ನ್ಯಾಯಾಲಯಗಳ ತೀರ್ಮಾನಗಳು ಎಷ್ಟೋ ಬಾರಿ ಹೇಗೆ ಟೆಕ್ನಿಕ್‌ ಆಗುತ್ತವೆಂದರೆ ವ್ಯಾವಹಾರಿಕತೆ ಮತ್ತು ಮಾನವೀಯ ಸಂಬಂಧಗಳ ಗುರುತನ್ನು ಕಳೆದುಕೊಳ್ಳುತ್ತವೆ. ಮುಂಬೈನ ಒಂದು ಕೌಟುಂಬಿಕ ಕೋರ್ಟ್‌ ಒಬ್ಬ ಪತಿಯ ವಿಚ್ಛೇದನ ಮನವಿಯನ್ನು ಒಪ್ಪಿಕೊಂಡಿತು. ಏಕೆಂದರೆ ಅವನ ಪತ್ನಿಗೆ ಪಾರ್ಟಿಗಳಿಗೆ ಹೋಗುವ ಹುಚ್ಚಿತ್ತು. ಅದರಿಂದ ಪತಿಗೆ ಮಾನಸಿಕ ಯಾತನೆಯಾಗುತ್ತಿತ್ತು. ಮೊದಲ ಕೋರ್ಟು ಜಗಳವಾಡುತ್ತಿದ್ದ ಪತಿ-ಪತ್ನಿಗೆ ವಿಚ್ಛೇದನಕ್ಕೆ ಅನುಮತಿ ಕೊಟ್ಟು ಒಳ್ಳೆಯದನ್ನೇ ಮಾಡಿತು. ಆದರೆ ಪತ್ನಿಯಂತೂ ಗಂಡನಿಗೆ ಹಿಂಸೆ ಕೊಡಲು ಸಿದ್ಧಳಾಗಿದ್ದಳು. ಹೀಗಾಗಿ ಅವಳು ದೊಡ್ಡ ಕೌಟುಂಬಿಕ ಕೋರ್ಟ್‌ಗೆ ಅಪೀಲ್ ಮಾಡಿದಳು. ಆ ಕೋರ್ಟ್‌ ಕೆಳಗಿನ ಕೋರ್ಟಿನ ತೀರ್ಮಾನ ತಪ್ಪು, ಅವರಿಬ್ಬರೂ ಪತಿ ಪತ್ನಿಯರೆಂದು ತೀರ್ಪು ನೀಡಿತು.

ನಂತರ ಗಂಡ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಹಾಕಿದ. 1999ರಲ್ಲಿ ಮೊಕದ್ದಮೆ ಆರಂಭವಾಗಿ 2008ರವರೆಗೂ ವಿವಾದ ದೊಡ್ಡದಾಯಿತು. 2015ರಲ್ಲಿ ಉಚ್ಚ ನ್ಯಾಯಾಲಯ, ಮೊದಲ ಕೋರ್ಟಿನ ತೀರ್ಪು ತಪ್ಪು. ಆಗಾಗ್ಗೆ ಪಾರ್ಟಿಗಳಿಗೆ ಹೋಗುವುದನ್ನು ಮಾನಸಿಕ ಯಾತನೆ ಎಂದು ಹೇಳಲಾಗುವುದಿಲ್ಲ. ಇಬ್ಬರ ವೈವಾಹಿಕ ಬಂಧನ ಕಾಯಮ್ಮಾಗಿದೆ ಎಂದಿತು. ಪರಸ್ಪರ ಜಗಳವಾಡುವ, ಕೋರ್ಟಿಗೆ ಅಲೆದಾಡುವ ಜೋಡಿಗಳನ್ನು ಒತ್ತಾಯಪೂರ್ವಕವಾಗಿ ಒಟ್ಟಿಗೆ ಇಡುವ ಇದೆಂಥ ತೀರ್ಮಾನ? ಇದೆಂಥ ಕಾನೂನು? ಪತ್ನಿ ತನ್ನ ಜೊತೆಗಿರಲು ಬಯಸದ ಗಂಡನನ್ನು ಯಾಕೆ ಬಿಡಲು ಇಚ್ಛಿಸುವುದಿಲ್ಲ? ಕಾರಣ ಏನೇ ಇರಲಿ ಸರ್ಕಾರ, ಸಮಾಜ, ಕಾನೂನು, ಕೋರ್ಟ್‌ ಪತಿ ಪತ್ನಿಯರನ್ನು ಒಟ್ಟಿಗಿರುವಂತೆ ಮಾಡಲು ಸಾಧ್ಯವಿಲ್ಲ. ಹೀಗೆ ಜೊತಿಯಾಗಿರುವುದನ್ನು ಪತ್ನಿಯ ಸುರಕ್ಷತೆ ಎಂದೂ ಹೇಳಲು ಸಾಧ್ಯವಿಲ್ಲ. ಹೆಚ್ಚಾಗಿ ಇಂತಹ ಪ್ರಸಂಗಗಳಲ್ಲಿ ಪತಿ ಪತ್ನಿಯರು ಒಟ್ಟಿಗಿದ್ದರೂ ಬೇರೆಯಾಗಿರುತ್ತಾರೆ. ಆದರೆ ಕಾನೂನು ಅವರಿಗೆ ಪತಿ ಪತ್ನಿಯರೆಂದು ಮಾನ್ಯತೆ ನೀಡಿದೆ. ಈ ಒತ್ತಾಯದಿಂದ ಏನು ಪ್ರಯೋಜನ? ಮಕ್ಕಳಿದ್ದ ಮನೆಗಳಲ್ಲಿ ಅವರಿಗೊಂದು ಸೂರು ಕೊಡಲು ಪತಿ ಪತ್ನಿ ಒಟ್ಟಿಗಿರುತ್ತಾರೆ. ಇದು ಆದರ್ಶ ವ್ಯವಸ್ಥೆಯಾಗಿದೆ. ಆದರೆ ಮಕ್ಕಳ ಎದುರಿಗೆ ಜಗಳವಾಡುತ್ತಿದ್ದರೆ, ವಕೀಲರನ್ನು ಭೇಟಿಯಾಗುತ್ತಿದ್ದರೆ, ಕೋರ್ಟುಗಳ ಗಲ್ಲಿಗಳಲ್ಲಿ ಮುಖ ಅರಳಿಸಿಕೊಂಡು ಸುತ್ತುತ್ತಿದ್ದರೆ, ಹೀಗೆ ಒಟ್ಟಿಗಿರುವುದರಿಂದ ಏನು ಲಾಭ?

ಪತಿ ಪತ್ನಿಯರ ಜೋಡಿ ಪ್ರೀತಿ ಮತ್ತು ವ್ಯಾವಹಾರಿಕತೆಯ ಜೋಡಿಯಾಗಿದೆ. ತಾವು ಒಟ್ಟಿಗಿರುವುದಕ್ಕೆ ಕಾನೂನು ರಕ್ಷಣೆಯನ್ನು ಕೊಡಲು ಇಬ್ಬರೂ ಬಯಸುತ್ತಾರೆ. ಆದ್ದರಿಂದ ಮದುವೆಯ ಪ್ರಮಾಣ ಪತ್ರವನ್ನು ಇಬ್ಬರೂ ಚೆನ್ನಾಗಿ ಅಲಂಕರಿಸಿ ಇಡುತ್ತಾರೆ. ಗಂಡ ತನ್ನ ಎಲ್ಲಾ ಸಂಪಾದನೆಯನ್ನು ಹೆಂಡತಿಗೆ ಕೊಡುತ್ತಾನೆ. ಪ್ರತಿ ಅಕೌಂಟಿನಲ್ಲೂ ಹೆಂಡತಿಯ ಹೆಸರನ್ನು ಇಡಲು ಅವನಿಗೆ ಬಹಳ ಖುಷಿಯಾಗುತ್ತದೆ. ಒಂದು ವೇಳೆ ಹೆಂಡತಿಯ ಬಳಿ ಅವಳ ಅಥವಾ ಅವಳ ತಂದೆ ಸಂಪಾದಿಸಿದ ಹಣವಿದ್ದರೆ, ಅವಳು ಗಂಡನ ಮೇಲೇ ಹೆಚ್ಚು ವಿಶ್ವಾಸವಿಡುತ್ತಾಳೆ.

ಇಬ್ಬರು ಫ್ರೆಂಡ್ಸ್ ಗಳಲ್ಲಿ ದೈಹಿಕ ಸಂಬಂಧ ಉಂಟಾಗಿದ್ದು ತಮಗೆ ವಿವಾಹಿತರ ಶ್ರೇಣಿ ಕೊಡಬೇಕೆಂದು ಅವರು ಹೋರಾಟ ಮಾಡುತ್ತಿರಬಹುದು. ಹಲವು ದೇಶಗಳು ಅದಕ್ಕೆ ಒಪ್ಪಿಗೆ ನೀಡಿವೆ. ಮುಂದೆ ಭಾರತ ಕೊಡಬೇಕಾಗುತ್ತದೆ. ಹೀಗಿರುವಾಗ ಇಬ್ಬರ ಮನಸ್ಸು ಹುಳಿಯಾಗಿದ್ದರೆ ಒತ್ತಾಯಪೂರ್ವಕವಾಗಿ ಅವರ ಮೇಲೆ ವಿವಾಹದ ಹೊರೆಯನ್ನೇಕೆ ಹೊರಿಸುವುದು? ಕಾನೂನು ಅವರಿಬ್ಬರನ್ನು ಒಂದು ಸಣ್ಣ ಕೋಣೆಯಲ್ಲಿ ವಾಸಿಸುವಂತೆ ಶಿಕ್ಷೆ ನೀಡುವಂತಹ ಅಪರಾಧವನ್ನೇನೂ ಅವರು ಮಾಡಿಲ್ಲ.

ಕಾನೂನು ಏನು ಹೇಳುತ್ತದೆ ಎನ್ನುವ ವಿಷಯ ಬಿಡಿ. ಪತಿ ಪತ್ನಿಯರ ಸಂಬಂಧ ಹೃದಯದ್ದು. ಕೋರ್ಟುಗಳು ಕಾನೂನಿನ ಪುಸ್ತಕವನ್ನು ಎದುರಿನಲ್ಲಿಟ್ಟು ತೀರ್ಪು ನೀಡುವಂತಹ ಕಾಂಟ್ರ್ಯಾಕ್ಟ್ ಅಲ್ಲ. ಇಬ್ಬರು ವ್ಯಕ್ತಿಗಳು ಬೇರೆಯಾಗುತ್ತಿದ್ದಾರೆ, ಆಗಲಿ ಬಿಡಿ. ಚಿಂತಿಸಬೇಡಿ, ಏನಾದರೂ ಹಾಳಾಗುವುದಿದ್ದರೆ ಆಗಲೇ ಹಾಳಾಗಿದೆ.

ನರೇಂದ್ರ ಮೋದಿ ಮತ್ತು ಜಶೋದಾ ಬೆನ್

ಒಟ್ಟಿಗಿಲ್ಲದಿದ್ದರೆ ಕೋರ್ಟಿನ ಆದೇಶ ಏನೇ ಇರಲಿ, ಅವರಿಬ್ಬರನ್ನೂ ಒಟ್ಟಿಗಿರುವಂತೆ ಮಾಡಲು ಸಾಧ್ಯವಿಲ್ಲ. ಇಬ್ಬರೂ ಪರಸ್ಪರರೊಂದಿಗೆ ಯಾವುದೇ ಕ್ರೂರತೆ ಮಾಡಲಿಲ್ಲ. ಆದರೆ ಬೇರೆ ಬೇರೆ ಇದ್ದಾರೆ. ಹಾಗಿದ್ದರೆ ಈ ಪತಿ ಪತ್ನಿಯ ಸ್ಟೇಟಸ್‌ನಿಂದ ಏನು ಲಾಭ? ಪ್ರತಿಯೊಂದು ದಾಖಲೆಯ ಮೇಲೆ ತಾವು ನೋಡದೇ ಇರುವ, ಭೇಟಿ ಮಾಡದಿರುವ, ಅವರ ಕಷ್ಟ ಸುಖದಲ್ಲಿ ಪಾಲ್ಗೊಳ್ಳದೇ ಇರುವವರ ಹೆಸರನ್ನು ದಾಖಲೆಗಳಲ್ಲಿ ಬರೆಯಲು ವಿವಶರನ್ನಾಗಿಸುವುದೇಕೆ?

ಕೋರ್ಟ್‌ಗಳು ಕಾನೂನಿನಿಂದ ಮೇಲೆ ಹೋಗಿ ವ್ಯವಾಹಾರಿಕ ಶುಷ್ಕತೆ ತಮ್ಮದಾಗಿಸಿಕೊಳ್ಳಬೇಕು. ಇದು ವ್ಯಕ್ತಿಗತ ಸ್ವಾತಂತ್ರ್ಯ ಹಾಗೂ ಖಾಸಗಿ ಹಕ್ಕುಗಳ ವಿಷಯ ಆಗಿದೆ. ಮದುವೆಯಾಗುವುದು ಸಂವಿಧಾನದ ಅನುಚ್ಛೇದ 21ರ ಸಂವಿಧಾನಿಕ ಹಕ್ಕಾಗಿದೆ. ಅದರಲ್ಲಿ ಪ್ರತಿ ನಾಗರಿಕನಿಗೂ ಸ್ವತಂತ್ರವಾಗಿ ತನ್ನದೇ ಆದ ರೀತಿಯಲ್ಲಿ ಬದುಕು ಹಕ್ಕಿದೆ ಎಂದು ಹೇಳಿದೆ.

ಗಡಿಗಳಲ್ಲಿ ಸರ್ಪಗಾವಲು ನಿಜಕ್ಕೂ ಅಸಹಜ ಸಲ್ಮಾನ್‌ ಖಾನ್‌ನ ಹೊಸ ಚಿತ್ರ `ಬಜರಂಗಿ ಭಾಯಿಜಾನ್‌’ ಅಮೋಘ ಯಶಸ್ವಿ ಎನಿಸಿದೆ. ಬಹಳ ಕಾಲದ ನಂತರ ಭಾರತ ಪಾಕಿಸ್ತಾನಗಳ ನಡುವಿನ ದೋಸ್ತಿ ಬಿಂಬಿಸುವ ಚಿತ್ರವನ್ನು ಜನ ಹಾರ್ದಿಕವಾಗಿ ಬರಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ತರ್ಕಕ್ಕೆ ನಿಲುಕುವ ವಸ್ತು ಇಲ್ಲವೇ ಇಲ್ಲ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಬಹಳಷ್ಟು ಬಜರಂಗಿ ಭಾಯಿಜಾನ್‌ಗಳ ಅಗತ್ಯವಿದೆ ಎಂಬುದು ಎಲ್ಲರ ಅರಿವಿಗೂ ಬರುತ್ತಿದೆ, ಅಂಥವರಿಂದ ಮಾತ್ರ ರಾಷ್ಟ್ರದ ಸರಹದ್ದು ದಾಟಿ ಬಂದ ಮಕ್ಕಳನ್ನು ಆಯಾ ಪಾಲಕರ ಬಳಿ ಸೇರಿಸುವ ಪ್ರಯತ್ನ ಸಾಧ್ಯ ಎಂಬಂತಾಗಿದೆ.

ಮಕ್ಕಳು ಮನೆಯವರಿಂದ ಅಗಲಿ ದೂರಾಗುವ, ಕಥಾವಸ್ತುಗಳನ್ನು ಕುಂಭ ಮೇಳದಂಥ ಮಹಾನ್‌ ಜಾತ್ರೆ, ಪ್ರವಾಸ, ಭೂಕಂಪಗಳಂಥ ಸಂದರ್ಭದಲ್ಲಿ ಮಾತ್ರ ಚಿತ್ರಗಳಲ್ಲಿ ತೋರಿಸಲಾಗುತ್ತಿತ್ತು. ಆದರೆ ಈ ಚಿತ್ರದಲ್ಲಿ ಮೂಕಿಯಾದ, ಆದರೆ ಮುಗ್ಧ ಮುದ್ದು ಮುದ್ದಾದ ಹುಡುಗಿಯ ಕಥೆಯಿದೆ. ಈ ಪುಟ್ಟ ಹುಡುಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದವಳಾಗಿದ್ದು, ರೈಲು ಹೊರಡುವ ಸಮಯದಲ್ಲಿ ಹುಡುಗಾಟಕ್ಕೆಂದು ರೈಲಿನಿಂದ ಇಳಿದಳು ಮನೆಯವರಿಂದ ತಪ್ಪಿಸಿಕೊಂಡಳು. ಇಂಥ ಹುಡುಗಿ, ತನ್ನ ತಾಯಿ ತಂದೆಯರ ಹೆಸರು ವಿಳಾಸ ಹೇಳಲಿಕ್ಕೂ ಗೊತ್ತಿಲ್ಲದವಳಿಗೆ, ಅವಳ ಮನೆಯವರ ಬಳಿ ಸೇರಿಸುವುದು ಸುಲಭದ ವಿಷಯವಲ್ಲ. ಈ ಎಳೆಯ ಮೇಲೆ ಸಲ್ಮಾನ್‌ ಖಾನ್‌ ಹೆಣೆದಿರುವ ಕಥಾವಸ್ತು ವಿಶ್ವಾಸಾರ್ಹವಲ್ಲದಿದ್ದರೂ, ಚಂದಮಾಮ ಕಥೆಗಳಂತೆ ರೋಚಕಾಗಿದೆ.

ಭಾರತ ಪಾಕಿಸ್ತಾನಗಳನ್ನು ಶತ್ರು ರಾಷ್ಟ್ರಗಳೆಂಬಂತೆ ನೋಡುವವರಿಗೆ ಎರಡೂ ದೇಶದಲ್ಲಿ ಕೊರತೆಯಿಲ್ಲ. ಭಾರತದಲ್ಲಿ ಇದು ತುಸು ಹೆಚ್ಚೆಂದೇ ಹೇಳಬಹುದು. ಏಕೆಂದರೆ ವಿಭಜನೆಯ ಪರಿಣಾಮ ಭಾರತಕ್ಕೆ ಹೆಚ್ಚು. ವಿಭಜನೆ ಎರಡೂ ದೇಶದ ಮಂದಿಯ ಹೃದಯದಲ್ಲಿ ಒಂದು ದಟ್ಟ ಅಡ್ಡಗೋಡೆ ಎಬ್ಬಿಸಿತು, ಅದು ಎಂದು ಪೂರ್ತಿ ಕೆಡತ್ತದೋ ಹೇಳಲಾಗದು. ಸೋಶಿಯಲ್ ಮೀಡಿಯಾದ ಪ್ರಯೋಜನ ಪಡೆಯುವ ಕಂದಾಚಾರಿ ಹಿಂದೂಗಳು ಸತತ ಮುಸ್ಮಾನರು ಹಾಗೂ ಪಾಕಿಸ್ತಾನದ ವಿರುದ್ಧ ವಿಷ ಕಾರುತ್ತಿರುತ್ತಾರೆ, ಹಾಗೆಯೇ ಪಾಕಿಸ್ತಾನೀಗಳೂ ಸಹ.ಇಂಥ ಗಾಢ ಪ್ರಭಾವ ಎಲ್ಲೆಡೆ ಇರುವಾಗ ಎರಡೂ ದೇಶಗಳಲ್ಲಿ ಸಾಧಾರಣ ಮನಸ್ಸಿನ ಜನ ಇರುತ್ತಾರೆ ಎಂದು ಚಿತ್ರದ ಮೂಲಕ ತೋರಿಸುವುದು ದೊಡ್ಡ ಧೈರ್ಯದ ವಿಷಯ, ಅದರಿಂದ ಎಷ್ಟೋ ಲಾಭ ಆಗಿರಲಿ ಅದು ಬೇರೆ ವಿಷಯ, ಅಂತೂ ಇಂಥ ಪ್ರಯತ್ನಕ್ಕೆ ಕೈ ಹಾಕಿರುವುದೇ ದೊಡ್ಡ ವಿಶೇಷ. ವಿಶ್ವದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಡತನ, ದಾರಿದ್ರ್ಯ, ಕೊಳಕು, ಗಲೀಜು, ಭ್ರಷ್ಟಾಚಾರ, ಅಪ್ರಾಮಾಣಿಕತೆ, ನಿರುದ್ಯೋಗ, ಸೋಮಾರಿತನ ಇತ್ಯಾದಿಗಳು ಧರ್ಮಾಂಧತೆಯೇ ಪ್ರಧಾನವಾಗಿರುವ 3-4 ದೇಶಗಳಾದ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನ್‌, ನೇಪಾಳಗಳಲ್ಲಿ ತುಂಬಿ ತುಳುಕುತ್ತಿವೆ ಎಂಬುದರಲ್ಲಿ 2 ಮಾತಿಲ್ಲ. ಈ ದೇಶಗಳು ವಾಸ್ತವದಲ್ಲಿ ಚೀನಾ, ಜಪಾನ್‌. ಕೊರಿಯಾ, ಥೈಲೆಂಡ್‌, ಸಿಂಗಾಪುರ್‌, ತೈವಾನ್‌ ತರಹ ಪ್ರಗತಿ ಸಾಧಿಸಬೇಕೆಂದರೆ, ಯುದ್ಧ ದ್ವೇಷದಂಥ ವಾತಾವರಣವನ್ನು ಹಳ್ಳದಲ್ಲಿ ಹೂತುಹಾಕಿ ಪರಿಶ್ರಮದಿಂದ ಕೆಲಸ ಮಾಡಬೇಕು. ಎರಡೂ ಕಡೆಯ ರಾಜಕೀಯ ಮುಖಂಡರು ಈ ಶತ್ರುತ್ವದ ಸರಣಿ ಮುಂದುವರಿಯದಂತೆ ತಡೆಯೊಡ್ಡಬೇಕು. ವ್ಯಾಪಾರ, ಸ್ನೇಹದ ಮೂಲಕ ತಂತಮ್ಮ ದೇಶಗಳಲ್ಲಿ ಪ್ರಗತಿ ಸಾಧಿಸಬೇಕಿದೆ.

ವಿಭಜನೆ ಏನೋ ಆಯಿತು, ಅದರರ್ಥ ಎರಡೂ ದೇಶದ ಜನ ಪರಸ್ಪರ ಬಾಗಿಲು ಹಾಕಿ ಮುಖ ಸಿಂಡರಿಸಬಾರದು. ಒಂದು ಚಿಕ್ಕ ಮಗು ಕಾಣೆಯಾದ ವಿಷಯವೇ ಇರಲಿ, ಎರಡೂ ದೇಶದ ಪೊಲೀಸ್‌ ಅಳವನ್ನು ಮನೆಯವರೊಂದಿಗೆ ಬೆರೆಯಲು ಸಹಕರಿಸಬೇಕಿತ್ತು. ಅದನ್ನು ಬಿಟ್ಟು ಕಾನೂನು, ನಿಯಮ, ವೀಸಾ, ಪೌರತ್ವ  ಇತ್ಯಾದಿಗಳ ಪಟ್ಟಿ ಕಟ್ಟುತ್ತಾ ಮಗು ಮನೆಯವರ ಬಳಿ ಸೇರದಂತೆ ತಡೆಯುವುದು ಯಾವ ನ್ಯಾಯ?

ಈಗ ಆಗಬೇಕಿರುವ ಮುಖ್ಯ ಕೆಲಸವೆಂದರೆ, ವಿಶ್ವದ ಎಲ್ಲಾ ದೇಶಗಳೂ ತಮ್ಮ ಗಡಿಯನ್ನು ಮುಕ್ತಗೊಳಿಸಬೇಕು. ಅಂದರೆ ಯಾರಿಗೆ ಯಾವಾಗ ಬೇಕಾದರೂ ಮನಸ್ಸು ಬಂದಾಗ ಪಾಸ್‌ಪೋರ್ಟ್‌ ತೋರಿಸಿ ಯಾವ ದೇಶದಲ್ಲಾದರೂ ಓಡಾಡುವ ಹಾಗಾಗಬೇಕು. ಗಡಿ ಪ್ರದೇಶಗಳಲ್ಲಿ ಇಂಥ ಸರ್ಪಗಾವಲು ಅಸಹಜ ಎನಿಸುತ್ತದೆ. ಇದನ್ನು ಆದಷ್ಟು ಬೇಗ ಮೊಟಕುಗೊಳಿಸಿ, ಆದಷ್ಟು ಇಂಥ ಮುಗ್ಧ ಮಕ್ಕಳು ತಾಯಂದಿರಿಂದ ದೂರವಾಗದೆ, ಭಾಯಿಜಾನ್‌ಗಳ ಮೊರೆಹೋಗದೆ, ಮನೆ ಸೇರುವಂತಾಗಬೇಕು.

ಪೊಲೀಸ್‌ ವ್ಯವಸ್ಥೆಯ ಚಿತ್ರಣವೇ ಈ ಚಿತ್ರ

ವಯಸ್ಕ ಮಗಳು ಸ್ನಾನ ಮಾಡುವಾಗ, ಅವಳ ಫೋಟೋ ತೆಗೆದು ಬ್ಲ್ಯಾಕ್‌ ಮೇಲ್ ‌ಮಾಡುವವರಿದ್ದರೆ, ಯಾವ ತಾಯಿ ತಂದೆಯರ ಗುಂಡಿಗೆ ತಾನೇ ಗಟ್ಟಿಯಾಗಿರಬಲ್ಲದು? ಅಜಯ್‌ ದೇವಗನ್‌ ತಬೂ  ನಟಿಸಿರುವ `ದೃಶ್ಯಂ’ ಹೊಸ ಚಿತ್ರದಲ್ಲಿ ಈ ಗಂಭೀರ ವಿಷಯವನ್ನು ಚರ್ಚಿಸಲಾಗಿದೆ. ಆ ಮೂಲಕ ಪೊಲೀಸ್‌ ವ್ಯವಸ್ಥೆಯ ಮೇಲೆ ನಂಬಿಕೆಯೇ ಇಡಬಾರದು ಎಂಬಂತೆ ಆಗಿದೆ. ಏನೇ ಆಗಲಿ, ಸಮಸ್ಯೆಯನ್ನು ನೀವೇ ಎದುರಿಸಿ, ಸಾಧ್ಯವಾದರೆ ಅದರಿಂದ ಹೊರಬನ್ನಿ ಎಂಬಂತಾಗಿದೆ.

ಮಲಯಾಳಂನ ಮೂಲಚಿತ್ರ `ದೃಶ್ಯಂ.’ ಇದು ಕನ್ನಡದ `ದೃಶ್ಯ’ ಚಿತ್ರವಾಗಿ ಮೂಡಿತ್ತು. ಮೂಲಚಿತ್ರದ ಮುಖ್ಯ ಧ್ಯೇಯ ಪೊಲೀಸರ ಕಳ್ಳಾಟ ಹಿಡಿದುಹಾಕುವುದು, ಕಥೆಯ ಆಯ್ಕೆ ಅಥವಾ ದೃಶ್ಯಾವಳಿಯಲ್ಲ. ದೇವಗನ್‌ ಹಾಗೂ ತಬೂ ಚೆನ್ನಾಗಿ ನಟಿಸಿದ್ದಾರೆ. ಆರಂಭದಿಂದ ಕೊನೆಯ ದೃಶ್ಯದವರೆಗೂ ಪೊಲೀಸರ ತೆರೆಮರೆಯ ಆಟಗಳನ್ನು ಜಾಲಾಡಿಸಲಾಗಿದೆ. ಅವರಿಗೆ ಹಣ, ಅಧಿಕಾರ, ದರ್ಪಗಳ ಪರಿವೆ ಇದೆ, ಆದರೆ ಸಾಮಾನ್ಯ ನಾಗರಿಕರದ್ದಲ್ಲ. ಭಾರತ ಮಾತ್ರವಲ್ಲ ವಿಶ್ವದ ಬಹುತೇಕ ದೇಶಗಳ ಪೊಲೀಸರು ಸಾಮಾನ್ಯ ನಾಗರಿಕರನ್ನು ಗುಲಾಮರು ಅಥವಾ ಪರಕೀಯರು ಎಂಬಂತೆ ಕಾಣುತ್ತಾರೆ, ನಾಗರಿಕರು ಅಪರಾಧ ಮಾಡಿರಲಿ ಬಿಡಲಿ, ಅದರ ಗೊಡವೆ ಅವರಿಗಿಲ್ಲ.

ಒಬ್ಬ ಹುಡುಗಿಯ ತಾಯಿ ಈ ಕಷ್ಟಗಳನ್ನು ಹೇಗೆ ಎದುರಿಸುತ್ತಾಳೆ, ಅವಳು ಬ್ಲ್ಯಾಕ್‌ ಮೇಲರ್‌ ಎದುರು ಮಗಳಿಗಾಗಿ ಹೇಗೆಲ್ಲ ಗೋಳಾಡುತ್ತಾಳೆ. ಇನ್‌ಸ್ಪೆಕ್ಟರ್‌ ಜನರಲ್ ತರಹ ಆಡು ಲೇಡಿ ಎಸ್‌.ಐ. ಎದುರು ಹೇಗೆಲ್ಲ ಹೋರಾಡಬಲ್ಲಳು ಎಂಬ ಮನಮಿಡಿಯುವ ಚಿತ್ರಣವಿದೆ. ಈ ಚಿತ್ರದಲ್ಲಿನ ದೃಶ್ಯಗಳಂತೂ ಮನೆಮನೆಯ ಕಥೆಯಾಗಿದೆ. ಪ್ರತಿ ಕೈಗಳಲ್ಲೂ ವಿಡಿಯೋ ಕ್ಯಾಮೆರಾ ಇರುವುದು ಮಾತ್ರವಲ್ಲದೆ, ಅದನ್ನು ಸಾರ್ವಜನಿಕಗೊಳಿಸಲು ಫೇಸ್‌ ಬುಕ್‌, ವಾಟ್ಸ್ ಆ್ಯಪ್‌, ಚಾಟಿಂಗ್‌ ಸೈಟ್‌ಗಳಿವೆ. ಇವುಗಳ ಮೂಲಕ ರಾತ್ರೋರಾತ್ರಿ, ಕದ್ದುಮುಚ್ಚಿ ಅಥವಾ ಖುಲ್ಲಂಖುಲ್ಲ ಸಾವಿರಾರು ಜನರಿಗೆ ಫೋಟೋ ತಲುಪಿಸಬಹುದಾಗಿದೆ.

ಇದರಲ್ಲಿ ಹೆಚ್ಚು ಭಯಾನಕ ಎಂದರೆ, ಪೊಲೀಸರ ವ್ಯವಹಾರ. ಯಾವುದೇ ಕಾರಣವಿಲ್ಲದೆ ಪೊಲೀಸರ ಕ್ರೂರ ವಿಚಾರಣೆಗೆ ಸಿಲುಕುವ ಒಂದು ಸರ್ವೇ ಸಾಧಾರಣ ಕುಟುಂಬ ತೊಳಲಾಡಿ ಹೋಗುತ್ತದೆ. ಇನ್‌ಸ್ಪೆಕ್ಟರ್‌ ಜನರಲ್ ರಂಥ ಅಧಿಕಾರಿ ತಮ್ಮ ಕಾನೂನಿನ ಕಪಿಮುಷ್ಟಿಯಲ್ಲಿ ಈ ಕುಟುಂಬವನ್ನು ಕುಣಿಸುತ್ತಾ, ತಮ್ಮ ವಿರಾಟಶಕ್ತಿ ಪ್ರದರ್ಶಿಸುತ್ತಾರೆ. ಕೋರ್ಟುಗಳ ಆದೇಶವನ್ನು ನಗಣ್ಯಗೊಳಿಸುತ್ತಾರೆ ಹಾಗೂ ನಾಗರಿಕರು ತಮ್ಮದೇ ದೇಶದಲ್ಲಿ ಗುಲಾಮಗಿರಿಗಿಂತಲೂ ಕಡೆಯಾಗಿ ಬದುಕಬೇಕಾದ ಅನಿವಾರ್ಯತೆ ಸೃಷ್ಟಿಸುತ್ತಾರೆ.

ತಮ್ಮನ್ನು ಬ್ಲ್ಯಾಕ್‌ ಮೇಲ್ ಮಾಡುತ್ತಾ ಕಾಡಿಸುತ್ತಿದ್ದ ಐಜಿ ಮಗನನ್ನು ಕೊಂದುಹಾಕಿದ ಹೆಂಡತಿ ಮಗಳನ್ನು ರಕ್ಷಿಸುವ ಗಂಡನಾಗಿ ನಾಯಕ ಹೇಗೆ ಚಾತುರ್ಯದಿಂದ ನಡೆದುಕೊಳ್ಳುತ್ತಾನೆ ಎಂಬುದರ ರೋಚಕ ವರ್ಣನೆ ಇದೆ. ಇದು ಸುಲಭವಲ್ಲ, ತರ್ಕಬದ್ಧವಾದುದು.

ಚಿತ್ರಕ್ಕಿಂತಲೂ ಮುಖ್ಯವಾಗಿ ಅದರಲ್ಲಿ ಎದ್ದಿರುವ ಪ್ರಶ್ನೆಗಳು, ಬೇಡಿಕೆಗಳು ಹಾಗೂ ಪೊಲೀಸ್‌ ನಿಯಂತ್ರಣ ಪ್ರಸ್ತುತ ದೊಡ್ಡ ಸವಾಲಾಗಿದೆ. ಇದನ್ನು ಲಘುವಾಗಿ ಪರಿಗಣಿಸಲಾಗದು. ಕುಟುಂಬ ಎಂಬುದು ಹೇಗೆ ಪೊಲೀಸರ ದಬ್ಬಾಳಿಕೆಯಡಿ ನೆಲಸಮ ಆಗುತ್ತದೆ, ಅದೂ ಮಹಿಳಾ ಕಾನ್‌ಸ್ಟೆಬಲ್ ಹಾಗೂ ಐಜಿ ಎದುರು ಎಂಬುದು ಮನ ಕಲಕುವಂಥದು. ಚಿತ್ರದ ಕಥಾವಸ್ತು ಪೊಲೀಸರ ಇನ್ನೊಂದು ಕ್ರೂರಮುಖವನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ. ಇಡೀ ಚಿತ್ರ ಪೊಲೀಸ್‌ ವ್ಯವಸ್ಥೆಯ ನೇರ ಚಿತ್ರಣವಾಗಿದೆ, ಕೇವಲ ಥ್ರಿಲ್ಲರ್‌ ಅಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ