ಇಲ್ಲಿನ ನಿಸರ್ಗ (ಚಂದ್ರ), ಪುರಾಣಗಳು, ಜೀವನ ಮೌಲ್ಯಗಳು ಎಲ್ಲ ಸಹ ಇಷ್ಟೊಂದು ಹಬ್ಬಗಳ ಆಚರಣೆಗೆ ಕಾರಣ ಎನ್ನಬಹುದು. ದೆಹಲಿಯ ಸಾಂಸ್ಕೃತಿಕ ಪ್ರಕಾಶಕ ಸಂಸ್ಥೆ `ಇಂಡಿಯಾ ಮ್ಯಾಗಜೀನ್‌’ನ ಸಂಪಾದಕರಾದ ಮಾಳವಿಕಾ ಹೇಳುವಂತೆ, “ಇದು ಇಲ್ಲಿನ ಜನಜೀವನದಲ್ಲಿ  ಹಾಸು ಹೊಕ್ಕಾಗಿದೆ. ಇಲ್ಲಿನ ಜನರಿಗೆ ಹಬ್ಬಗಳು ಕೇವಲ ಸಂಭ್ರಮಾಚರಣೆ ಮಾತ್ರವೇ ಅಲ್ಲ, ಅವುಗಳೊಡನೆ ಪ್ರಾರ್ಥನೆಗಳ ರೂಪವನ್ನೂ ಪಡೆದಿರುತ್ತದೆ.”

ಶತಶತಮಾನಗಳಿಂದ ಬೆಳೆದು ಬಂದಿರುವ ವೈವಿಧ್ಯಮಯ ಸಂಸ್ಕೃತಿ ಭಾರತವನ್ನು ಬಹುಬಗೆಯ ಹಬ್ಬಗಳ ನೆವೆವೀಡಾಗಿಸಿದೆ. ದಿನನಿತ್ಯದ ಸ್ನಾನ, ಭಜನೆ, ಸಂಗೀತ, ನೃತ್ಯ ಶಿಬಿರಗಳು ಭಕ್ತಿಯನ್ನು ತೋರುವ ವಿವಿಧ ಮಾರ್ಗಗಳಾಗಿರುತ್ತವೆ.

ಮಳೆ, ಬೆಂಕಿ, ಸಿಡಿಲು, ಗುಡುಗು, ವೈವಿಧ್ಯಮಯ ಸಸ್ಯವರ್ಗ, ಪ್ರಾಣಿವರ್ಗ, ಕೊಂಬು ಕಹಳೆ, ಆಯುಧಗಳು, ಇನ್ನಿತರ ಸಜೀವ ನಿರ್ಜೀವ ವಸ್ತುಗಳ ಹೆಸರುಗಳಲ್ಲಿ  ಭಾರತೀಯರು ಹಬ್ಬಗಳನ್ನು ಆಚರಿಸುತ್ತಾರೆ. ನಿಸರ್ಗದತ್ತವಾಗಿ ಸೂರ್ಯ ಪಥ ಬದಲಿಸುತ್ತಾನೆ. ಇದು ಕೋಟ್ಯಂತರ ಭಾರತೀಯರ ಪಾಲಿಗೆ ಪರ್ವಕಾಲವಾಗಿರುತ್ತದೆ. ಚಂದ್ರ ಹುಣ್ಣಿಮೆ ದಿನದಂದು ಪೂರ್ಣರೂಪವನ್ನು ಪಡೆದು ಜನರು ಹಬ್ಬವನ್ನಾಚರಿಸಿ ಸಂಭ್ರಮಿಸಲು ಕಾರಣನಾಗುತ್ತಾನೆ. ಮಳೆ, ಗುಡುಗುಗಳು ಇಂದ್ರನ ಕೊಡುಗೆ ಎಂದು ನಂಬುವ ಭಾರತೀಯರು ಕೃಷಿಗಾಗಿ ಹೆಚ್ಚು ಪ್ರಮಾಣದಲ್ಲಿ ಮಳೆಯನ್ನೇ ಅವಲಂಬಿಸಿರುತ್ತಾರೆ. ಮಳೆ ಕೊರತೆಯಿಂದ ಬರ ಪರಿಸ್ಥಿತಿ ನಿರ್ಮಾಣವಾಗಿ ಆಹಾರ ಸಮಸ್ಯೆ ತಲೆದೋರುತ್ತದೆ. ಮಳೆ ಬಂದು ಬೆಳೆ ಸೊಂಪಾಗಿ ಬಂದಾಗ ಸುಗ್ಗಿಯ ಹಬ್ಬವನ್ನಾಚರಿಸುವ ಮೂಲಕ ಸಂಭ್ರಮಿಸುವರು. ದೇಶದ ವಿವಿಧ ಭಾಗಗಳಲ್ಲಿ ವಿವಿಧ ಸಮಯಗಳಲ್ಲಿ ಈ ಸುಗ್ಗಿ ಆಚರಣೆ ನಡೆಯುತ್ತದೆ. ಒಟ್ಟಾರೆ ವರ್ಷದ ಎಲ್ಲಾ ದಿನಗಳಲ್ಲಿಯೂ ಭಾರತೀಯರು ಒಂದಲ್ಲ ಒಂದು ಬಗೆಯ ಸಂಭ್ರಮವನ್ನು ಆಚರಿಸುವರು.

ಪ್ರತಿ ದಿನ ಪ್ರಕೃತಿ ನಿತ್ಯ ನೂತನ ಆಗುತ್ತದೆ. ಪ್ರತಿದಿನ ನಿಸರ್ಗದಲ್ಲಿ ಒಂದಲ್ಲ ಒಂದು ರೀತಿಯ ಬದಲಾವಣೆ ಉಂಟಾಗುತ್ತದೆ ಎನ್ನುವುದು ಭಾರತೀಯರ ನಂಬಿಕೆಯಾಗಿದೆ. ಪ್ರಾಚೀನ ಭಾರತೀಯರ ಕಾಲಮಾನದಲ್ಲಿ ನಿಸರ್ಗವೇ ಪ್ರಮುಖ ಪಾತ್ರ ವಹಿಸಿಕೊಳ್ಳುತ್ತದೆ. ನಿಸರ್ಗ ಜಗತ್ತಿನ ಆದಿಗೆ ನಾಂದಿ. ಅದು ಮಾತೃಸ್ವರೂಪ ಎಂಬುದು ಅವರ ನಂಬಿಕೆ.

ಕೆಲವು ಹಬ್ಬಗಳು ಋತುಗಳ ಬದಲಾವಣೆಗೆ ಅನುಗುಣವಾಗಿ ಬರುತ್ತವೆ. ಇನ್ನು ಕೆಲವು ಸುಗ್ಗಿಯ ಕಾಲಕ್ಕೆ ಸರಿಯಾಗಿ ಬರುತ್ತವೆ. ಇಂದೂ ಸಹ ಭಾರತೀಯ ಸಂಸ್ಕೃತಿಯು ನಿಸರ್ಗದೊಡನೆ ಅತ್ಯಂತ ನಿಕಟ ಸಂಪರ್ಕ ಹೊಂದಿದೆ. ಭಾರತೀಯರು ಹಬ್ಬಗಳನ್ನು ಆಚರಿಸಲು ನಿಸರ್ಗ ಒಂದೇ ಕಾರಣವಲ್ಲ. ಇಲ್ಲಿನ ಎಲ್ಲಾ ಆಚರಣೆಗಳಿಗೂ ಮಾನವ ಹಾಗೂ ನಿಸರ್ಗದ ನಡುವಿನ ಪರಸ್ಪರ ಸಂವಹನಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಹಬ್ಬದ ಆಚರಣೆಗಳು ಕೇವಲ ಸುಗ್ಗಿಯ ಮೇಲಷ್ಟೇ ಅವಲಂಬಿಸದೆ ಮಾನವ ಜೀವನದ ಉನ್ನತಿಗೆ ಸಹ ಸಂಬಂಧಿಸಿರುತ್ತದೆ.

India-Multitude-

ವರ್ಷದ ಎಲ್ಲಾ ದಿನಗಳಲ್ಲೂ ಭಾರತದ ಒಂದಲ್ಲ ಒಂದು ಭಾಗದಲ್ಲಿ ಹಬ್ಬದ ಸಂಭ್ರಮಾಚರಣೆ ಜಾರಿಯಲ್ಲಿರುತ್ತದೆ. ಭಾರತದಲ್ಲಿ ವೈವಿಧ್ಯಮಯ ಜನಸಮುದಾಯ ಹಾಗೂ ವಿವಿಧ ಧಾರ್ಮಿಕ ಜನಾಂಗದವರು ನೆಲೆಸಿರುವುದು ಇಂತಹ ಆಚರಣೆಗೆ ಕಾರಣ ಎನ್ನಬಹುದು. ಭಾರತದ ವಿವಿಧ ರಾಜ್ಯಗಳಲ್ಲಿನ ಭಿನ್ನತೆಗಿಂತಲೂ ಈ ಮೇಲಿನ ವೈವಿಧ್ಯತೆ ಸಂಪೂರ್ಣವಾಗಿ ಭಿನ್ನವಾದ ಅರಿವು ಉಂಟು ಮಾಡುತ್ತದೆ.

ಮೊದಲೇ ತಿಳಿಸಿದಂತೆ ಭಾರತ ನೂರಾರು ಬಗೆಯ ಧರ್ಮ, ಜಾತಿ, ಜನಾಂಗ, ಸಮುದಾಯದವರಿಂದ ಕೂಡಿದ ದೇಶ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ, ಜೈನ, ಬೌದ್ಧ ಹೀಗೆ ಎಲ್ಲಾ ಬಗೆಯ ಧರ್ಮದವರ ಹಬ್ಬಗಳೂ ಆಚರಣೆಯಲ್ಲಿವೆ. ಇದರಲ್ಲಿಯೂ ಕೆಲವು ಆಚರಣೆಗಳು ಕೆಲವು ಕುಟುಂಬಗಳ ಖಾಸಗಿ ಆಚರಣೆಗಳಾಗಿರುತ್ತವೆ. ಅಲ್ಲದೆ, ಪ್ರತೀ ಹಬ್ಬಗಳಲ್ಲಿಯೂ ಹಲವಾರು ಬಗೆಯ ಸಂಪ್ರದಾಯಗಳು ಇರುತ್ತವೆ.

ಬೆಂಗಳೂರಿನ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕಿಯಾಗಿರುವ ಶೀನಾಸಿಂಗ್‌ ಹೇಳಿದಂತೆ, `ಇವೆಲ್ಲ ಚಿಕ್ಕ ಚಿಕ್ಕ ಸಂಭ್ರಮಾಚರಣೆಗಳಾಗಿವೆ. ಇವುಗಳು ದೇಶದ ಅಂತಃಸ್ಥಾನವಾಗಿರುತ್ತವೆ.’ ಹಬ್ಬದ ಆಚರಣೆಯು ದೇಶ ನಿವಾಸಿಗಳ ಹೃದಯ ಹಾಗೂ ಆತ್ಮದ ಬೆಳವಣಿಗೆಗೆ ಕಾರಣವಾಗಬಲ್ಲ, ಹಾಗೆಯೇ ಪೂಜ್ಯ ಭಾವನೆಗಳನ್ನು ಉದ್ದೀಪಿಸುವುದಕ್ಕೂ ಇವು ಅವಕಾಶ ನೀಡುತ್ತವೆ.

ಹಬ್ಬಗಳು ಹಾಗೂ ಮಾಲಿನ್ಯ

ಮಕ್ಕಳಿಗೆ ಪರಿಸರ ಮಾಲಿನ್ಯದ ಬಗ್ಗೆ ಅರಿವು ಮೂಡಿಸಬೇಕು. ಪರಿಸರ ಮಾಲಿನ್ಯವಾಗದಂತೆ ಹೇಗೆ ಹಬ್ಬಗಳನ್ನಾಚರಿಸುವುದರ ಕುರಿತು ಮನದಟ್ಟು ಮಾಡಿಸಬೇಕು. ಹಬ್ಬಗಳಲ್ಲಿ ಅಳವಡಿಸುವ ಧ್ವನಿ ವರ್ಧಕಗಳಿಂದ ಹೊರಡುವ ಅತಿಯಾದ ಶಬ್ದ ಹೆಚ್ಚಿನ ಶಬ್ದ ಮಾಲಿನ್ಯಕ್ಕೆ ಕಾರಣವಾಗಿರುತ್ತದೆ. ಮಹಾನಗರಗಳಲ್ಲಿ ಈ ಸಮಸ್ಯೆ ಇನ್ನಷ್ಟು ಉಗ್ರವಾಗಿರುತ್ತದೆ. ಜನ್ಮಾಷ್ಟಮಿ, ಗಣೇಶ ಚತುರ್ಥಿ ಸಂದರ್ಭಗಳಲ್ಲಿ ಬಳಸುವ ಧ್ವನಿ ವರ್ಧಕಗಳಿಂದ ಉಂಟಾಗುವ ಶಬ್ದ ಮಾಲಿನ್ಯ ಅತಿ ಹೆಚ್ಚಿನದಾಗಿರುತ್ತದೆ. ಧ್ವನಿ ವರ್ಧಕಗಳು, ಸಿಡಿಮದ್ದುಗಳು, ದೊಡ್ಡ ಸದ್ದಿನ ಸಂಗೀತ ಪರಿಕರಗಳು ಶಬ್ದ ಮಾಲಿನ್ಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತವೆ.

ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿರುವಂತೆ ಶಬ್ದ ಮಾಲಿನ್ಯ ಕೇವಲ ಪರಿಸರಕ್ಕೆ ಮಾತ್ರವೇ ಹಾನಿಯುಂಟು ಮಾಡುವುದಿಲ್ಲ, ಬದಲಿಗೆ ಜನರ ಆರೋಗ್ಯದ ಮೇಲೆಯೂ ಕೆಟ್ಟ ಪರಿಣಾಮ ಉಂಟು ಮಾಡುತ್ತದೆ. ಪ್ರತಿ ದೀಪಾವಳಿಯ ಸಮಯದಲ್ಲೂ ಸಿಡಿಮದ್ದು ರಹಿತ ದೀಪಾವಳಿ, ಮಾಲಿನ್ಯರಹಿತ ದೀಪಾವಳಿ ಆಚರಿಸುವುದಕ್ಕಾಗಿ ಕರೆ ನೀಡಲಾಗುತ್ತದೆ. ಆದರೆ ಇಂದಿನವರೆಗೂ ಇದು ಕೇವಲ ಘೋಷಣೆಯಾಗಿದೆಯೇ ಹೊರತಾಗಿ ವಾಸ್ತವವಾಗಿಲ್ಲ.

ಪ್ರತಿ ಬಾರಿ ಗಣೇಶ ಚತುರ್ಥಿಯ ಬಳಿಕ ವೃತ್ತ ಪತ್ರಿಕೆಗಳು ಪ್ರಕಟಿಸುವ ಚಿತ್ರಗಳಲ್ಲಿ ಅರ್ಧಂಬರ್ಧ ಮುಳುಗಿರುವ ಗಣೇಶ ವಿಗ್ರಹಗಳನ್ನು ಕಾಣುತ್ತೇವೆ. ಇದಕ್ಕೆ ಮಾನವರ ಸ್ವಯಂಕೃತ ಅಪರಾಧವೇ ಕಾರಣ. ಬಹುಪಾಲು ವಿಗ್ರಹಗಳನ್ನು ತಯಾರಿಸಲು ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನ್ನು ಬಳಸಲಾಗುತ್ತದೆ. ಇದು ನೀರಿನಲ್ಲಿ ಸಂಪೂರ್ಣವಾಗಿ ಕರಗಲು ಕೆಲವು ತಿಂಗಳುಗಳೇ ಬೇಕಾಗುತ್ತದೆ. ಜೊತೆಗೆ ವಿಗ್ರಹಗಳಿಗೆ ಬಣ್ಣ ಮತ್ತು ಹೊಳಪು ನೀಡಲಿಕ್ಕಾಗಿ ಬಳಸುವ ಕ್ರೀಮ್ ಗಳಲ್ಲಿ ಪಾದರಸ ಮತ್ತು ಸೀಸದ ಪ್ರಮಾಣ ಅತ್ಯಧಿಕವಾಗಿದ್ದು, ಇವು ಸಹ ಮಾಲಿನ್ಯಕಾರಕವಾಗಿವೆ. ಇವು ಜಲಮಾಲಿನ್ಯಕ್ಕೆ ಅಧಿಕ ಹಾನಿ ಮಾಡುವುದಲ್ಲದೆ, ಜೀವವೈವಿಧ್ಯಗಳ ನಾಶಕ್ಕೂ ಕಾರಣವಾಗಿರುತ್ತದೆ. ಈ ವಿಷ ನಮ್ಮ ಆಹಾರದಲ್ಲಿಯೂ ಬೆರೆತು ಹೋಗುತ್ತದೆ. ಹೀಗಾಗಿ ಆದಷ್ಟೂ ಮಕ್ಕಳಿಗೆ ಗಣೇಶ ವಿಗ್ರಹ ಮತ್ತು ದಸರಾ ಬೊಂಬೆಗಳನ್ನು ತಯಾರಿಸುವಾಗ ಮಣ್ಣು ಮತ್ತು ಕ್ಲೇಗಳಿಂದ ಮಾಡಲು ಪ್ರೋತ್ಸಾಹಿಸಿ ಪರಿಸರಕ್ಕೆ ಹಾನಿಯಾಗದಂತೆ ಹಬ್ಬವನ್ನು ಆಚರಿಸುವುದನ್ನು ರೂಢಿಸಿಕೊಳ್ಳಬೇಕು.

ganesh-chaturthi

ಮಕ್ಕಳಿಗೆ ಅರ್ಥೈಸಿ ಮಕ್ಕಳಿಗೆ ನಮ್ಮ ಹಬ್ಬಗಳ ಮಹತ್ವ ತಿಳಿಯಬೇಕಿದೆ. ನೇರವಾಗಿ ವಿಷಯಗಳನ್ನು ಹೇಳುವುದರಿಂದ ಮಾತ್ರ ಅವರಿಗೆ ಅದರ ಕುರಿತಂತೆ ಆಸಕ್ತಿ ಬರುತ್ತದೆ. ಅದಕ್ಕಾಗಿ ವಿಭಿನ್ನ ಮಾರ್ಗಗಳನ್ನು ಅನುಸರಿಸಿರಿ. ವಸ್ತು ಸಂಗ್ರಹಾಲಯಗಳಿಗೆ ಭೇಟಿ ಕೊಡುವುದು, ಸೂಪರ್‌ ಹೀರೋ ಕಾಮಿಕ್‌ ಪುಸ್ತಕ / ಸಿಡಿ ತೋರಿಸುವುದರ ಮೂಲಕ ಅವರಿಗೆ ಇತಿಹಾಸದ ಜ್ಞಾನವನ್ನು ತಿಳಿಸಿದಾಗ ಅದನ್ನು ಅವರು ಬೇಗನೇ ತಮ್ಮದಾಗಿಸಿಕೊಳ್ಳುತ್ತಾರೆ.

ಇಸ್ಮಿ – ಪಟೇಲ್ ‌ಅಂತರ್ಜಾತಿ ವಿವಾಹಿತರು. ತಾವು ಮುಸ್ಲಿಂ ಆಗಿದ್ದು ಹಿಂದೂ ಧರ್ಮೀಯರನ್ನು ವಿವಾಹವಾದರು. ಮುಂದೆ ತಮ್ಮ ಮಕ್ಕಳಿಗೆ ಅನ್ಯಧರ್ಮೀಯರ ಆಚರಣೆಗಳನ್ನು ಕಲಿಸುವುದು ಕಷ್ಟ ಎನಿಸಿದಾಗ `ಇಮ್ರಾಸ್‌ ಕ್ಲಾಸ್‌’ ಎಂಬ ಪಾತ್ರವನ್ನು ಸೃಷ್ಟಿಸಿ ಅದರ ಮುಖೇನ ಮಕ್ಕಳಲ್ಲಿ ಇಸ್ಲಾಂ ಹಾಗೂ ಈದ್‌ ಕುರಿತಂತೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದರು. ಮಕ್ಕಳಿಗೆ ಅವರಿಗಿಷ್ಟವಾದ ಪಾತ್ರ ಅಥವಾ ಕಥೆಯ ಮೂಲಕವೇ ಹಬ್ಬಗಳ ಮಹತ್ವವನ್ನು ತಿಳಿಸಿದಾಗ ಅವರಿಗೆ ಸುಲಭವಾಗಿ ಅರ್ಥವಾಗುತ್ತದೆ. ಹಾಗೆಯೇ ತಾವು ಕ್ರಿಯಾಶೀಲರಾಗಿದ್ದಾಗ ಮಾತ್ರ ಇದು ಸಾಧ್ಯ ಎನ್ನುತ್ತಾರೆ ಪಟೇಲ್‌.

ಕುಟುಂಬದ ಕುರಿತು ತಿಳಿಸಿ

ಉ.ಭಾರತದ ಮಲಜಾನಿ ಕುಟುಂಬದವರಾದ ಆ್ಯನಿ ಹಾಗೂ ಜಗಜಿತ್‌ ತಾವು ಯಾವ ಹಬ್ಬಗಳಲ್ಲಿಯೂ ಇತರರಿಂದ ಉಡುಗೊರೆಗಳನ್ನು ಸ್ವೀಕರಿಸುವುದಿಲ್ಲ ಎನ್ನುತ್ತಾರೆ. ಇದು ಮಕ್ಕಳಿಗೆ ಆಚರಣೆಗಳ ಪ್ರಮುಖ ಭಾಗಗಳನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಎಲ್ಲರೂ ಸೇರಿ ಮಾಡುವ ರುಚಿಕರವಾದ ಅಡುಗೆ, ಸಂಬಂಧಿಕರು, ಸ್ನೇಹಿತರ ಆಗಮನ, ಅದರ ಮೂಲಕ ಮನೆ ತುಂಬುವುದು ಹೆಚ್ಚಿನ ಸಂತೋಷದಾಯಕ ಕ್ಷಣವಾಗಿರುತ್ತದೆ. ಆ್ಯನಿ ಹೇಳುವಂತೆ ಪೋಷಕರು ಇಂತಹ ಸಮಯದಲ್ಲಿ ತಮ್ಮ ಗಮನವನ್ನು ಮಕ್ಕಳ ಮೇಲೆ ಕೇಂದ್ರೀಕರಿಸಬೇಕು.

ನೀಡಿರಿ, ತೆಗೆದುಕೊಳ್ಳದಿರಿ

ಮಕ್ಕಳಿಗೆ `ನೀಡುವಿಕೆ/ಕೊಡುವುದು’ ಇದರ ಮಹತ್ವವನ್ನು ತಿಳಿಸುವುದಕ್ಕಾಗಿ ಹಬ್ಬಗಳ ಸಂದರ್ಭವನ್ನು ಬಳಸಿಕೊಳ್ಳಬಹುದು. ನನ್ನ ಬಾಲ್ಯದಲ್ಲಿ ನನ್ನ ತಾಯಿ ಹೇಳುತ್ತಿದ್ದ  ಮಾತು, ಪ್ರತಿ ಹಬ್ಬಕ್ಕೂ ಏನಾದರೊಂದನ್ನು ಅಗತ್ಯವಾಗಿ ಖರೀದಿಸು. ಆದರೆ ಅದನ್ನು ಇನ್ನೊಬ್ಬರಿಗೆ ಕೊಡು. ಬೇರೆಯವರಿಗೆ ಉಡುಗೊರೆ ನೀಡಲು ವರ್ಷಕ್ಕೊಮ್ಮೆ ಕಾರ್ಯಕ್ರಮ ಆಯೋಜಿಸುವುದು ಇಲ್ಲಿ ಅನಾಥಾಶ್ರಮಕ್ಕೆ ಭೇಟಿ ನೀಡುವುದು ಮಾತ್ರವಲ್ಲ, ಅಗತ್ಯವಿದ್ದವರಿಗೆ ಹಳೆಯ ಬಟ್ಟೆ ಇಲ್ಲಿ ಇನ್ನಿತರ ಅಗತ್ಯ ವಸ್ತುಗಳನ್ನು ನೀಡಿ ಆ ಮೂಲಕ ಮತ್ತೊಬ್ಬರಿಗೆ ಕೊಡುವುದರಲ್ಲಿ ವಿಶೇಷ ಸಂತೋಷವನ್ನು ಅನುಭವಿಸುವಿರಿ.

ಮಕ್ಕಳನ್ನೂ ಸೇರಿಸಿಕೊಳ್ಳಿ

ದಸರಾ ಸಮಯದಲ್ಲಿ ನಾನು ಭೇಟಿ ನೀಡಿದ ಒಂದು ಕುಟುಂಬದ ಮಹಿಳೆ ತನ್ನ ಮಕ್ಕಳು ರಚಿಸಿದ ಕರಕುಶಲ ಕಲೆಗಳ ಚಿತ್ತಾರಗಳು, ಕ್ಲೇ ಗೊಂಬೆಗಳನ್ನು ನನಗೆ ತೋರಿಸಿದರು. ದುಬಾರಿಯಾದ ದಸರಾ ಬೊಂಬೆಗಳಿಗಿಂತ ಅವು ಆಕರ್ಷಕವಾಗಿ ಕಾಣುತ್ತಿದ್ದವು. ಮನೆಯಲ್ಲಿನ ರ್ಯಾಟನ್‌ ತೆರೆಯ ಮೇಲಲ್ಲ ಅವರ ಮಗಳು ರಚಿಸಿದ ಬಣ್ಣದ ಚಿತ್ರಗಳು ವರ್ಣರಂಜಿತವಾಗಿದ್ದವು. ಅಂದು ಅಲ್ಲಿ ನೆರೆದಿದ್ದ ಮಕ್ಕಳು ದುರ್ಗೆಯ ಮುಖವಿರುವ ಪ್ರಿಂಟ್‌ ಔಟ್‌ಗಳಿಗೆ ನಾನಾ ವರ್ಣದ ವಿನ್ಯಾಸ ನೀಡಿ ಪೇಂಟ್ ಮಾಡುತ್ತಿದ್ದರು. ಮಕ್ಕಳು ಏಕತಾನತೆಯನ್ನು ಇಷ್ಟಪಡಲಾರರು. ಹೀಗಾಗಿ ಮನೆಯ ಅಲಂಕಾರ, ಸ್ವಚ್ಛತೆ, ಚಿಕ್ಕಪುಟ್ಟ ಅಡುಗೆ ಕೆಲಸಗಳಲ್ಲಿ ಹಾಗೆಯೇ ಪ್ರಸಾದ ಅಥವಾ ಉಡುಗೊರೆ ವಿತರಣೆಗಳಲ್ಲಿಯೂ ಅವರನ್ನು ಸೇರಿಸಿಕೊಳ್ಳಿರಿ. ಇದರಿಂದ ಅವರಿಗೂ ತಮ್ಮ ಪ್ರಾಮುಖ್ಯತೆಯ ಅರಿವಾಗುತ್ತದೆ. ಜೊತೆಗೆ ನಿಮ್ಮ ಕೆಲಸ ಸ್ವಲ್ಪ ಹಗುರವಾಗುತ್ತದೆ.

diwali

ಸಣ್ಣ ಬದಲಾವಣೆ ದೊಡ್ಡ ವ್ಯತ್ಯಾಸ

ಸಾಂಪ್ರದಾಯಿಕ ಆಚರಣೆಗಳಲ್ಲಿ ಚಿಕ್ಕ ಬದಲಾವಣೆಯನ್ನು ತರುವುದರೊಂದಿಗೆ ಉತ್ತಮ ರೀತಿಯಲ್ಲಿ ಹಬ್ಬಗಳನ್ನು ಆಚರಿಸಬಹುದು. ಕೆಲವು ಮಹಿಳೆಯರು ಒಂದಾಗಿ, ದೀಪಾವಳಿಯಂದು ಬಡ ಮಕ್ಕಳಿಗೆ ತಾವು ಹಂಚುವ ಸಿಹಿ ತಿಂಡಿಗಳ ಜೊತೆಗೆ ಕೆಲವು ಪುಸ್ತಕಗಳನ್ನೂ ವಿತರಿಸಲು ನಿರ್ಧರಿಸಿದ್ದಾರೆ. ಹೀಗಾದರೆ ಎಷ್ಟು ಒಳ್ಳೆಯದಲ್ಲವೇ? ಹಾಗೆಯೇ ದೀಪಾವಳಿಯಂದು ಮನೆಯಲ್ಲಿ ದೀಪ ಹಚ್ಚುವುದರ ಜೊತೆಗೆ ಕಾರಿಡಾರಿನಲ್ಲಿಯೂ ಸಾಲು ದೀಪಗಳನ್ನು ಬೆಳಗಿರಿ. ಹಾಗೇ ಪಟಾಕಿಗೆ ಪೋಲು ಮಾಡುವ ದುಡ್ಡಿನಿಂದ ಇನ್ನಷ್ಟು ಸೀರಿಯಲ್ ಬಲ್ಬ್ ಗಳನ್ನು ತರಿಸಿ ಬೆಳಗಿಸಿರಿ. ಸೋಫಾಗೆ ಇನ್ನಷ್ಟು ಕುಶನ್‌ ಸೇರಿಸಿಕೊಳ್ಳಿರಿ. ನಿಮ್ಮ ವಿರಾಮದ ಓದಿಗಾಗಿ ಬಾಲ್ಕನಿಯಲ್ಲಿ ಒಂದು ಚಿಕ್ಕ ರೀಡಿಂಗ್‌ ನೂಕ್‌ನ್ನು ನಿಮಗಾಗಿ ಮಾಡಿಕೊಳ್ಳಿ.

ಹಬ್ಬಗಳಿರುವುದೇ ನಮ್ಮ ಜೀವನ ಬೆಳಗಿಸಲು. ಹೀಗಾಗಿ ಎಲ್ಲಾ ಹಬ್ಬಗಳನ್ನೂ ಅರ್ಥಪೂರ್ಣವಾಗಿ ಆಚರಿಸಬೇಕು. ಅದು ಮುಂದಿನ ಪೀಳಿಗೆಗೆ ವಿಚಾರಶೀಲತೆ, ಜವಾಬ್ದಾರಿಯನ್ನು ಬೆಳೆಸುವಂತಿರಬೇಕು. ಹಾಗೆಯೇ ಹಬ್ಬಗಳು ಹೆಚ್ಚು ಅರ್ಥಪೂರ್ಣ, ವರ್ಣರಂಜಿತ ಹಾಗೂ ಶೈಕ್ಷಣಿಕ ಅಂಶಗಳಿಂದಲೂ ಕೂಡಿರಲಿ.

ಶ್ವೇತಾ ಸುಂದರ್

ಕೆಲವು ಹಬ್ಬಗಳು ಋತುಗಳ ಬದಲಾವಣೆಯನ್ನು ಅನುಸರಿಸಿ ಬರುತ್ತವೆ. ಇನ್ನೂ ಕೆಲವು ಸುಗ್ಗಿಕಾಲಕ್ಕೆ ಸರಿಯಾಗಿ ಬರುತ್ತವೆ. ಇಂದೂ ಸಹ ಭಾರತದ ಸಂಸ್ಕೃತಿ ನಿಸರ್ಗದೊಡನೆ ಅತ್ಯಂತ ನಿಕಟ ಸಂಪರ್ಕವನ್ನು ಹೊಂದಿದೆ. ಭಾರತೀಯರು ಹಬ್ಬಗಳನ್ನು ಆಚರಿಸಲು ನಿಸರ್ಗವೊಂದೇ ಕಾರಣವಾಗಿರುವುದಿಲ್ಲ.

ಮಕ್ಕಳು ಏಕತಾನತೆಯನ್ನು ಇಷ್ಟಪಡಲಾರರು. ಹೀಗಾಗಿ ಮನೆಯ ಅಲಂಕಾರ, ಸ್ವಚ್ಛತೆ, ಚಿಕ್ಕಪುಟ್ಟ ಅಡುಗೆ ಕೆಲಸಗಳಲ್ಲಿಯೂ ಪ್ರಸಾದ ಅಥವಾ ಉಡುಗೊರೆ ವಿತರಣೆಯಲ್ಲಿಯೂ ಅವರನ್ನು ಸೇರಿಸಿಕೊಳ್ಳಿರಿ. ಇದರಿಂದ ಅವರಿಗೂ ತಮ್ಮ ಪ್ರಾಮುಖ್ಯತೆಯ ಅರಿವಾಗುತ್ತದೆ. ಜೊತೆಗೆ ನಿಮ್ಮ ಕೆಲಸ ಸ್ವಲ್ಪ ಹಗುರವಾಗುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ