಗಿ ವಿಲಾಪಿಸುವ ಮಹಿಳೆಯರು ಔಷಧಿ, ಬ್ಯಾಂಡೇಜು, ಟೆಸ್ಟ್ ಗಳು, ಡಾಕ್ಟರ್‌ ಎಕ್ಸಾಮಿನೇಶನ್‌, ಆಪರೇಷನ್‌ ಇತ್ಯಾದಿಗಳಿಗಾಗಿ ಓಡುತ್ತಿರುತ್ತಾರೆ.

ಖಾಸಗಿ ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳಿಗೆ ಪರ್ಯಾಯ ವ್ಯವಸ್ಥೆಯಾಗಿವೆ. ಅವು ಸಾವಿರಾರು ಸಂಖ್ಯೆಗಳಲ್ಲಿ ತೆರೆಯುತ್ತವೆ. ಆದರೆ ಅವು ಬಹಳ ದುಬಾರಿ, ಸರ್ಕಾರಿ ಆಸ್ಪತ್ರೆಗಳು ಅಂಡರ್‌ ದ ಟೇಬಲ್ ಸಂದಾಯದ ನಂತರ ಇನ್ನೂ ಅಗ್ಗವಾಗಿವೆ ಅಥವಾ ಅಗ್ಗವೆಂದು ಅನ್ನಿಸುತ್ತದೆ. ಆದ್ದರಿಂದಲೇ ಅವುಗಳಲ್ಲಿ ಜನ ಸದಾ ತುಂಬಿರುತ್ತಾರೆ.

ಉಚಿತ ಆರೋಗ್ಯ ಸೇವೆಯ ಫಾರ್ಮುಲಾ ಇಂದಿಗೂ ಅಮೆರಿಕಾದಲ್ಲಾಗಲೀ ಚೀನಾದಲ್ಲಾಗಲಿ ಸಿಗುತ್ತಿಲ್ಲ. ಇದು ವಿಷಾದನೀಯ. ಇನ್ನು ಭಾರತದ್ದೇನು ಹೇಳುವುದು? ಇಲ್ಲಂತೂ ಬರೀ ಆಶೀರ್ವಾದಗಳಿಂದಲೇ ಕೆಲಸ ನಡೆಯುತ್ತದೆ ಮತ್ತು ದಾನವನ್ನು ಹೆಚ್ಚಾಗಿ ಸರ್ಕಾರಿ ನೌಕರರೇ ಪಡೆಯುತ್ತಿದ್ದಾರೆ. ಆರೋಗ್ಯ ಶ್ರೀಸಾಮಾನ್ಯನ ಮೂಲಭೂತ ಹಕ್ಕಾಗಿದೆ. ಆದರೆ ಪ್ರತಿ ಸರ್ಕಾರ ಇದನ್ನೊಂದು ನಿರರ್ಥಕ ಕೆಲಸವೆಂದು ಭಾವಿಸಿದೆ ಹಾಗೂ ಪಟ್ಟಿ ಮಾಡಿ ಸುಮ್ಮನೆ ಕುಳಿತುಬಿಡುತ್ತದೆ. ಯಾರಾದರೂ ಹಿರಿಯ, ತಿಳಿವಳಿಕೆಯುಳ್ಳ ಮಂತ್ರಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಾರೆ.

vihangam

ಗುರಿ ಇಲ್ಲದೆ ದಾರಿ ತಪ್ಪಿಸುವ ಚಿತ್ರ

ಹಿಂದಿಯಲ್ಲಿ ಈಚೆಗೆ `ಪೀಕೂ’ ಎಂಬ ಚಲನಚಿತ್ರ ಬಂದಿತ್ತು. ಅಮಿತಾಬ್ ಬಚ್ಚನ್‌ ಮತ್ತು ದೀಪಿಕಾ ಪಡುಕೋಣೆ ಎಂಬ ಖ್ಯಾತನಾಮರು ಅದರಲ್ಲಿ ನಟಿಸಿದ್ದಾರೆ. ಈ ಚಿತ್ರದ ಕಥೆಯೇ ವಿಚಿತ್ರ. ಮಲಬದ್ಧತೆಗೆ ತುತ್ತಾದ ತಲೆ ಕೆಟ್ಟ ತಂದೆಯ ನಖರಾಗಳನ್ನು ಮಗಳು ಪೀಕೂ ಸಹಿಸಿಕೊಳ್ಳುತ್ತಾಳೆ. ಅದಕ್ಕೆ ಕಾರಣ ಅವನ ಮೇಲಿನ ಅತಿಯಾದ ಪ್ರೀತಿ. ಮಗಳು ಒಮ್ಮೆಯೂ ಸಹ ತನ್ನ ತಂದೆಯ ಬಗ್ಗೆ ದೂರು ಹೇಳುವುದಿಲ್ಲ. ಆ ಬಗ್ಗೆ ಕೇಳುವುದೂ ಇಲ್ಲ. ತಂದೆಯೂ ಆ ಬಗ್ಗೆ ಗೊತ್ತಿದ್ದೂ ಗೊತ್ತಿಲ್ಲದಂತೆ ಉಳಿದುಬಿಡುತ್ತಾನೆ. ಈ ರೀತಿಯಾಗಿ ಪೀಕೂ ತಂದೆಯ ಹಠಮಾರಿತನವನ್ನು ಸಹಿಸಿಕೊಳ್ಳುತ್ತಾಳೆ.

ಈ ಚಲನಚಿತ್ರದ ಸಂದೇಶ ಇಷ್ಟೆ. ಈ ತೆರನಾದ ವೃದ್ಧರ ಹಠಮಾರಿತನವನ್ನು ಸಹಿಸಿಕೊಳ್ಳಿ. ಅದಕ್ಕಾಗಿ ನಿಮ್ಮ ಕೆರಿಯರ್‌, ಸ್ನೇಹಿತರನ್ನು ಅಷ್ಟೇ ಏಕೆ ಅದನ್ನು ನಗುತ್ತಲೇ ಸಹಿಸಿಕೊಳ್ಳಬೇಕು. ಆದರೆ ಕೆರಿಯರ್‌, ಸ್ನೇಹಿತರು, ಸುಖ ಸಂತೋಷಗಳನ್ನು ತ್ಯಾಗ ಮಾಡಬೇಕಾಗಿ ಬಂದರೂ ಮಾಡಿ.

ಚಿತ್ರದ ನಿರ್ದೇಶಕರು ಅಮಿತಾಬ್‌ರ ಹುಚ್ಚುತನವನ್ನೇನೂ ತೋರಿಸಿದ್ದಾರೆ. ಆದರೆ ಅಷ್ಟೊಂದು ಟೀಕೆ ಮಾಡಿಯೂ ಇಲ್ಲ. ಅವರನ್ನು ಖಳನಾಯಕನನ್ನಾಗಿ ಮಾಡಿಬಿಟ್ಟಿದ್ದಾರೆ.

ಒಂದು ವೇಳೆ ಪೀಕೂ ಮಗಳಾಗುವ ಬದಲು ಸೊಸೆಯಾಗಿದ್ದಿದ್ದರೆ ಏನಾಗುತ್ತಿತ್ತು? ಪೀಕೂ ಹಾಗೂ ಆಕೆಯ ಪತಿ ಈ ಭಯೋತ್ಪಾದಕ ತಂದೆಯನ್ನು ಸಹಿಸಿಕೊಂಡು ಸುಮ್ಮನಿರುತ್ತಿದ್ದರೆ? ಅನಾರೋಗ್ಯಪೀಡಿತ ವೃದ್ಧ ತಂದೆ ಅಥವಾ ಮಾವ ಯಾರನ್ನೇ ಆಗಲಿ ಸರಿಯಾಗಿ ನೋಡಿಕೊಳ್ಳಬೇಕು. ಆದರೆ ಈ ಬಗೆಯ ವೃದ್ಧನನ್ನು ಅಲ್ಲ. ಇದಂತೂ ಸಂಬಂಧದಲ್ಲಿ ವಿಷ ಸುರಿಯುವ ಕೆಲಸ ಮಾಡುತ್ತದೆ. ಸಿನಿಮಾ ನಿರ್ಮಾಪಕರು ಆ ವೃದ್ಧನಿಗೆ ಪಾಠ ಕಲಿಸುವ ಬದಲು ಅವನನ್ನು ಸಾಯಿಸಿಬಿಟ್ಟಿದ್ದಾರೆ. ಏಕೆಂದರೆ ಪೀಕೂ ತನ್ನ ಹೊಸ ಗೆಳೆಯನೊಂದಿಗೆ ಮದುವೆಯಾಗಿ ಸುಖವಾಗಿರಲೆಂದು.ಪ್ರತಿಯೊಂದು ಕುಟುಂಬದಲ್ಲೂ ಹೀಗಾಗುತ್ತದೆಯೇ? ಯಾವ ವೃದ್ಧ ತನ್ನ ಮಗ, ಮಗಳು ಅಥವಾ ಸೊಸೆಯನ್ನು ಸದಾ ಟೀಕಿಸುತ್ತಾ ಇರುತ್ತಾನೊ, ಅವರಲ್ಲಿ ಬಹುತೇಕರಿಗೆ ಈ ಭಾಸ್ಕರನ ಕುಟುಕು ಸ್ವಭಾವ ಇದ್ದೇ ಇರುತ್ತೆ. ಅವರು ಯಾವಾಗಲೂ ಬೇರೆಯವರ ಮೇಲೆ ತಮ್ಮ ಇಷ್ಟವನ್ನು ಹೇರುತ್ತಾರೆ. ಒಂದುವೇಳೆ ವೃದ್ಧಾಶ್ರಮಗಳು ಏಕೆ ಭರ್ತಿಯಾಗುತ್ತಿವೆ ಎಂದು ಕೇಳಿದರೆ, ತಮ್ಮ ಆಸ್ತಿ, ಬಾಲ್ಯದ ಪ್ರೀತಿ ಹಾಗೂ ಕರ್ತವ್ಯದ ನೆಪವೊಡ್ಡಿ ಮಕ್ಕಳಿಂದ ಸೇವೆ ಮಾಡಲು ಹೇಳಲಾಗುತ್ತದೆ. ಈ ಕಾರಣದಿಂದ ಅವರು ವೃದ್ಧಾಶ್ರಮಕ್ಕೆ ಸೇರಬೇಕಾಗಿ ಬರುತ್ತಿದೆ.

ಸಿನಿಮಾ ನಿರ್ಮಾಪಕನ ಕೆಲಸ ಕೇವಲ ಹವ್ಯಾಸ ಉತ್ಪತ್ತಿ ಮಾಡುವುದಲ್ಲ. ಮಲಬದ್ಧತೆಯ ತೊಂದರೆಯನ್ನು ಡೈನಿಂಗ್‌ ಟೇಬಲ್ ಮೇಲೆ ಪೇರಿಸಿಟ್ಟು ನಗುವುದಲ್ಲ. ಸುಜಿತ್‌ ಸರ್ಕಾರ್‌ ಅವರ ಈ ಚಲನಚಿತ್ರ ಕೇವಲ ಮೂರ್ಖತನದಿಂದಷ್ಟೇ ಕೂಡಿಲ್ಲ, ದಾರಿ ತಪ್ಪಿಸುವುದೂ ಆಗಿದೆ.

ಮನೆಯಲ್ಲಿಯೇ ದಾನವರಿದ್ದರೆ….

ಹುಡುಗಿಯರು ಎಷ್ಟು ಸುರಕ್ಷಿತರು, ಅದರಲ್ಲೂ ತಮ್ಮರದೇ ಕೈಯಲ್ಲಿ ಎಂದು ಕೇಳಿದರೆ ದೆಹಲಿಯ ಈ ಘಟನೆಯಿಂದ ಅದು ಸ್ಪಷ್ಟವಾಗುತ್ತದೆ. 12 ವರ್ಷದ ಹುಡುಗಿಯೊಬ್ಬಳ ತಾಯಿ ಹುಡುಗಿಯ ಚಿಕ್ಕಪ್ಪನ ಮಗನ ಮೇಲೆ ಬಲಾತ್ಕಾರದ ಪ್ರಕರಣ ದಾಖಲಿಸಿದಳು. ಆದರೆ ಆ ಚಿಕ್ಕಪ್ಪನ ಮಗ ಬಿಡುಗಡೆಗೊಂಡ. ಅಂದಹಾಗೆ ಪ್ರಕರಣ ನ್ಯಾಯಾಲಯಕ್ಕೆ ಹೋದ ಬಳಿಕ ದೂರು ನೀಡಿದ ತಾಯಿ, ಹುಡುಗಿ ತಪ್ಪು ಕಲ್ಪನೆಯಿಂದಾಗಿ, ಬೇರೆಯವರ ಪುಸಲಾಯಿಸುವಿಕೆಯಿಂದ ಪ್ರಕರಣ ದಾಖಲಾಯಿತು ಎಂದು ಹೇಳಿದರು.

ನೆರೆಮನೆಯವರ ಆಗ್ರಹದ ಮೇರೆಗೆ ತಾನು ಪ್ರಕರಣ ದಾಖಲಿಸಿದೆ ಎಂದು ತಾಯಿ ಹೇಳಿದಳು. ಅವನು ತನ್ನನ್ನು ಹುಚ್ಚಿ ಎಂದು ಪೀಡಿಸುತ್ತಿದ್ದ ಎಂದು ಮಗಳು ಹೇಳಿಕೆ ನೀಡಿದಳು. ನ್ಯಾಯಾಧೀಶರಿಗೆ ಅವನನ್ನು ಬಿಡುಗಡೆ ಮಾಡದೆ ಬೇರೆ ಉಪಾಯವೇ ಇರಲಿಲ್ಲ.

ಆ ಘಟನೆಯ ಬಳಿಕ ಕುಟುಂಬದಲ್ಲಿ ಪರಸ್ಪರ ಒತ್ತಡ ಹೇರಿರಬಹುದು, ಅವರನ್ನು ಒಪ್ಪಿಸಿರಬಹುದು ಅಥವ ವಾಸ್ತವದಲ್ಲಿ ಆ ಘಟನೆಯೇ ನಡೆದಿಲ್ಲ ಎಂದು ಹೇಳುವುದು ಕಷ್ಟ. ಪೊಲೀಸ್‌ ಠಾಣೆಯ ಮುಖಾಂತರ ಕೋರ್ಟ್‌ ಕಟಕಟೆಗೆ ತಲುಪಿದೆ. ಪ್ರಕರಣದಿಂದ ಹೊರಬಂದ ಸ್ಪಷ್ಟ ಸಂಗತಿಯೆಂದರೆ, ಚಿಕ್ಕ ಹುಡುಗಿಯರು ತಮ್ಮವರಿಂದಲೇ ಬಲಾತ್ಕಾರಕ್ಕೊಳಗಾಗುತ್ತಿದ್ದಾರೆ. ಆದರೆ ಪ್ರಕರಣಗಳು ಅಷ್ಟೇ ಬೇಗನೇ ಮುಚ್ಚಿ ಹಾಕಲ್ಪಡುತ್ತವೆ.

ಬಲಾತ್ಕಾರದ ಪ್ರಕರಣಗಳಲ್ಲಿ ತಮ್ಮವರ ವಿರುದ್ಧವೇ ಮೊಕದ್ದಮೆ ಹೂಡುವುದೆಂದರೆ ಕತ್ತಿಯ ಅಲಗಿನಂತೆ. ತಮ್ಮವರೊಬ್ಬರು ಜೈಲಿಗೆ ಹೋದರೆ ಕುಟುಂಬ ಛಿದ್ರಛಿದ್ರವಾಗುತ್ತದೆ.

ಸಂಬಂಧಿಕರಲ್ಲಿ ಸದಾ ಕಾಲ ವೈರತ್ವದ ಭಾವನೆ ಉಳಿದುಬಿಡುತ್ತದೆ. ತಮ್ಮವರ ಬಗ್ಗೆ ಸಂದೇಹದ ಭಾವನೆ ಉಂಟಾಗುತ್ತದೆ. ಬಲಾತ್ಕಾರಕ್ಕೊಳಗಾದ ಹುಡುಗಿಯ ಬಾಳ್ವೆಯಂತೂ ಹಾಳಾಗಿ ಹೋಗುತ್ತದೆ. ಇತರ ಹುಡುಗಿಯರು ಭಯದ ನೆರಳಲ್ಲಿ ಬದುಕಬೇಕಾಗುತ್ತದೆ. ಎರಡೂ ಪಾರ್ಟಿಯವರು ಪೊಲೀಸರು ಹಾಗೂ ವಕೀಲರಿಗಾಗಿ ಸಾಕಷ್ಟು ಮೊತ್ತ ಖರ್ಚು ಮಾಡಬೇಕಾಗಿ ಬರುತ್ತದೆ. ನೌಕರಿ ಮಾಡುವವರು ತಮ್ಮ ಕೆಲಸ ಬಿಟ್ಟು ವ್ಯರ್ಥವಾಗಿ ಪೊಲೀಸ್‌ ಠಾಣೆ ಅಥವಾ ಕೋರ್ಟ್‌ಗೆ ಅಲೆದಾಡಬೇಕಾಗಿ ಬರುತ್ತದೆ. ಒಂದು ದೂರು ಕೇವಲ ಮಾನಸಿಕವಾಗಿ ಅಷ್ಟೇ ಅಲ್ಲ, ಆರ್ಥಿಕವಾಗಿಯೂ ಹೊರೆಯಾಗುತ್ತದೆ. ಅದು ಸಾಮಾಜಿಕವಾಗಿ ಘಾತಕವಾಗಿರುತ್ತದೆ.

ತಮ್ಮವರನ್ನೇ ಹುಡುಗಿಯರು ಸುರಕ್ಷಿತ ಎಂದು ಭಾವಿಸದ ಈ ಸಮಾಜದಿಂದ ಏನು ಲಾಭ? ಬಲಾತ್ಕಾರ, ಬೇಡವಾದ ಒತ್ತಾಯದ ಸೆಕ್ಸ್, ಮದ್ಯ ಹಾಗೂ ನಶೆಯ ಹಾಗೆ ಕುಟುಂಬವನ್ನು ಪೊಳ್ಳು ಮಾಡುತ್ತದೆ. ಹುಡುಗಿಯರ ಆತ್ಮವಿಶ್ವಾಸವನ್ನು ಹತ್ತಿಕ್ಕುತ್ತದೆ. ಇಷ್ಟೊಂದು ಪಾಠ ಹೇಳಿರುವುದು ಸಾಕಲ್ಲವೇ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ